Back
Home » ಆರೋಗ್ಯ
ಕೊರೊನಾವೈರಸ್ ಈ ರೀತಿ ಸೋಂಕಿದರೆ ಅಪಾಯ ಹೆಚ್ಚು
Boldsky | 3rd Apr, 2020 12:12 PM
 • ಯಾವ ರೀತಿ ಸೋಂಕು ತಗುಲಿದರೆ ಹೆಚ್ಚು ಅಪಾಯ?

  ಕೊರೊನಾವೈರಸ್‌ ಒಂದೇ ರೀತಿಯಾಗಿ ಎಲ್ಲರಿಗೆ ಸೋಂಕುವುದಿಲ್ಲ ಎಂಬುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ವೈರಸ್‌ ಯಾರಿಗೆ ಹೆಚ್ಚು ಅಪಾಯಕಾರಿ ಎಂಬುವುದು ನೋಡಿದರೆ ಈ ಸೋಂಕು ಸ್ವಲ್ಪ ತಗುಲಿದ ವ್ಯಕ್ತಿಗಿಂತ ಹೆಚ್ಚು ಪ್ರಮಾಣದಲ್ಲಿ ತಗುಲಿದರೆ ಹೆಚ್ಚು ಅಪಾಯಕಾರಿಯಾಗಿದೆ. ಅಂದರೆ ಕೊರೊನಾವೈರಸ್‌ ಸೋಂಕಿರುವ ವ್ಯಕ್ತಿಯನ್ನು ಹಾಗೇ ದಾಟಿ ಹೋಗುವ ವ್ಯಕ್ತಿಗೆ ಸ್ವಲ್ಪ ಮಟ್ಟಿಗೆ ಸೋಂಕು ತಗುಲಿ ಆತ ರೋಗದಿಂದ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಅದೇ ಆತನ ಜೊತೆ ಕೂತು ಮೀಟಿಂಗ್ ಮಾಡಿದ, ಪ್ರಯಾಣಿಸಿದ, ಕಾಫಿ-ತಿಂಡಿ ಮಾಡಿದ ವ್ಯಕ್ತಿಗೆ ಸೋಂಕಿಣ ಪ್ರಮಾಣ ಹೆಚ್ಚು ತಾಗುವುದರಿಂದ ಆತ ಹೆಚ್ಚು ಅಪಾಯಕ್ಕೆ ಸಿಲುಕುತ್ತಾನೆ.

  ಕೊರೊನಾವೈರಸ್ ಸೋಂಕು ತಗುಲಿದಾಗ ವ್ಯಕ್ತಿಯ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಸಾಮಾರ್ಥ್ಯದ ಅನುಗುಣವಾಗಿ ರೋಗ ಲಕ್ಷಣಗಳು ಗೋಚರಿಸುತ್ತದೆ. ರೋಗ ನಿರೋಧಕ ಶಕ್ತಿ ಅಧಿಕವಿರುವವರಿಗಿಂತ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸೋಂಕು ತುಂಬಾ ಗಂಭೀರವಾದ ಪರಿಣಾಮ ಬೀರುವುದು.

  2003ರಲ್ಲಿ ಕಂಡು ಬಂದ ಸಾರ್ಸ್ ರೋಗವು ಗಾಳಿಯ ಮೂಲಕ ಹರಡುತ್ತಿತ್ತು. ಹಾಂಗ್‌ಕಾಂಗ್‌ನಲ್ಲಿ ಒಬ್ಬನಿಗೆ ತಗುಲಿದ ಸೋಂಕು ಆ ಬಿಲ್ಡಿಂಗ್‌ನಲ್ಲಿದ್ದ 19 ಜನರನ್ನು ಬಲಿ ತೆಗೆದುಕೊಂಡಿತು. ಆದರೆ ಕೊರೊನಾವೈರಸ್ ಹಾಗಲ್ಲ, ಅದು ಸೋಂಕಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದವರಿಗೆ ಹಾಗೂ ಆತ ಮುಟ್ಟಿದ ವಸ್ತುಗಳನ್ನು ಮುಟ್ಟಿದವರಿಗೆ ಹರಡುತ್ತಿದೆ.


 • ಆದ್ದರಿಂದ ಜನರು ಈ ಮುನ್ನೆಚ್ಚರಿಕೆ ವಹಿಸಲೇಬೇಕು

  • ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
  • ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸಿ, ಇದರಿಂದ ಸೋಂಕು ತಗುಲುವ ಪ್ರಮಾಣ ಕಡಿಮೆ ಮಾಡಬಹುದು.
  • ದಿನಸಿ ತರಲು ಹೋಗುವಾಗ 6 ಅಡಿ ಅಂತರ ಪಾಲಿಸಿ.

 • ವೈದ್ಯಕೀಯ ಸಿಬ್ಬಂದಿಗಳು ಅಧಿಕ ಮುನ್ನೆಚ್ಚರಿಕೆವಹಿಸಬೇಕು

  • ಕೋವಿಡ್ 19 ರೋಗಿಗಳ ಚಿಕಿತ್ಸೆ ಮಾಡುವವರು ಹೈ ಪ್ರೊಟೆಕ್ಟಿವ್ ಗೇರ್‌ ಅಂದರೆ ಸ್ವಲ್ಪ ದ್ರವಾಂಶ ಕೂಡ ಒಳಗೆ ಹೋಗದಂಥ ಗೌನ್‌ ಫೇಸ್‌ ಮಾಸ್ಕ್ ಧರಿಸಬೇಕು.
  • ಕ್ಲಿನಿಕಲ್‌ ನಡೆಸುತ್ತಿರುವ ವೈದ್ಯರು ಕೂಡ ತುಂಬಾ ಎಚ್ಚರಿಕೆವಹಿಸಬೇಕಾಗಿದೆ. ಕೋವಿಡ್ 19 ರೋಗಿ ಅವರ ಭೇಟಿಗೆ ಬಂದರೆ, ನಂತರ ಆ ವೈದ್ಯರ ಮೂಲಕ ಇತರರಿಗೆ ಕೋವಿಡ್ 19 ಬರುವ ಸಾಧ್ಯತೆ ಇದೆ.

 • ಕೊರೊನಾವೈರಸ್ ತಡೆಗಟ್ಟುವುದು ಹೇಗೆ?

  ದೇಶವನ್ನು, ಪ್ರದೇಶವನ್ನು ಲಾಕ್‌ಡೌನ್‌ ಮಾಡುವುದೇ ಎಲ್ಲ ರಾಷ್ಟ್ರಗಳಿಗಿರುವ ಮಾರ್ಗವಾಗಿದ್ದು ಇದು ಪರಿಣಾಮಕಾರಿಯೂ ಆಗಿದೆ. ಈ ಮೂಲಕ ಅಧಿಕ ಪ್ರಮಾಣದಲ್ಲಿ ಸೋಂಕಾಣುಗಳು ಹರಡುವುದನ್ನು ತಡೆಗಟ್ಟಬಹುದು. ಇದರಿಂದ ಆರ್ಥಿಕ ತೊಂದರೆ ಉಂಟಾಗುತ್ತದೆ, ಮಾನಸಿಕವಾಗಿಯೂ ತುಂಬಾ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆದರೆ ಕೊರೊನಾವೈರಸ್ ವಿರುದ್ಧ ಹೋರಾಡಿ ಗೆಲ್ಲಲು ಇದೇ ಪರಿಣಾಮಕಾರಿಯಾದ ಮಾರ್ಗವಾಗಿದೆ.


 • ಅಧಿಕ ಪ್ರಮಾಣದಲ್ಲಿ ಸೋಂಕು ಹರಡುವುದು ತಡೆಯುವುದು ಹೇಗೆ?

  ಲಾಕ್‌ಡೌನ್‌ ಅವಧಿ ಏಪ್ರಿಲ್ 14ಕ್ಕೆ ಮುಗಿಯುತ್ತದೆ, ಆ ನಂರ ಕೂಡ ನಾವು ಸುರಕ್ಷಿತವಲ್ಲ. ಆದ್ದರಿಂದ ಆ ಸಂದರ್ಭದಲ್ಲಿ ಸೋಂಕು ಹರಡುವುದನ್ನು ತಡೆಯಲು ತುಂಬಾ ಮುನ್ನೆಚ್ಚರಿಕೆಕ್ರಮವಹಿಸಬೇಕು.

  • ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ, ಸಾರ್ವಜನಿಕ ಸಾರಿಗೆ ಬಳಸುವಾಗ ತುಂಬಾ ಮುನ್ನೆಚ್ಚರಿಕೆವಹಿಸಬೇಕು. ಮಾಸ್ಕ್ ಧರಿಸಬೇಕು. ಒಬ್ಬರಿಂದ-ಮತ್ತೊಬ್ಬರ ನಡುವೆ ಅಂತರ ಕಾಯ್ದುಕೊಳ್ಳಬೇಕು.

  ಈಗ ಮನೆಯಲ್ಲಿರುವ ಸಮಯ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ, ವೈರಸ್ ಅನ್ನು ಕಟ್ಟಿ ಹಾಕೋಣ......
ಕೊರೊನಾವೈರಸ್‌ ಬಗ್ಗೆ ಚೀನಾವನ್ನು ಮೊದಲು ಎಚ್ಚರಿಸಿದ 34 ವರ್ಷದ ವೈದ್ಯ ಲಿ. ವೆನೆಲಿಯಾಲಿಂಗ್ ಈಗ ಬದುಕಿಲ್ಲ. ಆತ ಕೂಡ ಕೊರೊನಶವೈರಸ್‌ಗೆ ಬಲಿಯಾಗಬೇಕಾಯಿತು. ಆದರೆ ಆತನ ಸಾವಿನ ಸುದ್ದಿ ಕೇಳಿ ಚೀನಾ ಮಾತ್ರವಲ್ಲ, ಇತರ ದೇಶಗಳು ಬೆಚ್ಚಿ ಬಿದ್ದಿತು. ಏಕೆಂದರೆ ಅದಕ್ಕೆ ಕಾರಣ ಆತನ ವಯಸ್ಸು.

ಕೊರೊನಾವೈರಸ್‌ ಅಪಾಯ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚು ಎಂದು ಹೇಳಲಾಗಿತ್ತು. ಆದರೆ ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಸಾವನ್ನಪ್ಪಲು ಕಾರಣವಾಗಿದ್ದು ಆತ ಸೋಂಕಿರುವ ವ್ಯಕ್ತಿಗಳ ಜೊತೆಗಿನ ಹೆಚ್ಚಿನ ಸಂಪರ್ಕ. ಈ ರೀತಿ ಹಲವಾರು ವೈದ್ಯರು, ನರ್ಸ್‌ಗಳು ಇಟಲಿ, ಫ್ರಾನ್ಸ್ ಮುಂತಾದ ಕಡೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿಯೂ 50ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿ ಸೋಂಕಿತರಾಗಿದ್ದಾರೆ ಎಂಬ ANI ವರದಿ ಬಂದಿದೆ. ಏಮ್ಸ್ ವೈದ್ಯರೊಬ್ಬರಿಗೆ ಕೊರೊನಾ ಸೋ ಕು ತಗುಲಿದೆ ಎಂಬುದವುದು ದೃಢ ಪಟ್ಟಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

   
 
ಹೆಲ್ತ್