Back
Home » Business
ರೆಪೊ ದರ ಇಳಿಕೆ: ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ ಕಡಿತ ಯಾರಿಗೆಲ್ಲಾ ಅನ್ವಯ?
Good Returns | 23rd May, 2020 09:28 AM
 • ಯಾರಿಗೆಲ್ಲಾ ಅನ್ವಯಿಸುತ್ತದೆ?

  ರೆಪೊ ದರ ಕಡಿತವಾದಾಗ ಬ್ಯಾಂಕ್‌ಗಳು ಹೊಸತಾಗಿ ಸಂಗ್ರಹಿಸುವ ಫಿಕ್ಸೆಡ್‌ ಡಿಪಾಸಿಟ್‌ಗಳ ಮೇಲೆ ಈ ನೂತನ ಬಡ್ಡಿ ದರ ಕಡಿತ ಮಾಡುತ್ತವೆ. ಹಳೆಯ ಠೇವಣಿಗಳಿಗೆ ಅವಧಿ ಮುಕ್ತಾಯವಾಗುವ ತನಕ ಹಳೆಯ ದರವೇ ಚಾಲ್ತಿಯಲ್ಲಿರುತ್ತದೆ. ಉದಾಹರಣೆಗೆ ನೀವು ಐದು ವರ್ಷಗಳ ಕಾಲ ಅಥವಾ ಮೂರು ವರ್ಷಗಳ ಕಾಲ ಯಾವುದಾದರೂ ನಿಗದಿತ ಬಡ್ಡಿ ದರಕ್ಕೆ ಠೇವಣಿ ಇಟ್ಟಿದ್ದರೆ ಅದರ ಅವಧಿ ಮುಕ್ತಾಯದವರೆಗೂ ನೀವು ಆಯ್ಕೆ ಮಾಡಿಕೊಂಡಿದ್ದ ಬಡ್ಡಿ ದರವೇ ಅನ್ವಯಿಸುತ್ತದೆ. ಆದರೆ ಹೊಸ ಎಫ್‌ಡಿಗಳ ಬಡ್ಡಿ ದರಗಳು ಕಡಿತಗೊಳ್ಳುತ್ತವೆ.

  ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಕಡಿತಗೊಳಿಸಲು ಫಿಕ್ಸೆಡ್‌ ಡಿಪಾಸಿಟ್‌ಗಳ ಮೂಲಕ ಸಿಗುವ ನಿಧಿಯನ್ನು ಸಾಮಾನ್ಯವಾಗಿ ಸುಲಭವಾಗಿ ಬಳಸುತ್ತವೆ. ಇದರ ಜತೆಗೆ ಆರ್‌ಬಿಐನಿಂದ ರೆಪೊ ದರದಲ್ಲಿ ಸಿಗುವ ನಿಧಿಯನ್ನೂ ಬಳಸುತ್ತವೆ.


 • ಹಾಗಿದ್ದರೆ ಹಿರಿಯ ನಾಗರಿಕರು ಎಲ್ಲಿ ಎಫ್‌ಡಿ ಮಾಡಿದರೆ ಒಳಿತು?

  ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿ ಕಡಿಮೆ ಆಗದಂತೆ ಕೆಲವು ಬ್ಯಾಂಕ್‌ಗಳು ಪ್ರತ್ಯೇಕ ಯೋಜನೆ ಹೊಂದಿವೆ. ಇದರ ಲಾಭ ಪಡೆಯಬಹುದು. ಹಿರಿಯ ನಾಗರಿಕರು ಎಲ್‌ಐಸಿಒ ನಿರ್ವಹಿಸುವ 'ಪ್ರಧಾನಮಂತ್ರಿ ವಯ ವಂದನ' ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದರಲ್ಲಿ 7.4 ಪರ್ಸೆಂಟ್‌ರಷ್ಟು ಬಡ್ಡಿ ದರವಿದೆ. ಇದೇ ರೀತಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಹೆಚ್ಚು ಬಡ್ಡಿ ಅನ್ವಯಿಸುವ ಕಡೆಯಲ್ಲಿ ಎಫ್‌ಡಿ ಮಾಡುವುದು ಸೂಕ್ತ.

  ಪ್ರಧಾನ ಮಂತ್ರಿ ವಯ ವಂದನ ಯೋಜನೆ ವಿಸ್ತರಣೆ: ಬಡ್ಡಿ ದರ ಇಳಿಕೆ


 • ಅಂಚೆ ಇಲಾಖೆಯಲ್ಲೂ ಉತ್ತಮ ಎಫ್‌ಡಿ ಬಡ್ಡಿದರ ಸಿಗುತ್ತದೆ

  ಸದ್ಯದ ಪರಿಸ್ಥಿತಿಯಲ್ಲಿ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳೇ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರ ನೀಡುತ್ತವೆ. 5 ವರ್ಷ ಅವಧಿಯ ಉಳಿತಾಯ ಠೇವಣಿಗೆ 6.7 ಪರ್ಸೆಂಟ್‌ ಬಡ್ಡಿ ದೊರೆಯುತ್ತದೆ.


 • ಮೂರು ತಿಂಗಳು ಇಎಂಐ ವಿನಾಯಿತಿ

  ಎಲ್ಲಾ ಅವಧಿ ಸಾಲಗಳ ಇಎಂಐ ಮರು ಪಾವತಿಯ ಅವಧಿಯನ್ನು ಜೂನ್‌ 1ರಿಂದ ಆಗಸ್ಟ್‌ 31ಕ್ಕೆ ಮುಂದೂಡಿದೆ. ಈ ಹಿಂದೆ ಮಾರ್ಚ್‌ನಿಂದ ಮೇವರೆಗೂ ಇಎಂಐ ವಿನಾಯಿತಿ ನೀಡಲಾಗಿತ್ತು.
  ಕೊರೊನಾ ಸಂಕಟದ ಕಾರಣ ಸಾಲದ ಇಎಂಐ ಕಟ್ಟಲು ಕಷ್ಟ ಎಂಬ ಕಾರಣದಿಂದ ಮತ್ತೆ ಆಗಸ್ಟ್‌ ತನಕ ಮುಂದೂಡಲಾಗಿದೆ. ಆದರೆ, ಆರ್ಥಿಕ ತಜ್ಞರ ಪ್ರಕಾರ ಕೈನಲ್ಲಿ ಹಣವಿದ್ದರೆ ಇಎಂಐ ಪಾವತಿ ಮಾಡುವುದೇ ಸೂಕ್ತ. ಏಕೆಂದರೆ ಬಡ್ಡಿ ಹೆಚ್ಚುತ್ತಾ ಹೋದರೆ ಆರ್ಥಿಕ ಹೊರೆ ಹೆಚ್ಚು.
ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ (ಮೇ 22) ರೆಪೊ ದರವನ್ನು 4.4 ಪರ್ಸೆಂಟ್‌ನಿಂದ 4 ಪರ್ಸೆಂಟ್‌ಗೆ ಇಳಿಸಿತು. ಕೋವಿಡ್-19 ಪ್ರಭಾವದಿಂದ ಆಗಿರುವ ಆರ್ಥಿಕ ಹಾನಿಗೆ ಪುನಶ್ಚೇತನ ನೀಡುವ ಕೆಲಸವನ್ನು ಆರ್‌ಬಿಐ ಮಾಡುತ್ತಿದೆ.

ರೆಪೊ ದರವನ್ನು ಈ ಹಿಂದೆ ಮಾರ್ಚ್‌ನಲ್ಲೂ ಕಡಿತಗೊಳಿಸಲಾಗಿತ್ತು. ಇದೀಗ ಎರಡನೇ ಬಾರಿಗೆ ಆರ್‌ಬಿಐ ರೆಪೋ ದರ ಕಡಿತದಿಂದಾಗಿ ಗೃಹಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲಗಳ ಇಎಂಐ ಇಳಿಕೆಯಾಗಲಿದೆ. ಆದರೆ, ನಿಶ್ಚಿತ ಠೇವಣಿಗಳ(ಎಫ್‌ಡಿ) ಬಡ್ಡಿ ದರಗಳೂ ಇಳಿಕೆಯಾಗಲಿವೆ. ಇದರಿಂದಾಗಿ ಮುಖ್ಯವಾಗಿ ಹಿರಿಯ ನಾಗರಿಕರಿಗೆ ಮತ್ತು ಪಿಂಚಣಿದಾರರಿಗೆ ಬಡ್ಡಿ ಆದಾಯ ಕಡಿಮೆಯಾಗಲಿರುವುದು ಅವರ ಆತಂಕಕ್ಕೆ ಕಾರಣವಾಗಿದೆ.

 
ಹೆಲ್ತ್