Back
Home » ಇತ್ತೀಚಿನ
ಲೈವ್‌ ಸ್ಟ್ರೀಮಿಂಗ್‌ ವೀಡಿಯೊ ನೋಡುವುದಕ್ಕೆ ಹೊಸ ಫೀಚರ್ಸ್‌ ಪರಿಚಯಿಸಿದ ಫೇಸ್‌ಬುಕ್‌!
Gizbot | 30th Mar, 2020 05:00 PM
  • ಫೇಸ್‌ಬುಕ್‌

    ಹೌದು, ಫೇಸ್‌ಬುಕ್‌ ಇಂದು ಜಗತ್ತಿನ ಜನಪ್ರಿಯ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಒಂದಾಗಿದೆ. ಇನ್ನು ಬಳಕೆದಾರರಿಗೆ ಹಗಂತಹಂತವಾಗಿ ಅಗತ್ಯಕ್ಕೆ ತಕ್ಕಂತೆ ವಿಶೇಷ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿರುವ ಫೇಸ್‌ಬುಕ್‌ ಇದೀಗ ಹೊಸ ಫೀಚರ್ಸ್‌ ಒಂದನ್ನ ಪರಿಚಯಿಸಿದೆ. ಸದ್ಯ ಇಡೀ ವಿಶ್ವವೇ COVID-19 ಪರಿಣಾಮದಿಂದ ಲಾಕ್‌ಡೌನ್‌ ಆಗಿದೆ. ಇದೇ ಕಾರಣಕ್ಕಾಗಿ ಎಲ್ಲೆಡೆ ಫೇಸ್‌ಬುಕ್‌ ಬಳಕೆಯೂ ಕೂಡ ಅಧಿಕವಾಗುತ್ತಿದೆ. ಅಷ್ಟೇ ಅಲ್ಲ ಕೊರೊನಾ ವೈರಸ್‌ಗೆ ಸಂಬಂಧಿಸಿದ ವಿಷಯಗಳ ಆಪ್ಡೇಟ್‌ಗೆ ಫೇಸ್‌ಬುಕ್‌ ಅನ್ನು ಸಹ ಕೆಲವರು ಅನುಸರಿಸುವುದರಿಂದ ಫೇಸ್‌ಬುಕ್ ಇದೀಗ ತನ್ನ ಲೈವ್ ಸ್ಟ್ರೀಮಿಂಗ್ ವಿಡಿಯೋ ವಿಭಾಗದಲ್ಲಿ ಹೊಸ ಫೀಚರ್ಸ್‌ ಪರಿಚಯಿಸಿದೆ. ಈ ಮೂಲಕ ಹೊಸ ಮಾದರಿಯ ಅನುಭವ ನೀಡುವ ಫೀಚರ್ಸ್‌ ಅನ್ನು ಪರಿಚಯಿಸಿದೆ. ಅಷ್ಟಕ್ಕೂ ಈ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.


  • ಕೊರೊನಾ

    ಇದೀಗ ಕೊರೊನಾ ವೈರಸ್‌ ಬೀತಿಯಿಂದ ಎಲ್ಲರೂ ಮನೆಯಲ್ಲಿ ಲಾಕ್‌ಡೌನ್‌ ಆಗಿದ್ದರೆ ಇದರ ಪರಿಣಾಮ ಫೇಸ್‌ಬುಕ್‌ ಲೈವ್‌ ವೀಕ್ಷಕರ ಸಂಖ್ಯೆಯು ಅಧಿಕವಾಗಿದೆ. ಫೇಸ್‌ಬುಕ್‌ನಲ್ಲಿ ಲೈವ್ ವೀಡಿಯೊ ನೋಡುವ ಯುಎಸ್ ಬಳಕೆದಾರರ ಸಂಖ್ಯೆ ಜನವರಿಯಿಂದ 50% ಹೆಚ್ಚಾಗಿದೆ ಎಂದು ಬ್ಲೂಮ್‌ಬರ್ಗ್ ಕೂಡ ವರದಿ ಮಾಡಿದೆ. ಈ ನಿಟ್ಟಿನಲ್ಲಿ ಫೇಸ್‌ಬುಕ್‌ ಲೈವ್ ಸ್ಟ್ರೀಮಿಂಗ್ ವೀಡಿಯೊವನ್ನು ಹೆಚ್ಚಿನ ಜನರಿಗೆ ಪ್ರವೇಶಿಸಲು ಯೋಜಿಸಿದೆ. ಇದರಿಂದ ವೀಡಿಯೊ ಪ್ರಸಾರ ಮಾಡುವವರಿಗೆ ಹೆಚ್ಚು ಲಾಭದಾಯಕವಾಗಿದೆ ಎನ್ನಾಲಾಗ್ತಿದೆ.


  • ಇದಕ್ಕಾಗಿ

    ಸದ್ಯ ಇದಕ್ಕಾಗಿ ಫೇಸ್‌ಬುಕ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ್ದು ಇದರಿಂದಾಗಿ ಇನ್ಮುಂದೆ ಫೇಸ್‌ಬುಕ್‌ ಖಾತೆ ಇಲ್ಲದೆ ಫೇಸ್‌ಬುಕ್‌ ಲೈವ್ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ. ವಿಡಿಯೋ ಮುಗಿದ ನಂತರ ಆಟೋಮ್ಯಾಟಿಕ್‌ ಫೇಸ್‌ಬುಕ್‌ ಕ್ಲೋಸ್‌ ಆಗಲಿದೆ. ಈ ಅವಕಾಶ ನೀಡಿರುವುದರಿಂದ ಹೆಚ್ಚಿನ ಸ್ಟ್ರೀಮರ್‌ಗಳಿಗೆ ಡಿಜಿಟಲ್ ಟಿಪ್ಪಿಂಗ್ ಸಾಮರ್ಥ್ಯಗಳ ವಿಸ್ತರಣೆ ಸಾಧ್ಯವಾಗಲಿದೆ. ಜೊತೆಗೆ ಲೈವ್ ಕರೆ ಮಾಡುವವರನ್ನು ತೆಗೆದುಕೊಳ್ಳಲು ಚಾರಿಟಿ ಸ್ಟ್ರೀಮ್‌ಗಳಿಗೆ ಟೋಲ್-ಫ್ರೀ ಫೋನ್ ಸಂಖ್ಯೆಗಳನ್ನು ಸಹ ನೀಡಲಾಗಿದೆ. ಇದಲ್ಲದೆ ಲೈವ್ ಸ್ಟ್ರೀಮಿಂಗ್‌ಅನ್ನು ನಿರ್ವಹಣೆ ಮಾಡುವುದಕ್ಕಾಗಿಯೇ ಫೇಸ್‌ಬುಕ್ ಸಂಪೂರ್ಣ ಹೊಸ ಡ್ಯಾಶ್‌ಬೋರ್ಡ್ ಅನ್ನು ಹೊರತರುತ್ತಿದೆ.


  • ಕಾರಣಕ್ಕಾಗಿ

    ಇದೇ ಕಾರಣಕ್ಕಾಗಿ ಫೇಸ್‌ಬುಕ್‌‌ ಲೈವ್ ಪ್ರೊಡ್ಯುಸರ್‌ ಅನ್ನು ಪರಿಚಯಿಸಿದ್ದು, ಇದು ಫೇಸ್‌ಬುಕ್‌ ಮ್ಯಾನೆಜರ್‌ಗಳು ತಮ್ಮ ಲೈವ್‌ ವಿಡಿಯೋ ಮೇಲೆ ಹೆಚ್ಚಿನ ನಿಯಂತ್ರಣ ತೆಗೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಇದಕ್ಕಾಗಿ ಲೈವ್-ಪ್ರೊಡ್ಯೂಸರ್ ಅನ್ನು ಉನ್ನತ-ಮಟ್ಟದ ಉತ್ಪಾದನಾ ಉಪಕರಣಗಳು ಮತ್ತು ಸಾಫ್ಟ್‌ವೇರ್‌ ನಿಂದ ಡಿಸೈನ್‌ ಮಾಡಲಾಗಿದೆ. ಇದರಿಂದಾಗಿ ಲೈವ್ ಪೋಸ್ಟ್‌ಗಳನ್ನು ನಿರ್ವಹಿಸುವುದು, ವೇಳಾಪಟ್ಟಿ ಮತ್ತು ಕೆಲವು ರೀತಿಯ ಪ್ರಸಾರ ಸೆಟ್ಟಿಂಗ್‌ಗಳನ್ನ ಲೆಪ್ಟ್‌ಹ್ಯಾಂಡ್‌ ಕಾಲಮ್‌ನಿಂದ ಮಾಡಬಹುದಾಗಿದೆ.


  • ಫ್ಲ್ಯಾನ್‌

    ಸದ್ಯ ಈ ಫ್ಲ್ಯಾನ್‌ ನಿಂದಾಗಿ ಲೈವ್ ಸ್ಟ್ರೀಮಿಂಗ್‌ನಲ್ಲಿ ಫೇಸ್‌ಬುಕ್ ತನ್ನ ಪ್ರಯತ್ನಗಳನ್ನು ಕೇಂದ್ರೀಕರಿಸುವ ಮೂಲಕ ಹೆಚ್ಚಿನದನ್ನು ಗಳಿಸಲು ಯೋಜಿಸಿದೆ. ಅದರಲ್ಲೂ ಮುಖ್ಯವಾಗಿ ಜಾಹೀರಾತು ಆಧಾರಿತ ವ್ಯವಹಾರ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫೇಸ್‌ಬುಕ್ ಲೈವ್ ಅನ್ನು ಯೂಟ್ಯೂಬ್ ಮತ್ತು ಟ್ವಿಚ್‌ನಂತಹ ಹಣ ಸಂಪಾದಿಸುವ ಉತ್ಪನ್ನವಾಗಿ ಇನ್ನಷ್ಟು ಅಭಿವೃದ್ಧಿಪಡಿಸುವ ತುರ್ತು ಅವಶ್ಯಕತೆಯಿದೆ. ಈಗಾಗಲೇ ಫೇಸ್‌ಬುಕ್‌ನ ಜಾಹೀರಾತು ವ್ಯವಹಾರಗಳು ಇತ್ತೀಚೆಗೆ ಯಶಸ್ವಿಯಾಗುತ್ತಿದ್ದು, ಇದೀಗ ಇನ್ನು ಒಂದು ಹೆಚ್ಚೆ ಮುಂದೆ ಹೊಗುವ ಪ್ರಯತ್ನ ಮಾಡಿದೆ. ಜೊತೆಗೆ ಬಳಕೆದಾರರ ಹಿತದೃಷ್ಟಿಯು ಸಹ ಇದರಲ್ಲಿ ಸೇರಿದೆ.




ಇದು ಸೊಶೀಯಲ್‌ ಮೀಡಿಯಾ ಜಮಾನ. ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಇಂದಿನ ತಲೆಮಾರು ಹೆಚ್ಚಿನ ಪ್ರಮಾಣದಲ್ಲಿ ಸೊಶೀಯಲ್‌ ಮಿಡಿಯಾವನ್ನ ಬಳಸುತ್ತಾರೆ. ಸೊಶೀಯಲ್‌ ಮೀಡಿಯಾಗಳಲ್ಲಿ ತಮ್ಮ ಅನಿಸಿಕೆ ಅನುಭವಗಳನ್ನ ಹೇಳಿಕೊಳ್ಳುತ್ತಾರೆ. ಕ್ಯಾಂಪೆನ್‌ ಶುರುಮಾಡುತ್ತಾರೆ. ಅಷ್ಟೇ ಯಾಕೆ ದೇಶದ ಜನಾಭಿಪ್ರಾಯ ರೂಪಿಸುವಷ್ಟರ ಮಟ್ಟಿಗೆ ಸೊಶೀಯಲ್‌ ಮೀಡಿಯಾ ಆಪ್‌ಗಳು ಇಂದು ಬೆಳೆದು ನಿಂತಿವೆ. ಸದ್ಯ ಲಭ್ಯವಿರುವ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಫೇಸ್‌ಬುಕ್‌ ಆಪ್ಲಿಕೇಶನ್‌ ಕೂಡ ಒಂದಾಗಿದ್ದು, ಬಹುಪಾಲು ಜನರ ನೆಚ್ಚಿನ ಆಪ್‌ಗಳಲ್ಲಿ ಇದು ಕೂಡ ಒಂದು

   
 
ಹೆಲ್ತ್