Back
Home » ಇತ್ತೀಚಿನ
ನಿಮ್ಮ ಫಿಟ್ನೆಸ್‌ ಸುಧಾರಿಸಲು ಸಹಾಯವಾಗಬಲ್ಲ ಐದು ಅತ್ಯುತ್ತಮ ಫಿಟ್ನೆಸ್‌ ಗೇಮ್‌ಗಳು!
Gizbot | 6th Apr, 2020 02:30 PM
 • ಹೌದು,

  ಹೌದು, ಫಿಟ್ನೆಸ್‌ಗೆ ಸಂಬಂಧಿಸಿದಂತೆ ಹಲವಾರು ಗೇಮ್‌ಗಳು ಇಂದು ಲಭ್ಯವಿವೆ. ವ್ಯಾಯಾಮ ಅನ್ನೊದು ದೇಹಕ್ಕೆ ಬಹಳ ಅವಶ್ಯಕವಾಗಿದೆ. ಇದು ದೇಹವನ್ನ ಸಮತೋಲನದಲ್ಲಿಡುವುದಲ್ಲದೆ ಆಕ್ಟಿವ್‌ ಆಗಿ ಇರಿಸಲು ಸಹಾಯಕವಾಗಿದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಗೇಮ್‌ಗಳಲ್ಲಿ ಕೆಲವೂ ಫಿಟ್ನೆಸ್‌ಗೇಮ್‌ಗಳನ್ನು ಸಹ ನಾವು ಕಾಣಬಹುದಾಗಿದೆ. ಹಾಗಾದ್ರೆ ನಿಮಗೆ ಉಪಯೋಗವಾಗಬಲ್ಲ ಐದು ಅತ್ಯುತ್ತಮ ಫಿಟ್ನೆಸ್‌ ಗೇಮ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.


 • ರಿಂಗ್ ಫಿಟ್ ಅಡ್ವೆಂಚರ್‌

  ರಿಂಗ್ ಫಿಟ್ ಅಡ್ವೆಂಚರ್‌ ಇದು ಒಂದು ಸಾಹಸಮಯವಾದ ಗೇಮ್‌ ಆಗಿದ್ದು, ಫಿಟ್ನೆಸ್‌ ಗೇಮ್‌ಗಳಲ್ಲಿ ಅತ್ಯುತ್ತಮ ಗೇಮ್‌ ಆಗಿ ಗುರುತಿಸಿಕೊಂಡಿದೆ. ಈ ಗೇಮ್‌ ನಲ್ಲಿ ನೀವು ಅಡ್ವೆಂಚರ್‌ ಪಾತ್ರವನ್ನ ನಿರ್ವಹಿಸಬೇಕು. ಹಾಗೇಯೆ ಡ್ರ್ಯಾಗನ್‌ ಅನ್ನು ಸೋಲಿಸುವ ಮಾರ್ಗ ತಿಳಿದಿರಬೇಕು. ಈ ಗೇಮ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಮೊದಲು ಆಡಿದ ನಂತರ ಈ ಗೇಮ್‌ನ ಹಂತಗಳನ್ನ ನೀವು ಅಳವಡಿಸಿಕೊಂಡರೆ ಉತ್ತಮವಾಗಿರುತ್ತದೆ. ಇನ್ನು ಈ ಗೇಮ್‌ನಲ್ಲಿ ಒಂದು ರಿಂಗ್‌ ಫಿಟ್‌ ಧರಿಸಿ ಡ್ರ್ಯಾಗಾಕ್ಸ್‌ ಎಂಬ ಕೋಳಿಯನ್ನ ಸೋಲಿಸುವ ಗೇಮ್‌ ಆಗಿದೆ. ಇದು ನಿಮ್ಮಲ್ಲಿ ಏಕಾಗ್ರತೆ ಹಾಗೂ ರನ್ನಿಂಗ್‌ ಪ್ರ್ಯಾಕ್ಟಿಸ್‌ಗೆ ಉತ್ತಮ ಗೇಮ್‌ ಆಗಿದೆ.


 • ಫಿಟ್ನೆಸ್ ಬಾಕ್ಸಿಂಗ್

  ಇನ್ನು ನಿಂಟೆಂಡೊ ಫಿಟ್ನೆಸ್ ಬಾಕ್ಸಿಂಗ್ ಗೇಮ್‌ ಕುಡ ಅತ್ಯುತ್ತಮ ಫಿಟ್ನೆಸ್‌ ಗೇಮ್‌ ಆಗಿದೆ. ಈ ಗೇಮ್‌ ಮೂಲಕ ಬಾಕ್ಸಿಂಗ್‌ಗೆ ಸಂಬಂಧಿಸಿದ ಮಾಹಿತಿಯನ್ನ ನೀವು ಕಲಿಯಬಹುದಾಗಿದೆ. ಜೊತೆಗೆ ಬಾಕ್ಸಿಂಗ್‌ನ ವಿವಿಧ ಹಂತಗಳನ್ನ ನೀವು ಇಲ್ಲಿ ನೋಡಬಹುದಾಗಿದ್ದು, ಜೊತೆಜೊತೆಗೆ ಕಲಿತುಕೊಳ್ಳಬಹುದಾಗಿದೆ. ಸ್ವಿಚ್ ಆಟವು ವರ್ಚುವಲ್ ತರಬೇತುದಾರರಿಂದ ಮೇಲ್ವಿಚಾರಣೆಯ ಜೀವನಕ್ರಮವನ್ನು ನಿಮಗೆ ನೀಡುತ್ತದೆ. ಜೊತೆಗೆ ನಿಮ್ಮ ಜಾಯ್-ಕಾನ್ ಚಲನೆಯ ಹೊಡೆತಗಳು ಮತ್ತು ಡಾಡ್ಜಿಂಗ್ ಕುಶಲತೆಯನ್ನು ನಿರ್ವಹಿಸಲು ನೀವು ಈ ಗೇಮ್‌ ಅನ್ನು ಬಳಸಬಹುದಾಗಿದೆ. ನಿಮ್ಮ ಫಿಟ್‌ನೆಸ್ ವಯಸ್ಸು ಮತ್ತು ಕ್ಯಾಲೋರಿ ಸುಡುವಿಕೆಯನ್ನು ಅಂದಾಜು ಮಾಡಲು ಈ ಆಟವು ಸೂಕ್ತವಾಗಿದೆ.


 • ಬೀಟ್ ಸಬರ್

  ಈ ಗೇಮ್‌ನಲ್ಲಿ ಹಾರುವ ಪಕ್ಷಗಳು ಹಾಗೂ ಬಾತುಕೋಳಿ ಮತ್ತು ಅವುಗಳನ್ನ ತುಂಡರಿಸುತ್ತಾ ಹಾದಿಯಲ್ಲಿ ಸಾಗುವ ಡಾಡ್ಜ್‌ ಅನ್ನು ನೋಡಬಹುದು. ಇದು ಒಂದು ಮಾದರಿಯ ಮೈಂಡ್‌ ಸೆಟ್‌ ಗೇಮ್‌ ಆಗಿದ್ದು, ಇದರಿಮದ ಮಾನಸಿಕ ವ್ಯಾಯಾಮ ಆಗಲಿದೆ. ಇನ್ನು ಈ ಬೀಟ್ ಸಬರ್‌ನಲ್ಲಿ ತೊಡಗಿಸಿಕೊಂಡರೆ ನಿಮಗೆ ಯಾವುದೇ ರೀತಿಯ ದೈಹಿಕ ಶ್ರಮ ಕಾಣುವುದಿಲ್ಲ. ಆದರೆ ಈ ಗೇಮ್‌ ಅನ್ನು ಅನುಭವಿಸಬವೇಕಾದರ ವಿಆರ್ ಹೆಡ್‌ಸೆಟ್ ಅಗತ್ಯವಿದೆ. ಟ್ರ್ಯಾಕ್ ಮಾಡಲಾದ ಚಲನೆಯ ನಿಯಂತ್ರಕಗಳು ಸಹ ಅಗತ್ಯವಿದೆ ಜೊತೆಗ ಇವುಗಳು ನೀವು ಆಡುತ್ತಿರುವ ಪ್ಲಾಟ್‌ಫಾರ್ಮ್ ಅನ್ನು ಅವಲಂಬಿಸಿರುತ್ತದೆ.


 • ಜುಂಬಾ

  ನಿಮ್ಮ ದೈಹಿಕ ಆರೋಗ್ಯ ಹಾಗೂ ದೇಹದ ಕ್ಯಾಲೊರಿಗಳನ್ನ ಇಳಿಸಲು ಅತ್ಯುತ್ತಮವಾದ ಗೇಮ್‌ ಜುಂಬಾ. ಇದು ಒಂದು ಹೊಸ ಮಾದರಿಯ ವಿಡಿಯೋ ಗೇಮ್‌ ಆಗಿದ್ದು, ಇದರಲ್ಲಿ ನೃತ್ಯ ಮಾದರಿಯ ಗೇಮ್‌ಗಳು ಲಭ್ಯವಿರುತ್ತದೆ. ನಿಮ್ಮ ಹೃದಯವನ್ನು ಪಂಪ್ ಮಾಡಲು 30 ಉನ್ನತ-ಶಕ್ತಿಯ ತರಗತಿಗಳು ಮತ್ತು ನಿಮ್ಮ ಸೊಂಟವನ್ನು ಅಲುಗಾಡಿಸಲು ಉತ್ತಮ ಪಾಠವನ್ನು ಇದರಲ್ಲಿ ಕಲಿಯಬಹುದಾಗಿದೆ. ಜುಂಬಾ ಡ್ಯಾನ್ಸ್‌ ಮೂಲಕ ನಿಮ್ಮ ಸೊಂಟದ ಸುತ್ತಲಿನ ಬೊಜ್ಜು ಕರಗಿಸಬಹುದು. ಗೇಮ್‌ನಲ್ಲಿ ಬರುವ ಹಂತಗಳನ್ನ ಅನುಸರಿಸುತ್ತಾ ಸಾಗಿದರೆ ಉತ್ತಮ ಪಲಿತಾಂಶವನ್ನು ಪಡೆಯಬಹುದಾಗಿದೆ.


 • ವೈ ಫಿಟ್ ಪ್ಲಸ್

  ವೈ ಫಿಟ್‌ ಪ್ಲಸ್‌ ಹಳೆಯ ಗೇಮ್‌ ಆದರೂ ಕೂಡ ಫಿಟ್ನೆಸ್‌ ಗೇಮ್‌ಗಲ ಸಾಲಿನಲ್ಲಿ ಟಾಪ್‌ 5ನಲ್ಲಿದೆ. ಈ ಗೇಮ್‌ನಲ್ಲಿ ಹಳೆಯ ಕನ್ಸೋಲ್‌ಗಳನ್ನು ಕ್ಲೋಸೆಟ್‌ನಿಂದ ಹೊರಗೆ ಎಳೆಯಲು, ಧೂಳನ್ನು ಹೊಗಲಾಡಿಸಲು ಉತ್ತಮ ಮಾರ್ಗದರ್ಶನ ಸಿಗಲಿದೆ. ಇನ್ನು ಈ ಗೇಮ್‌ನಿಂದ ಏರೋಬಿಕ್ಸ್, ಶಕ್ತಿ, ಸಮತೋಲನ ಮತ್ತು ಯೋಗದ ಮಹತ್ವವನ್ನು ತಿಳಿಯಬಹುದಾಗಿದೆ. ಇನ್ನು ಇಂದೊಂದು ಕ್ಲಾಸಿಕ್‌ ಆಟವಾಗಿದ್ದು, ಈ ಗೇಮ್‌ನ ಮೂಲಕ ನಿಮ್ಮ ಜೀವನದ ಕ್ರಮವನ್ನು ಸಹ ಬದಲಾಯಿಸಿಕೊಳ್ಳಬಹುದಾಗಿದೆ.
ಇತ್ತಿಚಿನ ದಿನಗಳಲ್ಲಿ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದ್ದು, ಟೆಕ್ನಾಲಜಿ ಆಧಾರಿತವಾಗಿ ಸಾಕಷ್ಟು ಗೇಮ್‌ಗಳು ಬಂದಿವೆ. ಇವುಗಳಲ್ಲಿ ಸಾಕಷ್ಟು ಗೇಮ್‌ಗಳು ಇಮದಿನ ಯುವಜನತೆಯ ನೆಚ್ಚಿನ ಗೇಮ್‌ಗಳಾಗಿ ಗುರುತಿಸಿಕೊಂಡಿವೆ. ನಿಮಗೆಲ್ಲಾ ತಿಳಿದಿರುವಂತೆ ಸ್ಮಾರ್ಟ್‌ಗೇಮ್‌ಗಳಲ್ಲಿ ಬಹುತೇಕ ಗೇಮ್‌ಗಳು ಆನಿಮೇಷನ್‌ ಟೆಕ್ನಾಲಜಿ ಆಧಾರಿತವಾಗಿವೆ. ಅದರಲ್ಲೂ ಹೆಚ್ಚಿನ ಗೇಮ್‌ಗಳು ರೆಟ್ರೋ ಶೈಲಿಯನ್ನ ಹೊಂದಿದ್ದರೆ ಇನ್ನು ಕೆಲವೂ ಗೇಮ್‌ಗಳು ಮೈಡ್‌ಸೆಟ್ ಗೇಮ್‌ಗಳಾಗಿವೆ. ಇವುಗಳಲ್ಲಿ ನಿಮ್ಮ ಫಿಟ್ನೆಸ್‌ಗೆ ಸಂಬಂಧಿಸಿದ ಗೇಮ್‌ಗಳು ಕೂಡ ಇವೆ.

   
 
ಹೆಲ್ತ್