Back
Home » ಇತ್ತೀಚಿನ
ಇಂಟೆಲ್ ನಿಂದ 10ನೇ ತಲೆಮಾರಿನ 'ಕಾಮೆಟ್ ಲೇಕ್-ಹೆಚ್' CPU ಲಾಂಚ್!
Gizbot | 3rd Apr, 2020 08:00 AM
 • ಹೌದು

  ಹೌದು, ಸದ್ಯ ಬದಲಾಗುತ್ತಿರುವ ಜಮಾನಕ್ಕೆ ತಕ್ಕಂತೆ ಹೊಸ ತಲೆಮಾರಿನ ಗೇಮಿಂಗ್‌, ಕ್ರಿಯೇಟರ್‌ ಹಾಗೂ ವರ್ಕ್‌ಸ್ಟೇಷನ್‌ ಲ್ಯಾಪ್‌ಟಾಪ್‌ಗಳನ್ನ ಗುರಿಯಾಗಿಸಿಕೊಂಡು ಇಂಟೆಲ್‌ ತನ್ನ 10th gen CPU ಸರಣಿಯನ್ನ ಬೀಫಿ ಮಾದರಿಗಳೊಂದಿಗೆ ವಿಸ್ತರಿಸಿದೆ. ಸದ್ಯ ಈ ಹೊಸ ಮಾದರಿಯ ಸಿಪಿಯು ಗಳು 14nm ಕಾಮೆಟ್‌ ಲೇಕ್‌ ವಿನ್ಯಾಸವನ್ನ ಆಧರಿಸಿವೆ. ಅಷ್ಟಕ್ಕೂ ಏನಿದು ಹೊಸ ವಿನ್ಯಾಸದ ಕೋರ್‌ಗಳು ಹಾಗೂ ಇಂಟೆಲ್‌ ಕೋರ್‌ ಬೀಫಿ ಮಾದರಿಯ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.


 • ಗೇಮಿಂಗ್

  ಸದ್ಯ ಗೇಮಿಂಗ್, ಕ್ರಿಯೇಟರ್ ಮತ್ತು ವರ್ಕ್‌ಸ್ಟೇಷನ್ ಲ್ಯಾಪ್‌ಟಾಪ್‌ಗಳನ್ನು ಗುರಿಯಾಗಿಟ್ಟುಕೊಂಡು ಇಂಟೆಲ್ ತನ್ನ 10 ನೇ ಜನ್ ಸಿಪಿಯು ಶ್ರೇಣಿಯನ್ನು ಹೊಸ ಸರಣಿಯ ಬೀಫಿ ಮಾದರಿಗಳೊಂದಿಗೆ ವಿಸ್ತರಿಸಿದೆ. ಇದು ಇಂಟೆಲ್‌ನ ಕೋರ್ i9, ಕೋರ್ i7, ಮತ್ತು ಕೋರ್ i5 ಉತ್ಪನ್ನ ಶ್ರೇಣಿಗಳಿಗೆ ಹೊಂದಿಕೊಳ್ಳುತ್ತವೆ. ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳಿಗಾಗಿ ಅವುಗಳನ್ನು ವಿನ್ಯಾಸಗೊಳಿಸಲಾಗಿದ್ದು, ಲ್ಯಾಪ್‌ಟಾಪ್‌ನಲ್ಲಿ ಗರಿಷ್ಠ ಸಿಂಗಲ್-ಥ್ರೆಡ್ ಮತ್ತು ಬಹು-ಥ್ರೆಡ್ ಕಾರ್ಯಕ್ಷಮತೆಯ ಅಗತ್ಯವಿರುವ ಗೇಮರ್‌ಗಳಿಗಾಗಿ ಮತ್ತು ವೃತ್ತಿಪರ ಬಳಕೆದಾರರನ್ನು ಗುರಿಯಾಗಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ.


 • ಸಿಪಿಯುಗಳಲ್ಲಿ

  ಇನ್ನು ಈ ಸಿಪಿಯುಗಳಲ್ಲಿ ಪ್ರಮುಖ ಕೋರ್ i9-10980HK ಮಾದರಿಯು ಎಂಟು ಕೋರ್ ಮತ್ತು 16 ಥ್ರೇಡ್‌ಗಳನ್ನು ಹೊಂದಿದೆ, ಮತ್ತು ಇದು 5.3GHz ಗರಿಷ್ಠ ಟರ್ಬೊ ವೇಗದಲ್ಲಿ ಚಲಿಸಬಲ್ಲದು. ಹಾಗೇಯೇ 5GHz ಅಥವಾ ಅದಕ್ಕಿಂತ ಹೆಚ್ಚಿನ ಟರ್ಬೊ ವೇಗದೊಂದಿಗೆ ಇನ್ನೂ ಮೂರು ಕೋರ್ i7 ಇವೆ. ಈ ಸಿಪಿಯುಗಳನ್ನು ಬಳಸುವ ಎಲ್ಲಾ ಪ್ರಮುಖ ಬ್ರಾಂಡ್‌ಗಳಿಂದ 100 ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ.


 • ಇಂಟೆಲ್

  ಇದಲ್ಲದೆ ಇಂಟೆಲ್ ಪುನರ್‌ ರಚನೆ ಆಗಿರುವ ಎಎಮ್‌ಡಿಯೊಂದಿಗೆ ಸ್ಪರ್ಧಿಸಲಿದ್ದು, ಇದೀಗ ಅದೇ ರೈಜನ್ ಮೊಬೈಲ್ 4000 ಸರಣಿಯನ್ನು ಅದೇ ಮಾರುಕಟ್ಟೆ ವಿಭಾಗಗಳಿಗೆ ಬಿಡುಗಡೆ ಮಾಡಿದೆ. ಅಲ್ಲದೆ ಗೇಮ್‌ಗಳು ಕೂಡ ಸುಲಭವಾಗಿದ್ದು, ಸುಲಭವಾದ ಥ್ರೆಡ್‌ಗಳನ್ನ ಹೊಂದಿದೆ. ಜೊತೆಗೆ ಹೆಚ್ಚಿನ ಸೆಟ್ಟಿಂಗ್‌ಗಳಲ್ಲಿ ಮೂರು ವರ್ಷದ ಹಳೆಯ ಲ್ಯಾಪ್‌ಟಾಪ್‌ಗಿಂತ ಕಾರ್ಯಕ್ಷಮತೆ ಶೇಕಡಾ 54 ರಷ್ಟು ಉತ್ತಮವಾಗಿದೆ ಎಂದು ಹೇಳಲಾಗಿದೆ. ಇನ್ನು ಇಂಟೆಲ್ ಕಾರ್ಯಕ್ಷಮತೆ ಮತ್ತು ವಿನ್ಯಾಸದ ಮೇಲೆ ಕೇಂದ್ರೀಕರಿಸಿದ್ದು, ಇದನ್ನೇ ಗುರಿಯಾಗಿಟ್ಟುಕೊಂಡು ಹೆಚ್ಚಿನ ವಿನ್ಯಾಸಗಳನ್ನು ಹೊಂದಿರುವ 17-ಇಂಚಿನ ಗೇಮಿಂಗ್ ಮಾದರಿಗಳನ್ನು ನಾವು ನಿರೀಕ್ಷಿಸಬಹುದಾಗಿದೆ.


 • ಸಿಪಿಯುಗಳು

  ಅಲ್ಲದೆ ಈ ಸಿಪಿಯುಗಳು ಅದರಲ್ಲೂ ಪ್ರಮುಖ ಆಕ್ಟಾ-ಕೋರ್ ಕೋರ್ i9-10980HK ಮಾದರಿಯು 16MB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಹೊಸ ಸರಣಿಯಲ್ಲಿ ಸಂಪೂರ್ಣವಾಗಿ ಅನ್ಲಾಕ್ ಮಾಡಲಾದ ಮತ್ತು ಓವರ್‌ಲಾಕ್ ಮಾಡಬಹುದಾದ ಏಕೈಕ ಯೂನಿಟ್‌ ಅನ್ನು ಸಹ ಹೊಂದಿದೆ. ಇದರ ಜೊತೆ 8-ಕೋರ್ ಕೋರ್ ಐ 7-10875 ಹೆಚ್ ಮಾದರಿಯೂ ಸಹ ಲಭ್ಯ ಇದೆ. ಇದಲ್ಲದೆ ಇತರ ಎರಡು ಕೋರ್ ಐ 7 ಮಾದರಿಗಳಾದ ಕೋರ್ ಐ 7-10850 ಹೆಚ್ ಮತ್ತು ಕೋರ್ ಐ 7-10750 ಹೆಚ್, ಎರಡೂ ಆರು ಕೋರ್ ಮತ್ತು 12 ಥ್ರೇಡ್‌ಗಳನ್ನು ಹೊಂದಿದ್ದು, 12 ಎಂಬಿ ಸಂಗ್ರಹಗಳನ್ನು ಹೊಂದಿದೆ. ಕೋರ್ i5-10400H ಮತ್ತು ಕೋರ್ i5-10300H ಎರಡೂ ಕ್ವಾಡ್-ಕೋರ್, 8MB ಸಂಗ್ರಹಗಳನ್ನು ಹೊಂದಿರುವ 8-ಥ್ರೆಡ್ ಭಾಗಗಳಾಗಿವೆ.


 • ಎಲ್ಲಾ

  ಇನ್ನು ಈ ಎಲ್ಲಾ ಆರು ಮಾದರಿಗಳು 45W ಟಿಡಿಪಿ ರೇಟಿಂಗ್‌ಗಳನ್ನು ಹೊಂದಿದ್ದು, ಲ್ಯಾಪ್‌ಟಾಪ್ ತಯಾರಕರು ತಮ್ಮ ವಿನ್ಯಾಸದ ಅವಶ್ಯಕತೆಗಳಿಗೆ ಸರಿಹೊಂದುವಂತೆ ಹೊಂದಿಸುವಲ್ಲಿ ಕೆಲವು ನಮ್ಯತೆಯನ್ನು ಹೊಂದಿದ್ದಾರೆ. ಹೊಸ ಸಿಪಿಯುಗಳು ಎರಡು ಚಾನೆಲ್‌ಗಳಲ್ಲಿ 128 ಜಿಬಿ ಡಿಡಿಆರ್ 4-2933 ರಾಮ್ ಅನ್ನು ಬೆಂಬಲಿಸುತ್ತವೆ. ಪ್ಲ್ಯಾಟ್‌ಫಾರ್ಮ್ ಮಟ್ಟದಲ್ಲಿ 40 ಪಿಸಿಐಇ 3.0 ಲೇನ್‌ಗಳಿಗೆ ಇಂಟೆಲ್ ಬೆಂಬಲವನ್ನು ನೀಡುತ್ತಿದೆ, ಸಿಪಿಯುನಿಂದ ನೇರವಾಗಿ ಉದ್ಭವಿಸುವ 16 ಲೇನ್‌ಗಳು ಇದನ್ನು ಪ್ರತ್ಯೇಕ ಜಿಪಿಯು, ಎನ್‌ವಿಎಂ ಎಸ್‌ಎಸ್‌ಡಿಗಳು ಅಥವಾ ಐಒ ನಿಯಂತ್ರಕಗಳಾದ ಥಂಡರ್‌ಬೋಲ್ಟ್ 3 ಅಥವಾ ಗಿಗಾಬಿಟ್ ಇಂಟರ್‌ನೆಟ್‌ಗೆ ಹೆಚ್ಚಿನ ವೇಗದ ಸಂಪರ್ಕಕ್ಕಾಗಿ ಬಳಸಬಹುದು. ಸದ್ಯ 9 ನೇ ಜನ್ ಸಿಪಿಯುಗಳನ್ನು ಆಧರಿಸಿದ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಗೇಮಿಂಗ್ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಾಗಲಿದೆ ಎಂದು ಇಂಟೆಲ್ ಹೇಳಿದೆ.
ಇಗಾಗಲೇ ನಿಮಗೆ ತಿಳಿದಿರುವಂತೆ ಲ್ಯಾಪ್‌ಟಾಪ್‌ ವಲಯ ಸಾಕಷ್ಟು ಬದಲಾಗಿದೆ. ಕೇವಲ ವೈಯುಕ್ತಿ ಹಾಗೂ ಕಚೇರಿಗೆ ಸೀಮಿತವಾಗಿದ್ದ ಲ್ಯಾಪ್‌ಟಾಪ್‌ಗಲು ಇಂದು ಮಲ್ಟಿ ಟಾಸ್ಕಿಂಗ್‌ ಡಿವೈಸ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದುವರೆದ ಟೆಕ್ನಾಲಜಿಯ ಪರಿಣಾಮ ಇಂದು ಎಲ್ಲವೂ ಬದಲಾಗುತ್ತಿದ್ದು ಲ್ಯಾಪ್‌ಟಾಪ್ ವಲಯವೂ ಕೂಡ ಸಾಕಷ್ಟು ಬದಲಾಗಿದೆ. ಇನ್ನು ಲ್ಯಾಪ್‌ಟಾಪ್‌ ವಲಯದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಇವುಗಳ ಪ್ರೊಸೆಸರ್‌ ಕೋರ್‌ಗಳು ಸಹ ಕಾರಣವಾಗಿದ್ದು, ಇದರಲ್ಲಿ ಇಂಟೆಲ್‌ ಕೋರ್‌ ಕೂಡ ಪ್ರಮುಖವಾಗಿದೆ.

   
 
ಹೆಲ್ತ್