Back
Home » ಆರೋಗ್ಯ
ಇವರಿಗೆ ಕೊರೊನಾ ವೈರಸ್‌ ಬರುವ ಸಾಧ್ಯತೆ ಹೆಚ್ಚು
Boldsky | 27th Mar, 2020 12:00 PM
 • ಹೃದಯದ ಸಮಸ್ಯೆ ಇರುವವರು

  ಹೃದಯದ ಕಾಯಿಲೆ ಇರುವವರಲ್ಲಿ ಕೊವಿಡ್-19 ಸಾವಿನ ಪ್ರಮಾಣವು ಶೇ.10.5ರಷ್ಟಿದೆ ಎಂದು ಚೀನಾದ ವರದಿಗಳು ಹೇಳಿವೆ. ಕೊವಿಡ್-19 ಮತ್ತು ಅಧಿಕ ರಕ್ತದೊತ್ತಡ ಇರುವ ಶೇ.6ರಷ್ಟು ಜನರು ಸಾವಿಗೀಡಾಗಿದ್ದಾರೆ. ಈ ವೈರಸ್ ಕೇವಲ ಹೃದಯದ ಸ್ನಾಯುಗಳ ಮೇಲೆ ದಾಳಿ ಮಾಡುವುದು ಮಾತ್ರವಲ್ಲದೆ, ರಕ್ತನಾಳಗಳಿಗೂ ಹಾನಿ ಮಾಡುವುದು ಎಂದು ನ್ಯೂಯಾರ್ಕ್ ನಗರದ ಲೆನೊಕ್ಸ್ ಹಿಲ್ ಆಸ್ಪತ್ರೆಯ ಆಡಳಿತ ನಿರ್ದೇಶ ರಾಬರ್ಟ್ ಗ್ಲಾಟ್ಟೆರ್ ತಿಳಿಸಿರುವರು.

  ಅಮೆರಿಕಾದ ಹೃದಯ ಸಂಸ್ಥೆಯ ಪ್ರಕಾರ ಕೊವಿಡ್-19ನಿಂದ ಆಸ್ಪತ್ರೆಗೆ ದಾಖಲಾಗಿರುವ ಶೇ.40ರಷ್ಟು ಜನರಲ್ಲಿ ಯಾವುದಾದರೂ ಗಂಭೀರ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಿದೆ. ಈ ವೈರಸ್ ಅಪಧಮನಿಗಳಲ್ಲಿ ಪದರವನ್ನು ನಾಶ ಮಾಡುವುದು. ಇದರಿಂದಾಗಿ ಹೃದಯಾಘಾತದ ಅಪಾಯವು ಹೆಚ್ಚಾಗಿರುವುದು.


 • ಶ್ವಾಸಕೋಶದ ಸಮಸ್ಯೆ ಇರುವವರು

  ಶ್ವಾಸಕೋಶದ ಸಮಸ್ಯೆ ಇರುವವರು ಕೊವಿಡ್-19ಗೆ ಸಾವನ್ನಪ್ಪುವ ಸಮಸ್ಯೆಯು ಹೆಚ್ಚಾಗಿರುವುದು. ಚೀನಾದಲ್ಲಿ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶೇ.6.3ರಷ್ಟು ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಉಸಿರಾಟಕ್ಕೆ ಸಂಬಂಧಿಸಿದಂತಹ ಅಂಗಾಂಶಗಳ ಮೇಲೆ ಇದು ದಾಳಿ ಮಾಡುವುದು. ಈ ಸೋಂಕಿನಿಂದಾಗಿ ತೀವ್ರ ರೀತಿಯ ನ್ಯುಮೋನಿಯಾ ಮಾತ್ರವಲ್ಲದೆ, ಉಸಿರಾಟದ ಸಮಸ್ಯೆಯು ಕಂಡುಬರುವುದು. ಇದರಿಂದಾಗಿ ಶ್ವಾಸಕೋಶಕ್ಕೆ ಸರಿಯಾಗಿ ಆಮ್ಲಜನಕವು ಸಿಗದೆ ಇರುವುದು ಎಂದು ಡಾ. ಗ್ಲಾಟ್ಟೆರ್ ತಿಳಿಸಿರುವರು.

  ಅಸ್ತಮಾ ಮತ್ತು ಸಿಒಪಿಡಿ(ದೀರ್ಘಕಾಲಿಕ ಶ್ವಾಸಕೋಶದ ಪ್ರತಿರೋಧಕ ಕಾಯಿಲೆ)ಗಳಾಗಿರುವಂತಹ ದೀರ್ಘಕಾಲದ ಬ್ರಾಂಕೈಟಿಸ್ ಅಥವಾ ಎಂಫಿಸೆಮಾ ಇರುವವರು ಕೊವಿಡ್-19 ಅಪಾಯದ ಸಾಧ್ಯತೆಯು ಹೆಚ್ಚು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

  ಅಸ್ತಮಾ ಇರುವವರಿಗೆ ರೋಗಲಕ್ಷಣವಿಲ್ಲದೆ ಇದ್ದರೂ ಸಹ ಶ್ವಾಸಕೋಶದ ಕ್ರಿಯೆಯಲ್ಲಿ ಸ್ವಲ್ಪ ದುರ್ಬಲತೆ ಹೊಂದಿರುತ್ತಾರೆ. ಇದರಿಂದಾಗಿ ಅಸ್ತಮಾದ ಆಘಾಥವಾಗುವಂತಹ ಸಾಧ್ಯತೆಯು ಇರುವುದು.


 • ಮಧುಮೇಹ ಇರುವ ಜನರು

  ಮಧುಮೇಹ ಎನ್ನುವುದು ಯಾವಾಗಲೂ ತುಂಬಾ ಅಪಾಯಕಾರಿ. ಯಾಕೆಂದರೆ ಬೇರೆ ಯಾವುದೇ ಕಾಯಿಲೆಗಳು ಬಂದರೆ ಆಗ ಮಧುಮೇಹಿಗಳಿಗೆ ಇದನ್ನು ತಡೆದುಕೊಳ್ಳುವಂತಹ ಶಕ್ತಿ ಇರುವುದಿಲ್ಲ. ಚೀನಾದಲ್ಲಿ ಮಧುಮೇಹಿಗಳು ಕೊವಿಡ್-19ನಿಂದಾಗಿ ಸಾವಿಗೀಡಾಗಿರುವ ಪ್ರಮಾಣವು ಶೇ.7.3ರಷ್ಟು ಆಗಿದೆ ಟೈಪ್-1 ಮತ್ತು ಟೈಪ್-2 ಮಧುಮೇಹಿಗಳಿಗೆ ಈ ಅಪಾಯವು ಸಮಾನವಾಗಿರುವುದು ಎಂದು ಅಮೆರಿಕಾದ ಮಧುಮೇಹ ಅಸೋಸಿಯೇಶನ್ ಹೇಳಿದೆ.

  ಮಧುಮೇಹಿಗಳ ದೇಹವು ಈಗಾಗಲೇ ತುಂಬಾ ಒತ್ತಡಕ್ಕೆ ಒಳಗಾಗಿರುವ ಕಾರಣದಿಂದಾಗಿ ಅದು ಬೇರೆ ರೀತಿಯ ಸೋಂಕಿನ ವಿರುದ್ಧ ಹೋರಾಡುವಂತಹ ಸಾಧ್ಯತೆಯು ತುಂಬಾ ಕಡಿಮೆ ಇರುವುದು. ಹೀಗಾಗಿ ಸೋಂಕಿನ ವಿರುದ್ಧ ಹೋರಾಡುವಂತಹ ಶಕ್ತಿಯು ಕಡಿಮೆ ಆಗುವುದು ಎಂದು ಇಂಡಿಯಾನಾ ಪ್ಯುರ್ಡೆ ಯೂನಿವರ್ಸಿಟಿ ಸ್ಕೂಲ್ ಆಫ್ ನರ್ಸಿಂಗ್ ನ ಪ್ರಧ್ಯಾಪಕ ಲಿಬ್ಬೆ ರಿಚರ್ಡ್ಸ್ ತಿಳಿಸಿದ್ದಾರೆ.


 • ಪ್ರತಿರೋಧಕ ಶಕ್ತಿ ವೃದ್ಧಿಸುವ ಔಷಧಿ ತೆಗೆದುಕೊಳ್ಳುವವರು

  ಪ್ರತಿರೋಧಕ ಶಕ್ತಿ ವೃದ್ಧಿಸುವಂತಹ ಔಷಧಿ ತೆಗೆದುಕೊಳ್ಳುವಂತಹ ಜನರು ಕೊವಿಡ್ -19ಗೆ ಒಳಗಾಗುವ ಸಾಧ್ಯತೆಯು ಹೆಚ್ಚಾಗಿ ಇರುವುದು. ಅದೇ ರೀತಿಯಾಗಿ ಎಚ್ಐವಿ/ಏಡ್ಸ್, ಅಂಗಾಂಗ ಕಸಿ ಮಾಡಿರುವವರು, ಕ್ಯಾನ್ಸರ್ ರೋಗಿಗಳಿಗೆ ಇದು ಬರುವಂತಹ ಅಪಾಯವು ಹೆಚ್ಚಾಗಿರುವುದು ಎಂದು ಸಿಡಿಸಿ ತಿಳಿಸಿದೆ.

  ಕಿಮೋಥೆರಪಿ ಚಿಕಿತ್ಸೆ ವೇಳೆ ಹೆಚ್ಚಾಗಿ ಬೆಳೆಯುತ್ತಿರುವಂತಹ ಅಂಗಾಂಶಗಳ ಮೇಲೆ ಗುರಿನ್ನಿಡಲಾಗುತ್ತದೆ ಮತ್ತು ಇದರಲ್ಲಿ ಹೆಚ್ಚಿನವು ಬೆಳೆಯುವ ರಕ್ತದ ಕೋಶಗಳು. ಪ್ರತಿರೋಧಕ ಶಕ್ತಿಯು ಕೆಲಸ ಮಾಡಲು ರಕ್ತ ಕಣಗಳು ಅತೀ ಅಗತ್ಯವಾಗಿ ಬೇಕಾಗಿರುವುದು.

  ಇಂತಹ ಲೂಪಸ್ ಅಥವಾ ಸಂಧಿವಾತ ಸ್ವರಕ್ಷಿತ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಯಾಕೆಂದರೆ ಇಂತಹ ಪರಿಸ್ಥಿತಿ ಇರುವ ಜನರಲ್ಲಿ ಪ್ರತಿರೋಧಕ ಸಮಸ್ಯೆಯು ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು.


 • ದೀರ್ಘಕಾಲಿಕ ಕಾಯಿಲೆ

  ಬೇರೆ ಯಾವುದೇ ರೀತಿಯ ದೀರ್ಘಕಾಲಿಕ ಸಮಸ್ಯೆ ಇದ್ದರೆ ಅಂತಹವರು ಈ ಸೋಂಕಿಗೆ ತುತ್ತಾಗುವುದು ಹೆಚ್ಚು. ಯಕೃತ್ ಮತ್ತು ಕಿಡ್ನಿ ಸಮಸ್ಯೆ ಇದ್ದರೆ ಅವರಲ್ಲಿ ಈ ಸೋಂಕು ಪ್ರಾಣಹಾನಿ ಉಂಟು ಮಾಡುವುದು ಎಂದು ಸಿಡಿಸಿ ತಿಳಿಸಿದೆ.

  ಈ ಸಮಸ್ಯೆಗಳಿಂದಾಗಿ ದೇಹವು ಸಾಮಾನ್ಯವಾಗಿ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದು. ಹೀಗಾಗಿ ಅವರಲ್ಲಿ ಪ್ರತಿರೋಧಕ ಶಕ್ತಿಯು ಕಡಿಮೆ ಇರುವುದು.


 • ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ

  ರಕ್ತಹೀನತೆ ಮತ್ತು ರಕ್ತ ತೆಳುವಾಗುವಂತಹ ಔಷಧಿ ಸೇವನೆ ಮಾಡುವಂತಹ ಜನರು ಕೊವಿಡ್-19 ಸಮಸ್ಯೆಗೆ ಒಳಗಾಗುವ ಸಾಧ್ಯತೆಯು ಇರುವುದು ಎಂದು ಸಿಡಿಸಿ ತಿಳಿಸಿದೆ.

  ಡ್ರಗ್ಸ್ ಸೇವನೆ ಮಾಡುತ್ತಿರುವಂತಹ ಜನರು ಕೂಡ ಕೊವಿಡ್-19ಗೆ ಒಳಗಾಗುವ ಸಾಧ್ಯತೆಯು ಹೆಚ್ಚು. ಆದರೆ ಇದಕ್ಕೆ ಪುಷ್ಟಿ ನೀಡಲು ಹೆಚ್ಚಿನ ಪರೀಕ್ಷೆಗಳು ಇನ್ನು ನಡೆಯಬೇಕಾಗಿದೆ. ಧೂಮಪಾನಿಗಳು ಅಥವಾ ಮರಿಜುನಾ ಸೇವನೆ ಮಾಡುವಂತಹವರಿಗೆ ಶ್ವಾಸಕೋಶದ ಅಪಾಯವು ಹೆಚ್ಚು. ಹೀಗಾಗಿ ಇದು ಶ್ವಾಸಕೋಶದ ಮೇಲೆ ಒತ್ತಡ ಹಾಕುವುದು. ಹೀಗಾಗಿ ಇಂತಹ ಸಮಸ್ಯೆ ಇದ್ದರೆ ಅವರಿಗೆ ಅಪಾಯವು ಹೆಚ್ಚು.
ಕೊರೋನಾ ವೈರಸ್ ಎನ್ನುವ ಮಹಾಮಾರಿಯು ಇಂದು ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಅತ್ಯಂತ ಅಭಿವೃದ್ಧಿ ಹೊಂದಿದ ದೇಶಗಳು ಕೂಡ ಇದರ ಮುಂದೆ ಈಗ ಮೊಣಕಾಲೂರಿ ನಿಲ್ಲುವಂತೆ ಆಗಿದೆ. ಇಂತಹ ಸಾಂಕ್ರಾಮಿಕವು ನಿಲ್ಲುವ ಮಾತನ್ನೇ ಹೇಳುತ್ತಿಲ್ಲ. ಇದು ದಿನದಿಂದ ದಿನಕ್ಕೆ ಅಪಾಯಕಾರಿಯಾಗಿ ಹೋಗುತ್ತಲೇ ಇದೆ.

ಕೊರೋನಾ ವೈರಸ್ ಎನ್ನುವುದು ಸಾಮಾನ್ಯ ವರ್ಗದವನಿಂದ ಹಿಡಿದು ಶ್ರೀಮಂತನಿಗೂ ತಗುಲುತ್ತಲಿದೆ. ಇದು ಯಾವುದೇ ಒಬ್ಬ ವ್ಯಕ್ತಿ ಅಥವಾ ಕೆಲವೊಂದು ಗುಂಪನ್ನು ಗುರಿಯಾಗಿಸಿಕೊಂಡು ಹರಡುತ್ತಿಲ್ಲ. ಹೆಚ್ಚಿನ ಎಲ್ಲಾ ದೇಶಗಳಲ್ಲಿ ಇದು ಪ್ರತಿಯೊಂದು ವಯೋಮಾನದವರಲ್ಲೂ ಕಂಡುಬರುತ್ತಿದೆ.

ಆದರೆ ಇದರಿಂದ ಅತಿಯಾದ ಅಪಾಯವನ್ನು ಎದುರಿಸುವವರು ಯಾರು ಎನ್ನುವ ಬಗ್ಗೆ ತಿಳಿಯಬೇಕಾಗಿದೆ. ಶೇ.80ರಷ್ಟು ಜನರಲ್ಲಿ ತುಂಬಾ ಕಡಿಮೆ ಲಕ್ಷಣ ಅಥವಾ ಯಾವುದೇ ಲಕ್ಷಣಗಳು ಕಾಣದೆ ಇರಬಹುದು. ಶೇ.20ರಷ್ಟು ಜನರು ಗಂಭೀರ ಪರಿಸ್ಥಿತಿಗೆ ತಲುಪುವರು.

ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರ(ಸಿಡಿಸಿ) ಅಂಕಿಅಂಶಗಳು ಹೇಳುವ ಪ್ರಕಾರ ಇದು ವಯಸ್ಸಾದವರಿಗೆ ಹೆಚ್ಚು ಅಪಾಯಕಾರಿ ಮತ್ತು ಯಾವುದೇ ರೀತಿಯ ದೀರ್ಘಕಾಲಿಕ ಗಂಭೀರ ಆರೋಗ್ಯ ಸಮಸ್ಯೆಯಿದ್ದರೆ ಅಂತವರಿಗೆ ಅಪಾಯ ಹೆಚ್ಚಾಗಿರುವುದು.

ಇದರಿಂದಾಗಿ 18ಕ್ಕಿಂತ ಮೇಲ್ಪಟ್ಟ ಸುಮಾರು 41ರಷ್ಟು ಮಂದಿಯಲ್ಲಿ ಕೊವಿಡ್-19 ಬರುವಂತಹ ಅಪಾಯವು ಅತಿಯಾಗಿ ಇರುವುದು ಎಂದು ವರದಿಗಳು ಹೇಳಿವೆ.

ವಯೋವೃದ್ಧರು

ಚೀನಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಪ್ರಕಾರ 80ಕ್ಕಿಂತ ಅಧಿಕ ವಯಸ್ಸಿನವರಿಗೆ ಇದರ ಅಪಾಯ ಹೆಚ್ಚು ಮತ್ತು ಅವರು ಸಾಯುವ ಪ್ರಮಾಣವು ಶೇ.14.8ರಷ್ಟಿದೆ ಎಂದು ಹೇಳಿದೆ. ಚೀನಾದಲ್ಲಿ ಇತರ ಸಾವಿನ ಪ್ರಮಾಣವು ಶೇ.0.9ರಷ್ಟಿತ್ತು. ಆದರೆ ಫೆಬ್ರವರಿ 17ರಂದು ನೀಡಿರುವಂತಹ ಅಂಕಿಅಂಶವು ಇದಾಗಿದ್ದು, ಬಳಿಕ ಹಲವಾರು ಬದಲಾವಣೆಗಳು ಆಗಿವೆ ಎಂದು ಅಧ್ಯಯನಗಳು ಹೇಳಿವೆ.

ವಯಸ್ಸಾಗುತ್ತಾ ಹೋದಂತೆ ಒಳಗಿನ ಅಂಗಾಂಗಗಳು ಮೊದಲಿನಂತೆ ಕೆಲಸ ಮಾಡುವುದಿಲ್ಲ. ಅದೇ ರೀತಿಯಾಗಿ ದೇಹದಲ್ಲಿ ನೈಸರ್ಗಿಕವಾಗಿ ಪ್ರತಿರೋಧಕ ವ್ಯವಸ್ಥೆಯು ಕುಂದುವುದು. ಯುವಕರಾಗಿ ಇದ್ದ ವೇಳೆ ಇದ್ದಂತಹ ಪ್ರತಿರೋಧಕ ವ್ಯವಸ್ಥೆಯು ವಯಸ್ಸಾದ ವೇಳೆ ಕಂಡಬರಲ್ಲ.

   
 
ಹೆಲ್ತ್