Back
Home » ಸಮ್ಮಿಲನ
ವಾರ ಭವಿಷ್ಯ- ಮೇ 3ರಿಂದ ಮೇ 9ರ ತನಕ
Boldsky | 3rd May, 2020 09:30 AM
 • ಮೇಷ ರಾಶಿ

  ಕೆಲಸದ ವಿಚಾರದಲ್ಲಿ ಈ ವಾರ ನಿಮಗೆ ಒಳ್ಳೆಯದಿಲ್ಲ. ನೀವು ಕಚೇರಿಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಮಾತುಗಳ ಬಗ್ಗೆ ಎಚ್ಚರ ಇರಲಿ. ನೀವು ಆದಷ್ಟು ಸಮಯವನ್ನು ವ್ಯರ್ಥ ಮಾಡಬೇಡಿ ಮತ್ತು ಕೆಲಸದ ಬಗ್ಗೆ ಗಮನ ಹರಿಸಿ. ನಿಮ್ಮ ಸಹೋದ್ಯೋಗಿಗಳೊಂದಿಗೆ ಜಗಳವಾಡಬೇಡಿ, ಇದು ವಿವಾದಗಳಲ್ಲಿ ಸಿಲುಕಿಸುತ್ತದೆ.

  ನಿಮ್ಮ ಬಗ್ಗೆ ತುಂಬಾ ಅರ್ಥಮಾಡಿಕೊಂಡಿರುವವರಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ತುಂಬಾ ಅನುಕೂಲಕರ ಸಮಯ. ಸಂಗಾತಿಯೊಂದಿಗೂ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು. ನೀವು ಕುಟುಂಬದ ಮಹಿಳಾ ಸದಸ್ಯರ ಸಹಾನುಭೂತಿಯನ್ನು ಸ್ವೀಕರಿಸುತ್ತೀರಿ. ಈ ವಾರ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಆದರೆ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿರುವುದಿಲ್ಲ, ಸ್ವಲ್ಪ ಕಾಳಜಿಯೊಂದಿಗೆ ಖರ್ಚು ಮಾಡುವುದು ಉತ್ತಮ. ಈ ವಾರ ಸಣ್ಣ ಪ್ರಯಾಣದ ನಿರೀಕ್ಷೆಯಿದೆ.

  ಅದೃಷ್ಟ ಬಣ್ಣ: ಬಿಳಿ

  ಅದೃಷ್ಟ ಸಂಖ್ಯೆ: 6

  ಅದೃಷ್ಟ ದಿನ: ಶನಿವಾರ


 • ವೃಷಭ ರಾಶಿ

  ವಾರದ ಆರಂಭದಲ್ಲಿ ನೀವು ಕೆಲವು ಸಮಸ್ಯೆಗಳಿಂದ ಸುತ್ತುವರಿಯುತ್ತೀರಿ. ಕೆಲವು ಜನರು ತಪ್ಪಾದ ಮಾಹಿತಿಯನ್ನು ನೀಡುವ ಮೂಲಕ ನಿಮ್ಮನ್ನು ಗೊಂದಲಗೊಳಿಸಲು ಪ್ರಯತ್ನಿಸುತ್ತಾರೆ. ಅಂತಹ ಜನರಿಂದ ದೂರವಿರುವುದು ಉತ್ತಮ. ಕೆಲಸದಲ್ಲಿ ಕೆಲವು ಸಮಸ್ಯೆಗಳಿರಬಹುದು. ನೀವು ಒತ್ತಡಕ್ಕೊಳಗಾಗಿದ್ದರೆ ಈ ಬಗ್ಗೆ ನಿಮ್ಮ ಮೇಲಧಿಕಾರಿಗಳೊಂದಿಗೆ ಮಾತನಾಡಿ. ಈ ವಾರ ನೀವು ಕೆಲವು ಪ್ರಮುಖ ವಿಷಯಗಳ ಬಗ್ಗೆ ಗಮನ ಹರಿಸಬೇಕಾಗಿದೆ. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಕಷ್ಟಪಟ್ಟು ಕೆಲಸ ಮಾಡಿದರೆ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಕುಟುಂಬ ಜೀವನವು ಸಂತೋಷದಾಯಕವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಕಷ್ಟದ ಸಮಯದಲ್ಲೂ ಧೈರ್ಯದಿಂದ ಕೆಲಸ ಮಾಡುತ್ತೀರಿ. ಹಣದ ದೃಷ್ಟಿಯಿಂದ ವಾರ ಉತ್ತಮವಾಗಿರುತ್ತದೆ.

  ಅದೃಷ್ಟ ಬಣ್ಣ: ಹಸಿರು

  ಅದೃಷ್ಟ ಸಂಖ್ಯೆ: 19

  ಅದೃಷ್ಟ ದಿನ: ಬುಧವಾರ


 • ಮಿಥುನ ರಾಶಿ

  ಹಿಂದಿನ ವಾರಕ್ಕಿಂತ ಈ ವಾರ ನಿಮಗೆ ಉತ್ತಮವಾಗಿರಲಿದೆ. ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು. ನೀವು ಭಾರೀ ಕೆಲಸದ ಹೊರೆಗೆ ಒಳಗಾಗುತ್ತೀರಿ ಮತ್ತು ಉತ್ತಮವಾಗಿ ಕೆಲಸ ಮಾಡುವ ನಿರೀಕ್ಷೆಯಿದೆ. ಚಿಂತಿಸಬೇಡಿ ಉತ್ತಮ ಯೋಜನೆ ಮತ್ತು ತಿಳುವಳಿಕೆಯ ಸಹಾಯದಿಂದ, ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗಬಹುದು. ನಿಮ್ಮ ಮೇಲಧಿಕಾರಿಗಳು ಸಹ ಅವರ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಸಾಧ್ಯವಾದರೆ ಈ ವಾರ ಸಂಗಾತಿಯ ಜತೆ ಸಣ್ಣ ಪ್ರವಾಸ ಯೋಜನೆಯನ್ನು ಮಾಡಿ. ಹಣಕಾಸಿನ ವಿಷಯದಲ್ಲಿ ಇದು ಉತ್ತಮ ಸಮಯ. ದೀರ್ಘಾವಧಿಯ ಹೂಡಿಕೆ ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ವಾರ ಆರೋಗ್ಯ ಉತ್ತಮವಾಗಿರುತ್ತದೆ. ಮಧುಮೇಹ ರೋಗಿಗಳು ಜಾಗರೂಕರಾಗಿರಬೇಕು.

  ಅದೃಷ್ಟ ಬಣ್ಣ: ಕ್ರೀಮ್

  ಅದೃಷ್ಟ ಸಂಖ್ಯೆ: 20

  ಅದೃಷ್ಟ ದಿನ: ಭಾನುವಾರ


 • ಕರ್ಕ ರಾಶಿ

  ನೀವು ಕೆಲವು ಸಮಯದಿಂದ ತುಂಬಾ ದಣಿದಿದ್ದೀರಿ. ನಿಮ್ಮ ಪ್ರಯತ್ನಗಳಲ್ಲಿ ನಿರಂತರ ವೈಫಲ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡಿದೆ ಆದರೆ, ನಿಮ್ಮ ವೃತ್ತಿಪರ ಜೀವನದಲ್ಲಿ ಏನನ್ನಾದರೂ ಮಾಡುವ ಸಮಯ ಇದು. ನಿಮ್ಮ ಪ್ರತಿಭೆಯನ್ನು ಎಲ್ಲರ ಮುಂದೆ ತರಲು ಪ್ರಯತ್ನಿಸಿ, ಜನರು ನಿಮ್ಮ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಪ್ರಾರಂಭಿಸುತ್ತಾರೆ. ನೀವು ಯಾವುದೇ ರೀತಿಯ ಮಾನಸಿಕ ಉದ್ವೇಗವನ್ನು ಅನುಭವಿಸುತ್ತಿದ್ದರೆ ನೀವು ಧ್ಯಾನವನ್ನು ಅಭ್ಯಾಸ ಮಾಡಬೇಕು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ವೈಯಕ್ತಿಕ ವ್ಯವಹಾರಗಳಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಲು ಅನುಮತಿಸಬೇಡಿ. ಆರ್ಥಿಕ ದೃಷ್ಟಿಯಿಂದ ಈ ವಾರ ಉತ್ತಮವಾಗಿರುತ್ತದೆ. ಹಳೆಯ ಹೂಡಿಕೆಗಳು ನಿಮಗೆ ಪ್ರಯೋಜನವನ್ನು ನೀಡುತ್ತವೆ. ನೀವು ಒಬ್ಬಂಟಿಯಾಗಿದ್ದು ಜೊತೆಗಾರರನ್ನು ಹುಡುಕುತ್ತಿದ್ದರೆ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

  ಅದೃಷ್ಟ ಬಣ್ಣ: ಗುಲಾಬಿ

  ಅದೃಷ್ಟ ಸಂಖ್ಯೆ: 17

  ಅದೃಷ್ಟ ದಿನ: ಮಂಗಳವಾರ


 • ಸಿಂಹ ರಾಶಿ

  ದಂಪತಿಗಳಿಗೆ ಈ ವಾರ ವಿಶೇಷವಾಗಲಿದೆ. ನಿಮ್ಮ ಸಂಗಾತಿಯು ನಿಮ್ಮಿಂದ ವಿಶೇಷ ಉಡುಗೊರೆಯನ್ನು ನಿರೀಕ್ಷಿಸಬಹುದು. ನಿಮ್ಮ ಪ್ರಿಯತಮೆಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ ಮತ್ತು ನಿಮ್ಮ ನೆನಪುಗಳನ್ನು ಮೆಲುಕು ಹಾಕುತ್ತೀರಿ. ಜನರು ನಿಮ್ಮ ಪರಿಶ್ರಮ ಮತ್ತು ಸಾಮರ್ಥ್ಯಗಳನ್ನು ಮೆಚ್ಚುತ್ತಾರೆ. ಆರ್ಥಿಕ ದೃಷ್ಟಿಯಿಂದ, ಈ ವಾರ ಕೆಲವು ಉತ್ತಮ ಫಲಿತಾಂಶಗಳು ಸಿಗಲಿದೆ. ಆರ್ಥಿಕ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಈ ವಾರ ನಿಮ್ಮ ಸಂತೋಷ ದ್ವಿಗುಣಗೊಳ್ಳುತ್ತದೆ. ನೀವು ಇತರರೊಂದಿಗೆ ಚಿಂತನಶೀಲವಾಗಿ ವ್ಯವಹರಿಸದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ವರ್ತನೆಯಿಂದಾಗಿ ನೀವು ಟೀಕೆಗೆ ಒಳಗಾಗಬಹುದು. ಅದೇ ಸಮಯದಲ್ಲಿ ನಿಮ್ಮ ಗೌರವ ಮತ್ತು ಘನತೆಯನ್ನು ಸಹ ಚರ್ಚಿಸಬಹುದು. ಕೆಲಸದಲ್ಲಿ ಈ ವಾರ ಸಾಮಾನ್ಯವಾಗಿರಲಿದೆ.

  ಅದೃಷ್ಟ ಬಣ್ಣ: ಕಿತ್ತಳೆ

  ಅದೃಷ್ಟ ಸಂಖ್ಯೆ: 20

  ಅದೃಷ್ಟ ದಿನ: ಶನಿವಾರ


 • ಕನ್ಯಾ ರಾಶಿ

  ಬಹಳ ಸಮಯದ ನಂತರ ನಿಮ್ಮ ಕೆಲಸದಲ್ಲಿ ಹಾಯಾಗಿ ಮತ್ತು ಸುರಕ್ಷಿತವಾಗಿರುತ್ತೀರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಕಾರ್ಯಕ್ಷಮತೆ ಸುಧಾರಿಸುತ್ತದೆ. ಹಿರಿಯರು ನಿಮ್ಮ ಸಾಮರ್ಥ್ಯವನ್ನು ಮೆಚ್ಚುತ್ತಾರೆ. ಬುದ್ಧಿವಂತಿಕೆ ಮತ್ತು ತಿಳುವಳಿಕೆಯೊಂದಿಗೆ ಕಷ್ಟಕರ ಸಂದರ್ಭಗಳನ್ನು ಬಹಳ ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ವ್ಯಾಪಾರಸ್ಥರು ಕೆಲವು ಪ್ರಮುಖ ಜನರನ್ನು ಭೇಟಿ ಮಾಡಬಹುದು. ಕುಟುಂಬದ ಅಗತ್ಯಗಳಿಗೆ ನೀವು ಗಮನಹರಿಸಬೇಕು, ಅವರಿಗೆ ನಿಮ್ಮ ಪ್ರೀತಿ ಮತ್ತು ಸಹಕಾರವೂ ಬೇಕು. ನೀವು ಖರ್ಚು ಮಾಡುವುದಕ್ಕಿಂತ ಉಳಿಸುವುದನ್ನು ಹೆಚ್ಚು ನಂಬುತ್ತೀರಿ. ಹಣ ಸಂಪಾದಿಸಲು ನಿಮಗೆ ಅನೇಕ ಅವಕಾಶಗಳು ಸಿಗಬಹುದು. ವೈಯಕ್ತಿಕ ಜೀವನಕ್ಕೆ ಈ ವಾರ ಬಹಳ ಮುಖ್ಯವಾಗಲಿದೆ. ನೀವು ಗಮನ ಹರಿಸಬೇಕಾದ ಕೆಲವು ಪ್ರಮುಖ ವಿಷಯಗಳಿವೆ. ಈ ವಾರ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು.

  ಅದೃಷ್ಟದ ಬಣ್ಣ: ಆಳವಾದ ನೀಲಿ

  ಅದೃಷ್ಟ ಸಂಖ್ಯೆ: 3

  ಅದೃಷ್ಟ ದಿನ: ಮಂಗಳವಾರ


 • ತುಲಾ ರಾಶಿ

  ಆರ್ಥಿಕ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಿದ್ದರೆ ಈ ವಾರದಿಂದ ನೀವು ಅದರ ದುಪ್ಪಟ್ಟು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನೀವು ಯಾರಿಗಾದರೂ ಸಾಲ ನೀಡಿದ್ದರೆ ಅದನ್ನು ಸಹ ಮರಳಿ ಪಡೆಯುತ್ತೀರಿ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ ಮತ್ತು ಫಲಿತಾಂಶಗಳು ನಿರೀಕ್ಷೆಯಂತೆ ಇರುತ್ತದೆ. ಹಿರಿಯರು ನಿಮ್ಮನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಕೆಲಸವನ್ನು ಸಹ ಬಹಳವಾಗಿ ಪ್ರಶಂಸಿಸಲಾಗುತ್ತದೆ. ರಾಜಕೀಯದೊಂದಿಗೆ ಸಂಪರ್ಕ ಹೊಂದಿರುವ ಜನರಿಗೆ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆಯಾಗಬಹುದು. ದಂಪತಿಗಳು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆರೋಗ್ಯದ ವಿಷಯದಲ್ಲಿ ಈ ವಾರ ಜಾಗರೂಕರಾಗಿರಬೇಕು.

  ಅದೃಷ್ಟ ಬಣ್ಣ: ಕಂದು

  ಅದೃಷ್ಟ ಸಂಖ್ಯೆ: 7

  ಅದೃಷ್ಟ ದಿನ: ಸೋಮವಾರ


 • ವೃಶ್ಚಿಕ ರಾಶಿ

  ಈ ವಾರ ನಿಮಗೆ ತುಂಬಾ ಕೆಲಸ ಇರುತ್ತದೆ. ಆದರೂ ನಿಮ್ಮ ಪ್ರೀತಿಪಾತ್ರರ ಜೊತೆ ಮೋಜು ಮಾಡಲು ನಿಮಗೆ ಸಾಕಷ್ಟು ಸಮಯ ಸಿಗುತ್ತದೆ. ಕೆಲವು ಲೋಕೋಪಕಾರಿ ಕೆಲಸಗಳನ್ನು ಸಹ ಮಾಡಬಹುದು. ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಬುದ್ಧಿವಂತರಾಗಿದ್ದರೆ ದೊಡ್ಡ ಅವಕಾಶ ಸಿಗುವ ಸಾಧ್ಯತೆಯಿದೆ. ಅಪೂರ್ಣ ಕಾರ್ಯಗಳಿಂದಾಗಿ ನಿಮ್ಮ ಮೇಲಧಿಕಾರಿಗಳು ನಿಮ್ಮೊಂದಿಗೆ ಅಸಮಾಧಾನಗೊಳ್ಳಬಹುದು. ನಿಮ್ಮ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಸಂಗಾತಿಯ ಪ್ರೀತಿ ಮತ್ತು ಸಹಕಾರವು ನಿಮಗೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ನಿಮ್ಮ ಸಂಬಂಧವು ಸದೃಢವಾಗಿ ಉಳಿಯುತ್ತದೆ. ಆರ್ಥಿಕ ದೃಷ್ಟಿಯಿಂದ ಈ ವಾರ ಚೆನ್ನಾಗಿರುತ್ತದೆ. ನೀವು ಯಾವುದೇ ರೀತಿಯ ಆತುರ ಮತ್ತು ಭೀತಿಯನ್ನು ತಪ್ಪಿಸಬೇಕು. ಪ್ರೀತಿಯ ವಿಷಯದಲ್ಲಿ ಈ ಸಮಯವು ಏರಿಳಿತಗಳಿಂದ ತುಂಬಿರಬಹುದು. ನಿಮ್ಮ ನಡವಳಿಕೆಯನ್ನು ಮೃದುಗೊಳಿಸಬೇಕಾಗಿದೆ.

  ಅದೃಷ್ಟ ಬಣ್ಣ: ಕೆಂಪು

  ಅದೃಷ್ಟ ಸಂಖ್ಯೆ: 3

  ಅದೃಷ್ಟ ದಿನ: ಶುಕ್ರವಾರ


 • ಧನು ರಾಶಿ

  ಈ ವಾರ ನೀವು ಹಣದ ಬಗ್ಗೆ ತುಂಬಾ ಚಿಂತೆ ಮಾಡುತ್ತೀರಿ. ಹೆಚ್ಚಿನ ಪ್ರಯತ್ನದ ನಂತರವೂ ಯಶಸ್ಸನ್ನು ಪಡೆಯದ ಕಾರಣ ನೀವು ಗೊಂದಲಕ್ಕೆ ಒಳಗಾಗಬಹುದು. ನಿಮ್ಮ ಕೆಲವು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು. ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಬಯಸಿದರೆ ನೀವು ಉತ್ತಮ ಹಣಕಾಸು ಯೋಜನೆಯನ್ನು ರೂಪಿಸಬೇಕು. ಇದು ಖಂಡಿತವಾಗಿಯೂ ನಿಮಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಉಳಿಸಲು ಸಹ ಸಾಧ್ಯವಾಗುತ್ತದೆ. ಈ ವಾರ ನೀವು ಅನೇಕ ಚಿಂತೆಗಳನ್ನು ಹೊಂದಿರುತ್ತೀರಿ, ಆದರೆ ಚಿಂತಿಸುವುದರ ಮೂಲಕ ನೀವು ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಳ್ಳಿ. ನೀವು ಧೈರ್ಯವನ್ನು ತೋರಿಸಿ ಮತ್ತು ಅಂತಹ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನೀವು ಉದ್ಯೋಗದಲ್ಲಿದ್ದರೆ ಈ ವಾರ ನೀವು ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ದಣಿದ ಮತ್ತು ನಿರಾಶೆ ಅನುಭವಿಸುತ್ತಿದ್ದರೆ ಸಂಗಾತಿಯೊಂದಿಗೆ ಕೆಲವು ದಿನಗಳವರೆಗೆ ಹೊರಗೆ ಹೋಗಿ. ಇದು ಪರಸ್ಪರ ಸಮಯ ಕಳೆಯಲು ಸಹ ಅವಕಾಶ ನೀಡುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಒಳ್ಳೆಯದಲ್ಲ, ನಿಮ್ಮ ಬಗ್ಗೆ ಕಾಳಜಿ ವಹಿಸಿ.

  ಅದೃಷ್ಟ ಬಣ್ಣ: ಆಕಾಶ

  ಅದೃಷ್ಟ ಸಂಖ್ಯೆ: 10

  ಅದೃಷ್ಟ ದಿನ: ಗುರುವಾರ


 • ಮಕರ ರಾಶಿ

  ಆರ್ಥಿಕ ದೃಷ್ಟಿಯಿಂದ ಈ ವಾರ ನಿಮಗೆ ಚೆನ್ನಾಗಿದೆ. ನೀವು ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಮೊದಲು ಈ ಕುರಿತ ಎಲ್ಲಾ ಮಾಹಿತಿಯನ್ನು ಪಡೆಯಿರಿ. ನಿಮ್ಮ ಸಂಗಾತಿಯ ಬದಲಾಗುತ್ತಿರುವ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಸ್ವಲ್ಪ ಕಷ್ಟವಾಗಬಹುದು. ನೀವು ಅವರೊಂದಿಗೆ ಆರಾಮವಾಗಿ ಕುಳಿತು ಮಾತನಾಡುವುದು ಮುಖ್ಯ. ನಿಮ್ಮ ಸಮಸ್ಯೆಗಳನ್ನು ಮನೆಯ ಹಿರಿಯರೊಂದಿಗೆ ಅಥವಾ ನಿಮ್ಮ ಹತ್ತಿರ ಇರುವವರೊಂದಿಗೆ ಹಂಚಿಕೊಳ್ಳುವುದರಿಂದ ಬಹುಶಃ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಈ ವಾರ ನೀವು ಕೆಲವು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಮನೆ ಅಥವಾ ಕಚೇರಿ ಎರಡೂ ಕಡೆ ಪ್ರತಿ ಹೆಜ್ಜೆಯನ್ನೂ ಬಹಳ ಚಿಂತನಶೀಲವಾಗಿ ನಿರ್ಧಾರ ತೆಗೆದುಕೊಳ್ಳಿ. ಪಗೆ ಈ ವಾರ ಪ್ರೇಮಿಗಳಿಗೆ ತುಂಬಾ ವಿಶೇಷವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಾಮಾಣಿಕವಾಗಿರಬೇಕು. ನಿಮ್ಮ ಮಾತುಗಳ ಕಡೆ ಗಮನ ಕೊಡುವುದು ಉತ್ತಮ. ವಾರದ ಕೊನೆಯಲ್ಲಿ ಬಹಳ ದೂರ ಪ್ರಯಾಣಿಸಬಹುದು, ಅದು ನಿಮಗೆ ಸಾಕಷ್ಟು ದಣಿವನ್ನು ನೀಡುತ್ತದೆ.

  ಅದೃಷ್ಟ ಬಣ್ಣ: ಬಿಳಿ

  ಅದೃಷ್ಟ ಸಂಖ್ಯೆ: 6

  ಅದೃಷ್ಟ ದಿನ: ಸೋಮವಾರ


 • ಕುಂಭ ರಾಶಿ

  ದಂಪತಿಗಳಿಗೆ ಈ ವಾರ ಶುಭ ಸೂಚನೆಗಳಿಲ್ಲ. ಅಧ್ಯಯನದಲ್ಲಿ ನಿಮ್ಮ ಮಕ್ಕಳ ಸಾಧನೆ ಉತ್ತಮವಾಗಿರುತ್ತದೆ, ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಕೆಲಸದಲ್ಲಿ ಕೆಲವು ಸಮಸ್ಯೆಗಳಿರಬಹುದು. ನೀವು ವ್ಯವಹಾರದ ವಿಷಯಗಳಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ನೀವು ಹೊಸ ಹಣಕಾಸು ಯೋಜನೆಯನ್ನು ಅಂತಿಮಗೊಳಿಸಬಹುದು. ವ್ಯವಹಾರದ ಹೊರತಾಗಿ, ನೀವು ಗಮನ ಕೊಡುವ ಹಲವು ಸಮಸ್ಯೆಗಳಿವೆ. ನಿಮ್ಮ ಶತ್ರುಗಳೊಂದಿಗೆ ನೀವು ಜಾಗರೂಕರಾಗಿರಬೇಕು, ಅವರು ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು. ವಾರದ ಆರಂಭದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುವುದಿಲ್ಲ, ದ್ವಿತೀಯಾರ್ಧದಲ್ಲಿ ಸ್ವಲ್ಪ ಸುಧಾರಣೆಯಾಗುವ ಸಾಧ್ಯತೆಯಿದೆ. ನೀವು ಯಾವಾಗಲೂ ಮಾಡುವಂತೆಯೇ ಅದೇ ಉತ್ಸಾಹದಿಂದ ಕೆಲಸ ಮಾಡುತ್ತೀರಿ. ನಿಮ್ಮ ಆರ್ಥಿಕ ಪ್ರಯತ್ನಗಳು ಈ ವಾರ ಯಶಸ್ವಿಯಾಗಲಿವೆ. ಈ ಅವಧಿಯಲ್ಲಿ ನೀವು ಅಮೂಲ್ಯವಾದದ್ದನ್ನು ಪಡೆಯುವ ಸಾಧ್ಯತೆಯಿದೆ. ಪ್ರಯಾಣ ಮಾಡುವುದನ್ನು ನೀವು ತಪ್ಪಿಸಬೇಕು.

  ಅದೃಷ್ಟ ಬಣ್ಣ: ನೀಲಿ

  ಅದೃಷ್ಟ ಸಂಖ್ಯೆ: 11

  ಅದೃಷ್ಟ ದಿನ: ಭಾನುವಾರ


 • ಮೀನ ರಾಶಿ

  ಈ ವಾರ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಬಹುದು. ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಸ್ನೇಹ ಹೆಚ್ಚಾಗುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ಜಗಳವೂ ಕೊನೆಗೊಳ್ಳುತ್ತದೆ. ಈ ವಾರ ನೀವು ಉತ್ತಮ ಹಣವನ್ನು ಗಳಿಸಬಹುದು ಮತ್ತು ಉಳಿಸಲು ಸಹ ಸಾಧ್ಯವಾಗುತ್ತದೆ. ಕೆಲಸದಲ್ಲಿ ಈ ವಾರ ಮಿಶ್ರವಾದ ದಿನಗಳು ಎದುರಾಗಲಿದೆ. ಉದ್ಯಮಿಗಳು ತಮ್ಮ ಹಣವನ್ನು ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಬಹುದು. ದಂಪತಿಗಳಿಗೆ ಉತ್ತಮ ಸಮಯ ಇರುತ್ತದೆ. ಪ್ರೀತಿಯಲ್ಲಿ ನೀವು ಮುಳುಗುತ್ತೀರಿ ಮತ್ತು ನಿಮ್ಮ ಸಂಬಂಧದ ಮಾಧುರ್ಯ ಉಳಿಯುತ್ತದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ಅವಿವಾಹಿತರಿಗೆ ಕೆಲವು ಉತ್ತಮ ವಿವಾಹ ಪ್ರಸ್ತಾಪಗಳು ಬರಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

  ಅದೃಷ್ಟ ಬಣ್ಣ: ಹಳದಿ

  ಅದೃಷ್ಟ ಸಂಖ್ಯೆ: 18

  ಅದೃಷ್ಟ ದಿನ: ಗುರುವಾರ




ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು.

ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

   
 
ಹೆಲ್ತ್