Back
Home » ಇತ್ತೀಚಿನ
ಬರಲಿದೆ ಪಾಪ್‌ ಆಪ್‌ ಕ್ಯಾಮೆರಾ ಹೊಂದಿರುವ ಹುವಾವೇ ವಿಷನ್‌ ಸ್ಮಾರ್ಟ್‌ಟಿವಿ!
Gizbot | 2nd Apr, 2020 12:09 PM
 • ಹೌದು

  ಹೌದು, ಇಂದು ಸ್ಮಾರ್ಟ್‌ಟಿವಿಗಳು ಟಿವಿ ಮಾರುಕಟ್ಟೆಯನ್ನು ಆಳುತ್ತಿದ್ದು, ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿವೆ. ಇವುಗಳಲ್ಲಿ ಹುವಾವೇ ಕಂಪೆನಿ ಕೂಡ ಒಂದಾಗಿದೆ. ಸದ್ಯ ಹುವಾವೇ ಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳಿಗೆ ಹೆಸರಾಗಿದ್ದು, ಇದೀಗ ಹೊಸ ಸ್ಮಾರ್ಟ್‌ಟಿವಿಯನ್ನ ಮಾರುಕಟ್ಟೆಗೆ ಪರಿಚಯಿಸಲು ಸಿದ್ದತೆ ನಡೆಸಿದೆ.


 • ಹುವಾವೇ

  ಸದ್ಯ ಹುವಾವೇ ಕಂಪೆನಿ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಟಿವಿಯನ್ನ ಲಾಂಚ್‌ ಮಾಡಲು ವೇದಿಕೆ ಸಿದ್ದಪಡಿಸಿಕೊಂಡಿದ್ದು, ಈ ಸ್ಮಾರ್ಟ್‌ಟಿವಿ ಇಂಟರ್‌ಬಿಲ್ಟ್‌ ಪಾಪ್‌-ಅಪ್‌-ಕ್ಯಾಮೆರಾ ಹೊಂದಿದ್ದು, ಇದು ಹುವಾವೇ ವಿಷನ್‌ ಸ್ಮಾರ್ಟ್‌ಟಿವಿ ಆಗಿದೆ. ಇನ್ನು ಹುವಾವೇ ವಿಷನ್‌ ಸ್ಮಾರ್ಟ್‌ಟಿವಿ ಇದೆ ಏಪ್ರಿಲ್‌ 8 ರಂದು ಚೀನಾದಲ್ಲಿ ಬಿಡುಗಡೆ ಆಗಲಿದೆ. ಸದ್ಯ ಕಂಪೆನಿಯ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಟಿವಿ ಹುವಾವೇ P40 ಸರಣಿಯ ಜೊತೆಗೆ ಬಿಡುಗಡೆ ಆಗಲಿದೆ.


 • ಇನ್ನು

  ಇನ್ನು ಈ ಸ್ಮಾರ್ಟ್‌ಟಿವಿಗೆ ಸಂಬಂಧ ಪಟ್ಟಂತೆ ಚೀನಾದ ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್ ವೀಬೊದಲ್ಲಿ ಅಧಿಕೃತ ಮಾಹಿತಿ ಪ್ರಕಟವಾಗಿದೆ. ಆದರೆ ಭಾರತದಲ್ಲಿ ಬಿಡುಗಡೆ ಆಗುವ ಬಗ್ಗೆ ಯಾವುದೇ ಮಾಹಿತಿಯನ್ನ ಕಂಪೆನಿ ಹಂಚಿಕೊಂಡಿಲ್ಲ. ಹಾಗೇ ನೋಡುವುದಾದರೆ ಕಳೆದ ವರ್ಷ ಚೀನಾದ ಟೆಕ್ ದೈತ್ಯ ತನ್ನ ವಿಷನ್ ಸ್ಮಾರ್ಟ್ ಟಿವಿ ಸರಣಿಯನ್ನು 75 ಇಂಚು ಮತ್ತು 65 ಇಂಚಿನ ಟಿವಿಗಳನ್ನಪರಿಚಯಿಸಿತ್ತು. ಅಷ್ಟೇ ಯಾಕೆ ಈ ಹಿಂದಿನ 75 ಇಂಚಿನ ವಿಷನ್ ಸ್ಮಾರ್ಟ್ ಟಿವಿಯಲ್ಲಿ ಕೂಡ ಪಾಪ್-ಕ್ಯಾಮೆರಾ ಇತ್ತು.


 • ವೀಬೊದಲ್ಲಿ

  ಈಗಾಗಲೇ ವೀಬೊದಲ್ಲಿ ಹುವಾವೇ ಹಂಚಿಕೊಂಡ ಇತ್ತೀಚಿನ ಫೋಟೋಗಳಿಂದ, ಈ ವರ್ಷದ ವಿಷನ್ ಸ್ಮಾರ್ಟ್ ಟಿವಿಯ ಪಾಪ್-ಅಪ್ ಕ್ಯಾಮೆರಾ ನಾವು ಕಳೆದ ವರ್ಷ ನೋಡಿದ್ದಕ್ಕಿಂತ ದೊಡ್ಡದಾಗಿದೆ. ಹುವಾವೇ ವಿಷನ್ ಸ್ಮಾರ್ಟ್ ಟಿವಿಯ ಇತ್ತೀಚಿನ ಆವೃತ್ತಿಯು ದೊಡ್ಡ ಪ್ರದರ್ಶನವನ್ನು ಹೊಂದಿರುತ್ತದೆ ಎಂದು ನೀರಿಕ್ಷಿಸಬಹುದಾಗಿದೆ. ಇನ್ನು ಕಳೆದ ಬಾರಿ ಬಿಡುಗಡೆ ಆಗಿದ್ದ 75 ಇಂಚಿನ ವಿಷನ್ ಸ್ಮಾರ್ಟ್ ಟಿವಿ 3840 x 2160 ಪಿಕ್ಸೆಲ್‌ ಸಾಮರ್ಥ್ಯ ಕ್ವಾಂಟಮ್ ಡಾಟ್ ಅಲ್ಟ್ರಾ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿತ್ತು. ಆದರೆ ಈ ಟಿವಿ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬರುವ ಸಾಧ್ಯತೆ ಇದೆ.
ಟಿವಿ ಮಾರುಕಟ್ಟೆ ತುಂಬಾನೆ ಕಲರ್‌ಪುಲ್‌ ಆಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವೈವಿಧ್ಯಮಯ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ತಂತ್ರಜ್ಞಾನ ಮುಂದುವರೆದಂತೆ ಟಿವಿ ಲೋಕವೂ ಕೂಡ ಸಾಕಷ್ಟು ಸ್ಮಾರ್ಟ್‌ ಆಗಿದ್ದು, ಮಲ್ಟಿ ಟಾಸ್ಕಿಂಗ್‌ ಕಾರ್ಯನಿರ್ವಹಿಸುವ ಟಿವಿಗಳು ಮಾರುಕಟ್ಟೆಯನ್ನ ಆಳುತ್ತಿವೆ.

   
 
ಹೆಲ್ತ್