Back
Home » ಇತ್ತೀಚಿನ
ಅಮೆಜಾನ್‌ ಕಿಂಡಲ್‌ ಇಂಡಿಯಾ ಬಳಕೆದಾರರಿಗೆ ಸಿಗಲಿದೆ ಉಚಿತ ಇ-ಬುಕ್ಸ್‌!
Gizbot | 4th Apr, 2020 05:00 PM
 • ಕಾಮರ್ಸ್

  ಇದೀಗ ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಳಕೆದಾರರಿಗಾಗಿ ಹೊಸ ಘೋಷಣೆ ಮಾಡಿದೆ. ಅಮೆಜಾನ್ ತನ್ನ ಕಿಂಡಲ್ ಪ್ಲಾಟ್‌ಫಾರ್ಮ್‌ನಲ್ಲಿ ಇ-ಪುಸ್ತಕಗಳ ಒಂದು ಭಾಗವನ್ನು ಉಚಿತವಾಗಿ ನೀಡುವ ಘೋಷಣೆ ಹೊರಡಿಸಿದೆ. ಇದರರ್ಥ ಅಮೆಜಾನ್ ಕಿಂಡಲ್ ಇಂಡಿಯಾ ಬಳಕೆದಾರರು ಇ-ಪುಸ್ತಕಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಲು ಈ ವಿಭಾಗಕ್ಕೆ ಹೋಗಬಹುದು. ಕಂಪೆನಿ ಈ ರೀತಿಯ ಕ್ರಮ ತೆಗೆದುಕೊಳ್ಳುವುದಕ್ಕೆ ಕೊರೊನಾ ವೈರಸ್‌ ಕಾರಣ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಈ ಕ್ರಮದಿಂದ ಸಿಗಬಹುದಾದ ಉಪಯೋಗಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ


 • ಇಡೀ

  ಸದ್ಯ ಇಡೀ ಜಗತ್ತು ಕೊರೊನಾ ವೈರಸ್‌ ಬೀತಿಯಿಂದ ಲಾಕ್‌ಡೌನ್‌ ಆಗಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಕಾರಣಕ್ಕಾಗಿ ಇ-ಕಾಮರ್ಸ್‌ ದೈತ್ಯ ಹೊಸ ಯೊಜನೆಯನ್ನ ಹೊರಡಿಸಿದ್ದು, ಈ ಮೂಲಕ ಇ-ಬುಕ್ಸ್‌ ಅನ್ನು ತನ್ನ ಬಳಕೆದಾರರು ಡೌನ್‌ಲೋಡ್‌ ಮಾಡಿಕೊಂಡು ಓದುವುದಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಪುಸ್ತಕ ಪ್ರೇಮಿಗಳು ತಮಗಿಷ್ಟವಾದ ಪುಸ್ತಕವನ್ನ ಓದುವುದಕ್ಕೆ ಅವಕಾಶ ಸಿಗಲಿದೆ ಅನ್ನೊದು ಅಮೆಜಾನ್‌ ಕಂಪೆನಿಯ ಉದ್ದೇಶವಾಗಿದೆ.


 • ಅಮೆಜಾನ್

  ಇನ್ನು ಅಮೆಜಾನ್ ಇಂಡಿಯಾ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಕಿಂಡಲ್ ಇ-ರೀಡರ್‌ಗಳಲ್ಲಿ ಉಚಿತ ವಿಷಯವನ್ನು ಪ್ರವೇಶಿಸಲು ಕಿಂಡಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಲೇಬೇಕು. ನಂತರ ಆಸಕ್ತ ಬಳಕೆದಾರರು ಬಹು ವರ್ಗಗಳ ಮೂಲಕ ಬ್ರೌಸ್ ಮಾಡಲು ಪುಸ್ತಕಗಳ ವಿಭಾಗಕ್ಕೆ ಹೋಗಬಹುದು. ಕಂಪನಿಯು ಈ ವಿಭಾಗವನ್ನು "ಉಚಿತವಾಗಿ ಓದಿ" ಎಂದು ಬ್ರಾಂಡ್ ಮಾಡುತ್ತಿದೆ, ಇದು ಬಳಕೆದಾರ ಮತ್ತು ಅವರ ಕುಟುಂಬವನ್ನು ಗುರಿಯಾಗಿರಿಸಿಕೊಂಡಿದೆ. ಪುಟದ ಮೂಲಕ ಬ್ರೌಸ್ ಮಾಡುವಾಗ, ಮಕ್ಕಳನ್ನು ಗುರಿಯಾಗಿರಿಸಿಕೊಂಡಿರುವ ಕಾದಂಬರಿ, ಕಾಲ್ಪನಿಕವಲ್ಲದ ಮತ್ತು ಶಾಸ್ತ್ರೀಯ ಸಾಹಿತ್ಯ ಸೇರಿದಂತೆ ಅನೇಕ ವಿಭಿನ್ನ ವರ್ಗಗಳನ್ನು ಗಮನಿಸಬಹುದಾಗಿದೆ.


 • ಇದಲ್ಲದೆ

  ಇದಲ್ಲದೆ ಇತರ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ಗ್ರಾಫಿಕ್ ಕಾದಂಬರಿಗಳು ಮತ್ತು ಪುಸ್ತಕಗಳನ್ನು ಸಹ ಒಳಗೊಂಡಿದ್ದು, ಬಳಕೆದಾರರು ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು, ಗುಜರಾತಿ ಮತ್ತು ಮಲಯಾಳಂ ಭಾಷೆಗಳಿಂದ ಉಚಿತ ಪುಸ್ತಕಗಳನ್ನು ಆಯ್ಕೆ ಮಾಡಬಹುದು. ಇದಕ್ಕಾಗಿ ಅಮೆಜಾನ್ ಇಂಡಿಯಾ "ಹಲವಾರು ಪ್ರಕಾಶಕರು ಮತ್ತು ಲೇಖಕರೊಂದಿಗೆ" ಈಗಾಗಲೇ ಕೈಜೋಡಿಸಿದೆ ಎಂದು ಹೇಳಲಾಗಿದೆ. ಸದ್ಯ ಕಂಪೆನಬಿ ನೀಡುರವ ಮಾಹಿತಿಯ ಪ್ರಕಾರ, ಈ ವಿಭಾಗದಲ್ಲಿಆರೋಗ್ಯ, ದೇಹ ಮತ್ತು ಮನಸ್ಸಿನ ಸ್ಥಿತಿಗತಿಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಸಹ ಒಳಗೊಂಡಿದೆ.


 • ಪುಟವನ್ನು

  ಇನ್ನು ಈ ಪುಟವನ್ನು ಪರಿಶೀಲಿಸುವಾಗ, ಅಮೆಜಾನ್ ಪ್ರೈಮ್ ಸದಸ್ಯರು ಹೊಸ ಇ-ಪುಸ್ತಕಗಳನ್ನು ಓದಲು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳುವ ಟೈಟಲ್‌ ಬ್ಯಾನರ್ ಅನ್ನು ಸಹ ನಾವು ನೋಡಬಹುದಾಗಿದೆ. ಇದಲ್ಲದೆ ದೊಡ್ಡ ಗಾತ್ರದ ಪುಸ್ತಕಗಳ ಸಂಗ್ರಹವನ್ನು ಉಚಿತವಾಗಿ ಪ್ರವೇಶಿಸಲು ನೀವು ಅಮೆಜಾನ್ ಪ್ರೈಮ್ ಸದಸ್ಯತ್ವಕ್ಕೆ ಚಂದಾದಾರರಾಗಬೇಕಾಗಿದೆ. ಈ ಉಚಿತ ಕೊಡುಗೆ ಎಲ್ಲಾ ಪುಸ್ತಕಗಳ "ಕಿಂಡಲ್ ಆವೃತ್ತಿ" ನಲ್ಲಿ ಮಾತ್ರ ಲಭ್ಯವಿದೆ ಎಂಬುದು ನಾವಿಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಸದ್ಯ ಬೆಲೆಯನ್ನು ಪರಿಗಣಿಸಿ, ಬಳಕೆದಾರರು ತಾವು ಓದಿದ ಎಲ್ಲಾ ಪುಸ್ತಕಗಳನ್ನು ಯಾವುದೇ ವೆಚ್ಚವಿಲ್ಲದೆ ವಾಸ್ತವವಾಗಿ ನೋಡುವ ವ್ಯವಸ್ಥೆ ಕೂಡ ಇದೆ. ಜೊತೆಗೆ ಹೌ ಡಸ್ ಇಟ್ ವರ್ಕ್, ಇನ್ವೆನ್ಷನ್ಸ್ -2, ಟ್ರೆಷರ್ ಐಲ್ಯಾಂಡ್, ಬೆಸ್ಟ್ ಆಫ್ ರವೀಂದ್ರನಾಥ ಟ್ಯಾಗೋರ್ ಬಾಕ್ಸ್ ಸೆಟ್, ಉತ್ಪಾದಕತೆ ಸೂಪರ್‌ ಹೀರೋ. ಇದು ದಿ ಆರ್ಟ್ ಆಫ್ ವಾರ್, ಎ ಟೇಲ್ ಆಫ್ ಟು ಸಿಟೀಸ್, ದಿ ಜಂಗಲ್ ಬುಕ್, ಫ್ರಾಂಕೆನ್‌ಸ್ಟೈನ್, ಆಲಿವರ್ ಟ್ವಿಸ್ಟ್ ನಂತಹ ಪುಸ್ತಕಗಳು ಕೂಡ ಇದರಲ್ಲಿ ಲಬ್ಯವಿದೆ.
ಟೆಕ್‌ ವಲಯದಲ್ಲಿ ಇ-ಕಾಮರ್ಸ್‌ ದೈತ್ಯ ಎನಿಸಿಕೊಂಡಿರುವ ಅಮೆಜಾನ್‌ ಹಲವು ವಿಶೇಷತೆಗಳನ್ನ ಆಗಾಗ ಪರಿಚಯಿಸುತ್ತಲೇ ಇರುತ್ತದೆ. ಹಲವು ಹೊಸತುಗಳನ್ನ ಪರಿಚಯಿಸುವ ಮೂಲಕ ಗ್ರಾಹಕರನ್ನ ಭರ್ಜರಿಯಾಗಿಯೇ ತನ್ನತ್ತ ಸೆಳೆಯಲಿದೆ. ಇನ್ನು ಈಗಾಗ್ಲೆ ಹಲವು ಫಾರ್ಮ್ಯಟ್‌ಗಳಲ್ಲಿ ಗುರುತಿಸಿಕೊಂಡಿರುವ ಅಮೆಜಾನ್‌ ಎಲ್ಲಾ ವಲಯಗಳಲ್ಲೂ ತನ್ನ ಸೇವೆ ನೀಡಲು ಆರಂಭಿಸಿದೆ. ಸದ್ಯ ನಿಮಗೆಲ್ಲಾ ಗೊತ್ತಿರುವ ಹಾಗೇ ಅಮೆಜಾನ್‌ ಕಿಂಡಲ್ ಇಂಡಿಯಾದಲ್ಲಿ ಎಲ್ಲಾ ಮಾದರಿಯ ಪುಸ್ತಕಗಳನ್ನ ನೀವು ನೊಡಬಹುದಾಗಿದೆ. ಅಷ್ಟೇ ಯಾಕೆ ಓದಲು ಕೂಡ ಅವಕಾಶ ವಿದೆ.

 
ಹೆಲ್ತ್