Back
Home » ಇತ್ತೀಚಿನ
ಲಾಕ್‌ಡೌನ್ ಎಫೆಕ್ಟ್‌: ಟಾಟಾಸ್ಕೈ ಡಿಟಿಎಚ್ ಚಂದಾದಾರರಿಗೆ ಬೆಸ್ಟ್ ಅಫರ್!
Gizbot | 28th Mar, 2020 01:32 PM
 • ಟಾಟಾಸ್ಕೈ

  ಹೌದು, ಟಾಟಾಸ್ಕೈ ಸಂಸ್ಥೆಯು ರೀಚಾರ್ಜ್ ಅವಧಿ ಮುಗಿದಿರುವ ಗ್ರಾಹಕರಿಗೆ ಇದೀಗ 7 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಅವಧಿಯ ಆಯ್ಕೆ ನೀಡಲು ಮುಂದಾಗಿದೆ. ಆದರೆ ಹೆಚ್ಚುವರಿ ವ್ಯಾಲಿಡಿಟಿ ಸೌಲಭ್ಯವನ್ನು ಗ್ರಾಹಕರ ಪಡೆದುಕೊಳ್ಳಬಹುದಾಗಿದೆ. ಸದ್ಯ ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಜಾರಿ ಇರುವುದರಿಂದ ತನ್ನ ಚಂದಾದಾರರಿಗೆ ಅನುಕೂಕವಾಗಲೆಂದು ಲೋನ್ ಮಾದರಿಯ ಈ ಸೇವೆಯನ್ನು ಪರಿಚಯಿಸಿದೆ. ಈ ಸೌಲಭ್ಯ ಪಡೆಯುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.


 • ಏನಿದು ಹೊಸ ಸೌಲಭ್ಯ?

  ಕೊರೊನಾ ವೈರಸ್‌ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ ಗ್ರಾಹಕರು ಮನೆಯಿಂದ ಹೊರಗಡೆ ಬಂದು ತನ್ನ ಟಾಟಾಸ್ಕೈ ಡಿಟಿಎಚ್ ರೀಚಾರ್ಜ್ ಮಾಡಿಸದೇ ಇರಬಹುದು. ಏಕೆಂದರೇ ಬಹುತೇಕರಿಗೆ ಆನ್‌ಲೈನ್‌ನಲ್ಲಿ ರೀಚಾರ್ಜ್ ಬಗ್ಗೆ ಇನ್ನು ತಿಳಿದಿಲ್ಲ. ಹೀಗಾಗಿ ಅಂತಹ ಗ್ರಾಹಕರು ಟಾಟಾಸ್ಕೈ ಸಂಸ್ಥೆಯಿಂದ 7 ದಿನಗಳ ವ್ಯಾಲಿಡಿಟಿಯನ್ನು ಲೋನ್ ರೂಪದಲ್ಲಿ ಪಡೆಯಬಹುದಾದ ಸೌಲಭ್ಯ ಇದಾಗಿದೆ.


 • ಸೌಲಭ್ಯ ಹೇಗೆ ಪಡೆಯುವುದು?

  ಇನ್‌ಆಕ್ವಿವ್ ಖಾತೆಯ ಟಾಟಾಸ್ಕೈ ಗ್ರಾಹಕರು ಸಂಸ್ಥೆಯು ಪರಿಚಯಿಸಿರುವ 7 ದಿನಗಳ ವ್ಯಾಲಿಡಿಟಿ ಲೋನ್ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದಾಗಿದೆ. ಅದಕ್ಕಾಗಿ 080-61999922 ಈ ನಂಬರ್‌ಗೆ ಮಿಸ್‌ ಕಾಲ್ ಮಾಡುವ ಮೂಲಕ ಚಂದಾದಾರರು ಈ ಸೌಲಭ್ಯವನ್ನು ಸಕ್ರಿಯ ಮಾಡಿಕೊಳ್ಳಬಹುದಾಗಿದೆ.


 • ಶುಲ್ಕ ಪಾವತಿ ಯಾವಾಗ?

  ಟಾಟಾಸ್ಕೈ ಡಿಟಿಎಚ್ ರೀಚಾರ್ಜ್ ವ್ಯಾಲಿಡಿಟಿ ಮುಗಿದಿರುವ ಗ್ರಾಹಕರು ಈ ಸೌಲಭ್ಯ ಪಡೆಯಬಹುದು. 7 ದಿನಗಳ ವ್ಯಾಲಿಡಿಟಿ ಅವಧಿಯ ಬಳಿಕ ಎಂಟನೇ ದಿನಕ್ಕೆ ಸಂಸ್ಥೆಯು 7 ದಿನಗಳ ಲೋನ್ ಶುಲ್ಕವನ್ನು ಸೌಲಭ್ಯವನ್ನು ಪಡೆದ ಗ್ರಾಹಕರ ಖಾತೆಯಿಂದ ಮರಳಿ ಪಡೆದುಕೊಳ್ಳುತ್ತದೆ.


 • ಟಾಟಾಸ್ಕೈ ಫಿಟ್ನೆಸ್

  ದೇಶದಲ್ಲಿ ಸದ್ಯ 21 ದಿನಗಳು ಲಾಕ್‌ಡೌನ್ ಇರುವುದರಿಂದ. ಟಾಟಾಸ್ಕೈ ತನ್ನ ಮೌಲ್ಯವರ್ಧಿತ ಟಾಟಾಸ್ಕೈ ಫಿಟ್ನೆಸ್‌ ಸೇವೆಯು ಉಚಿತವಾಗಿ ನೀಡುವುದಾಗಿ ಹೇಳಿಕೊಂಡಿದೆ. ಅಂದಹಾಗೆ ಟಾಟಾಸ್ಕೈ ಫಿಟ್ನೆಸ್ ಸೇವೆಯ ಶುಲ್ಕವು ಪ್ರತಿದಿನ 2ರೂ. ಆಗಿದೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಮಾತ್ರ ಉಚಿತವಾಗಿ ಲಭ್ಯ.
ಜನಪ್ರಿಯ ಟಾಟಾಸ್ಕೈ ಸಂಸ್ಥೆಯು ಡಿಟಿಎಚ್ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಹಲವು ಆಕರ್ಷಕ ಯೋಜನೆಗಳನ್ನು ಅಳವಡಿಸಿದೆ. ಆದರೆ ಇದೀಗ ಕೊರೊನಾ ವೈರಸ್‌ ಹಾವಳಿಂದಾಗಿ ಸಂಸ್ಥೆಯು ಗ್ರಾಹಕರು ಮತ್ತೊಂದು ಖುಷಿ ವಿಚಾರ ಹೊರಹಾಕಿದೆ. ಅದೆನೆಂದರೇ ವ್ಯಾಲಿಡಿಟಿ ಮುಕ್ತಾಯ ಆಗಿರುವ ಚಂದಾದಾರರಿಗೆ ಹೆಚ್ಚುವರಿ ವ್ಯಾಲಿಡಿಟಿ ಅವಧಿ ಘೋಷಿಸಿದೆ.

   
 
ಹೆಲ್ತ್