Back
Home » ಇತ್ತೀಚಿನ
ಟಾಟಾಸ್ಕೈ DTH ಗ್ರಾಹಕರಿಗೆ ಈ 12 ಸೇವೆಗಳು ಉಚಿತ!
Gizbot | 2nd Apr, 2020 09:00 AM
 • ಹೌದು

  ಹೌದು, ಡಿಟಿಎಚ್ ವಲಯದಲ್ಲಿ ಮುಂಚೂಣಿಯಲ್ಲಿರುವ ಟಾಟಾಸ್ಕೈ ತನ್ನ ಚಂದಾದಾರರಿಗೆ ಇದೀಗ 12 ಸೇವೆಗಳನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. ಈ ಉಚಿತ ಸೌಲಭ್ಯವು ಲಾಕ್‌ಡೌನ್ ಅವಧಿವರೆಗೂ ಮಾತ್ರ. ಸದ್ಯ ಲಾಕ್‌ಡೌನ್ ಜಾರಿ ಇರುವುದರಿಂದ ಬಹುತೇಕ ಚಂದಾದಾರಿಗೆ ಡಿಟಿಎಚ್‌ ವ್ಯಾಲಿಡಿಟಿ ಮುಗಿದಿದ್ದರೂ ರೀಚಾರ್ಜ್ ಮಾಡಿಕೊಳ್ಳಲು ಆಗಿರುವುದಿಲ್ಲ. ಅದಕ್ಕಾಗಿ 7 ದಿನಗಳ ಲೋನ್ ವ್ಯಾಲಿಡಿಟಿ ಸೇವೆ ಪರಿಚಯಿಸಿದೆ. ಹಾಗೆಯೇ ಈಗ 12 ಸೇವೆಗಳನ್ನು ಉಚಿತವಾಗಿಸಿದೆ. ಹಾಗಾದರೆ ಆ 12 ಸೇವೆಗಳು ಯಾವುವು ಎಂಬುದರ ಬಗ್ಗೆ ತಿಳಿಯಲು ಮುಂದೆ ಓದಿರಿ.


 • 12 ಸೇವೆಗಳು ಉಚಿತ

  ಕೋವಿಡ್-19 ಲಾಕ್‌ಡೌನ್‌ ಪರಿಣಾಮ ಟಾಟಾ ಸ್ಕೈ 12 ಸೇವೆಗಳು ಉಚಿತ ಎಂದಿದೆ. ಅವುಗಳೆಂದರೇ ಡ್ಯಾನ್ಸ್ ಸ್ಟುಡಿಯೋ, ಫನ್ ಲರ್ನ್ ಪ್ರಿಸ್ಕೂಲ್, ಫನ್ ಲರ್ನ್ ಜೂನಿಯರ್, ಅಡುಗೆ/ಕುಕ್ಕಿಂಗ್ ಮತ್ತು ಕ್ಲಾಸ್‌ರೂಮ್/ತರಗತಿಗಳು ಸೇರಿವೆ. ಇದರೊಂದಿಗೆ ಕಂಪನಿಯು ಹೆಚ್ಚುವರಿಯಾಗಿ ಫಿಟ್ನೆಸ್, ಸ್ಮಾರ್ಟ್ ಮ್ಯಾನೇಜರ್, ಜಾವೇದ್ ಅಖ್ತರ್, ಬ್ಯೂಟಿ, ವೈದಿಕ್ ಮ್ಯಾಥ್ಸ್ ಜೊತೆಗೆ ಇಂಗ್ಲಿಷ್ ಜೊತೆಗೆ ಹಿಂದಿ ಮತ್ತು ತೆಲುಗು ಸೇವೆಗಳಲ್ಲಿ ಇಂಗ್ಲಿಷ್ ಅನ್ನು ಸಹ ನೀಡುತ್ತಿದೆ.


 • ಉಚಿತ ನೀಡಿರುವ ಸೇವೆಗಳ ಶುಲ್ಕ

  ಬ್ಯೂಟಿ, ಡ್ಯಾನ್ಸ್ ಸ್ಟುಡಿಯೋ ಮತ್ತು ಫನ್ ಲರ್ನ್ ಸೇರಿದಂತೆ ಟಾಟಾ ಸ್ಕೈ ಸೇವೆಗಳಲ್ಲಿ ಹೆಚ್ಚಿನವು ತಿಂಗಳಿಗೆ 59 ರೂ. ಶುಲ್ಕವನ್ನು ಹೊಂದಿವೆ. ಹಾಗೆಯೇ ಟಾಟಾ ಸ್ಕೈ ಅಡುಗೆ ಸಂಬಂಧಿದ ಸೇವೆಗಳ ಶುಲ್ಕವು 60 ರೂ. ಆಗಿದೆ. ಇನ್ನು ವೇದ ಗಣಿತ ಚಂದಾದಾರಿಕೆ ಶುಲ್ಕವು ದಿನಕ್ಕೆ 10 ರೂ. ಆಗಿದೆ. 91 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿವೆ. ಆದ್ರೆ ಸದ್ಯ ಈ ಸೇವೆಗಳು ಉಚಿತವಾಗಿ ದೊರೆಯುತ್ತವೆ.


 • 7 ದಿನಗಳ ವ್ಯಾಲಿಡಿಟಿ ಲೋನ್ ಹೇಗೆ ಪಡೆಯುವುದು?

  ಲಾಕ್‌ಡೌನ್ ಸಂದರ್ಭದಲ್ಲಿ ಇನ್‌ಆಕ್ವಿವ್ ಖಾತೆಯ ಟಾಟಾಸ್ಕೈ ಗ್ರಾಹಕರು ಸಂಸ್ಥೆಯು ಪರಿಚಯಿಸಿರುವ 7 ದಿನಗಳ ವ್ಯಾಲಿಡಿಟಿ ಲೋನ್ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದಾಗಿದೆ. ಅದಕ್ಕಾಗಿ 080-61999922 ಈ ನಂಬರ್‌ಗೆ ಮಿಸ್‌ ಕಾಲ್ ಮಾಡುವ ಮೂಲಕ ಚಂದಾದಾರರು ಈ ಸೌಲಭ್ಯವನ್ನು ಸಕ್ರಿಯ ಮಾಡಿಕೊಳ್ಳಬಹುದಾಗಿದೆ.


 • ಮರಳಿ ಶುಲ್ಕ ಪಾವತಿ ಯಾವಾಗ?

  ಟಾಟಾಸ್ಕೈ ಡಿಟಿಎಚ್ ರೀಚಾರ್ಜ್ ವ್ಯಾಲಿಡಿಟಿ ಮುಗಿದಿರುವ ಗ್ರಾಹಕರು ಈ ಸೌಲಭ್ಯ ಪಡೆಯಬಹುದು. 7 ದಿನಗಳ ವ್ಯಾಲಿಡಿಟಿ ಅವಧಿಯ ಬಳಿಕ ಎಂಟನೇ ದಿನಕ್ಕೆ ಸಂಸ್ಥೆಯು 7 ದಿನಗಳ ಲೋನ್ ಶುಲ್ಕವನ್ನು ಸೌಲಭ್ಯವನ್ನು ಪಡೆದ ಗ್ರಾಹಕರ ಖಾತೆಯಿಂದ ಮರಳಿ ಪಡೆದುಕೊಳ್ಳುತ್ತದೆ.
ದೇಶದಲ್ಲಿ ಮಾಹಾಮಾರಿ ಕೋವಿಡ್-19 ಸಾಂಕ್ರಾಮಿಕ ವ್ಯಾಪಕವಾಗಿ ಹರಡುವುದನ್ನು ತಡೆಯಲು ಇಡೀ ಭಾರತ ಲಾಕ್‌ಡೌನ್ ಆಗಿದ್ದು, ಹೋರಾಟ ನಡೆಸುತ್ತಿದೆ. ಈ ಹೋರಾಟಕ್ಕೆ ಟಾಟಾ ಸಂಸ್ಥೆಯು ಒಟ್ಟಾರೆ 1500 ಕೋಟಿ ರೂ.ಗಳನ್ನು ನೀಡಿದೆ. ಹಾಗೆಯೇ ಈ ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲರು ಮನೆಯಲ್ಲಿಯೇ ಇರುವುದರಿಂದ ಸಂಸ್ಥೆಯು ತನ್ನ ಟಾಟಾಸ್ಕೈ ಸೇವೆಯಲ್ಲಿ 12 ಉಚಿತ ಸೇವೆಗಳ ಪ್ರಯೋಜನವನ್ನು ಘೋಷಿಸಿದೆ.

   
 
ಹೆಲ್ತ್