Back
Home » ಇತ್ತೀಚಿನ
ಕೊರೊನಾ ವಿರುದ್ಧದ ಹೋರಾಟಕ್ಕೆ ಟೆಕ್ ವಲಯವು ಬೆಂಬಲಿಸಿದೆ! ಹೇಗೆ?
Gizbot | 30th Mar, 2020 11:49 AM
 • ಹೌದು

  ಹೌದು, ಕೊರೊನಾ ವೈರಸ್‌ನ ಕಂಪನ ದೇಶದಲ್ಲಿ ಹುಚ್ಚುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿರುವ ಎಲ್ಲಾ ವಲಯಗಳು ಕೂಡ ಸರ್ಕಾರದ ಜೊತೆಗೆ ಹಾಗೂ ನಾಗರಿಕೆರಿಗೆ ದೈರ್ಯ ತುಂಬುವ ಕೆಲಸವನ್ನ ಮಾಡುತ್ತಿವೆ. ಹಾಗೇಯೆ ಟೆಕ್‌ ವಲಯವೂ ಕೂಡ ಭಾರತದ ಸಾರ್ವಜನಿಕರ ಜೊತೆಗೆ ನಿಂತಿದ್ದು, ಹಲವು ಕಂಪೆನಿಗಳು ಉಪಯುಕ್ತ ಕ್ರಮಗಳನ್ನ ತೆಗೆದುಕೊಮಡಿವೆ. ಟೆಕ್‌ ವಲಯವೆಂದರೆ ಕೇವಲ ಬ್ಯುಸಿನೆಸ್‌ ಎಂದು ಹೇಳುವವರ ನಡುವೆಯು ತಮ್ಮ ಕರ್ತವ್ಯವನ್ನು ಮೆರೆದು ಈ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಮುಂದಾಗಿವೆ. ಹಾಗಾದ್ರೆ ಟೆಕ್‌ ವಲಯದಿಂದ ಸಿಗುತ್ತಿರುವ ಉಪಯೋಗವಾದರೂ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ


 • ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಿಂದ ಸಮಾಜಮುಖಿ ಸೇವೆ

  ಇನ್ನು ಕೊರೊನಾ ವೈರಸ್‌ ದೇಶದೆಲ್ಲೆಡೆ ಹರಡಿ ಸಂಕಷ್ಟಕ್ಕೆ ದೂಡುತ್ತಿರುವ ಈ ಸಮಯದಲ್ಲಿ ಎಲ್ಲಾ ವಲಯಗಳ ಸೇವೆ ಅತ್ಯಗತ್ಯ. ಅದರಲ್ಲೂ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಇತರೆ ಟೆಕ್‌ ಕಂಪೆನಿಗಳಿಗಿಂತ ಸಾರ್ವಜನಿಕರ ಜೊತೆ ಹೆಚ್ಚು ಕನೆಕ್ಟಿವಿಟಿಯನ್ನ ಹೊಂದಿವೆ. ಇದೇ ಕಾರಣಕ್ಕೆ ಭಾರತದಲ್ಲಿ ಹೆಚ್ಚು ಜನಪ್ರಿಯ ಬ್ರಾಂಡ್‌ಗಳಾದ ಶಿಯೋಮಿ ಮತ್ತು ವಿವೊ ಕೊರೊನಾ ವೈರಸ್‌ ಆತಂಕದ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮ ಕೈಗೊಂಡಿವೆ. ವಿವೋ ಇತ್ತೀಚೆಗೆ ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ಹೆಚ್ಚಿನ ಸಂಖ್ಯೆಯ ಎನ್ 95 ಮುಖವಾಡಗಳನ್ನು ದಾನ ಮಾಡಿದೆ. ಹಾಗೇಯೆ ಶಿಯೋಮಿ ಕಂಪೆನಿ ಅನೇಕ ಕರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನಿಡುತ್ತಿರುವ ವೈದ್ಯರಿಗೆ ಹಜ್ಮತ್ ಸೂಟ್‌ಗಳನ್ನು ಒದಗಿಸಿದೆ. ಅಷ್ಟೇ ಅಲ್ಲ ಚೀನಾವನ್ನು ಹೊರತುಪಡಿಸಿ ಕೊರೊನಾ ಪೀಡಿತ ಇತರೆ ರಾಷ್ಟ್ರಗಳಿಗೆ 300,000 ಕ್ಕೂ ಅಧಿಕ ಮಾಸ್ಕ್‌ಗಳನ್ನ ಒಪ್ಪೊ ಕಂಪೆನಿ ದಾನ ಮಾಡಿದೆ. ಈ ಮೂಲಕ ಸಮಾಜಿಕ ಕಳಕಳಿಯನ್ನ ಮೆರೆದಿವೆ.


 • ಅಗತ್ಯವಿರುವ ಗ್ರಾಹಕರನ್ನ ಕೈ ಬಿಡುವುದಿಲ್ಲವೆಂದ ಟೆಕ್ ವಲಯ!

  ಸದ್ಯ ಭಾರತದಲ್ಲಿ ಲಾಕ್‌ಡೌನ್ ಅವಧಿಯ ಮೂಲಕ ತಮ್ಮ ಖಾತರಿ ಕರಾರು ಮತ್ತು ಗ್ರಾಹಕ ಕೇಂದ್ರಿತ ಸೇವೆಗಳನ್ನು ಸಹ ಕೆಲವು ಕಂಪೆನಿಗಳು ವಿಸ್ತರಿಸಿವೆ. ಅದರಲ್ಲೂ ಒಪ್ಪೊ, ಒನ್‌ಪ್ಲಸ್, ರಿಯಲ್ಮೆ ಮತ್ತು ಹುವಾವೇ ಮುಂತಾದ ಬ್ರಾಂಡ್‌ಗಳು ತಮ್ಮ ಖಾತರಿ ಕರಾರುಗಳನ್ನು ವಿಸ್ತರಿಸಿವೆ. ಇದಲ್ಲದೆ, ಇಮೇಲ್, ಚಾಟ್ ಗಳ ಮೂಲಕ ಗ್ರಾಹಕರಿಗೆ ದೈರ್ಯ ತುಂಬುವ ಕೆಲಸವನ್ನ ಕಂಪೆನಿಗಲು ಮಾಡುತ್ತಲೇ ಇವೆ. ಜೊತೆಗೆ ಸೇವಾ ಕೇಂದ್ರಗಳನ್ನು ಸಹ ತೆರೆಯಲಾಗಿದೆ. ಇದಲ್ಲದೆ ಅಗತ್ಯವಿರುವ ದೇಶಗಳಿಗೆ ಸಹಾಯ ಮಾಡಲು ತಮ್ಮ ಸಂಪನ್ಮೂಲಗಳನ್ನು ಬಳಸುತ್ತಿರುವ ಕಂಪೆನಿಗಳು ಸಹ ಇದ್ದು, ಅಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ 1 ಮಿಲಿಯನ್ ಮಾಸ್ಕ್‌ಗಳು ಮತ್ತು 500,000 ಕರೋನವೈರಸ್ ಪರೀಕ್ಷಾ ಕಿಟ್‌ಗಳನ್ನು ಕಳುಹಿಸಿದ್ದಾರೆ. ಅಷ್ಟೇ ಅಲ್ಲ ಕೊರೋನವೈರಸ್ ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸಲು 100 ಮಿಲಿಯನ್ ಯುವಾನ್ (million 14 ಮಿಲಿಯನ್) ದಾನ ಮಾಡುವುದಾಗಿ ಜ್ಯಾಕ್ ಮಾ ಫೌಂಡೇಶನ್ ಜನವರಿಯಲ್ಲಿ ಘೋಷಿಸಿದೆ.


 • ಕ್ಲೌಡ್ ಕಂಪ್ಯೂಟಿಂಗ್

  ಇನ್ನು ಹೆಚ್ಚಿನ ದೇಶಗಳು ವಿವಿಧ ವೆಬ್‌ಸೈಟ್‌ಗಳನ್ನು ಅವಲಂಬಿಸಿವೆ. ಅದರಲ್ಲೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ದಿನಸಿ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಪ್ರಯತ್ನಿಸುತ್ತಿವೆ. ಅಲ್ಲದೆ ನೆಟ್‌ಫ್ಲಿಕ್ಸ್‌,ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಸೇರಿದಂತೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಹ ಇವೆ, ಜನರು ಮನೆಯಲ್ಲಿಯೇ ಇರುವುದರಿಂದ ಹೆಚ್ಚಿನ ಸಮಯ ಇವುಗಳನ್ನ ಬಳಸುತ್ತಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲೌಡ್ ಕಂಪ್ಯೂಟಿಂಗ್‌ನಿಂದಾಗಿ ಈ ವೆಬ್‌ಸೈಟ್‌ಗಳು ಮತ್ತು ಡೊಮೇನ್‌ಗಳು ಹೆಚ್ಚಿನವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಭಾರತದಂತಹ ದೊಡ್ಡ ಜನಸಂಖ್ಯೆಯ ಒತ್ತಡದ ನಡುವೆಯೂ ಸರ್ವರ್ ಡೌನ್‌ ಆಗದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕಾರಣದಿಂದಾಗಿ ಎಲ್ಲಾ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಾಗುತ್ತಿದೆ.


 • ಗೂಗಲ್ ಸೇವೆ

  ಇದಲ್ಲದೆ ಸರ್ಚ್ ಇಂಜಿನ್‌ ದೈತ್ಯ ಗೂಗಲ್‌ ಕುಡ ಇಂತಹ ಸಂಕಷ್ಟ ಪರಿಸ್ಥಿತರಿಯಲ್ಲಿ ಜನರ ಸಹಾಯಕ್ಕೆ ನಿಂತಿದೆ. ಕೊರೊನಾ ವೈರಸ್‌ ಸಂಬಂಧಿತ ಸರ್ಚ್ಗಳಿಗೆ ಉತ್ತಮ ಮಾಹಿತಿಯನ್ನ ನೀಡುತ್ತಿದ್ದು, ಯಾವುದು ನಕಲಿ ಯಾವುದು ಅಸಲಿ ಸುದ್ದಿ ಎಂಬುದನ್ನ ಅರ್ಥ ಮಾಡಿಸುತ್ತಿದೆ. ಜೊತೆಗೆ ಈಗಾಗ್ಲೆ ಲಾಕ್‌ಡೌನ್‌ ಇರೊದ್ರಿಂದ ಹೆಚ್ಚಿನ ಪ್ರಮಾಣದಲ್ಲಿ ಜನರು ಗೂಗಲ್‌ ಸರ್ಚ್ ಮಾಡಿದಾಗ ಸರ್ವರ್‌ ಸಮಸ್ಯೆ ಉಂಟಾಗುವ ಸಾಧ್ಯತೆ ಇತ್ತು. ಆದರೆ ಗೂಗಲ್‌ ಇದೆಲ್ಲವನ್ನೂ ಮಿರಿ ನಿಂತು ಗ್ರಾಹಕರಿಗೆ ಸೇವೆ ನೀಡುತ್ತಿದೆ. ಎಂಟರ್‌ಪ್ರೈಸ್-ಗ್ರೇಡ್ ಆಫೀಸ್ ನೆಟ್‌ವರ್ಕ್‌ಗಳಿಂದ ಜನರ ವೈಯಕ್ತಿಕ ನೆಟ್‌ವರ್ಕ್‌ಗಳಿಗೆ ಬದಲಾದ ಹೊರತಾಗಿಯೂ, ಕಂಪನಿಯು ಹೆಚ್ಚುವರಿ ಕಂಪ್ಯೂಟೇಶನಲ್ ಸಂಪನ್ಮೂಲಗಳನ್ನು ಹೊಂದಿದೆ. ಅದರಲ್ಲೂ ಗೂಗಲ್ ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಗರಿಷ್ಠ ಸಮಯದಲ್ಲಿ ತನ್ನ ಒಟ್ಟು ಸಾಮರ್ಥ್ಯದ 25 ಪ್ರತಿಶತದಿಂದ 33 ಪ್ರತಿಶತದಷ್ಟು ಮಾತ್ರ ಬಳಸುತ್ತಿದೆ. ಅದು ಇನ್ನೂ ಈ ಪ್ರದೇಶಗಳಲ್ಲಿ ಹಂಚಿಕೆ ಮಾಡಲು 75 ಪ್ರತಿಶತದಿಂದ 66 ಪ್ರತಿಶತದಷ್ಟು ಸಂಪನ್ಮೂಲಗಳನ್ನು ಬಿಡುತ್ತದೆ.


 • ಇ-ಕಾಮರ್ಸ್ ಕ್ಷೇತ್ರ

  ಇನ್ನು ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್‌ ಕ್ಷೇತ್ರ ಅತಿ ದೊಡ್ಡ ಉದ್ಯಮವಾಗಿ ಬದಲಾಗುತ್ತಿದೆ. ಅದರಲ್ಲೀ ಭಾರತದಲ್ಲಿ ಅತಿದೊಡ್ಡ ಇ-ಕಾಮರ್ಸ್‌ ಸೈಟ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಆದೇಶಗಳನ್ನು ನೀಡುವುದನ್ನು ನಿರ್ಬಂಧಿಸಿದೆ. ಮನೆಯ ಸ್ಟೇಪಲ್ಸ್, ಪ್ಯಾಕೇಜ್ಡ್ ಆಹಾರ, ಆರೋಗ್ಯ ರಕ್ಷಣೆ, ನೈರ್ಮಲ್ಯ ಮತ್ತು ವೈಯಕ್ತಿಕ ಸುರಕ್ಷತಾ ಉತ್ಪನ್ನಗಳಂತಹ 'ನಿರ್ಣಾಯಕ' ವಸ್ತುಗಳ ವಿತರಣೆಗೆ ಆದ್ಯತೆ ನೀಡುವುದಾಗಿ ಅಮೆಜಾನ್ ಉಲ್ಲೇಖಿಸಿದೆ. ಇದರಿಂದ ಯಾವುದೇ ಆರ್ಡರ್‌ ಪಾರ್ಸಲ್‌ಗಳನ್ನ ನಿಲ್ಲಿಸುವುದರಿಂದ ಕೊರೊನಾ ವೈರಸ್‌ ಹರಡುವುದನ್ನ ಒಂದು ಹಂತದಲ್ಲಿ ನಿಲ್ಲಿಸಲು ಸಹಕಾರಿಯಾಗಿದೆ.


 • ಎಡ್‌ಟೆಕ್‌ ಬ್ರಾಂಡ್‌ಗಳ ಸೇವೆ

  ಈಗಾಗ್ಲೇ ಭಾರತದಲ್ಲಿ ಎಡ್‌ಟೆಕ್‌ ಪ್ಲಾಟ್‌ಫಾರ್ಮ್‌ಗಳು ಜನಪ್ರಿಯವಾಗಿವೆ. ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಈ ವಲಯಗಳು ಉತ್ತಮ ಕಾರ್ಯನಿರ್ವಹಿಸುತ್ತಿದ್ದು ಮಕ್ಕಳಿಗೆ ಅಗತ್ಯ ಶಿಕ್ಷಣ ಸೇವೆಯನ್ನ ನೀಡುತ್ತಿವೆ. ಇದೀಗ ಎಡ್ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಬೈಜು ತನ್ನ ಎಲ್ಲಾ ಕಲಿಕಾ ವೇದಿಕೆಗಳನ್ನು ಏಪ್ರಿಲ್ ಕೊನೆಯ ವಾರದವರೆಗೆ ಫ್ರಿ ಆಗಿ ಶಿಕ್ಷಣ ನೀಡಲು ನಿರ್ಧರಿಸಿದೆ. 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಅನ್ವಯವಾಗುವ ಈ ವೇದಿಕೆಯು ಮಕ್ಕಳಿಗೆ ಪಠ್ಯಕ್ರಮದೊಂದಿಗೆ ಟ್ರ್ಯಾಕ್‌ನಲ್ಲಿರಲು ಸಹಾಯ ಮಾಡುತ್ತದೆ. ಇದಲ್ಲದೆ ಯುನಾಕಾಡೆಮಿ ವಿವಿಧ ಪ್ರವೇಶ ಪರೀಕ್ಷೆಗಳಿಗೆ ತಯಾರಿ ಮಾಡುವ ಜನರಿಗೆ 20,000 ಉಚಿತ ಲೈವ್ ತರಗತಿಗಳನ್ನು ನೀಡುವುದಾಗಿ ಹೇಳಿದೆ. ಇದರಿಂದ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿಯಿರುವ ವಿಧ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗುತ್ತಿದೆ.
ಇಡೀ ಜಗತ್ತೇ ಇಂದು ಲಾಕ್‌ಡೌನ್‌ ಆಗಿದೆ. ಕೊರೊನಾ ವೈರಸ್‌ ಎಂಬ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಯಾವಾಗಲು ಜನಜಂಗುಳಿಯಿಂದ ತುಳುಕುತ್ತಿದ್ದ ನಗರಗಳೆಲ್ಲಾ ಇಂದು ಖಾಲಿ ಖಾಲಿ ಹೊಡೆಯುತ್ಯತಿವೆ. ದೈನಂದಿನ ಕೆಲಸ ಮುಗಿಸಿ ವಾಪಾಸಾಗುತ್ತದ್ದವರೆಲ್ಲಾ ಮನೆಯಲ್ಲಿಯೇ ಕುಳಿತು ಸಮಯ ಕಳೆಯುವಷ್ಟ ಮಟ್ಟಿಗೆ ಕೊರೊನಾ ವೈರಸ್‌ ಸಂಕಷ್ಟವನ್ನ ತಮದಿಟ್ಟಿದೆ. ಚೀನಾದಲ್ಲಿ ಹುಟ್ಟಿ ಇಂದು ಇಡೀ ವಿಶ್ವಕ್ಕೆ ಮಾರಾಕವಾಗಿರುವ ಕೊರೊನಾ ಅಮೆರಿಕವೂ ಸೇರಿದಂತೆ ಭಾರತವನ್ನು ಸಹ ಬಿಟ್ಟಿಲ್ಲ. ಇಂತಹ ಸದಂರ್ಭದಲ್ಲಿ ಎಲ್ಲಾ ವಲಯಗಳು ಕೂಡ ಕೊರೊನಾ ವೈರಸ್‌ ವಿರುದ್ದ ಹೋರಾಡಲೂ ಪಣತೊಟ್ಟಿವೆ ಇದಕ್ಕೆ ಟೆಕ್‌ ವಲಯವೂ ಕೂಡ ಹೊರತಾಗಿಲ್ಲ.

 
ಹೆಲ್ತ್