Back
Home » ಪ್ರವಾಸ
ಮೇ ತಿಂಗಳಿನಲ್ಲಿ ಭೇಟಿ ಕೊಡಬಹುದಾದಂತಹ ದಕ್ಷಿಣ ಭಾರತದ 14 ಅತ್ಯುತ್ತಮ ತಾಣಗಳು
Native Planet | 20th May, 2020 09:00 AM
 • 1.ಅಂಬೋಲಿ, ಮಹಾರಾಷ್ಟ್ರ

  ಸಹ್ಯಾದ್ರಿ ಬೆಟ್ಟಗಳಲ್ಲಿ ನೆಲೆಸಿರುವ ಕಡಿಮೆ ಪ್ರಚಲಿತದಲ್ಲಿರುವ ಮಹಾರಾಷ್ಟ್ರದ ಸ್ಥಳಗಳಲ್ಲಿ ಅಂಬೋಲಿ ಗಿರಿಧಾಮವೂ ಒಂದು. ಈ ಅಂಬೋಲಿ ಗುಡ್ಡಗಾಡು ಗ್ರಾಮವು ಅಸಾಮಾನ್ಯ ಮಳೆಯನ್ನು ಹೊಂದಿದ್ದು ಮೇ ತಿಂಗಳಲ್ಲಿ ಅನೇಕ ಮತ್ತು ಮಂಜಿನಿಂದ ಕೂಡಿರುವ ಪ್ರದೇಶಗಳನ್ನು ತನ್ನಲ್ಲಿ ಹೊಂದುವುದರಿಂದ ಇದು ಪ್ರವಾಸಿಗರು ಮತ್ತು ಪ್ರಯಾಣಿಕರನ್ನು ಸೆಳೆಯುವ ಪ್ರಮುಖ ಆಕರ್ಷಣೆಯಾಗಿದೆ.


 • 2. ಆಗುಂಬೆ, ಕರ್ನಾಟಕ

  ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯಲ್ಪಡುವ ಆಗುಂಬೆಯು ಅದರ ನಯನ ಮನೋಹರ ಸೌಂದರ್ಯತೆಗೆ ಹೆಸರುವಾಸಿಯಾಗಿದೆ. ಆಗುಂಬೆಯಂತಹ ಮಳೆಯಿಂದ ಕೂಡಿರುವ ಕಾಡು ಪ್ರದೇಶವು ಹಲವಾರು ಅತೀ ಎತ್ತರದ ಜಲಪಾತಗಳನ್ನು ಹೊಂದಿದೆ ಮಾತ್ರವಲ್ಲದೆ ಸಿಂಹ ಬಾಲದ ಮಕಾಕ್ (ಸಿಂಗ್ಲೀಕ) ಹಾರುವ ಹಲ್ಲಿಗಳು, ನಾಗರಹಾವು, ಮತ್ತು ಆಮೆಗಳಂತಹ ವೈವಿದ್ಯಮಯ ವನ್ಯಜೀವಿಗಳನ್ನೂ ಹೊಂದಿದೆ.


 • 3. ತೆನ್ಮಾಲಾ, ಕೇರಳ

  ದಕ್ಷಿಣ ಭಾರತದ ಮೊದಲ ಯೋಜಿತ ಪರಿಸರ-ಪ್ರವಾಸೋದ್ಯಮ ತಾಣವೆಂದು ಪ್ರಸಿದ್ಧವಾಗಿರುವ ಕೊಲ್ಲಂ ಜಿಲ್ಲೆಯ ತೆನ್ಮಲಾ ಪಟ್ಟಣವು ಪರಿಸರ ಪ್ರವಾಸೋದ್ಯಮ ನಡಿಗೆ ಮಾರ್ಗ, ಪರಪ್ಪರ್ ಅಣೆಕಟ್ಟು, ತೂಗು ಸೇತುವೆ ಮತ್ತು ತೆನ್ಮಲಾ ಅಣೆಕಟ್ಟುಗಳಿಗೆ ನೆಲೆಯಾಗಿದೆ. ಆದ್ದರಿಂದ, ಇದು ಕೇರಳದ ಅತ್ಯುತ್ತಮ ವಾಣಿಜ್ಯ ಪರಿಸರ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದೆ.


 • 4. ಮಲ್ಶೇಜ್ ಘಾಟ್ಸ್, ಮಹಾರಾಷ್ಟ್ರ

  ಪೂನಾದ ಪಶ್ಚಿಮ ಘಟ್ಟದ ಪರ್ವತ ಬೆಟ್ಟಗಳಲ್ಲಿ ಮಲ್ಶೇಜ್ ಘಾಟ್ ನೆಲೆಸಿದೆ. ಪರ್ವತದ ಹಾದಿಯು ಅನೇಕ ಜಲಪಾತಗಳು ಮತ್ತು ನೂರಾರು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ವಾಸಸ್ಥಾನವಾಗಿದೆ


 • 5. ಹಾರ್ಸ್ಲೆ ಬೆಟ್ಟಗಳು, ಆಂಧ್ರಪ್ರದೇಶ

  "ಆಂಧ್ರದ ಊಟಿ" ಎಂದು ಕರೆಯಲ್ಪಡುವ ಹಾರ್ಸ್ಲೇ ಬೆಟ್ಟಗಳ ಶ್ರೇಣಿಯು ಮದನಪಲ್ಲಿ ತಾಲೂಕಿನಲ್ಲಿದೆ. ಯೆನುಗು ಮಲ್ಲಮಾ ಕೊಂಡಾವು ಚೆಂಚಸ್ ಮತ್ತು ಯಾನಾದಿಸ್ ಬುಡಕಟ್ಟು ಜನಾಂಗದವರ ವಾಸಸ್ಥಾನವಾಗಿದೆ, ಇದು ಬಿಳಿ-ಬಣ್ಣದ ಶಾಮಾ, ಹಳದಿ ಗಂಟಲಿನ ಬುಲ್ಬುಲ್ ಮತ್ತು ಕಪ್ಪು ಹದ್ದಿನಂತಹ ಕೆಲವು ವಿಚಿತ್ರ ಪ್ರಾಣಿಗಳಿಗೆ ಆಶ್ರಯ ನೀಡಿದೆ.


 • 6. ಊಟಿ ಮತ್ತು ಕೂನೂರ್, ತಮಿಳುನಾಡು

  ಊಟಿ ಮತ್ತು ಕೂನೂರ್ ತಾಣಗಳಲ್ಲಿ ಮೇ ತಿಂಗಳಲ್ಲಿ ಭಾರೀ ಮಳೆಯಾಗುವುದರಿಂದ ಊಟಿಯೂ ಮಳೆಗಾಲದಲ್ಲು ಅತ್ಯಂತ ಸುಂದರವಾಗಿ ಕಾಣುತ್ತದೆ. ದಕ್ಷಿಣ ಭಾರತದ ಇಂತಹ ಹವಾಮಾನವು ನಿಜವಾಗಿಯೂ ಸಂತೋಷವನ್ನು ನೀಡುತ್ತದೆ ಅಲ್ಲದೆ ನೀವು ನಿಮ್ಮ ಕುಟುಂಬದೊಂದಿಗೆ ನಿಜವಾಗಿಯೂ ಉತ್ತಮ ಸಮಯವನ್ನು ಇಲ್ಲಿ ಕಳೆಯಬಹುದಾಗಿದೆ.


 • 7.ಭಂಡಾರ್ ದಾರಾ, ಮಹಾರಾಷ್ಟ್ರ

  ಭಂಡಾರ್ ದಾರಾ ಗ್ರಾಮವು ಅಹಮ್ಮದ್ ನಗರ ಜಿಲ್ಲೆಯಲ್ಲಿದ್ದು ಇದು ವಿಲ್ಸನ್ ಅಣೆಕಟ್ಟು , ರಾಂಧಾ ಜಲಪಾತ ಮತ್ತು ಅರ್ತೂರ್ ಸರೋವರ ಪ್ರದೇಶಗಳಿಗೆ ನೆಲೆಯಾಗಿದ್ದು ಇವು ಇಲ್ಲಿಯ ಕೆಲವು ಪ್ರವಾಸಿ ಆಕರ್ಷಣೆಗಳಾಗಿವೆ. ಈ ಸ್ಥಳವು ಅತೀ ಸುಂದರವಾದ ಮತ್ತು ಪ್ರಸಿದ್ದ ಸಂಧಾನ್ ಕಣಿವೆಗಳಿಗೆ ಮತ್ತು ಮಹಾರಾಷ್ಟ್ರದ ಅತ್ಯಂತ ಶ್ರೇಷ್ಠ ಶಿಖರವಾದ ಕಲ್ಸುಬೈ ಪರ್ವತಗಳಿಗೆ ನೆಲೆಯಾಗಿದೆ.


 • 8. ಕೂರ್ಗ್, ಕರ್ನಾಟಕ

  ಕೂರ್ಗ್ ಇದು ಕೊಡಗು ಎಂದೂ ಕರೆಯಲ್ಪಡುತ್ತದೆ. ಈ ಸ್ಥಳವು ಬೇಸಿಗೆ ಮತ್ತು ಮಳೆಗಾಲ ಎರಡೂ ಸಮಯದಲ್ಲೂ ಅತ್ಯಂತ ಸೂಕ್ತವಾಗಿರುತ್ತದೆ. ಈ ಸುಂದರವಾದ ಕೊಡಗು ಜಿಲ್ಲೆಯು ದಕ್ಷಿಣ ಭಾರತದ ಮೇ ತಿಂಗಳಿನಲ್ಲಿ ಮಾತ್ರವಲ್ಲದೆ ವರ್ಷದ ಬೇರೆ ಸಮಯಗಳಲ್ಲಿಯೂ ಭೇಟಿ ಕೊಡಲ್ಪಡುವ ಅತ್ಯಂತ ಪ್ರಸಿದ್ದ ಸ್ಥಳಗಳಲ್ಲೊಂದಾಗಿದೆ.


 • 9. ಮಾಥೆರಾನ್, ಮಹಾರಾಷ್ಟ್ರ

  ದಕ್ಷಿಣ ಭಾರತದಲ್ಲಿ ಭೇಟಿ ನೀಡಬಹುದಾದಂತಹ ಅತ್ಯಂತ ಉತ್ತಮವಾದ ಸ್ಥಳಗಳಲ್ಲಿ ಮಾಥರಾನ್ ಕೂಡಾ ಒಂದು. ಈ ಸ್ಥಳವು ಮುಂಬೈ ಮತ್ತು ಪೂನದ ಜನರಿಗೆ ವಾರಾಂತ್ಯಗಳನ್ನು ಕಳೆಯಲು ಸೂಕ್ತವಾದ ಸ್ಥಳವಾಗಿದೆ. ಮಾಥೆರನ್ ಗಿರಿಧಾಮಕ್ಕೆ ಒಂದು ದಿನದೊಳಗೆ ಪ್ರವಾಸ ಮಾಡಬಹುದು ಮತ್ತು ಇದಕ್ಕೆ ನಿರಂತರವಾಗಿ ಈ ಸಮಯದಲ್ಲಿ ಭೇಟಿ ನೀಡಲಾಗುತ್ತದೆ.


 • 10.ಮುನ್ನಾರ್ , ಕೇರಳ

  ಮಳೆಗಾಲದಲ್ಲಿ ಎಲ್ಲಾ ಜಲಾಶಯಗಳು, ಜಲಪಾತಗಳು ಮತ್ತು ಇತರ ಜಲಮೂಲಗಳು ತುಂಬಿ ಕೇರಳದ ಅತೀ ಬೇಸಿಗೆಯನ್ನು ಹೊಡೆದೋಡಿಸಿ ಈ ಸ್ಥಳವನ್ನು ಮೋಡಿಮಾಡುವಂತೆ ಕಾಣಲು ಈ ಋತುವು ಒಂದು ಕಾರಣವಾಗಿದೆ. ಮುನ್ನಾರ್ ಮಳೆಗಾಲದಲ್ಲಿ ಮಾಂತ್ರಿಕ ಮೋಡಿಗೊಳಗಾಗುತ್ತದೆ ಮತ್ತು ಪ್ರಶಾಂತವಾದ ವಿಹಾರಕ್ಕೆ ಉತ್ತಮ ಅವಕಾಶವನ್ನು ನೀಡುತ್ತದೆ.


 • 11.ಚಿಕ್ಕಮಗಳೂರು, ಕರ್ನಾಟಕ

  ಮುಳ್ಳಯ್ಯನಗಿರಿ ಪರ್ವತ ತಪ್ಪಲಿನಲ್ಲಿರುವ ಸುಂದರ ನಿಧಿ ಎನಿಸಿರುವ ಚಿಕ್ಕಮಗಳೂರು,ಕರ್ನಾಟಕ ರಾಜ್ಯದ ಕಾಫಿ ಧಾಮವೆಂದು ಕರೆಯಲ್ಪಡುತ್ತದೆ. ಈ ಜಿಲ್ಲೆಯು ಸುಂದರವಾದ ಸ್ಥಳಗಳು ಮತ್ತು ಹತ್ತಿರದ ಗಿರಿಧಾಮಗಳಾದ ಕುದುರೆಮುಖ, ಮುಳ್ಳಯ್ಯನಗಿರಿ, ಮೂಡಿಗೆರೆ, ಕೊಪ್ಪ, ಕಳಸ, ಶ್ರೃಂಗೇರಿ ಮತ್ತು ಬಾಳೆಹೊನ್ನೂರು ಮುಂತಾದವುಗಳನ್ನು ಒಳಗೊಂಡಿದ್ದು ಇವು ಮೇ ತಿಂಗಳುಗಳಲ್ಲಿ ಭೇಟಿಗೆ ಯೋಗ್ಯವಾದ ಒಂದು ಪ್ರಮುಖವಾದ ಪ್ರವಾಸಿ ಆಕರ್ಷಣೆ ಎನಿಸಿದೆ.


 • 12. ವಯನಾಡ್- ಕಲ್ಪೆಟ್ಟ, ಕೇರಳ

  ವಯನಾಡ್ ಕೇರಳದ ಅಸಾಮಾನ್ಯ ಮಾನ್ಸೂನ್ ಪ್ರವಾಸಿ ತಾಣವಾಗಿದೆ ಮತ್ತು ಇದು ಬಂಡೀಪುರ, ನಾಗರಹೊಳೆ ಮತ್ತು ಮುತಂಗದಂತಹ ವನ್ಯಜೀವಿ ಅಭಯಾರಣ್ಯಗಳಿಂದ ಕೂಡಿದೆ. ಈ ಪ್ರದೇಶವು ಬನಾಸುರ ಸಾಗರ್ ಅಣೆಕಟ್ಟು, ವಯನಾಡ್ ವನ್ಯಜೀವಿ ಅಭಯಾರಣ್ಯ ಮತ್ತು ಪೈನ್ ಅರಣ್ಯಗಳಿಗೂ ನೆಲೆಯಾಗಿದೆ.


 • 13. ಕೊಡೈಕೆನಾಲ್, ತಮಿಳುನಾಡು

  ಕೊಡೈಕೆನಾಲ್ ತಮಿಳುನಾಡಿನ ಅತ್ಯಂತ ಪ್ರಸಿದ್ದ ಪ್ರವಾಸಿ ತಾಣವಾಗಿದ್ದು ಇದು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಗಿರಿಧಾಮವಾಗಿದೆ. ಕೊಡೈಕೆನಾಲ್ ನ ಪ್ರಮುಖ ಆಕರ್ಷಣೆಗಳಲ್ಲಿ ಹಲವಾರು ಸುಂದರ ಕೃತಕ ಸರೋವರಗಳು, ನೈಸರ್ಗಿಕ ಆಕರ್ಷಣೆಗಳು, ಮತ್ತು ಮಧುಚಂದ್ರಕ್ಕೆ ಹೋಗುವವರಿಗಾಗಿ ರೋಮ್ಯಾಂಟಿಕ್ ತಾಣಗಳನ್ನೂ ಒಳಗೊಂಡಿದೆ.


 • 14. ನೆಲ್ಲಿಯಂಪತಿ, ಕೇರಳ

  ಕಾಫಿ ಮತ್ತು ಚಹಾ ತೋಟಗಳಿಂದ ಸುತ್ತುವರೆದಿರುವ ನೆಲ್ಲಿಯಂಪತಿ ಗಿರಿಧಾಮವು ಸೀತಾರ್ ಕುಂಡು ವ್ಯೂಪಾಯಿಂಟ್ ಮತ್ತು ಕೇಶವಂ ಪರಾ ವ್ಯೂಪಾಯಿಂಟ್ ಗೆ ಹೆಸರುವಾಸಿಯಾಗಿದೆ. ಮೋಡಗಳಿಗೆ ಚುಂಬಿಸುವಂತೆ ಕಾಣುವ ಶಿಖರಗಳಗಳನ್ನು ತನ್ನಲ್ಲಿ ಹೊಂದಿರುವ ನೆಲ್ಲಿಯಂಪತಿಯು ಕೇರಳದ ಪ್ರವಾಸಿಗರಿಗೆ ಅತ್ಯಂತ ಪ್ರೀಯವಾದ ರಜಾ ತಾಣವಾಗಿದೆ.
ಕರೋನವೈರಸ್ ಸಾಂಕ್ರಾಮಿಕ ರೋಗವು ಹೇಗೆ ಮತ್ತು ಎಲ್ಲಿಯವರೆಗೆ ಇರುತ್ತದೆ ಎಂದು ನಮಗೆ ತಿಳಿದಿಲ್ಲ. ಆದರೆ ಬೇಸಿಗೆ ಮುಗಿಯುವುದರ ಒಳಗೆ ಜನರು ತಮ್ಮ ಸಾಮಾನ್ಯ ಜೀವನವನ್ನು ಮುಂದುವರಿಸಬಹುದು, ಎಂದಿನಂತೆ ಕೆಲಸ ಮಾಡಬಹುದು ಮತ್ತು ಲಾಕ್‌ಡೌನ್ ಗೆ ಮೊದಲು ಪ್ರವಾಸ ಮಾಡಿದಂತೆ ಪ್ರಯಾಣಿಸಬಹುದು ಎಂದು ನಾವು ಭಾವಿಸುತ್ತೇವೆ.ಆದ್ದರಿಂದ, ನೀವು ನಮ್ಮಂತೆಯೇ ಭರವಸೆ ಹೊಂದಿದವರಾಗಿದ್ದಲ್ಲಿ, ಪ್ರವಾಸವನ್ನು ಯೋಜಿಸಲು ವಿಳಂಬ ಮಾಡಬೇಡಿ ಏಕೆಂದರೆ ದಕ್ಷಿಣ ಭಾರತದಲ್ಲಿ ಮೇ ತಿಂಗಳಲ್ಲಿ ನೀವು ಭೇಟಿ ನೀಡಲು ಬಯಸುವ ಅನೇಕ ಸ್ಥಳಗಳಿವೆ.

ಈ ಮೇ ತಿಂಗಳಿನಲ್ಲಿ ಭೇಟಿ ನೀಡಲು ನಾವು 14 ಅತ್ಯುತ್ತಮ ಮತ್ತು ಕೆಲವು ವಿಶಿಷ್ಟ ದಕ್ಷಿಣ ಭಾರತದ ತಾಣಗಳನ್ನು ಸಂಗ್ರಹಿಸಿದ್ದೇವೆ.

   
 
ಹೆಲ್ತ್