Back
Home » ಸಿನಿ ಸಮಾಚಾರ
'ಸೆಕ್ಸ್‌-ಗಾಡ್-ಟ್ರುತ್' ನಂತರ ಮತ್ತೆ ಮಿಯಾ ಮಾಲ್ಕೊವಾ ಜೊತೆ ವರ್ಮಾ ಸಿನಿಮಾ
Oneindia | 15th May, 2020 12:12 PM
 • ಮರಳುಗಾಡಿನಲ್ಲಿ ಯುವ ಜೋಡಿ ಪ್ರಮಾದಕ್ಕೆ ಸಿಲುಕುವ ಕತೆ

  ಮರಳುಗಾಡಿನಲ್ಲಿ ಯುವ ಜೋಡಿ ಪ್ರಮಾದಕ್ಕೆ ಸಿಲುಕುವುದರ ಕತೆ ಇದೆಂದು ಟ್ರೇಲರ್‌ನಲ್ಲಿ ಗೊತ್ತಾಗುತ್ತಿದೆ. ಈ ಚಿತ್ರವು ಹಾರರ್ ಚಿತ್ರವಾಗಿದ್ದು, ಜಾಂಬಿ ಭೂತಗಳ ಕುರಿತಾದ ಚಿತ್ರ ಆಗಿದೆ.


 • ನೀಲಿ ಚಿತ್ರ ತಾರೆ ಮಿಯಾ ಮಾಲ್ಕೋವಾ

  ನೀಲಿ ಚಿತ್ರ ತಾರೆ ಮಿಯಾ ಮಾಲ್ಕೋವಾ ಸಾಕಷ್ಟು ಹಸಿ-ಬಿಸಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಟ್ರೇಲರ್‌ನಲ್ಲಿಯೇ ಗೊತ್ತಾಗುತ್ತಿದೆ.


 • ಸೆಕ್ಸ್-ಗಾಡ್-ಟ್ರುತ್ ಸಿನಿಮಾ ಮಾಡಿದ್ದ ವರ್ಮಾ

  ಈ ಹಿಂದೆ ರಾಮ್‌ ಗೋಪಾಲ್ ವರ್ಮಾ ಮಿಲಾ ಮಾಲ್ಕೊವಾ ಜೊತೆಗೆ 'ಸೆಕ್ಸ್-ಗಾಡ್-ಟ್ರುತ್' ಎಂಬ ನೀಲಿ ಚಿತ್ರವನ್ನು ನಿರ್ಮಿಸಿ ವೆಬ್‌ಸೈಟ್‌ಗೆ ಬಿಡುಗಡೆ ಮಾಡಿದ್ದರು. ಭಾರಿ ಕುತೂಹಲ ಕೆರಳಿಸಿದ್ದ ಆ ಸಿನಿಮಾ ಹೆಚ್ಚು ಮಂದಿಗೆ ಇಷ್ಟವಾಗಲಿಲ್ಲ.


 • ವಿವಾದಾತ್ಮಕ ಹೇಳಿಕೆ-ಟ್ವೀಟ್‌ಗಳಿಗೆ ಹೆಸರುವಾಸಿ

  ತಮ್ಮ ಚಿತ್ರ-ವಿಚಿತ್ರ ಹೇಳಿಕೆಗಳು, ಟ್ವೀಟ್‌ಗಳಿಗೆ ಹೆಸರಾಗಿರುವ ರಾಮ್ ಗೋಪಾಲ್ ವರ್ಮಾ, 'ದೇವುಡಿ ಕೊರೊನಾ' ಎಂಬ ಹಾಡೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಹಾಡನ್ನು ಸ್ವತಃ ಅವರೇ ಹಾಡಿದ್ದಾರೆ.

  ಕೊರೊನಾ ಎಫೆಕ್ಟ್: ರಾಮ್ ಗೋಪಾಲ್ ವರ್ಮ ಚಿತ್ರದ ಚಿತ್ರೀಕರಣ ಮುಂದಕ್ಕೆ.!
ನೀಲಿ ಚಿತ್ರ ತಾರೆ ಮಿಯಾ ಮಾಲ್ಕೊವಾ ಜೊತೆಗೆ 'ಸೆಕ್ಸ್-ಗಾಡ್-ಟ್ರುತ್' ಎಂಬ ನೀಲಿ ಚಿತ್ರ ನಿರ್ಮಿಸಿದ್ದ ರಾಮ್ ಗೋಪಾಲ್ ವರ್ಮಾ, ಈಗ ಮತ್ತೆ ಮಿಯಾ ಜೊತೆಗೆ ಸಿನಿಮಾ ಮಾಡಿದ್ದಾರೆ.

'ಸೆಕ್ಸ್-ಗಾಡ್-ಟ್ರುತ್' ಸಿನಿಮಾ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ರಾಮ್ ಗೋಪಾಲ್ ವರ್ಮಾ ತನ್ನ ನೆಚ್ಚಿನ ನೀಲಿ ಚಿತ್ರ ತಾರೆ ಮಿಯಾ ಮಾಲ್ಕೊವಾ ರ ಜೊತೆ ಮತ್ತೆ ಸಿನಿಮಾ ನಿರ್ಮಿಸಿದ್ದಾರೆ.

ಮತ್ತೆ ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ ರಾಮ್ ಗೋಪಾಲ್ ವರ್ಮಾ!

'ಕ್ಲೈಮ್ಯಾಕ್ಸ್‌' ಹೆಸರಿನ ಈ ಸಿನಿಮಾ ಸಂಪೂರ್ಣ ನೀಲಿ ಚಿತ್ರ ಅಲ್ಲದಿದ್ದರೂ ಸಹ ಸಾಕಷ್ಟು ಬಿಸಿ-ಬಿಸಿ ದೃಶ್ಯಗಳಿರುವುದು ಟ್ರೇಲರ್‌ನಲ್ಲಿ ಗೊತ್ತಾಗುತ್ತಿದೆ. ಇಂದಷ್ಟೆ ಟ್ರೇಲರ್ ಇಡುಗಡೆ ಆಗಿದ್ದು, ಈ ಟ್ರೇಲರ್ ಲಾಕ್‌ಡೌನ್ ಸಮಯದ ಗಿಫ್ಟ್ ಎಂದಿದ್ದಾರೆ ರಾಮ್‌ ಗೋಪಾಲ್ ವರ್ಮಾ.

   
 
ಹೆಲ್ತ್