Back
Home » ಸಿನಿ ಸಮಾಚಾರ
ಇದು ಸರ್ಕಾರಕ್ಕೆ ಅಸಾಧ್ಯವೇ?: ಸವಾಲು ಹಾಕಿದ ರಿಯಲ್ ಸ್ಟಾರ್ ಉಪೇಂದ್ರ
Oneindia | 15th May, 2020 05:45 PM
 • ದಾಖಲೆ ಸಂಗ್ರಹ ಮಾಡಿ

  ಸರ್ಕಾರದ ಹತ್ತಿರ (ಬಿಪಿಎಲ್, ರಸ್ತೆ ಬದಿಯ ವ್ಯಾಪಾರಸ್ಥರು, ಕಟ್ಟಡ, ವಲಸೆ ಕೂಲಿ ಕಾರ್ಮಿಕರು, ವಿಕಲಾಂಗಚೇತನರು, ವಯೋವೃದ್ದರು, ಆಟೋ-ಕ್ಯಾಬ್ ಇತರೆ ಎಲ್ಲ ವರ್ಗದ ಜನರ ಡೇಟಾ (ಹೆಸರು, ಫೋಟೋ, ವಿಳಾಸ, ಅವಲಂಬಿತರು ಮುಂತಾದ ಸಂಪೂರ್ಣ ಮಾಹಿತಿಗಳು) ಪಾರದರ್ಶಕವಾಗಿ ಆಯಾ ಸೂಕ್ಷ್ಮ (micro) ಸಮಯ, ಪ್ರದೇಶಾವಾರು ಸಂಗ್ರಹಿಸಿ ಆಯಾ ಪ್ರದೇಶದಲ್ಲಿ ಅವನ್ನು ಪ್ರಕಟಿಸಿ ಅದರ ಸರಿ ತಪ್ಪು ಜನಾಭಿಪ್ರಾಯವನ್ನು ಪಡೆದು ಸರಿಪಡಿಸಿ ಇಟ್ಟುಕೊಂಡು ಅವರಿಗೆ ಒಂದು ಐಡಿ ಕಾರ್ಡ್ ಕೊಡಬೇಕು ಎಂದು ಉಪ್ಪಿ ಹೇಳಿದ್ದಾರೆ.

  ಮತ್ತೆ ತೆಲುಗಿನತ್ತ ಹೊರಟ ಉಪೇಂದ್ರ: ಇದೇ ನೋಡಿ ಮುಂದಿನ ಸಿನಿಮಾ


 • ಸತ್ಯ, ಸುಳ್ಳು ಗೊತ್ತಾಗಬೇಕಲ್ಲವೇ?

  ಅವರವರಿಗೆ ತಲುಪಬೇಕಾದ ಅಗತ್ಯತೆಗಳು, ಸಹಾಯ (ಕರೋನಾ ವೈರಸ್ ಸೋಂಕು) ಇಂತಹ ಸಂದರ್ಭದಲ್ಲಿ ದೃಶ್ಯ-ದಾಖಲೆಗಳೊಂದಿಗೆ ಮಾಡಿದರೆ ಚುನಾವಣೆಯ ಸಮಯದಲ್ಲಿ ಈ ದಾಖಲೆಗಳೇ ನಿಮ್ಮನ್ನು ಮತ್ತೆ ಜನರು ಆರಿಸುವಂತೆ ಮಾಡುವುದು.. ಇಷ್ಟು ವರ್ಷ ದೇಶವನ್ನಾಳಿದ ರಾಜಕೀಯ ಪಕ್ಷಗಳು ನಾವು ಅದು ಮಾಡಿದ್ದೀವಿ ಇದು ಮಾಡಿದ್ದೀವಿ ಅಂತಾರೆ. ಆದರೆ ಅದು ಸತ್ಯಾನೋ ಸುಳ್ಳೊ ಅಂತ ಜನಕ್ಕೆ ಗೊತ್ತಾಗಬೇಕು ಅಲ್ಲವೇ ?

  ಮಾಧ್ಯಮಗಳಲ್ಲಿ ಕೂಗಾಟ, ಕಿರುಚಾಟ, ಕೆಸರೆರಚಾಟ, ಹಣ ಹಂಚುವುದು ಇಂತಹವುಗಳು ಬೇಕಾಗುವುದಿಲ್ಲ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.


 • ರಾಜಕೀಯ ಬೆಂಬಲಿಗರು ಉತ್ತರಿಸಬೇಕು

  ಸರಿ ಸುಮಾರು 40% ಜನರ ತೆರಿಗೆ ಹಣದಲ್ಲಿ ಸಂಬಳ, ಭತ್ಯೆಗಳನ್ನೆಲ್ಲಾ ಪಡೆಯುವ ದೊಡ್ಡ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರಕ್ಕೆ ಇದು ಅಸಾಧ್ಯವೇ ? ರಾಜಕೀಯ ಬೆಂಬಲಿಗರು ಇದಕ್ಕೆ ಉತ್ತರಿಸಬೇಕು ಎಂದು ಉಪೇಂದ್ರ ಹೇಳಿದ್ದಾರೆ.


 • ಸನಾತನ ಜ್ಞಾನ ಮತ್ತು ತಂತ್ರಜ್ಞಾನ

  ಈಗಿನ ಕರೋನ ಸಮಸ್ಯೆಯಿಂದ ಈಗ ಮತ್ತು ಮುಂದೆ ಆಗುವ ನಿರುದ್ಯೊಗ, ಆರ್ಥಿಕ ಸಮಸ್ಯೆಯನ್ನು ಮೆಟ್ಟಿನಿಂತು ಮುಂದೆ ಬರಲು ಜನರು ಇನ್ನು ಮುಂದೆ ನಮ್ಮ ದೇಶದ ಮೂಲ ಮತ್ತು ಸನಾತನ ಜ್ಞಾನ ಮತ್ತು ಇಂದಿನ ತಂತ್ರಜ್ಞಾನ ಎರಡನ್ನು ಸೂಕ್ತವಾಗಿ ಬಳಸಿ ವಿಭಿನ್ನ ದಾರಿಯಲ್ಲಿ ಸಾಗಲೇಬೇಕಿದೆ ಎಂದು ಉಪೇಂದ್ರ ಇತ್ತೀಚೆಗೆ ತಿಳಿಸಿದ್ದರು.
ಸಿನಿಮಾ ಜತೆಗೆ ರಾಜಕೀಯ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿರುವ ಉಪೇಂದ್ರ, ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಗೆ ಸಲಹೆ ನೀಡುತ್ತಾ, ರಾಜಕಾರಣಿಗಳ ನಿರ್ಧಾರಗಳ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುತ್ತಾ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಾ ಇರುತ್ತಾರೆ.

ಗಾಡ್ ಫಾದರ್ ಗಳಿಗೇ ಗಾಡ್ ಫಾದರ್ ಮುತ್ತಪ್ಪ ರೈ | Muthappa Rai | Ram Gopa Varma

ಜನಸಾಮಾನ್ಯರ ದಾಖಲಾತಿಗಳನ್ನು ಸಂಗ್ರಹಿಸುವಂತೆ ಸರ್ಕಾರಕ್ಕೆ ಸಲಹೆಯೊಂದನ್ನು ನೀಡಿರುವ ಅವರು, ರಾಜಕೀಯ ಪಕ್ಷಗಳ ಬೆಂಬಲಿಗರಿಗೆ ಪ್ರಶ್ನೆಯನ್ನೂ ಹಾಕಿದ್ದಾರೆ. ಎಲ್ಲ ರೀತಿ ಜನಸಾಮಾನ್ಯರ ವಿವರಗಳನ್ನು ಸಂಗ್ರಹಿಸಿ ಅವುಗಳನ್ನು ಪಾರದರ್ಶಕವಾಗಿ ಪ್ರಕಟಿಸಿ. ಜನಾಭಿಪ್ರಾಯ ಪಡೆದು ಅವರಿಗೆ ಐಡಿ ಕಾರ್ಡ್ ನೀಡಿ. ಇಂತಹ ಸಂದರ್ಭದಲ್ಲಿ ಅವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವಂತಹ ಸಹಾಯ ಮಾಡಿ ಎಂದು ಹೇಳಿದ್ದಾರೆ. ಮುಂದೆ ಓದಿ...

   
 
ಹೆಲ್ತ್