Back
Home » ಸಮ್ಮಿಲನ
ಗುರುವಾರದ ದಿನ ಭವಿಷ್ಯ: 14 ಮೇ 2020
Boldsky | 14th May, 2020 04:30 AM
 • ಮೇಷ:

  ನೀವಿಂದು ತುಂಬಾ ಸಂತೋಷದಿಂದ ಇರುವಿರಿ, ಉದ್ಯೋಗಿಯಾಗಿದ್ದರೆ ಕೆಲಸದಲ್ಲಿ ಮಗ್ನರಾಗುತ್ತೀರಿ. ನಿಮ್ಮ ಕಾರ್ಯವೈಖರಿಗೆ ಮೆಚ್ಚುಗೆ ಗಳಿಸುವಿರಿ. ನಿಮಗೆ ನೀಡಿದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವಿರಿ. ಆದರೆ ಈ ದಿನ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾದರೂ ತುಂಬಾ ಯೋಚಿಸಿ ತೆಗೆದುಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಅನಗ್ಯತವಾಗಿ ಚರ್ಚಿಸಬೇಡಿ. ಪ್ರೇಮಿಗಳಾಗಿದ್ದರೆ ಈ ದಿನ ಶುಭ ಸುದ್ದಿ ಕಾದಿರಲಿದೆ. ಆರೋಗ್ಯವೂ ಉತ್ತಮವಾಗಿರುವುದು.
  ಅದೃಷ್ಟದ ಬಣ್ಣ: ಕಡು ನೀಲಿ
  ಅದೃಷ್ಟದ ಸಂಖ್ಯೆ: 32
  ಅದೃಷ್ಟದ ಸಮಯ: ಬೆಳಗ್ಗೆ 6.20ರಿಂದ 11.25ರವರೆಗೆ


 • ವೃಷಭ:

  ನೀವು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಡದೇ ಹೋದರೆ ಈ ದಿನ ತೊಂದರೆಗೆ ಸಿಲುಕಿಕೊಳ್ಳುವಿರಿ. ಯಾರಿಗೆ ಅವಶ್ಯಕ ಇದೆಯೋ ಅವರಿಗೆ ಸಹಾಯ ಮಾಡಿ. ನಿಮ್ಮ ಶ್ರಮದ ಕೆಲಸಕ್ಕೆ ಒಳ್ಳೆಯ ಪ್ರತಿಫಲ ಸಿಗಲಿದೆ. ನೀವು ಸರ್ಕಾರಿ ಉದ್ಯೋಗಿಯಾಗಿದ್ದರೆ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ. ಉದ್ಯಮಿಗಳಿಗೆ ದೊಡ್ಡ ಕ್ಲೈಂಟ್ ಸಿಗುವ ಸಾಧ್ಯತೆ ಇದೆ. ಹೆಚ್ಚಿನ ಮಾನಸಿಕ ಒತ್ತಡ ಇರುವುದಿಲ್ಲ, ಆದ್ದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.
  ಅದೃಷ್ಟದ ಬಣ್ಣ: ಮೆರೂನ್
  ಅದೃಷ್ಟದ ಸಂಖ್ಯೆ: 9
  ಅದೃಷ್ಟದ ಸಮಯ: ಬೆಳಗ್ಗೆ 8.45ರಿಂದ 2.20ರವರೆಗೆ


 • ಮಿಥುನ ರಾಶಿ

  ಇವತ್ತು ನೀವು ಆರೋಗ್ಯಕ್ಕೆ ತುಂಬಾ ಗಮನ ಕೊಡಬೇಕು. ಗ್ರಹಗತಿಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ, ಆದ್ದರಿಂದ ಆರೋಗ್ಯದ ಕಡೆ ತುಂಬಾ ಗಮನ ನೀಡಿ. ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಲು ನಿಮ್ಮ ಸಹೋದ್ಯೋಗಿಗಳ ನೆರವು ಸಿಗಲಿದೆ. ಉದ್ಯಮಿಗಳಿಗೆ ಈ ದಿನ ತಕ್ಕಮಟ್ಟಿನ ಲಾಭ ದೊರೆಯುವುದು. ವಿದ್ಯಾರ್ಥಿಯಾಗಿದ್ದರೆ ಸಮಯದ ಸದುಪಯೋಗ ಮಾಡಿ. ಈ ದಿನ ಆರ್ಥಿಕ ಖರ್ಚು ಕಡಿಮೆ ಇರಲಿದೆ.
  ಅದೃಷ್ಟದ ಬಣ್ಣ: ಬಿಳಿ
  ಅದೃಷ್ಟದ ಸಂಖ್ಯೆ: 40
  ಅದೃಷ್ಟದ ಸಮಯ: ಮಧ್ಯಾಹ್ನ 2ರಿಂದ 5ರವರೆಗೆ


 • ಕರ್ಕ:

  ನಿಮ್ಮ ಮುಂಗೋಪವನ್ನು ನಿಯಂತ್ರಿಸಬೇಕು. ಉದ್ಯೋಗ ಸ್ಥಳದಲ್ಲಿ ಯಾರ ಜೊತೆಗೂ ಅನಗ್ಯತ ತರ್ಕ ಮಾಡಬೇಡಿ. ಇನ್ನು ಉದ್ಯಮಿಯಾಗಿದ್ದರೆ ನಿಮ್ಮ ನಿಮ್ಮ ಪಾಲಿದಾರರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ಹೆಚ್ಚು ಹಣ ಖರ್ಚು ಮಾಡದಿದ್ದರೆ ಒಳ್ಲೆಯದು. ವೈಯಕ್ತಿಕ ಕಾರಣಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ನಿಮ್ಮ ಹಿರಿಯರಿಗೆ ನೋವಾಗುವಂತೆ ನಡೆದುಕೊಳ್ಳಬೇಡಿ. ಆರೋಗ್ಯದ ಕಡೆ ಜೋಪಾನ.
  ಅದೃಷ್ಟದ ಬಣ್ಣ: ಪಿಂಕ್
  ಅದೃಷ್ಟದ ಸಂಖ್ಯೆ: 20
  ಅದೃಷ್ಟದ ಸಮಯ: ಸಂಜೆ 4.45ರಿಮದ ರಾತ್ರಿ 8ಗಂಟೆಯವರೆಗೆ


 • ಸಿಂಹ

  ಕೆಲಸದ ದೃಷ್ಟಿಯಿಂದ ಹೇಳುವುದಾದರೆ ಇಂದು ಸ್ವಲ್ಪ ಆಯಾಸ ಹೆಚ್ಚಿರುತ್ತದೆ. ಹೆಚ್ಚು ಶ್ರಮವಹಿಸಿದರೆ ಮಾತ್ರ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯ, ಹೀಗಾಗಿ ತುಂಬಾ ಕೆಲಸದ ಒತ್ತಡ ಇರುತ್ತದೆ. ಸಣ್ಣ ಉದ್ಯಮಿಗಳಿಗೆ ಸ್ವಲ್ಪ ಬಿಡುವು ದೊರೆಯುವುದು. ಮನೆಯ ಸ್ಥಿತಿ ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಸಂಗಾತಿಯ ಅನಾರೋಗ್ಯ ನಿಮಗೆ ಚಿಂತೆಯನ್ನು ಉಂಟು ಮಾಡಬಹುದು. ತ್ವಚೆ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
  ಅದೃಷ್ಟದ ಬಣ್ಣ: ತೆಳು ಹಳದಿ
  ಅದೃಷ್ಟದ ಸಂಖ್ಯೆ: 16
  ಅದೃಷ್ಟದ ಸಮಯ: ಸಂಜೆ 6ಗಂಟೆಯಿಂದ 8.45ರವರೆಗೆ


 • ಕನ್ಯಾ

  ನೀವು ಉದ್ಯಮಿಯಾಗಿದ್ದರೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ವಸ್ತುಗಳನ್ನು ಉತ್ಪಾದಿಸಬೇಡಿ. ನಿಮ್ಮ ಕೆಲಸದ ಕಡೆ ಹೆಚ್ಚಿನ ಶ್ರದ್ಧೆ ಅಗ್ಯತ. ನಿಮ್ಮಿಂದ ತಪ್ಪಾದರೆ ಇದರಿಂದ ಮೇಲಾಧಿಕಾರಿಯ ಅತೃಪ್ತಿಗೆ ಕಾರಣಕರ್ತರಾಗುತ್ತೀರಿ. ಸ್ವಲ್ಪ ಬೇಸರ ಕಾಡುವುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ವೈಯಕ್ತಿಕ ಜೀವನ ಸಾಮಾನ್ಯವಾಗಿರಲಿದೆ. ನಿಮ್ಮ ಪ್ರೀತಿ ಪಾತ್ರರ ಅಕ್ಕರೆ ನಿಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುವುದು. ತಾಳ್ಮೆ ಇರಲಿ.

  ಅದೃಷ್ಟದ ಬಣ್ಣ: ಕಡು ನೀಲಿ
  ಅದೃಷ್ಟದ ಸಂಖ್ಯೆ: 5
  ಅದೃಷ್ಟದ ಸಮಯ: ಸಂಜೆ 3 ಗಂಟೆಯಿಂದ 4.20ರವರೆಗೆ


 • ತುಲಾ ರಾಶಿ

  ಸಂಸಾರದಲ್ಲಿ ಸ್ವಲ್ಪ ವೈಮನಸ್ಸು ಮೂಡುವುದು, ಮಾತಿಗೆ ಮಾತು ಬೆಳೆದು ಸಂಬಂಧ ಹಾಳಾಗುವುದು. ಕೋಪದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಕಾರಣಗಳು ಕೆಲಸದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಧ್ಯಾನ ಮಾಡಿ. ನಿಮ್ಮ ಆಪ್ತರಿಂದ ಸುಂದರವಾದ ಉಡುಗೊರೆ ಸಿಗಲಿದೆ.
  ಅದೃಷ್ಟದ ಬಣ್ಣ: ಕಂದು
  ಅದೃಷ್ಟದ ಸಂಖ್ಯೆ: 3
  ಅದೃಷ್ಟದ ಸಮಯ: ಸಂಜೆ 3.30ರಿಂದ 7.55ರವರೆಗೆ


 • ವೃಶ್ಚಿಕ

  ಇವತ್ತು ಪರಿಸ್ಥಿತಿ ಅನುಕೂಲಕರವಾಗಿದೆ. ನಿಮ್ಮ ಶ್ರಮವನ್ನು ಗುರುತಿಸುತ್ತಾರೆ, ನಿಮ್ಮ ಬಾಸ್‌ ನಿಮ್ಮನ್ನು ಹೊಗಳುತ್ತಾರೆ. ಉದ್ಯಮಿಗಳು ಲಾಭವನ್ನು ನಿರೀಕ್ಷೆ ಮಾಡಬಹುದು. ಮನೆಯಲ್ಲಿಯೂ ಖುಷಿ ಇರುವುದು. ನಿಮ್ಮ ಮನಸ್ಸು ನಿರಾಳವಾಗಿರುತ್ತದೆ. ಗೆಳೆಯರ ಜೊತೆ ಅನಗ್ಯತ ತರ್ಕ ಮಾಡಬೇಡಿ.
  ಅದೃಷ್ಟದ ಬಣ್ಣ: ಆಕಾಶ ನೀಲಿ
  ಅದೃಷ್ಟದ ಸಂಖ್ಯೆ: 28
  ಅದೃಷ್ಟದ ಸಮಯ: ಬೆಳಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ


 • ಧನು

  ವಿದ್ಯಾರ್ಥಿಗಳಾಗಿದ್ದರೆ ಆನ್‌ಲೈನ್ ಕ್ಲಾಸ್‌ನಿಂದ ಪ್ರಯೋಜನ ಪಡೆಯುವಿರಿ. ಉದ್ಯಮಿಗಳು ಇವತ್ತು ಹೂಡಿಕೆ ಮಾಡದಿರುವುದು ಒಳ್ಳೆಯದು. ಉದ್ಯೋಗಿಗಳಿಗೆ ಕೆಲಸದ ಒತ್ತಡ ಇರಲಿದೆ. ವೈಯಕ್ತಿಕ ಸಮಸ್ಯೆಯೂ ಕಾಡಬಹುದು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿ. ಆರೋಗ್ಯ ಉತ್ತಮವಾಗಿರಲಿದೆ.

  ಅದೃಷ್ಟದ ಬಣ್ಣ: ನೇರಳೆ
  ಅದೃಷ್ಟದ ಸಂಖ್ಯೆ: 28
  ಅದೃಷ್ಟದ ಸಮಯ: ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ


 • ಮಕರರಾಶಿ

  ಯಾವುದೇ ಅಡಚಣೆಯಿಲ್ಲದೆ ಕೈಗೊಂಡ ಕೆಲಸಗಳು ಪೂರ್ಣಗೊಳ್ಳಲಿದೆ. ಇದರಿಂದ ಖುಷಿಯಾಗಿರುವಿರಿ. ಉದ್ಯಮಿಗಳಿಗೂ ಈ ದಿನ ಚೆನ್ನಾಗಿದೆ. ವೈಯಕ್ತಿಕ ಬದುಕು ಕೂಡ ಸಂತೋಷವಾಗಿರುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚು ಬರುವ ಸಾಧ್ಯತೆ ಇರುವುದರಿಂದ ಹಣದ ವ್ಯವಹಾರದಲ್ಲಿ ಜೋಪಾನ.

  ಅದೃಷ್ಟದ ಬಣ್ಣ: ಕಿತ್ತಳೆ
  ಅದೃಷ್ಟದ ಸಂಖ್ಯೆ: 12
  ಅದೃಷ್ಟದ ಸಮಯ: ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ


 • ಕುಂಭ

  ನೀವು ಬಯಸಿದ ಫಲಿತಾಂಶ ದೊರೆಯುವುದಿಲ್ಲ ಹಾಗಂತ ಬೇಸರ ಪಡುವ ಅಗ್ಯತ ಇಲ್ಲ, ಪ್ರಯತ್ನ ಮುಂದುವರೆಸಿ, ಫಲ ಸಿಗುವುದು. ಹೊಸ ಕೆಲಸದಲ್ಲಿ ತೊಡಗಬಯಸುವುದಾದರೆ ಸ್ವಲ್ಪ ತಡೆಯಿರಿ. ಹಣಕಾಸಿನ ಬಗ್ಗೆಯೂ ಹೆಚ್ಚಿನ ಗಮನ ನೀಡಿ. ಮನೆಯವರ ಬಂಬಲ ಸಿಗುವುದು, ಇದರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುವುದು. ಯಾರಿಂದಲೂ ಹೆಚ್ಚು ನಿರೀಕ್ಷಿಸಬೇಡಿ.
  ಅದೃಷ್ಟದ ಬಣ್ಣ: ಹಳದಿ
  ಅದೃಷ್ಟದ ಸಂಖ್ಯೆ: 18
  ಅದೃಷ್ಟದ ಸಮಯ: ಮಧ್ಯಾಹ್ನ 1 ಗಂಟೆಯಿಂದ 5 ಗಂಟೆಯವರೆಗೆ


 • ಮೀನ

  ಕೆಲಸದ ದೃಷ್ಟಿಯಿಂದ ಹೇಳುವುದಾದರೆ ಯಶಸ್ವಿ ನಿಮ್ಮದಾಗಲಿದೆ. ನೀವು ತುಂಬಾ ಸಮಯದಿಂದ ಕಾಯುತ್ತಿದ್ದ ಅವಕಾಶ ಇಂದು ದೊರೆಯುವ ಸಾಧ್ಯತೆ ಇದೆ. ಇದರಿಂದ ಅಭಿವೃದ್ಧಿಯಾಗುವುದು. ಉದ್ಯಮಿಗಳಿಗೂ ಒಳ್ಳೆಯ ದಿನ. ಸಂಸಾರದಲ್ಲಿದ್ದ ವೈಮನಸ್ಸು ದೂರವಾಗುವುದು. ಆರೋಗ್ಯವೂ ಚೆನ್ನಾಗಿರಲಿದೆ.
  ಅದೃಷ್ಟದ ಬಣ್ಣ: ಕ್ರೀಮ್
  ಅದೃಷ್ಟದ ಸಂಖ್ಯೆ: 5
  ಅದೃಷ್ಟದ ಸಮಯ: ಸಂಜೆ 6.15ರಿಂದ 9ಗಂಟೆಯವರೆಗೆ
ನಮ್ಮ ಬದುಕಿನಲ್ಲಿ ಏನೇ ಇರಲಿ ಅದು ಸುಖವಿರಲಿ, ಕಷ್ಟವಿರಲಿ, ದುಃಖವಿರಲಿ, ಸುಖವಿರಲಿ, ದಿನ ಪ್ರಾರಂಭವಾಗುವಾಗ ಈ ದಿನ ಒಳಿತಾಗಿರಲಿ ಎಂದೇ ಬಯಸುತ್ತೇವೆ. ಆದರೆ ಕೆಲವೊಮ್ಮೆ ಬದುಕಿನಲ್ಲಿ ನಾವೂ ಊಹಿಸಿದ ಘಟನೆಗಳು ಸಂಭವಿಸುತ್ತದೆ.

ಜ್ಯೋತಿಷ್ಯ ಶಾಸ್ತ್ರವು ನಮ್ಮ ಗ್ರಹಗತಿಗಳ ಆಧಾರದ ಮೇಲೆ ಈ ದಿನ ಹೇಗಿರುತ್ತದೆ ಎಂದು ಹೇಳುತ್ತದೆ. ಬನ್ನಿ ನಿಮ್ಮ ರಾಶಿಯ ಪ್ರಕಾರ ಈ ದಿನ ಹೇಗಿರಲಿದೆ ಎಂದು ನೋಡೋಣ:

   
 
ಹೆಲ್ತ್