Back
Home » ಇತ್ತೀಚಿನ
ಶಿಯೋಮಿ ರೆಡ್ಮಿ ಕೆ30 ಪ್ರೊ V/S ರೆಡ್ಮಿ ಕೆ20 ಪ್ರೊ: ವ್ಯತ್ಯಾಸಗಳೆನು?
Gizbot | 27th Mar, 2020 09:00 AM
 • ರೆಡ್ಮಿ ಕೆ20 ಪ್ರೊ

  ಹೌದು, ರೆಡ್ಮಿ ಕೆ20 ಪ್ರೊ ಮತ್ತು ರೆಡ್ಮಿ ಕೆ30 ಪ್ರೊ ಎರಡು ದೈತ್ಯ ಫೀಚರ್ಸ್‌ಗಳಿಂದ ಅಟ್ರ್ಯಾಕ್ಟ್ ಮಾಡಿರುವ ಸ್ಮಾರ್ಟ್‌ಫೋನ್‌ಗಳೇ ಆಗಿವೆ. ಆದರೆ ಇತ್ತೀಚಿನ ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ ಕೆಲವು ಫೀಚರ್ಸ್‌ಗಳಿಂದ ಹೆಚ್ಚು ಪವರ್‌ಫುಲ್ ಲುಕ್ ಹೊರಹಾಕಿದೆ. ಅಧಿಕ RAM, ವೇಗದ ಪ್ರೊಸೆಸರ್, ಬಿಗ್ ಬ್ಯಾಟರಿ, ಹೈ ಎಂಡ್‌ ಕ್ಯಾಮೆರಾ ಸೆನ್ಸಾರ್, ಹೆಚ್ಚಿನ ಸ್ಕ್ರೀನ್‌ ರೀಫ್ರೇಶ್‌ ರೇಟ್ ಸಾಮರ್ಥ್ಯದಂತಹ ಫೀಚರ್ಸ್‌ಗಳಿಂದ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆದಿವೆ. ಆದರೆ ಈ ಎರಡು ಫೋನ್‌ಗಳ ಭಿನ್ನತೆಗಳೆನು? ಯಾವುದು ಖರೀದಿಗೆ ಉತ್ತಮ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.


 • ಡಿಸ್‌ಪ್ಲೇ ಡಿಸೈನ್-ರಚನೆ

  ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 2340 x 1080 ಪಿಕ್ಸಲ್ ರೆಸಲ್ಯೂಶನ್ ಆಗಿದೆ. HDR10+ ಸಪೋರ್ಟ್‌ ಪಡೆದಿದೆ. ಈ ಫೋನಿನ ಟಚ್ ಸ್ಯಾಂಪ್ಲಿಂಗ್ ರೇಟ್ 180Hz ಆಗಿದ್ದು, ಡಿಸ್‌ಪ್ಲೇಯ ಪ್ರಖರತೆಯು 1200nits ಸಾಮರ್ಥ್ಯದಲ್ಲಿದೆ. ಹಾಗೆಯೇ ಸ್ಕ್ರೀನ್‌ ಟು ಬಾಡಿ ನಡುವಿನ ಅಂತರವು 92.7 ಪರ್ಸೆಂಟ್ ಆಗಿದೆ. ಅದೇ ರೀತಿ ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿದೆ.


 • ಪ್ರೊಸೆಸರ್ ಬಲಾ-ಬಲ

  ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ ಸ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್‌ ಬೆಂಬಲ ಪಡೆದಿದೆ. ಈ ಫೋನ್ ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವು ಕ್ರಮವಾಗಿ 6GB RAM + 128GB ಮತ್ತು 8GB RAM + 128GB ಸ್ಟೋರೇಜ್ ಹೊಂದಿವೆ. ಇನ್ನು ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 8GB RAM ನೋಂದಿಗೆ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅನ್ನು ಹೊಂದಿದೆ. 256GB ವರೆಗಿನ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಪೋನ್ ಮೆಮೊರಿ ವಿಸ್ತರಣೆಗೆ ಯಾವುದೇ ಅವಕಾಶವನ್ನು ಹೊಂದಿರುವುದಿಲ್ಲ. ಇನ್ನು ಇತ್ತೀಚಿನ MIUI 10 ಆಂಡ್ರಾಯ್ಡ್ 9 ಪೈ ರೊಂದಿಗೆ ಫೋನ್ ರನ್ ಆಗಲಿದೆ.


 • ಕ್ಯಾಮೆರಾ ಸೆನ್ಸಾರ್

  ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ರಚನೆ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 13ಎಂಪಿ ಸೆನ್ಸಾರ್ ಹೊಂದಿದ್ದು, ತೃತೀಯ ಕ್ಯಾಮೆರಾವು 8ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ನಾಲ್ಕನೇಯ ಕ್ಯಾಮೆರಾವು 5ಎಂಪಿ ಸೆನ್ಸಾರ್‌ನಲ್ಲಿದೆ ಹಾಗೂ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್ ಒದಗಿಸಲಾಗಿದೆ. ಹಾಗೆಯೇ ರೆಡ್ಮಿ ಕೆ20 ಪ್ರೊನಲ್ಲಿ 32 ಎಂಪಿ ಪಾಪ್-ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇದ್ದು, ಫೋನಿನಲ್ಲಿ ಹಿಂಭಾಗದಲ್ಲಿ ಟ್ರಿಪಲ್ ಲೆನ್ಸ್ ಸೆಟಅಪ್ ಇದೆ. ಮುಖ್ಯ ಕ್ಯಾಮೆರಾವು 48ಎಂಪಿ ಪ್ರೈಮರಿ ಸೆನ್ಸರ್, 8ಎಂಪಿ ಡೆಪ್ತ್ ಸೆನ್ಸರ್ ಹಾಗೂ ವೈಡ್ ಆಂಗಲ್‌ಗೆ ಸಹಕಾರಿಯಾಗುವಂತಹ ಕ್ಯಾಮೆರಾ ಅಳವಡಿಸಲಾಗಿದೆ.


 • ಬ್ಯಾಟರಿ ಪವರ್‌

  ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ 4,700mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದೆ. ಡ್ಯುಯಲ್-ಮೋಡ್ 5 ಜಿ, ವೈ-ಫೈ 6, ಬ್ಲೂಟೂತ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಇತ್ತೀಚಿನ ಅಪ್‌ಡೇಟ್ ಫೀಚರ್ಸ್‌ಗಳು ಸಹ ಇವೆ. ಇನ್ನು ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿದೆ. ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ಪಡೆದಿದೆ. ವೈ-ಫೈ, ಬ್ಲೂಟೂತ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಇತ್ತೀಚಿನ ಅಪ್‌ಡೇಟ್ ಫೀಚರ್ಸ್‌ಗಳು ಸಹ ಇವೆ.


 • ಬೆಲೆ ಎಷ್ಟು

  ಭಾರತದಲ್ಲಿ ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 24,999ರೂ. ಆಗಿದೆ. ಇನ್ನು ರೆಡ್ಮಿ ಕೆ30 ಪ್ರೊ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಸದ್ಯದಲ್ಲಿಯೇ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.( ಭಾರತದಲ್ಲಿ ಅಂದಾಜು 32,435ರೂ. ಎನ್ನಲಾಗಿದೆ.)
ಅಗ್ಗದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಶಿಯೋಮಿ ಸಂಸ್ಥೆಯು ಕೆಲವು ಫ್ಲ್ಯಾಗ್‌ಶಿಪ್‌ಗಳಿಂದ ಅಬ್ಬರಿಸಿದೆ. ಆ ಪೈಕಿ ರೆಡ್ಮಿ ಕೆ20 ಪ್ರೊ ಗ್ರಾಹಕರನ್ನು ಆಕರ್ಷಿಸಿದ್ದು, ಅದರ ಬೆನ್ನಲ್ಲೇ ಸಂಸ್ಥೆಯು ಇತ್ತೀಚಿಗಷ್ಟೆ ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ರೆಡ್ಮಿ ಕೆ20 ಪ್ರೊ ಮತ್ತು ರೆಡ್ಮಿ ಕೆ30 ಪ್ರೊ ಎರಡು ಫ್ಲ್ಯಾಗ್‌ಶಿಫ್‌ ಮಾದರಿಯ ಫೋನ್‌ಗಳಾಗಿದ್ದು, ಆದರೆ ಫೀಚರ್ಸ್‌ಗಳಲ್ಲಿ ಭಿನ್ನತೆ ಇದೆ.

   
 
ಹೆಲ್ತ್