Back
Home » ಇತ್ತೀಚಿನ
ಐಫೋನ್ 12 ಸರಣಿ ಬಿಡುಗಡೆ ಸಜ್ಜು; ವಿಶೇಷ ಫೀಚರ್ಸ್‌!
Gizbot | 22nd May, 2020 09:00 AM
  • ಆಪಲ್ ಸಂಸ್ಥೆ

    ಹೌದು, ಆಪಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 12 ಸರಣಿ ಫೋನ್‌ಗಳನ್ನು ಇದೇ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನು ಈ ಐಫೋನ್ 12 ಸರಣಿಯು ಮೂರು ವೇರಿಯಂಟ್‌ಗಳನ್ನು ಹೊಂದಿರಲಿದೆ. ಅವುಗಳು ಕ್ರಮವಾಗಿ ಐಫೋನ್ 12, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಹೆಸರಿನಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗ್ತಿದೆ. ಹಾಗಾದರೆ ಯಾವೆಲ್ಲಾ ಫೀಚರ್ಸ್‌ಗಳಿರಲಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.


  • ಐಫೋನ್ 12 ಪ್ರೊ

    ಐಫೋನ್ 12, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಈ ಮೂರು ಐಫೋನ್‌ಗಳಲ್ಲಿ ಒಂದು ನಾಚ್ ಲೆಸ್‌ ಮಾದರಿಯ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ. ಗೇಮಿಂಗ್, ಫೋಟೊ ಪ್ರೊಸೆಸಿಂಗ್, ವಿಡಿಯೊ ರೆಂಡರಿಂಗ್ ಕೆಲಸಗಳ ವೇಗ ಹೆಚ್ಚಿಸುವ ಸಲುವಾಗಿ ಆಪಲ್ ಐಫೋನ್ 12 ಸರಣಿಯಲ್ಲಿ ಅಧಿಕ RAM ಸಾಮರ್ಥ್ಯ ಒದಗಿಸುವ ಸಾಧ್ಯತೆಗಳಿದೆ. ಹೀಗಾಗಿ ಹೊಸ ಸರಣಿಯು 6GB RAM ಯಿಂದ 12GB RAM ಸಾಮರ್ಥ್ಯದವರೆಗೂ ವೇರಿಯಂಟ್ ಆಯ್ಕೆಗಳನ್ನು ಹೊಂದಿರಲಿವೆ ಎನ್ನಲಾಗಿದೆ.


  • ಐಫೋನ್ 12

    ಇನ್ನು ಐಫೋನ್ 12 ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಫೋನ್‌ಗಳು 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿವೆ. ಹಾಗೆಯೇ ಐಫೋನ್ 12 ಪ್ರೊ 6.1 ಇಂಚಿನ ಗಾತ್ರದಲ್ಲಿರಲಿದೆ ಎಂದು UBS ಅನಾಲಿಟಿಕ್ಸ್‌ ತಂಡ ತಿಳಿಸಿದೆ. ಹಾಗೆಯೇ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಗುಣಮಮಟ್ಟ ಉನ್ನತವಾಗಿರಲಿದ್ದು, ಫೋನ್ ಡಿಸೈನ್ ಆಕರ್ಷಕವಾಗಿರುವ ಜೊತೆಗೆ ಆಯತಾಕಾರದ ಡಿಸ್‌ಪ್ಲೇ ಇರಲಿದ್ದು, ಚೌಕಾಕಾರದ ಕರ್ವ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.


  • ಐಫೋನ್ ಅಗತ್ಯ ಫೀಚರ್ಸ್‌

    ಉಳಿದಂತೆ ಐಫೋನ್ 12 ಫೋನ್‌ ಮೊದಲ ಬಾರಿ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಪರಿಚಯಿಸುವ ಸಾಧ್ಯತೆಗಳ ಅಧಿಕ ಎನ್ನಲಾಗಿದೆ. ಸಿಮ್‌ ಟ್ರೇ, ವ್ಯಾಲ್ಯೂಮ್ ಬಟನ್, ಪವರ್ ಬಟನ್‌ಗಳು ಫೋನ್ ಫ್ರೇಮ್‌ನ ಬಾಹ್ಯವಾಗಿ ರಚನೆ ಪಡೆದಿವೆ. ಹಾಗೆಯೇ ಐಫೋನ್ ಅಗತ್ಯ ಫೀಚರ್ಸ್‌ಗಳು ಸಹ ಇರಲಿವೆ.




ಆಪಲ್ ಸಂಸ್ಥೆಯು ಇತ್ತೀಚಿನ ಐಫೋನ್ 11 ಸರಣಿ ಫೋನ್‌ಗಳು ಹಲವು ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಮುಖ್ಯವಾಗಿ ಕ್ಯಾಮೆರಾ ರಚನೆ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿದೆ. ಅದರ ಮುಂದುವರಿದ ಭಾಗವಾಗಿ ಸಂಸ್ಥೆಯು ಇದೀಗ ಐಫೋನ್ 12 ಸರಣಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇನ್ನು ಆಪಲ್ ಐಫೋನ್‌ 12 ಸರಣಿ ಫೋನ್‌ಗಳು ಅಕ್ಟೋಬರ್ ನಲ್ಲಿ ಲಾಂಚ್ ಆಗಲಿವೆ ಎನ್ನಲಾಗುತ್ತಿದೆ. ಹಾಗೂ ಈ ಸರಣಿಯ ಫೋನ್‌ಗಳು ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

   
 
ಹೆಲ್ತ್