Back
Home » ಇತ್ತೀಚಿನ
ಭಾರೀ ದೊಡ್ಡ ಶಬ್ದಕ್ಕೆ ಬೆಂಗಳೂರು ಗಢಗಢ!
Gizbot | 20th May, 2020 03:02 PM
  • ವೈಟ್‌ಫೀಲ್ಡ್‌, ಸರ್ಜಾಪುರ

    ಬೆಂಗಳೂರಿನ ಇಂಟರ್ನ್ಯಾಷನಲ್ ಏರ್‌ಪೋರ್ಟ್‌, ವೈಟ್‌ಫೀಲ್ಡ್‌, ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ, ಟಿನ್‌ಫ್ಯಾಕ್ಟರಿ, ಹೆಬ್ಬಗೋಡಿ, ಕಲ್ಯಾಣ ನಗರ, ಎಂ.ಜಿ.ರೋಡ್‌, ಮಾರತ್‌ಹಳ್ಳಿ, ಜೆ.ಪಿ ನಗರ, ಬನ್ನೇರುಘಟ್ಟ ರಸ್ತೆ, ಸೇರಿದಂತೆ ಹಲವು ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಶಬ್ಧ ಕೇಳಿ ಬಂದಿರುವ ಬಗ್ಗೆ ವರದಿಗಳಾಗಿವೆ.


  • ರಿಕ್ಟರ್‌ ಮಾಪಕ

    ಬೆಂಗಳೂರಿಗರಲ್ಲಿ ಆತಂಕ ಸೃಷ್ಠಿಸಿರುವ ಆ ಶಬ್ಧ ಎಲ್ಲಿಂದ ಬಂತು ಎಂಬುದುಕ್ಕೆ ಇನ್ನು ಸ್ಪಷ್ಟತೆಯಿಲ್ಲ. ಆದರೆ ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ಬಗ್ಗೆ ಯಾವುದೇ ಮಾಹಿತಿ ದಾಖಲಾಗಿಲ್ಲ. ಹೀಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ. ಆಂಫಾನ್‌ ಚಂಡಮಾರುತದಿಂದ ಈ ರೀತಿಯ ಸದ್ದು ಕೇಳಿರಬಹುದು ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.


  • ಟ್ವಿಟ್ಟರ್

    ಇನ್ನು ಈ ಅಚ್ಚರಿ ಸೌಂಡ್ ಬಗ್ಗೆ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಜೆಟ್‌ ವಿಮಾನದ ಶಬ್ಧ ಇರಬಹುದು ಅಂತಾ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಶಬ್ಧ ಹೆಚ್‌ಎಎಲ್‌ಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದೆ. ಈ ಶಬ್ಧ ಕೇಳಿ ಇನ್ನು ಕೆಲವರು ಭೂಕಂಪದ ಅನುಭವ ಅಂದಿದ್ದಾರೆ, ಚಂಡಮಾರುತದ ಪರಿಣಾಮದಿಂದ ಹೀಗಾಗಿದೆ ಎಂದಿದ್ದಾರೆ.




ಬೆಂಗಳೂರು ನಗರದ ಹಲವೆಡೆ ಇಂದು ಮಧ್ಯಾಹ್ನ 1.25ರ ಸುಮಾರಿಗೆ ಭಾರೀ ದೊಡ್ಡ ಪ್ರಮಾಣದಲ್ಲಿ ಶಬ್ಧವೊಂದು ಕೇಳಿಬಂದಿದ್ದು, ಬೆಂಗಳೂರಿಗರಲ್ಲಿ ಭಾರೀ ಗಾಬರಿ ಉಂಟುಮಾಡಿದೆ. ಬೆಂಗಳೂರಿನಲ್ಲಿ ಕೇಳಿಸಿರುವ ಈ ಭಾರೀ ದೊಡ್ಡ ಶಬ್ಧದಿಂದಾಗಿ ಜನರು ಅಚ್ಚರಿಗೊಂಡಿದ್ದು, ಆದರೆ ಯಾವುದೇ ಹಾನಿ ಸಂಭವಿಸಿಲ್ಲ.

   
 
ಹೆಲ್ತ್