Back
Home » ಆರೋಗ್ಯ
ಕೊರೊನಾವೈರಸ್‌ನಿಂದ ಸತ್ತವರ ಅಂತ್ಯಕ್ರಿಯೆ ಹೇಗಿರಬೇಕು?
Boldsky | 26th Mar, 2020 06:30 PM
 • ಪ್ರತ್ಯೇಕ ಕೋಣೆಯಿಂದ ಶವವನ್ನು ಪ್ರತ್ಯೇಕಿಸುವಾಗ ಪಾಲಿಸಬೇಕಾದ ಕ್ರಮಗಳು

  • ಉದ್ದದ ಪ್ರೊಟೆಕ್ಟಿವ್ ಗೇರ್‌ ಧರಿಸಬೇಕು.
  • ದೇಹದಲ್ಲಿದ್ದ ಟ್ಯೂಬ್ಸ್ ಮತ್ತಿತರ ಸಾಧನಗಳನ್ನು ತೆಗೆಯುವಾಗ ತುಂಬಾ ಎಚ್ಚರಿಕೆವಹಿಸಬೇಕು, ಯಾವುದೇ ಕಾರಣಕ್ಕೆ ಬರಿಗೈನಿಂದ ಅವಗಳನ್ನು ಮುಟ್ಟಬಾರದು.
  • ಇನ್ನು ಟ್ಯೂಬ್, ಟ್ರಿಪ್ಸ್ ಇವುಗಳನ್ನು ತೆಗೆದ ಬಳಿಕ ಆ ಭಾಗದಿಂದ ರಕ್ತ, ದ್ರವ ಸೋರದಂತೆ ಸರಿಯಾಗಿ ಡ್ರೆಸ್ಸಿಂಗ್ ಮಾಡಬೇಕು.
  • ಇನ್ನು ಸೂಜಿ ಮತ್ತಿತರ ಸಾಧನಗಳನ್ನು ಸರಿಯಾದ ಕ್ರಮದಲ್ಲಿ ಕಸದ ಬುಟ್ಟಿಗೆ ಹಾಕಬೇಕು. ಅದಕ್ಕಾಗಿಯೇ ಇರಿಸಿದ ಪ್ರತ್ಯೇಕ ಕಸದ ಬುಟ್ಟಿಯಲ್ಲಿ ಹಾಕಬೇಕು.
  • ಇನ್ನು ಮೂಗಿನಿಂದ ದ್ರವ ಸೋರದಿರಲು ಮೂಗಿಗೆ ಹತ್ತಿ ಇಡಬೇಕು.
  • ದೇಹವನ್ನು ಯಾವುದೇ ದ್ರವ ಹೊರಗೆ ಸೋರಿಕೆಯಶಗಂಥ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಹಾಕಿಡಬೇಕು.
  • ಆ ಪ್ಲಾಸ್ಟಿಕ್‌ ಬ್ಯಾಗ್‌ನ ಹೊರಗಡೆ ಶೇ. 1ರಷ್ಟು ಹೈಪೋಕ್ಲೋರೈಟ್ ಸಲ್ಯೂಷನ್ ಹಾಕಿರಬೇಕು.
  • ನಂತರ ಶವಗಳನ್ನು ಶವಗಾರಕ್ಕೆ ಕಳುಹಿಸಬೇಕು, ಇಲ್ಲಾ ಕುಟುಂಬಸ್ಥರಿಗೆ ನೀಡಬೇಕು ಹಾಗೂ ಶವದ ಅಂತ್ಯಸಂಸ್ಕಾರ ಯಾವ ರೀತಿ ಇರಬೇಕು ಎಂಬ ಮಾರ್ಗದರ್ಶನ ನೀಡಬೇಕು.
  • ಅವರು ಕೂಡ ಸೋಂಕು ತಗುಲದಂತೆ ಸಲಕ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅಂತ್ಯಸಂಸ್ಕಾರ ಮಾಡಬೇಕು.

 • ಶವಗಾರದಲ್ಲಿ ದೇಹಗಳ ನಿರ್ವಹಣೆಗೆ ಸಲಹೆಗಳು

  • ಕೋವಿಡ್‌ 19ನಿಂದ ಸತ್ತ ವ್ಯಕ್ತಿಗಳ ದೇಹವನ್ನು ಕೋಲ್ಡ್‌ ಚೇಂಬರ್‌ನಲ್ಲಿ ಇಡಬೇಕು. ಅದರ ಉಷ್ಣಾಂಶ 4 ಡಿಗ್ರಿ ಸೆಲ್ಸಿಯಸ್ ಒಳಗೆ ಇರಬೇಕು.
  • ಶವಗಾರವನ್ನು ತುಂಬಾ ಸ್ವಚ್ಛವಾಗಿಬೇಕು.
  • ಇನ್ನು ಶವಗಾರದ ಡೋರ್ ಹಾಗೂ ಹ್ಯಾಂಡಲ್ಸ್‌ ಚೆನ್ನಾಗಿ ಸ್ವಚ್ಛ ಮಾಡಬೇಕು.

 • ಪೋಸ್ಟ್‌ಮಾರ್ಟಂ ಮಾಡುವಾಗ ಆರೋಗ್ಯ ಸಿಬ್ಬಂದಿ ಅನುಸರಿಸಬೇಕಾದ ಕ್ರಮಗಳು

  • ಕೋವಿಡ್‌ ರೋಗಿಯನ್ನು ಆರೈಕೆ ಮಾಡುತ್ತಿರುವವರು ಹಾಗೂ ರೋಗಿ ಸತ್ತಾಗ ಶವವನ್ನು ತೆಗೆಯುವುದು, ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಬ್ಯಾಕ್‌ ಮಾಡುವುದು ಮಾಡುವವರು ಪ್ರೊಟೆಕ್ಟಿವ್ ಗೇರ್‌ ಧರಿಸಿರಬೇಕು.
  • ಕಟ್‌ ಫ್ರೂಫ್ ಗ್ಲೌವ್ಸ್, ವಾಟರ್‌ಫ್ರೂಫ್‌, ಫೇಸ್‌ ಶೀಲ್ಡ್, ಯಾವುದೇ ದ್ರಾವಕ ಒಳ ಹೋಗದಂಥ ಗೌನ್‌ ಧರಿಸಬೇಕು.
  • N95 ಮಾಸ್ಕ್ ಅಥವಾ ಇತರ ಗುಣಮಟ್ಟದ ಮಾಸ್ಕ್ ಧರಿಸಬೇಕು.
  • ಶೂ, ಸರ್ಜಿಕಲ್ ಕಪ್ಸ್ ಧರಿಸಬೇಕು.
  • ಅಟೋಸ್ಪೈ ಮಾಡುವಾಗ ಕಡಿಮೆ ಜನರಿರಲಿ, ಬಾಡಿ ಪರೀಕ್ಷೆ ಒಂದೋ ಎರಡು ಸಿಬ್ಬಂದಿಯಷ್ಟೇ ಬಂದು ಮಾಡಿ.
  • ಇನ್ನು ದೇಹವನ್ನು ಕತ್ತರಿಸುವಾಗ ತುಂಬಾ ಎಚ್ಚರಿಕೆವಹಿಸಬೇಕು, ಇನ್ನು ಪೋಸ್ಟ್‌ಮಾರ್ಟಂನಲ್ಲಿ ಏನಾದರೂ ಅಗ್ಯತ ಮಾಹಿತಿಯನ್ನು ಸಂಗ್ರಹಿಸುವಾಗ ಸುರಕ್ಷೆ ಸಲಹೆಗಳನ್ನು ತಪ್ಪದೆ ಪಾಲಿಸಬೇಕು.

 • ಶವವನ್ನು ವರ್ಗಾಯಿಸುವಾಗ ಪಾಲಿಸಬೇಕಾದ ನಿಯಮಗಳು

  • ಶವಗಾರವನ್ನು ಪ್ಲಾಸ್ಟಿಕ್‌ಬ್ಯಾಗ್‌ನಲ್ಲಿ ಹಾಕಿಡಬೇಕು.
  • ಶವದ ನಿರ್ವಹಣೆ ಮಾಡುವವರು ಗ್ಲೌಸ್ ಹಾಗೂ ಸರ್ಜಿಕಲ್ ಮಾಸ್ಕ್ ಧರಿಸಬೇಕು.
  • ಇನ್ನು ಶವವನ್ನು ದಹನ ಮಾಡಲು ಕೊಂಡೊಯ್ಯದ್ದ ವಾಹನವನ್ನು ಶೇ1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ಹಾಕಿ ಸ್ವಚ್ಛ ಮಾಡಬೇಕು.

 • ದಹನ ಮಾಡುವಾಗ ಪಾಲಿಸಬೇಕಾದ ಕ್ರಮಗಳು

  • ದಹನ ಮಾಡುವ ಸಕಲ ಮುನ್ನೆಚ್ಚರಿಕೆಕ್ರಮಗಳನ್ನು ಅನುಸರಿಸಬೇಕು.
  • ಇನ್ನು ಕೈಗಳ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡಬೇಕು.
  • ಇನ್ನು ಸತ್ತವರ ಕುಟುಂಬದವರಿಗೆ ದಹನಕ್ರಿಯೆಯಲ್ಲಿ ಹೆಚ್ಚಿನ ಜನ ಸೇರಿಸದಂತೆ ತಿಳಿ ಹೇಳಬೇಕು ಹಾಗೂ ಸೇರಿದವರು ಕೂಡ ಒಬ್ಬರಿಂದ ಮತ್ತೊಬ್ಬರು ಅಂತರ ಕಾಯ್ದುಕೊಳ್ಳಬೇಕು.
  • ಇನ್ನು ಕುಟುಂಬಸ್ಥರು ಶವದ ಮುಖ ನೋಡಲು ಬಯಸಿದರೆ ಆಸ್ಪತ್ರೆ ಸಿಬ್ಬಂದಿ ಪ್ಲಾಸ್ಟಿಕ್ ಬ್ಯಾಗ್‌ ಜಿಪ್ ಬಿಚ್ಚಿ ತೋರಿಸಬೇಕು.
  • ಇನ್ನು ಅಂತ್ಯ ಸಂಸ್ಕಾರದ ವಿಧಿ ವಿಧಾನ ಮಾಡುವಾಗ ಶವಕ್ಕೆ ತಾಗದಂತೆ ಮಾಡಬೇಕು, ಶವವನ್ನು ಮುಟ್ಟುವುದು, ಮುತ್ತಿಕ್ಕುವುದು ಮಾಡಬಾರದು.
  • ಇನ್ನು ದಹನದ ನಂತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದವರು ಸ್ನಾನ ಮಾಡಬೇಕು, ಧರಿಸಿದ್ದ ಬಟ್ಟೆಗಳನ್ನು ಸರಿಯಾದ ಕ್ರಮದಲ್ಲಿ ಸ್ವಚ್ಛ ಮಾಡಬೇಕು.ಇಡೀ ವಿಶ್ವವೇ ಕೊರೊನಾವೈರಸ್ ಭಯಲ್ಲಿ ಸಿಲುಕಿದೆ. ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 21,000 ದಾಟಿದೆ. ದಿನದಿಂದ ದಿನಕ್ಕೆ ಈ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದ್ದು, ಕೊರೊನಾವೈರಸ್ ನಿಯಂತ್ರಣಕ್ಕೆ ಬಾರದೇ ಇರುವುದು ಎಲ್ಲಾ ರಾಷ್ಟ್ರಗಳನ್ನು ಚಿಂತೆಗೀಡು ಮಾಡಿದೆ.

ಕೊರೊನಾವೈರಸ್‌ ತಗುಲಿ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಇಲಾಖೆಯವರಿಗೆ ಸತ್ತವರ ದೇಹ ಅಂತಿಮಕ್ರಿಯೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಏಕೆಂದರೆ ಕೋವಿಡ್‌ 19 ಸಾಂಕ್ರಮಿಕ ಪಿಡುಗು ಆಗಿದ್ದು, ಇದರ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಹರಿದಾಡುತ್ತಿರುವುದರಿಂದ ಕೊರೊನಾವೈರಸ್ ಬಂದು ಸತ್ತವರ ಅಂತಿಮ ಸಂಸ್ಕಾರ ಮಾಡುವುದಕ್ಕೆ ತೊಂದರೆ ಉಂಟಾಗುತ್ತಿದೆ. ಜನರು ಭಯದಿಂದ ಕೋವಿಡ್ 19 ಬಂದು ಸತ್ತವರ ದೇಹವನನ್ನು ಕೊಂಡೊಯ್ಯಲು ಕೂಡ ಬರುತ್ತಿಲ್ಲ. ಇದನ್ನೆಲ್ಲಾ ನೋಡಿ ಕುಟುಂಬ ಹಾಗೂ ಆರೋಗ್ಯ ಕಲ್ಯಾಣ ಇಲಾಖೆ ಕೋವಿಡ್‌ 19 ಬಂದು ಸತ್ತವರ ದೇಹದ ಅಂತಿಮ ಸಂಸ್ಕಾರ ಮಾಡುವಾಗ ಏನು ಮಾಡಬೇಕೆಂಬ ಮಾರ್ಗದರ್ಶನಗಳನ್ನು ನೀಡಿದೆ.

ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಲಹೆಗಳು
 • ಶವಗಳನ್ನು ಮುಟ್ಟುವಾಗ, ವೆಂಟಿಲೇಟರ್‌ನಿಂದ ತೆಗೆಯುವಾಗ ಶುಚಿತ್ವದ ಕಡೆ ತುಂಬಾ ಮಹತ್ವಕೊಡಬೇಕು.
 • ಶವದಿಂದ ಯಾವುದೇ ದ್ರವ ತಾಗಿ ಸೋಂಕು ತಗುಲದಿರಲು ಕೈಗಳಿಗೆ ಗ್ಲೌವ್ಸ್ ಧರಿಸಿರಬೇಕು, ಫೇಸ್‌ ಮಾಸ್ಕ್, ಕಣ್ಣುಗಳಿಗೆ ಐವೇರ್‌ ಧರಿಸಿ.
 • ಕೋವಿಡ್‌ 19 ರೋಗಿಗೆ ಬಳಸಿದ ಔಷಧಿ ಸಾಧನಗಳನ್ನು ಕೇರ್‌ಫುಲ್ ಆಗಿ ಕಸದ ಬುಟ್ಟಿಗೆ ಹಾಕಬೇಕು, ಇನ್ನು ಮಲಗಿದ ಬೆಡ್ ಇವುಗಳನ್ನು ಸಂಪೂರ್ಣವಾಗಿ ಶುಚಿ ಮಾಡಬೇಕು.
 • ನೆಲವನ್ನು ಸೋಪ್‌ ನೀರು ಹಾಕಿ ನಂತರ ನೆಲ ಸ್ವಚ್ಛ ಮಾಡುವ ದ್ರಾವಕಗಳನ್ನು ಹಾಕಿ ಶುಚಿ ಮಾಡಬೇಕು.
 • ಇನ್ನು ರೋಗಿಯನ್ನು ಆರೈಕೆ ಮಾಡುವವರ ದೇಹದಲ್ಲಿ ಏನಾದರೂ ಗಾಯವಿದ್ದರೆ ಅಥವಾ ತ್ವಚೆ ಒಡೆದಿದ್ದರೆ ನಾರ್ಮಲ್ ಗ್ಲೌಸ್ ಧರಿಸಿ ಅದರ ಮೇಲೆ ದಪ್ಪವಾದ ಗ್ಲೌಸ್ ಧರಿಸಿ.
 • ನೀರು ಒಳಗೆ ಹೋದಂಥ ಉದ್ದವಾದ ಗೌನ್‌ ಧರಿಸಿ, ಶವದ ನಿರ್ವಹಣೆ ಮಾಡಬೇಕು.
   
 
ಹೆಲ್ತ್