Back
Home » ಇತ್ತೀಚಿನ
ಕೋವಿಡ್-19 ಪರೀಕ್ಷೆಯನ್ನು ಈ ಸಿಟಿಯಲ್ಲಿ ನೀವೀಗ ಆನ್ ಲೈನ್ ನಲ್ಲಿ ಮಾಡಲು ಬುಕ್ ಮಾಡಬಹುದು
Gizbot | 1st Apr, 2020 03:15 PM
 • ಮುಂಬೈ ವಾಸಿಗರಿಗೆ ಲಭ್ಯ:

  ಇಂದಿನಿಂದ ಮುಂಬೈ ನಲ್ಲಿ ವಾಸವಾಗಿರುವವರು ಈ ಟೆಸ್ಟ್ ನ್ನು ಆನ್ ಲೈನ್ ನಲ್ಲಿ ನಡೆಸಿಕೊಳ್ಳಬಹುದು ಮತ್ತು ದೇಶದ ವಿವಿಧ ಪ್ರದೇಶಗಳಿಗೆ ಇನ್ನು ಕೆಲವೇ ದಿನಗಳಲ್ಲಿ ವಿಸ್ತರಣೆಯಾಗುವ ಸಾಧ್ಯತೆ ಇದೆ.


 • ಆನ್ ಲೈನ್ ಟೆಸ್ಟ್:

  ಯಾರು ಈ ಟೆಸ್ಟ್ ನ್ನು ಆನ್ ಲೈನ್ ನಲ್ಲಿ ಬುಕ್ ಮಾಡಲು ಬಯಸುತ್ತಾರೋ ಅವರು "ಮಾನ್ಯ ವೈದ್ಯರು ಸಹಿ ಮಾಡಿರುವ ವೈದ್ಯರ ಪ್ರಿಸ್ಕ್ರಿಪ್ಶನ್,ಸರಿಯಾಗಿ ಭರ್ತಿ ಮಾಡಲಾಗಿರುವ ಪರೀಕ್ಷಾ ವಿನಂತಿ ಫಾರ್ಮ್ ಅಗತ್ಯವಿರುತ್ತದೆ ಮತ್ತು ಪರೀಕ್ಷೆಯ ಸಮಯದಲ್ಲಿ ಫೋಟೋ ಐಡಿ ಕಾರ್ಡ್ ನ್ನು ಪ್ರಸ್ತುತಪಡಿಸಬೇಕು." ಈ ಪರೀಕ್ಷೆಯನ್ನು ಮಾಡಿಸುವುದಕ್ಕೆ 4,500 ರುಪಾಯಿ ವೆಚ್ಚವಾಗುತ್ತದೆ ಮತ್ತು ಪ್ರಾಕ್ಟೋ ಮತ್ತು ಥೈರೋಕೇರ್ ನ ವೆಬ್ ಸೈಟ್ ಗಳಲ್ಲಿ ನೀವಿದನ್ನು ಬುಕ್ ಮಾಡಲು ಅವಕಾಶವಿರುತ್ತದೆ.


 • ರೋಗಿಯ ಮನೆಯಿಂದಲೇ ಮಾದರಿ ಸಂಗ್ರಹ:

  ಬುಕ್ ಮಾಡಿರುವ ರೋಗಿಯ ಮನೆಯಿಂದಲೇ ನೇರವಾಗಿ ಮಾದರಿಗಳನ್ನು ಐ2ಹೆಚ್ ನಿಂದ ಪ್ರಮಾಣೀಕೃತರಾಗಿರುವ ಫ್ಲೆಬೋಟೋಮಿಸ್ಟ್ ಗಳು ಸಂಗ್ರಹಿಸುತ್ತಾರೆ ಎಂದು ಕಂಪೆನಿ ವಿವರಿಸಿದೆ. ಸ್ವ್ಯಾಬ್ ಗಳನ್ನು ತೆಗೆದುಕೊಳ್ಳುವಾಗ ಅವರು ಐಸಿಎಂಆರ್ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಿರುವ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಿದ್ದಾರೆ.


 • ಥೈರೋಕೇರ್ ಪ್ರಯೋಗಾಲಯ:

  ಪರೀಕ್ಷೆಯ ಸಮಯದಲ್ಲಿ ತೆಗೆದುಕೊಳ್ಳಲಾದ ಸ್ವ್ಯಾಬ್ ಅನ್ನು ವೈರಲ್ ಸಾರಿಗೆ ಮಾಧ್ಯಮದಲ್ಲಿ (ವಿಟಿಎಂ) ಸಂಗ್ರಹಿಸಲಾಗುತ್ತದೆ ಮತ್ತು ಕೋವಿಡ್ -19 ಪರೀಕ್ಷೆಗೆ ಆಯ್ಕೆ ಮಾಡಲಾದ ಥೈರೊಕೇರ್ ಪ್ರಯೋಗಾಲಯಕ್ಕೆ ತಣ್ಣನೆಯ ಸರಪಳಿಯಲ್ಲಿ ಸಾಗಿಸಲಾಗುತ್ತದೆ. ಮಾದರಿ ಸಂಗ್ರಹದ 24ರಿಂದ 48 ಗಂಟೆಗಳಲ್ಲಿ ವರದಿಯನ್ನು ಪ್ರಾಕ್ಟೊ ವೆಬ್‌ಸೈಟ್‌ನಲ್ಲಿ ರೋಗಿಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.


 • ಡಾ.ಅಲೆಕ್ಸಾಂಡರ್ ಹೇಳಿಕೆ:

  ಪ್ರ್ಯಾಕ್ಟೋದ ಮುಖ್ಯ ಆರೋಗ್ಯ ಅಧಿಕಾರಿಯಾಗಿರುವ ಡಾ.ಅಲೆಕ್ಸಾಂಡರ್ ಅವರು ಹೀಗೆ ಹೇಳುತ್ತಾರೆ "ಪ್ರಮಾಣವನ್ನು ಪತ್ತೆಹಚ್ಚಲು ಮತ್ತು ಕೋವಿಡ್-19 ರ ಪ್ರಸರಣವನ್ನು ತಡೆಯಲು ವ್ಯಾಪಕ ಪರೀಕ್ಷೆಯು ಬಹಳ ಮುಖ್ಯವಾಗಿರುತ್ತದೆ. ಸೋಂಕಿನ ಲಕ್ಷಣಗಳನ್ನು ಪತ್ತೆಹಚ್ಚಲು ಮತ್ತು ಆ ಮೂಲಕ ಯಾರಾದರೂ ಕೂಡ ರೋಗದ ಗುಣಲಕ್ಷಣಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದ್ದು ಪ್ರಯೋಗಾಲಯಗಳು ಮತ್ತು ಕೇಂದ್ರದ ಪಟ್ಟಿಯನ್ನು ವಿಸ್ತರಿಸುವ ಕೆಲಸವನ್ನು ಮಾಡುತ್ತಿದೆ.

  ಈ ಪರೀಕ್ಷೆಗಳಿಗೆ ಪ್ರವೇಶ ಪಡೆಯುವುದು ಕಷ್ಟವಲ್ಲ ಎಂಬುದನ್ನು ಖಾತ್ರಿಗೊಳಿಸಲು ನಾವು ಥೈರೋಕೇರ್ ನೊಂದಿಗೆ ಸಹಭಾಗಿತ್ವ ಹೊಂದಿದ್ದೇವೆ.ಹೆಚ್ಚಿನ ಕ್ಷೇತ್ರಗಳನ್ನು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಲಾಗುವುದು.ವೈದ್ಯರ ಸಮಾಲೋಚನೆ,ಪರೀಕ್ಷೆ ಅಥವಾ ಔಷಧ ವಿತರಣೆ ಇತ್ಯಾದಿಗಳ ನಿಟ್ಟಿನಲ್ಲಿ ಗಮನ ನೀಡಲಾಗುತ್ತದೆ. ಗುಣಮಟ್ಟದ ಆರೋಗ್ಯವು ಎಲ್ಲಾ ಭಾರತೀಯರಿಗೆ ಒದಗಿಸುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಕೊರೋನಾ ವೈರಸ್ ನ ಹೋರಾಟದಲ್ಲಿ ಟೆಸ್ಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ ಎಂಬುದನ್ನು ವಿಶ್ವದಾದ್ಯಂತ ಇರುವ ಎಲ್ಲಾ ವೈದ್ಯಕೀಯ ತಜ್ಞರು ಕೂಡ ಅಭಿಪ್ರಾಯ ಪಡುತ್ತಿದ್ದಾರೆ. ಇದೀಗ ಪ್ರ್ಯಾಕ್ಟೋ ಅನ್ನೋ ಡಿಜಿಟಲ್ ಹೆಲ್ತ್ ಕೇರ್ ಫ್ಲ್ಯಾಟ್ ಫಾರ್ಮ್ ಕೋವಿಡ್-19 ಟೆಸ್ಟ್ ನ್ನು ಆನ್ ಲೈನ್ ನಲ್ಲಿ ನಡೆಸುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ. ಥೈರೋಕೇರ್ ಜೊತೆಗೆ ಪ್ರಾಕ್ಟೋ ಸಹಭಾಗಿತ್ವ ಹೊಂದಿರುವುದನ್ನು ಬ್ಲಾಗ್ ಪೋಸ್ಟ್ ನಲ್ಲಿ ಖಾತ್ರಿಗೊಳಿಸಲಾಗಿದ್ದು ಕೋವಿಡ್-19 ನ್ನು ಪತ್ತೆ ಹಚ್ಚುವ ಟೆಸ್ಟ್ ನ್ನು ಕೈಗೊಳ್ಳಲಾಗುತ್ತದೆ. ಇದು ಕೇಂದ್ರ ಸರ್ಕಾರ ಮತ್ತು ಭಾರತೀಯ ವೈದ್ಯಕೀಯ ಅಧ್ಯಯನ ಕೇಂದ್ರ(ಐಸಿಎಂಆರ್)ದಿಂದ ಅಧಿಕೃತ ಮುದ್ರೆ ಪಡೆದಿದೆ.

 
ಹೆಲ್ತ್