Back
Home » ಇತ್ತೀಚಿನ
ಟಾಟಾಸ್ಕೈ ಡಿಟಿಎಚ್‌ ರೀಚಾರ್ಜ್ ಮಾಡಿಸಿಲು ಜಸ್ಟ್‌ ಮಿಸ್‌ ಕಾಲ್ ಮಾಡಿ!
Gizbot | 4th Apr, 2020 10:50 AM
 • ಟಾಟಾಸ್ಕೈ ಎಮರ್ಜೆನ್ಸಿ ಕ್ರೆಡಿಟ್

  ಹೌದು, ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಅನೇಕರು ಮನೆಯಿಂದಲೇ ಆನ್‌ಲೈನ್ ಮೂಲಕವೇ ಡಿಟಿಎಚ್ ರೀಚಾರ್ಜ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಆನ್‌ಲೈನ್ ರೀಚಾರ್ಜ್ ಬಗ್ಗೆ ಮಾಹಿತಿ ಇಲ್ಲದ ಅನೇಕರಿಗೆ ಮನೆಯ ಹೊರಗಡೆ ಹೋಗಿ ಡಿಟಿಎಚ್ ರೀಚಾರ್ಜ್ ಮಾಡಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಟಾಟಾಸ್ಕೈ ''ಟಾಟಾಸ್ಕೈ ಎಮರ್ಜೆನ್ಸಿ ಕ್ರೆಡಿಟ್'' ಸೌಲಭ್ಯವನ್ನು ಪರಿಚಯಿಸಿದೆ.


 • ಟಾಟಾಸ್ಕೈ ಎಮರ್ಜೆನ್ಸಿ ಕ್ರೆಡಿಟ್

  ಲಾಕ್‌ಡೌನ್‌ ಅವಧಿಯಲ್ಲಿ ಟಾಟಾಸ್ಕೈ ಗ್ರಾಹಕರ ಡಿಟಿಎಚ್ ರೀಚಾರ್ಜ್ ವ್ಯಾಲಿಡಿಟಿ ಮುಗಿದಿದ್ದರೇ ಅಂತಹ ಗ್ರಾಹಕರು ''ಟಾಟಾಸ್ಕೈ ಎಮರ್ಜೆನ್ಸಿ ಕ್ರೆಡಿಟ್'' ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಟಾಟಾಸ್ಕೈ 12 ಸೇವೆಗಳನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. ಹಾಗಾದರೆ ಟಾಟಾಸ್ಕೈ ಎಮರ್ಜೆನ್ಸಿ ಕ್ರೆಡಿಟ್ ಸೌಲಭ್ಯವನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.


 • ಜಸ್ಟ್‌ ಮಿಸ್‌ಕಾಲ್‌ ಮಾಡಿ

  ಲಾಕ್‌ಡೌನ್‌ ಟೈಮ್‌ನಲ್ಲಿ ಡಿಟಿಎಚ್‌ ರೀಚಾರ್ಜ್ ಮಾಡಿಸಿಕೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಅನುಕೂಲವಾಗಲೆಂದು ಸಂಸ್ಥೆಯು ಈ ಸೇವೆಯನ್ನು ಪರಿಚಯಿಸಿದೆ. ಇನ್ನು ಈ ಸೇವೆಯನ್ನು ಸಕ್ರಿಯ ಮಾಡಿಕೊಳ್ಳಲು ಗ್ರಾಹಕರು ರಿಜಿಸ್ಟ್ರಾರ್ ಮೊಬೈಲ್ ನಂಬರ್‌ನಿಂದ 080-61999922 ಸಂಖ್ಯೆಗೆ ಜಸ್ಟ್‌ ಮಿಸ್‌ ಕಾಲ್ ಮಾಡಿದರೇ ಆಯಿತು. ಲೋನ್ ಕ್ರೆಡಿಟ್ ಆಗುತ್ತದೆ.


 • ಬಡ್ಡಿ ರಹಿತ ಸೇವೆ

  ಟಾಟಾಸ್ಕೈ ಎಮರ್ಜೆನ್ಸಿ ಕ್ರೆಡಿಟ್ ಸೌಲಭ್ಯದಡಿ ರೀಚಾರ್ಜ್ ಮಾಡಿಸಿಕೊಂಡಿರುವ ಗ್ರಾಹಕರಿಗೆ ಆ ನಂತರ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಹಾಗೂ ಈ ಕ್ರೆಡಿಟ್ ಹಣಕ್ಕೆ ಬಡ್ಡಿ ಸಹ ವಿಧಿಸುವುದಿಲ್ಲ. ಪಡೆದೆ ಹಣವನ್ನು ಆ ನಂತರ ಸಂಸ್ಥೆಯು ಹಿಂಪಡೆದುಕೊಳ್ಳುತ್ತದೆ.


 • 12 ಸೇವೆಗಳು ಉಚಿತ

  ಕೋವಿಡ್-19 ಲಾಕ್‌ಡೌನ್‌ ಪರಿಣಾಮ ಟಾಟಾ ಸ್ಕೈ 12 ಸೇವೆಗಳು ಉಚಿತ ಎಂದಿದೆ. ಅವುಗಳೆಂದರೇ ಡ್ಯಾನ್ಸ್ ಸ್ಟುಡಿಯೋ, ಫನ್ ಲರ್ನ್ ಪ್ರಿಸ್ಕೂಲ್, ಫನ್ ಲರ್ನ್ ಜೂನಿಯರ್, ಅಡುಗೆ/ಕುಕ್ಕಿಂಗ್ ಮತ್ತು ಕ್ಲಾಸ್‌ರೂಮ್/ತರಗತಿಗಳು ಸೇರಿವೆ. ಇದರೊಂದಿಗೆ ಕಂಪನಿಯು ಹೆಚ್ಚುವರಿಯಾಗಿ ಫಿಟ್ನೆಸ್, ಸ್ಮಾರ್ಟ್ ಮ್ಯಾನೇಜರ್, ಜಾವೇದ್ ಅಖ್ತರ್, ಬ್ಯೂಟಿ, ವೈದಿಕ್ ಮ್ಯಾಥ್ಸ್ ಜೊತೆಗೆ ಇಂಗ್ಲಿಷ್ ಜೊತೆಗೆ ಹಿಂದಿ ಮತ್ತು ತೆಲುಗು ಸೇವೆಗಳಲ್ಲಿ ಇಂಗ್ಲಿಷ್ ಅನ್ನು ಸಹ ನೀಡುತ್ತಿದೆ.
ಮಾಹಾಮಾರಿ ಕೊರೊನಾ ವೈರಸ್ ಇಡೀ ಜಗತ್ತನೇ ತಲ್ಲಣಗೊಳಿಸಿದ್ದು, ಕೊರೊನಾ ಭಾರತದಲ್ಲಿಯೂ ಕರಿನೆರಳನ್ನು ಬೀರಿದೆ. ಕೋವಿಡ್ -19 ಸೋಂಕು ವ್ಯಾಪಕವಾಗಿ ಹರಡಬಾರದೆಂದು ಸರ್ಕಾರ ಲಾಕ್‌ಡೌನ್ ಸೂಚಿಸಿದೆ. ಲಾಕ್‌ಡೌನ್‌ ವ್ಯವಸ್ಥೆಯಿಂದ ಎಲ್ಲರು ಮನೆಯಲ್ಲಿಯೇ ಇರುವುದು ಅಗತ್ಯ ಮತ್ತು ಅವಶ್ಯವಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿರುವ ಬಹುತೇಕ ಜನರಿಗೆ ಸಮಯ ಕಳೆಯಲು ಟಿವಿ ಪ್ರಮುಖ ಸಾಧನವಾಗಿದೆ. ಈ ನಿಟ್ಟಿನಲ್ಲಿ ಟಾಟಾಸ್ಕೈ ತನ್ನ ಗ್ರಾಹಕರಿಗೆ ನೆರವಾಗಲು ಮುಂದಾಗಿದೆ.

   
 
ಹೆಲ್ತ್