Back
Home » ಪ್ರವಾಸ
ಪ್ರವಾಸಿ ಉದ್ಯಮದ ಭವಿಷ್ಯದ ಸ್ಥಿತಿಯು ಹೇಗಿರಬಹುದು?
Native Planet | 19th May, 2020 09:00 AM
 • ನೈರ್ಮಲ್ಯ ಮತ್ತು ನಿರ್ಮಲತೆಯ ಬಗ್ಗೆ ಬಹಳಷ್ಟು ತಿಳಿಸಲಾಗುವುದು

  ತಮ್ಮಲ್ಲಿಗೆ ಬರುವ ಅತಿಥಿಗಳ ಅಥವಾ ಗ್ರಾಹಕರ ಹಿತಕ್ಕಾಗಿ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಎಲ್ಲಾ ಸರಪಳಿಗಳು ಅಂದರೆ ರೆಸಾರ್ಟ್ ಗಳು, ಕ್ರೂಸ್, ವಿಮಾನಯಾನ ಸಂಸ್ಥೆಗಳು,. ರಜಾ ದಿನಗಳಿಗೆ ಬಾಡಿಗೆ ಕೊಡಲಾಗುವ ಲಾಡ್ಜ್ ಗಳು ಅಥವಾ ಹೋಟೇಲುಗಳಾಗಲಿ ಸ್ವಚ್ಚತೆಯ ವಿಧಾನಗಳಲ್ಲಿ ಬದಲಾವಣೆ ತರಬೇಕಾಗುತ್ತದೆ.

  ಅದಕ್ಕಿಂತ ಹೆಚ್ಚಾಗಿ ಈ ಸ್ಥಳಗಳಲ್ಲಿಯ ಆವರಣಗಳು ಮತ್ತು ಸುತ್ತ ಮುತ್ತ ಎಷ್ಟು ಸ್ವಚ್ಚವಾಗಿವೆ ಎಂಬುದನ್ನು ಸಾಬೀತು ಪಡಿಸುವ ಮಾರ್ಗವನ್ನೂ ಜಾರಿಗೊಳಿಸಬೇಕಾಗುತ್ತದೆ. ಇವುಗಳಲ್ಲಿ ಅದು ಹ್ಯಾಂಡ್ ಸ್ಯಾನಿಟೈಜರ್‌ಗಳು ಅಥವಾ ಮಾಸ್ಕ್ ಗಳು ಅಥವಾ ಪದೇ ಪದೇ ಸ್ವಚ್ಚಗೊಳಿಸುವುದು ಮುಂತಾವುಗಳು ಒಳಗೊಂಡಿದೆ. ಹಾಗೂ ಗ್ರಾಹಕರನ್ನು ಸುರಕ್ಷಿತವಾಗಿಡಲು ಕೆಲವು ಸ್ಪಷ್ಟವಾದ ಕಟ್ಟುಪಾಡುಗಳು ಮತ್ತು ಕ್ರಮಗಳನ್ನು ಅನುಸರಿಸುವುದು ಅತೀ ಅವಶ್ಯಕವಾಗಿರುತ್ತವೆ. .


 • ವಿಮಾನ ಸಂಸ್ಥೆಗಳು ಮತ್ತು ಕ್ರೂಸ್ ಗಳ ದರವು ಕಡಿಮೆ ಆಗುತ್ತದೆ.

  ವಿಮಾನಯಾನ ಸಂಸ್ಥೆಗಳು ಮತ್ತು ಕ್ರೂಸ್ ಮಾರ್ಗಗಳು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುವುದರಿಂದ ಪ್ರವಾಸಿಗರು ಮತ್ತು ಪ್ರಯಾಣಿಕರಿಗೆ ಎಟಕುವ ದರದಲ್ಲಿ ಇರಲಿದೆ. ಹೊಸ ಗ್ರಾಹಕರನ್ನು ಆಕರ್ಷಿಸುವುದು ವಿಮಾನಯಾನ ಮತ್ತು ಕ್ರೂಸ್ ಮಾರ್ಗಗಳಿಗೆ ಒಂದು ಸವಾಲಾಗಿ ಉಳಿಯುತ್ತದೆ.

  ಏಕೆಂದರೆ, ಜಗತ್ತು ಈ ಎರಡರ ಮೂಲಕ ಸಂಪರ್ಕವನ್ನು ಹೊಂದುವುದರಿಂದ ಮತ್ತು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವೈರಸ್‌ನ ಹರಡುವ ಸಾಧ್ಯತೆಯೂ ಇವೆ ಎಂಬುದು ಕೂಡ ಸತ್ಯ. ಈ ಆಲೋಚನೆ ಜನಸಾಮಾನ್ಯರ ಮನಸ್ಸಿನಲ್ಲಿ ಹಾದುಹೋಗುತ್ತದೆ. ಆದುದರಿಂದ, ಈ ಸಾರಿಗೆ ಸಾಧನಗಳು ಆರಂಭದಲ್ಲಿ ಹಿನ್ನಡೆಯಲ್ಲಿ ಕಾರ್ಯನಿರ್ವಹಿಸ ಬೇಕಾಗಬಹುದು.


 • ಪ್ರಯಾಣಿಕರು ರಜಾ ಬಾಡಿಗೆಗಿಂತ ಹೋಟೇಲು ಅಥವಾ ರೆಸಾರ್ಟ್ಸ್ ಗಳಿಗೆ ಹೆಚ್ಚಿನ ಆದ್ಯತೆ ನೀಡಬಹುದು

  ಈ ಸಾಂಕ್ರಾಮಿಕವು ಏರ್ಬನ್ಬಿ ಮತ್ತು ಇತರ ರಜಾ ಬಾಡಿಗೆ ತಾಣಗಳಂತಹ ಪರ್ಯಾಯ ಕೋಣೆಯ ಆಯ್ಕೆಗಳ ಸುಗಮ ಚಾಲನೆಯಲ್ಲಿ ಅನಿಶ್ಚಿತತೆಯನ್ನು ಉಂಟುಮಾಡುತ್ತದೆ. ಏಕೆಂದರೆ, ಇದರ ಆವರಣಗಳು ನಿಯಂತ್ರಿತ ನಿಖರವಾದ ಶುಚಿತ್ವವನ್ನು ಕಾಪಾಡುವಲ್ಲಿ ಅಸಫಲವಾಗಬಹುದು. ಪ್ರಯಾಣಿಕರು ಮತ್ತು ಪ್ರವಾಸಿಗರು ಸುರಕ್ಷಿತ ನಿಯಮಾವಳಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ, ಆದುದರಿಂದ ಇದು ಹೋಟೆಲ್ ಉದ್ಯಮದ ಮೊದಲ ಆದ್ಯತೆಯಾಗಿದೆ.


 • ವ್ಯಾಪಾರ ಪ್ರವಾಸವು ವಿಮಾನ ಸಂಸ್ಥೆಗಳ ಚೇತರಿಕೆಗೆ ಕಾರಣವಾಗಬಹುದು

  ಹಲವಾರು ಕಂಪೆನಿಗಳು ಮತ್ತೆ ಎಂದಿನಂತೆ ತಮ್ಮ ಕೆಲಸವನ್ನು ಪ್ರಾರಂಭಿಸಿದಾಗ ವ್ಯವಹಾರಗಳು ಸಾಮಾನ್ಯವಾಗಿ ಎಂದಿನಂತೆ ಆಗಬಹುದು. ಅಂದರೆ ಪ್ರಯಾಣವು ಕೂಡಾ ಇದರಿಂದಾಗಿ ಸಾಮಾನ್ಯ ಸ್ಥಿತಿಗೆ ಮರಳುವುದರಿಂದ ಇದು ವಿಮಾನ ಸಂಸ್ಥೆಗಳ ಚೇತರಿಕೆಗೆ ಕಾರಣವಾಗಬಹುದು.

  ಲಾಕ್‌ಡೌನ್ ವರ್ಚುವಲ್ (ಆನ್ ಲೈನ್ ಗಳ ) ಸಭೆಗಳ ಮೂಲಕ ಅದ ನಿಜವಾದ ಉಪಯೋಗವನ್ನು ಜನರಿಗೆ ತಿಳಿಯಪಡಿಸುತ್ತದೆ. ಆದರೂ ನಮ್ಮಂತಹ ಸಾಮಾಜಿಕ ಜೀವಿಗಳು ನಾವು ಪರಸ್ಪರನ್ನು ಭೇಟಿ ಮಾಡಿ ಸಂಚಾರದ ಕ್ರಿಯೆಯನ್ನು ಹೆಚ್ಚು ಇಷ್ಟ ಪಡುವವರಾಗಿದ್ದರಿಂದ ಈ ಬೆಳವಣಿಗೆಯು ವಿಮಾನ ಪ್ರಯಾಣವನ್ನು ಮತ್ತಷ್ಟು ಬೆಂಬಲಿಸಬಹುದು ಏಕೆಂದರೆ ಜನರು ಎಂದಿನಂತೆ ಕೆಲಸ-ಜೀವನಕ್ಕೆ ಮರಳಲು ಇವುಗಳು ಅವಕಾಶಗಳನ್ನು ಸೃಷ್ಟಿಸುತ್ತದೆ


 • ಉತ್ತಮವಾದ ಸ್ಥಿರತೆಯು ಒಂದು ಸಂಭಾವ್ಯ ಫಲಿತಾಂಶವಾಗಿದೆ.

  ಈ ಸಾಂಕ್ರಾಮಿಕ ರೋಗವು ಬರುವ ಮೊದಲು ನಮ್ಮ ಮನಸ್ಸಿನಲ್ಲಿ ಪ್ರಮುಖವಾಗಿ ಉಳಿಯುವ ವಿಷಯವೆಂದರೆ ಭವಿಷ್ಯದಲ್ಲಿ ನಾವು ಸಕಾರಾತ್ಮಕವಾಗಿ ಸಾಧಿಸುವುದು. ಕೋವಿಡ್ -19 ಹರಡುವ ಮೊದಲು ಹೆಚ್ಚು ಜಾಗತಿಕವಾಗಿ ಹರಿಯಲ್ಪಟ್ಟ ಮತ್ತು ಪ್ರಚಲಿತದಲ್ಲಿದ್ದ ಪ್ರಯಾಣ ವಿಷಯಗಳಲ್ಲಿ ಒಂದಾಗಿದ್ದ ವಿಷಯವೆಂದರೆ ಅದು ಸುಸ್ಥಿರತೆ.

  ಇದು ನೈಜ ಜಗತ್ತಿನಲ್ಲಿ ಹೆಚ್ಚು ಪರಿಣಾಮ ಬೀರುವ ಬದಲಾವಣೆಗಳಲ್ಲಿ ಒಂದಾಗಿದೆ. ಇದರಿಂದಾಗಿ ನಾವು ಹೆಚ್ಚು ಜವಾಬ್ದಾರಿಯುತರಾಗಿರಲು ಪ್ರೇರೇಪಿಸುತ್ತದೆ. ಅಲ್ಲದೆ, ಈ ಸಮಸ್ಯೆಯು ಕೊನೆಗೊಳ್ಳುವ ಸಮಯದಲ್ಲಿ ನಮ್ಮ ಪರಿಸರವನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕೆನ್ನುವ ನೈತಿಕತೆಯ ಬಗ್ಗೆ ನಮಗೆ ಮಾರ್ಗದರ್ಶನ ನೀಡುತ್ತದೆ.
ಕೋವಿಡ್ -19 ಮಹಾಮಾರಿಯ ಕಾರಣದಿಂದಾಗಿ ವಿಶ್ವದಾದ್ಯಂತ ಎಲ್ಲಾ ವ್ಯಾಪಾರ ಕ್ಷೇತ್ರಗಳಿಗೆ ಅಗ್ನಿಪರೀಕ್ಷೆಯ ಸಮಯವಾಗಿದ್ದು ಎಲ್ಲಾ ಕಡೆ ವ್ಯಾಪಾರದಲ್ಲಿ ಭಾರೀ ಏರುಪೇರು ಉಂಟಾಗಿದೆ.

ಜಾಗತಿಕ ಮಟ್ಟದಲ್ಲಿ ಲಾಕ್ ಡೌನ್ ಮಾಡಲಾಗಿರುವುದರಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಅಸ್ಥಿರತೆ ಉಂಟಾಗಿದೆ. ಅದರಲ್ಲೂ ಲಾಕ್ ಡೌನ್ ನಿಂದ ಪ್ರವಾಸೋದ್ಯಮದ ಮೇಲೆ ಹೆಚ್ಚಿನ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಇದರಿಂದಾಗಿ ಉದ್ಯಮಗಳು ಹಿಂದೆ ಬೀಳುವುದನ್ನು ಊಹಿಸುವುದೂ ಕಷ್ಟಕರವಾಗಿದೆ. ಆದರೂ ಹಲವಾರು ಅರ್ಥಶಾಸ್ತ್ರಜ್ಞರು ಆಶಾವಾದಿಗಳಾಗಿದ್ದು, ಪ್ರವಾಸೋದ್ಯಮಗಳು ಮತ್ತೆ ತಮ್ಮ ಗರಿಗೆದರುತ್ತವೆ ಎಂದು ನಂಬಿದ್ದಾರೆ.

ಇದಕ್ಕೆ ಪೂರಕವಾಗಿ ಪ್ರಯಾಣದ ವಿವಿಧ ವಲಯಗಳು ಕೆಲವು ಅಂಶಗಳನ್ನು ಮರು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ಮತ್ತು, ಕೋವಿಡ್ -19 ರ ನಂತರದ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪ್ರಯಾಣಿಸುವುದು ಎಷ್ಟು ಸುರಕ್ಷಿತವೆಂದು ಜನರನ್ನು ನಂಬಿಸುವ ಮತ್ತು ಮನವೊಲಿಸುವ ಅಗತ್ಯವಿದೆ.

ಹೌದು ಈ ಸಾಂಕ್ರಾಮಿಕ ರೋಗವು ಹೇಗೆ ಎಲ್ಲಿ ಯಾವಾಗ ಹೇಗೆ ಹರಡಬಹುದು ಎಂಬುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಒಮ್ಮೆ ಇದರ ಪ್ರಭಾವವು ಕಡಿಮೆ ಆದಲ್ಲಿ ಪ್ರವಾಸೋದ್ಯಮವು ಹಿಂದೆಂದಿಗಿಂತಲೂ ಅಭಿವೃದ್ದಿ ಹೊಂದುತ್ತದೆ ಎಂದು ಹೇಳಲಾಗುತ್ತದೆ.

ಈ ಲೇಖನದಲ್ಲಿ ಭವಿಷ್ಯದಲ್ಲಿ ಪ್ರವಾಸೋದ್ಯಮವು ಹೇಗೆ ಅಭಿವೃದ್ದಿಯನ್ನು ಹೊಂದುತ್ತದೆ ಎಂಬುದರ ಕುರಿತು ತಿಳಿಸುವ ಪ್ರಯತ್ನವನ್ನು ಮಾಡಿದ್ದೇವೆ ಹಾಗೂ ಒಮ್ಮೆ ಈ ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರ ಕೆಲವು ಮುಖ್ಯ ವಿಷಯಗಳನ್ನು ಪ್ರಯಾಣಿಕರು ಹೇಗೆ ಅನುಸರಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಹೋಟೇಲು ಮತ್ತು ರೆಸಾರ್ಟ್ ಗಳ ಕೊಠಡಿಗಳ ದರಗಳು ಗಮನಾರ್ಹವಾಗಿ ಕೆಳಗಿಳಿಯುತ್ತವೆ. ಪ್ರವಾಸಿಗರು ಮತ್ತು ಗ್ರಾಹಕರನ್ನು ಆಕರ್ಷಿಸಲು ದರಗಳು ನಿಸ್ಸಂದೇಹವಾಗಿಯೂ ಇಳಿಯುತ್ತದೆ. 2009ರಲ್ಲಿನ ಆರ್ಥಿಕ ಕುಸಿತದ ಸಮಯದಲ್ಲಿ, ಹೋಟೆಲ್ ಉದ್ಯಮವು ತನ್ನ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಎರಡು ಪಟ್ಟು ಹೆಚ್ಚು ಸಮಯ ತೆಗೆದುಕೊಂಡಿತು ಎನ್ನುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.

ಈ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಹೋಟೇಲ್ ಉದ್ಯಮಗಳಿಗೆ ಹೆಚ್ಚಿನ ನಷ್ಟ ಉಂಟಾಗಬಹುದು ಅಥವಾ ಪ್ರಸಿದ್ದ ಹೋಟೇಲುಗಳು ಅದೇ ಲೇಬಲ್ ಮತ್ತು ಬ್ರಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮ ವ್ಯವಹಾರವನ್ನು ಬೇರೆಯವರಿಗೆ ವರ್ಗಾಯಿಸಬಹುದು.

   
 
ಹೆಲ್ತ್