Back
Home » ಇತ್ತೀಚಿನ
ವಾಟ್ಸಪ್‌ ಸ್ಟೇಟಸ್‌ ಅವಧಿ ಈಗ ಮತ್ತೆ 30 ಸೆಕೆಂಡ್‌ಗೆ ಏರಿಕೆ!
Gizbot | 22nd May, 2020 01:00 PM
 • ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌

  ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌ ಮೆಸೆಜಿಂಗ್ ಆಪ್ ಈಗ ವಿಡಿಯೊ ಸ್ಟೇಟಸ್‌ ಸಮಯ ಮಿತಿಯನ್ನು ಮತ್ತೆ 30 ಸೆಕೆಂಡ್‌ಗಳಿಗೆ ಪರಿಷ್ಕರಿಸಲಿದೆ. ಈ ಬಗ್ಗೆ ವಾಟ್ಸಪ್ WABetainfo ತಾಣದಲ್ಲಿ ಮಾಹಿತಿ ನೀಡಿದೆ. ಆಂಡ್ರಾಯ್ಡ್ ಬೀಟಾ v2.20.166 ಆವೃತ್ತಿಯಲ್ಲಿ ವಾಟ್ಸಪ್‌ ಸ್ಟೇಟಸ್‌ ಇಡುವ ಸಮಯ ಮಿತಿ ಮತ್ತೆ 30 ಸೆಕೆಂಡ್‌ ಯತಾಸ್ಥಿತಿಗೆ ತಂದಿದೆ. ಈ ಮೂಲಕ ವಾಟ್ಸಪ್ ಸ್ಟೇಟಸ್‌ ಪ್ರಿಯರಿಗೆ ಸಂತಸ ನೀಡಿದೆ.


 • 30 ಸೆಕೆಂಡ್‌

  ವಾಟ್ಸಪ್ ಸ್ಟೇಟಸ್‌ ಅವಧಿ ಮತ್ತೆ 30 ಸೆಕೆಂಡ್‌ ಮಾಡಿದ್ದು, ಹೀಗಾಗಿ ಬಳಕೆದಾರರು ವಿಡಿಯೊಗಳನ್ನು ಮೊದಲಿನಂತೆ 30 ಸೆಕೆಂಡ್‌ಗೆ ಇಡಬಹುದಾಗಿದೆ. ವಾಟ್ಸಪ್ ವಿಡಿಯೊ ಸ್ಟೇಟಸ್‌ ಅನ್ನು 15 ಸೆಕೆಂಡ್‌ಗೆ ಇಳಿಸಿದಾಗ, 30 ಸೆಕೆಂಡ್‌ ಅವಧಿಯ ವಿಡಿಯೊವನ್ನು 15 ಸೆಕೆಂಡ್‌ನ ಎರಡು ಭಾಗಗಳಾಗಿ ಹಾಕಿಕೊಳ್ಳುತ್ತಿದ್ದರು. ಆದರೆ ಇದೀಗ ಆ ಸಮಸ್ಯೆ ಇಲ್ಲವಾಗಿದೆ. ನೇರವಾಗಿ 30 ಸೆಕೆಂಡ್‌ ವಿಡಿಯೊ ಸ್ಟೇಟಸ್ ಹಾಕಬಹುದಾಗಿದೆ.


 • ವಾಟ್ಸಪ್ ಸ್ಟೇಟಸ್‌

  ವಾಟ್ಸಪ್‌ ಸ್ಟೇಟಸ್‌ ಆಯ್ಕೆಯಲ್ಲಿ ಬಳಕೆದಾರರು ವಿಡಿಯೊ, ಜಿಐಎಫ್, ಫೋಟೊ ಹಾಕಬಹುದಾಗಿದೆ. ಒಮ್ಮೆ ಸ್ಟೇಟಸ್‌ ಹಾಕಿದರೇ ಅದು 24 ಗಂಟೆಗಳ ಕಾಲಾವಧಿ ಇರಲಿದ್ದು ಬಳಿಕ ಆಟೋಮ್ಯಾಟಿಕ್ ಆಗಿ ಡೀಲಿಟ್ ಆಗುತ್ತದೆ. ಸಂಸ್ಥೆಯು ಇತ್ತೀಚಿಗೆ ವಾಟ್ಸಪ್‌ 'ಸ್ಟೇಟಸ್' ಫೀಚರ್‌ನಲ್ಲಿ ಬದಲಾವಣೆ ತಂದಿದ್ದು, ವಾಟ್ಸಪ್‌ ಸ್ಟೇಟಸ್‌ ಅನ್ನು ನೇರವಾಗಿ ಫೇಸ್‌ಬುಕ್‌ ಒಡೆತನದ ಯಾವುದೇ ಸಾಮಾಜಿಕ ಆಪ್‌ ಖಾತೆಗೆ ಶೇರ್‌ ಮಾಡಬಹುದಾಗಿದೆ.


 • ವಾಟ್ಸಪ್‌ನಲ್ಲಿ ವಿಡಿಯೊ ಸ್ಟೇಟಸ್‌ ಶೇರ್‌ ಮಾಡಲು ಹೀಗೆ ಮಾಡಿ

  * ವಾಟ್ಸಪ್‌ ಆಪ್ ತೆರೆಯಿರಿ

  * ಚಾಟ್ಸ್‌ ಪಕ್ಕದ ಸ್ಟೇಟಸ್‌ ಒತ್ತಿರಿ. ನಂತರ ಮೈ ಸ್ಟೇಟಸ್‌ ಆಯ್ಕೆ ಕ್ಲಿಕ್ ಮಾಡಿ .

  * ಆ ನಂತರ ಕ್ಯಾಮೆರಾ ಐಕಾನ್ ಕ್ಲಿಕ್ ಮಾಡಿ.


 • ವಿಡಿಯೊ ಫೈಲ್

  * ಸ್ಟೇಟಸ್‌ ಇಡಲು ಫೋನ್ ಗ್ಯಾಲರಿಯ ವಿಡಿಯೊ ಫೈಲ್ ಆಯ್ಕೆಮಾಡಿ.

  * ಆಗ ನಿಮ್ಮ ವಿಡಿಯೊವನ್ನು ಹೊಸ ಮಿತಿ 30 ಸೆಕೆಂಡುಗಳಿಗೆ ಸೆಟ್‌ ಮಾಡಿ

  * ನಂತರ ಸೆಂಡ್ ಬಟನ್ ಕ್ಲಿಕ್ ಮಾಡಿ.
ಡೆಡ್ಲಿ ಕೊರೊನಾ ವೈರಸ್‌ ವಕ್ಕರಿಸಿ ಬಹುತೇಕ ಎಲ್ಲ ವಲಯಗಳಿಗೂ ಪೆಟ್ಟು ನೀಡಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳು ಹೊರತಾಗಿಲ್ಲ. ಕೊರೊನಾ ಲಾಕ್‌ಡೌನ್‌ ಪರಿಣಾಮದಿಂದಾಗಿ ಎಲ್ಲರೂ ಮನೆಯಲ್ಲಿದ್ದು, ಇಂಟರ್ನೆಟ್‌ ಹಾಗೂ ವಾಟ್ಸಪ್‌ ಬಳಕೆ ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ಸರ್ವರ್‌ಗೆ ಉಂಡಾಗುವ ಒತ್ತಡ ತಗ್ಗಿಸುವ ಕಾರಣಕ್ಕಾಗಿ ವಾಟ್ಸಪ್‌ ತನ್ನ ಸ್ಟೇಟಸ್‌ ಆಯ್ಕೆಯನ್ನು 30 ಸೆಕೆಂಡ್‌ನಿಂದ 15 ಸೆಕೆಂಡ್‌ಗೆ ಇಳಿಕೆ ಮಾಡಿತ್ತು. ಆದ್ರೀಗ ವಾಟ್ಸಪ್‌ ತನ್ನ ಬಳಕೆದಾರರಿಗೆ ಖುಷಿ ವಿಷಯ ನೀಡಿದೆ.

   
 
ಹೆಲ್ತ್