Back
Home » ಇತ್ತೀಚಿನ
ಆಪಲ್‌ ಸಂಸ್ಥೆಯಿಂದ COVID-19 ಸ್ಕ್ರಿನಿಂಗ್‌ ಆಪ್‌ ಬಿಡುಗಡೆ!
Gizbot | 28th Mar, 2020 12:45 PM
 • ಹೌದು

  ಹೌದು, ಕೊರೊನಾ ವೈರಸ್‌ ಬೀತಿಯಿಂದಾಗಿ ಇಡೀ ಜಗತ್ತೇ ನರುಳುತಿರುವಾಗ ಸೊಶೀಯಲ್‌ ಮಿಡಿಯಾ ವೇದಿಕೆಗಳಲ್ಲಿ ನಕಲಿ ಸುದ್ದಿಗಲು ಕೂಡ ಹರಿದಾಡುತ್ತಿದ್ದು, ಯಾವುದು ಸತ್ಯ ಯಾವುದು ಸುಳ್ಳು ಅನ್ನೊದು ಕೂಡ ತಿಳಿಯದಾಗಿದೆ. ಈ ನಡುವೆ ಜನರು ಕೂಡ ಕೊರೊನಾ ವೈರಸ್‌ನಿಂದ ಬೀತಿಗೆ ಒಳಗಾಗಿದ್ದು, ಯಾವುದೇ ಮಾಹಿತಿ ಸಿಕ್ಕರೂ ಅದನ್ನ ಕ್ಷಣಾರ್ಧದಲ್ಲಿ ಶೇರ್‌ ಮಾಡುವ ಮೂಲಕ ಸುದ್ದಿಯ ಸತ್ಯಾಸತ್ಯತೆಯನ್ನ ಅರಿಯಲು ಹೋಗುತ್ತಿಲ್ಲ. ಇದು ಸಾಮಾಜದಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದು ಅಮೆರಿಕದಲ್ಲಿ ಕೂಡ ಮುಂದುವರೆದಿರೊದ್ರಿಂದ ಕೊರೊನಾ ವೈರಸ್‌ ಬಗ್ಗೆ ನಿಖರ ಮಾಹಿತಿ ನೀಡುವ ಆಪ್‌ ಒಂದನ್ನ ಆಪಲ್‌ ಕಂಪೆನಿ ಇದೀಗ ಬಿಡುಗಡೆ ಮಾಡಿದೆ.


 • ಸದ್ಯ

  ಸದ್ಯ ಆಪಲ್‌ ಕಂಪೆನಿ COVID-19 ಸ್ಕ್ರೀನಿಂಗ್‌ ಆಪ್‌ ಬಿಡುಗಡೆ ಮಾಡಿದ್ದು, ಇದು ಜನರಲ್ಲಿ ತಿಳುವಳಿಕೆ ಮುಡಿಸುವ ಆಪ್‌ ಆಗಿದೆ ಎಂದು ಆಪಲ್‌ ಕಂಪೆನಿ ಹೇಳಿದೆ. ಈಗಾಗ್ಲೇ ಕೊರೊನಾ ವೈರಸ್‌ನಿಂದ ಬಳಲುತ್ತಿರುವ ಅಮೆರಿಕದಲ್ಲಿ ಕೊರೊನಾ ವೈರಸ್‌ ಕುರಿತ ಯಾವುದೇ ಮಾಹಿತಿಗಾಗಿ ಈ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡರೆ ನಿಖರ ಮಾಹಿತಿ ದೊರೆಯಲಿದೆ. ಇನ್ನು ಈ ಆಪ್‌ ಒಂದು ರೀತಿಯಲ್ಲಿ ಗೈಡ್‌ ಮಾಡುವ ಆಪ್‌ ಗುರುತಿಸಿಕೊಂಡಿದ್ದು, CDC(Centers for Disease Control) ಆಧಾರದ ಮೇಲೆ COVID-19 ಹೇಗೆ ಹರಡಲಿದೆ. ಇದರಿಂದ ಪಾರಾಗುವುದು ಹೇಗೆ ಎಂಬುದನ್ನ ಈ ಆಪ್‌ ತಿಳಿಸಿಕೊಡಲಿದೆ.


 • ಕೊರೊನಾ

  ಇನ್ನು ಕೊರೊನಾ ಹರಡುವಿಕೆಯ ಸಮಯದಲ್ಲಿ ಜನರಿಗೆ ತಿಳುವಳಿಕೆ ನೀಡುವ ದೃಷ್ಟಿಯಿಂದ ಮತ್ತು ಅವರ ಆರೋಗ್ಯವನ್ನು ಕಾಪಾಡಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಆಪಲ್ ಈ ಹೊಸ ಸ್ಕ್ರೀನಿಂಗ್ ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಈ ಹೊಸ COVID-19 ವೆಬ್‌ಸೈಟ್, ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ COVID-19 ಆಪ್ ಅನ್ನು CDC(Centers for Disease Control) 1 ಶ್ವೇತಭವನದ ಕೊರೊನಾವೈರಸ್ ಟಾಸ್ಕ್ ಫೋರ್ಸ್ ಮತ್ತು ಫೆಮಾ ಸಹಭಾಗಿತ್ವದಲ್ಲಿ ರಚಿಸಲಾಗಿದೆ, ದೇಶಾದ್ಯಂತದ ಜನರಿಗೆ ವಿಶ್ವಾಸಾರ್ಹ ಮಾಹಿತಿ ಮತ್ತು ಮಾರ್ಗದರ್ಶನ ಸುಲಭವಾಗುವಂತೆ ಮಾಡುತ್ತದೆ.


 • ಅಲ್ಲದೆ

  ಅಲ್ಲದೆ COVID-19 ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಬಳಕೆದಾರರು ಅಪಾಯಕಾರಿ ಅಂಶಗಳು, ಇತ್ತೀಚಿನ ಮಾನ್ಯತೆ ಮತ್ತು ತಮ್ಮ ಅಥವಾ ಪ್ರೀತಿಪಾತ್ರರ ರೋಗಲಕ್ಷಣಗಳ ಸುತ್ತಲಿನ ಪ್ರಶ್ನೆಗಳಿಗೆ ಉತ್ತರಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ನಿಮ್ಮ ಪ್ರಶ್ನೆಗಳಿಗೆ CDC ಕಡೆಯಿಂದ ಉತ್ತರ ಸಹ ನೀಡಲಾಗುತ್ತದೆ. ಸಾಮಾಜಿಕ ಆಂತರ ಮತ್ತು ಸ್ವಯಂ-ಪ್ರತ್ಯೇಕತೆಯ ಮಾರ್ಗದರ್ಶನ, ರೋಗಲಕ್ಷಣಗಳನ್ನು ಹೇಗೆ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುವುದು, ಈ ಸಮಯದಲ್ಲಿ ವೈದ್ಯರನ್ನ ಯಾವಾಗ ಸಂಪರ್ಕಿಸಬೇಕು ಎಂಬ ಮಾಹಿತಿ ನೀಡಲಿದೆ. ಜೊತೆಗೆ ಈ ಹೊಸ ಸ್ಕ್ರೀನಿಂಗ್ ಉಪಕರಣವನ್ನು ವ್ಯಕ್ತಿಗಳಿಗೆ ಸಂಪನ್ಮೂಲವಾಗಿ ವಿನ್ಯಾಸಗೊಳಿಸಲಾಗಿದ್ದು, ಆರೋಗ್ಯ ಸೇವೆ ಒದಗಿಸುವವರ ಸೂಚನೆಗಳನ್ನು ಸಹ ಇಲ್ಲಿ ಪಡೆಯಬಹುದಾಗಿದೆ.


 • ಆಪ್ಲಿಕೇಶನ್‌

  ಇನ್ನು ಈ ಆಪ್ಲಿಕೇಶನ್‌ ಬಳಕೆದಾರರು ಇದರಲ್ಲಿ ಯಾರು ಹೆಚ್ಚು ಅಪಾಯದಲ್ಲಿದ್ದಾರೆ ಮತ್ತು ರೋಗಲಕ್ಷಣಗಳನ್ನು ಹೇಗೆ ಗುರುತಿಸುವುದು ಎಂಬ ಮಾಹಿತಿಯನ್ನು ಸಹ ಪಡೆಯಬಹುದು. ಜೊತೆಗೆ ಅಂತಹ ವ್ಯಕ್ತಿಗಳು ಕಂಡು ಬಂದರೆ ಮಾಹಿತಿಯನ್ನು ಸಹ ನೀಡಬಹುದಾಗಿದೆ. ಇದಲ್ಲದೆ ಈ ಹೊಸ COVID-19 ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನೊಂದಿಗೆ, ಯುಎಸ್‌ ನ ಗ್ರಾಹಕರು ಸಿರಿ ಆಪ್ಲಿಕೇಶನ್‌ ಕನೆಕ್ಟಿವಿಟಿಯನ್ನು ಸಹ ಪಡೆಯಬಹುದಾಗಿದೆ. ಇನ್ನು ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ ಟೆಲಿಹೆಲ್ತ್ ಅಪ್ಲಿಕೇಶನ್‌ಗಳ ಸಂಗ್ರಹಣೆ ಮಾಡಲಾಗುತ್ತದೆ. ಸದ್ಯ ಆಪ್ ಸ್ಟೋರ್‌ನಲ್ಲಿ COVID-19 ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೂಲಕ ಅಥವಾ apple.com/covid19 ಗೆ ಭೇಟಿ ನೀಡುವ ಮೂಲಕ ಇದನ್ನ ಡೌನ್‌ಲೋಡ್‌ ಮಾಡಬಹುದಾಗಿದೆ. ಸದ್ಯ ಈ ಆಪ್‌ ಅನ್ನು ಯುಎಸ್‌ನಲ್ಲಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ ಈ ಸ್ಕ್ರೀನಿಂಗ್ ಟೂಲ್ ಅನ್ನು ಡೌನ್‌ಲೊಡ್‌ ಮಾಡಿಕೊಳ್ಳಬಹುದಾಗಿದೆ.




ಚೀನಾದಲ್ಲಿ ಹುಟ್ಟಿ ಇಂದು ಇಡೀ ಜಗತ್ತನ್ನೇ ಆವರಿಸಿಕೊಂಡಿರುವ ಕೊರೊನಾ ವೈರಸ್‌ ಎಲ್ಲೆಡೆ ಆತಂಕವನ್ನ ಸೃಷ್ಟಿಸಿದೆ. ವಿಶ್ವದ ಬಹುಪಾಲು ರಾಷ್ಟ್ರಗಳು ಕೊರೊನಾ ವೈರಸ್‌ನಿಂದ ಬಳಲುತ್ತಿವೆ. ಚೀನಾ, ಇಟಲಿ,ಸ್ಪೇನ್‌, ಅಮೆರಿಕ, ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲಿ ಕೊರೊನಾ ತನ್ನ ರುದ್ರನರ್ತನವನ್ನು ತೋರಿಸುತ್ತದೆ. ಅಲ್ಲದೆ ಕೊರೊನಾ ವೈರಸ್‌ ನಿಂದ ಬಳಲುತ್ತಿರುವ ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದ ಮಾಹಿತಿ, ವರದಿ ದಿನಕ್ಕೊಂದು ಮಾಹಿತಿ ಹೊರಬಿಳುತ್ತಿದೆ. ಅದರಲ್ಲೂ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಇದರ ಕುರಿತ ಸುದ್ದಿ ಹರಿದಾಡುತ್ತಲೇ ಇದೆ.

 
ಹೆಲ್ತ್