Back
Home » ಸಿನಿ ಸಮಾಚಾರ
ಸಿನಿಮಾ ಪ್ರಿಯರಿಗೆ ಸಂತಸದ ಸುದ್ದಿ ನೀಡಿದ ಪುನೀತ್ ರಾಜ್ ಕುಮಾರ್
Oneindia | 15th May, 2020 12:42 PM
 • ಪಿಆರ್‌ಕೆಯ ಎರಡು ಚಿತ್ರಗಳು

  ಪುನೀತ್ ಮತ್ತು ಅವರ ಪತ್ನಿ ಅಶ್ವಿನಿ ನಿರ್ಮಾಣದ ಎರಡು ಸಿನಿಮಾಗಳು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿವೆ ಎಂದು ಹೇಳಲಾಗಿತ್ತು. ಅದೀಗ ಅಧಿಕೃತಗೊಂಡಿದ್ದು, ಪಿಆರ್‌ಕೆ ಪ್ರೊಡಕ್ಷನ್ಸ್‌ನ 'ಲಾ' ಮತ್ತು 'ಫ್ರೆಂಚ್‌ ಬಿರಿಯಾನಿ' ಚಿತ್ರಗಳು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದ್ದು, ಅವುಗಳ ದಿನಾಂಕ ಘೋಷಿಸಲಾಗಿದೆ.


 • ಜೂನ್‌ನಲ್ಲಿ 'ಲಾ' ಚಿತ್ರ

  ರಘು ಸಮರ್ಥ ಚಿತ್ರಕಥೆ ಬರೆದು ನಿರ್ದೇಶಿಸಿದ 'ಲಾ' ಚಿತ್ರವು ಜೂನ್ 26ರಂದು ಅಮೆಜಾನ್ ಪ್ರೈಮ್ ಮೂಲಕ ಜಗತ್ತಿನಾದ್ಯಂತ ತೆರೆ ಕಾಣುತ್ತಿದೆ. ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಮೊದಲ ಬಾರಿಗೆ ನಟಿಸಿರುವ ಚಿತ್ರವಿದು. ಸಿರಿ ಪ್ರಹ್ಲಾದ್ ಮತ್ತು ಮುಖ್ಯಮಂತ್ರಿ ಚಂದ್ರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


 • ಫ್ರೆಂಚ್ ಬಿರಿಯಾನಿ ಬಿಡುಗಡೆ

  ಪನ್ನಗಾಭರಣ ನಿರ್ದೇಶನದ 'ಫ್ರೆಂಚ್ ಬಿರಿಯಾನಿ' ಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ಜುಲೈ 24ರಂದು ಬಿಡುಗಡೆಯಾಗಲಿದೆ ಎಂದು ಪಿಆರ್‌ಕೆ ಪ್ರೊಡಕ್ಷನ್ಸ್ ತಿಳಿಸಿದೆ. 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಖ್ಯಾತಿಯ ದಾನಿಶ್ ಸೇಠ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಾಲ್ ಯೂಸುಫ್ ಹಾಗೂ ಪಿತೋಬಷ್ ಕೂಡ ತಾರಾಬಳಗದಲ್ಲಿದ್ದಾರೆ. ಅವಿನಾಶ್ ಬಾಳೆಕೇಳ ಕಥೆ ಬರೆದಿದ್ದಾರೆ. ಅಶ್ವಿನಿ, ಪುನೀತ್ ರಾಜ್ ಕುಮಾರ್ ಮತ್ತು ಗುರುದತ್ ಎ ತಲ್ವಾರ್ ನಿರ್ಮಿಸಿದ್ದಾರೆ.


 • ಕಾನೂನು ಹೋರಾಟದ ಲಾ

  'ಲಾ' ಚಿತ್ರದ ಒಟಿಟಿ ಬಿಡುಗಡೆ ಕುರಿತು ಮಾಹಿತಿ ನೀಡಿರುವ ಪಿಆರ್‌ಕೆ ಪ್ರೊಡಕ್ಷನ್ಸ್, 'ತನಗಾಗಿ ಹೋರಾಟ ಮಾಡುವುದಕ್ಕೆ ಆಕೆಯನ್ನು 'ಲಾ' (ಕಾನೂನು) ಕೂಡ ತಡೆಯಲಾರದು' ಎಂಬ ಒಕ್ಕಣೆ ನೀಡಿದೆ. ಈ ಸಾಲು ನಾಯಕಿಯ ಕಾನೂನು ಹೋರಾಟದ ಕಥೆಯ ಸುಳಿವು ನೀಡುತ್ತದೆ.


 • ದಾನಿಶ್ ಸೇಠ್ ಮತ್ತು ಆಟೋ

  'ಫ್ರೆಂಚ್ ಬಿರಿಯಾನಿ' ಚಿತ್ರದ ಪೋಸ್ಟರ್ ಗಮನ ಸೆಳೆಯುವಂತಿದ್ದು, ಆಟೋ ಚಾಲಕನಾಗಿ ನಾಯಕ ದಾನಿಶ್ ಸೇಠ್ ಕಾಣಿಸಿಕೊಂಡಿದ್ದಾರೆ. ಸೂಟು ಬೂಟು ಹಾಕಿಕೊಂಡ ವ್ಯಕ್ತಿ ಆಟೋವನ್ನು ತಳ್ಳುತ್ತಿರುವ ಪೋಸ್ಟರ್ ಚಿತ್ರದಲ್ಲಿ ವಿಭಿನ್ನ ಹಾಗೂ ಕಚಗುಳಿ ಇರಿಸುವ ಕಥೆ ಇದೆ ಎಂಬುದನ್ನು ಸೂಚಿಸುತ್ತದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. 'ಕವಲುದಾರಿ' ಮತ್ತು 'ಮಾಯಾಬಜಾರ್' ಅವರ ನಿರ್ಮಾಣ ಸಂಸ್ಥೆಯ ಕಾಣಿಕೆಗಳಾಗಿದ್ದವು. ಅದರ ಬೆನ್ನಲ್ಲೇ ಪುನೀತ್ ಮತ್ತೆರಡು ಚಿತ್ರಗಳನ್ನು ನಿರ್ಮಿಸಿದ್ದು, ಅವುಗಳ ಬಿಡುಗಡೆಗೆ ವೇದಿಕೆ ಸಿದ್ಧವಾಗಿವೆ.

ಗಾಡ್ ಫಾದರ್ ಗಳಿಗೇ ಗಾಡ್ ಫಾದರ್ ಮುತ್ತಪ್ಪ ರೈ | Muthappa Rai | Ram Gopa Varma

ಇದುವರೆಗೆ ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್‌ನಲ್ಲಿ ಹೊಸ ನಿರ್ದೇಶಕರು, ಕಲಾವಿದರಿಗಾಗಿ ಸಿನಿಮಾ ನಿರ್ಮಿಸುತ್ತಿದ್ದ ಪುನೀತ್ ಈಗ ತಾವೇ ತಮ್ಮ ನಿರ್ಮಾಣದಲ್ಲಿ ನಟಿಸುತ್ತಿದ್ದಾರೆ. 'ರಾಮಾ ರಾಮಾ ರೇ' ಖ್ಯಾತಿಯ ನಿರ್ದೇಶಕ ಡಿ. ಸತ್ಯಪ್ರಕಾಶ್ ನಿರ್ದೇಶನದ ಫ್ಯಾಂಟಸಿ ಕಥೆಯೊಂದರ ಚಿತ್ರದಲ್ಲಿ ಪುನೀತ್ ನಟಿಸುತ್ತಿದ್ದಾರೆ. ಈ ನಡುವೆ ಪುನೀತ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ಹೊಸ ಸುದ್ದಿ ಬಂದಿದೆ. ಮುಂದೆ ಓದಿ..

ಸಿಕ್ಸ್ ಪ್ಯಾಕ್ ಅಲ್ಲ, ಫ್ಯಾಮಿಲಿ ಪ್ಯಾಕ್ ಮಾಡುತ್ತಿದ್ದಾರೆ ಪವರ್ ಸ್ಟಾರ್ ಪುನೀತ್

   
 
ಹೆಲ್ತ್