Back
Home » ಇತ್ತೀಚಿನ
ಆಟೋ, ಟ್ಯಾಕ್ಸಿ ಚಾಲಕರು 5000 ರೂ. ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ!
Gizbot | 23rd May, 2020 11:28 AM
 • ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಪರಿಹಾರ

  ಹೌದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಆಟೋ ಮತ್ತು ಟ್ಯಾಕ್ಸಿ ಚಾಲಕರು ಸೇವಾ ಸಿಂಧು ಆಪ್/ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ ಪರಿಹಾರದ ಹಣವನ್ನು ಪಡೆಯಬಹುದು ಎಂದಿದ್ದರು. ಆದ್ರೆ ಅಧಿಕೃತ ಲಿಂಕ್ ನೀಡಿರಲಿಲ್ಲ. ಆದ್ರೆ ಇದೀಗ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಪರಿಹಾರ ಹಣ ಪಡೆಯಲು ಅಧಿಕೃತ ಲಿಂಕ್ ಒದಗಿಸಿದ್ದಾರೆ. ಈ ಲಿಂಕ್ ಬಳಸಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.


 • ಹಂತ 1.

  ಹಂತ 1. ಅಧಿಕೃತ ಸೇವಾ ಸಿಂಧು https://sevasindhu.karnataka.gov.in/ ವೆಬ್‌ಸೈಟ್‌ ತೆರೆಯಿರಿ.


 • ಹಂತ 2.

  ಹಂತ 2. ವೆಬ್‌ಸೈಟ್ ತೆರೆದ ನಂತರ ಸ್ಕ್ರಾಲ್ ಡೌನ್ ಮಾಡಿ ನಿಮಗೆ - ''ಆಟೋರಿಕ್ಷಾ ಚಾಲಕರು/ಟಾಕ್ಸಿ ಚಾಲಕರಿಗೆ ಕೋವಿಡ್-19ರ ಅವಧಿಯಲ್ಲಿ ಪರಿಹಾರ ವಿತರಿಸುವುದು'' ಎನ್ನುವ ಹೆಡ್‌ಲೈನ್ ಕಾಣಿಸುತ್ತದೆ. ಆ ಹೆಡ್‌ಲೈನ್ ಲಿಂಕ್ ಅನ್ನು ಕ್ಲಿಕ್ ಮಾಡಿರಿ


 • ಹಂತ 3.

  ಹಂತ 3. ಲಿಂಕ್ ಒತ್ತಿದ ಬಳಿಕ ಆನ್‌ಲೈನ್‌ನಲ್ಲಿ ಅರ್ಜಿ ತುಂಬುವ ಪುಟ ಕಾಣಿಸುತ್ತದೆ.


 • ಹಂತ 4.

  ಹಂತ 4. ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ- ಆಧಾರ್ ಕಾರ್ಡ್‌ನಲ್ಲಿ ಇರುವಂತೆ ಹೆಸರು ಬರೆಯಿರಿ, ಆಧಾರ್ ಸಂಖ್ಯೆ ನಮೂದಿಸಿ, ಚಾಲ್ತಿ ಇರುವ ಮೊಬೈಲ್ ಸಂಖ್ಯೆ ನೀಡಿ, ವಿಳಾಸ, ಜಿಲ್ಲೆ, ತಾಲೂಕು, ವರ್ಗವನ್ನು ಸರಿಯಾಗಿ ಭರ್ತಿ ಮಾಡಿರಿ.


 • ಹಂತ 5.

  ಹಂತ 5. ಚಾಲನಾ ಅನುಜ್ಞಾ ಪತ್ರ/ ಅರ್ಜಿದಾರರ ಡ್ರೈವಿಂಗ್ ಲೈಸೆನ್ಸ್‌ ವಿವರಗಳನ್ನು ಭರ್ತಿ ಮಾಡುವುದು. ಚಾಲನಾ ಅನುಜ್ಞಾ ಪತ್ರ/ಡ್ರೈವಿಂಗ್ ಲೈಸನ್ಸ್ ಸಂಖ್ಯೆ, ಚಾಲನಾ ಅನುಜ್ಞಾ ಪತ್ರದ ಸಿಂಧುತ್ವ ದಿನಾಂಕ(DL ವ್ಯಾಲಿಡಿಟಿ ದಿನಾಂಕ), ಅರ್ಜಿದಾರರ ಹೆಸರು (DL ಪತ್ರದಲ್ಲಿದ್ದಂತೆ), ಬ್ಯಾಡ್ಜ್ ಸಂಖ್ಯೆ ಮತ್ತು ವಾಹನದ ವರ್ಗ ಮಾಹಿತಿಯನ್ನು ಸಮೂದಿಸುವುದು.


 • ಹಂತ 6.

  ಹಂತ 6. ನಂತರ ಲಾಕ್‌ಡೌನ್‌ಗಿಂತ ಮುನ್ನ ನೀವು (ಅರ್ಜಿದಾರ) ಚಲಾಯಿಸುತ್ತಿದ್ದ ವಾಹನದ ವಿವರಗಳು ಮಾಹಿತಿ ನಮೂದಿಸುವುದು. ವಾಹನದ ನಂಬರ್, ಚಾಸಿಸ್ ನಂಬರ್(ಕೊನೆಯ 5 ಸಂಖ್ಯೆ), RCಯಲ್ಲಿ ಇರುವಂತಹ ಹೆಸರು, ಸಾರಿಗೆ ವಾಹನದ ವರ್ಗ, ವಾಹನದಲ್ಲಿ ಆಸನ ಸಾಮರ್ಥ್ಯ ಮತ್ತು ಅರ್ಹತಾ ಪತ್ರದ ಸಿಂಧುತ್ವ ದಿನಾಂಕದ ಮಾಹಿತಿ ನಮೂದಿಸುವುದು.


 • ಹಂತ 7.

  ಹಂತ 7. ಸ್ವಯಂ ಘೋಷಣೆ- ಆಟೋರಿಕ್ಷಾ ಕ್ಯಾಬ್ / ಟ್ಯಾಕ್ಸಿ ಚಾಲಕನಾದ ನಾನು ಲಾಕ್‌ಡೌನ್‌ ಸಮಯದಲ್ಲಿ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂಡಿರುವುದು ಸತ್ಯವಾಗಿದೆ ಮತ್ತು ಈ ಸಮಯದಲ್ಲಿ ನನ್ನ ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದಿಲ್ಲ ಎಂದು ದೃಢೀಕರಿಸುತ್ತೇನೆ ಎಂದು ಘೋಷಣೆ ಮಾಡುವುದು. (ಈ ಹೇಳಿಕೆಯ ಪಕ್ಕದಲ್ಲಿ ಕಾಣಿಸುವ ಬಾಕ್ಸ್‌ನಲ್ಲಿ ಟಿಕ್ ಮಾರ್ಕ ಮಾಡಿ)


 • ಹಂತ 8.

  ಹಂತ 8. ಅರ್ಜಿ ಪೂರ್ಣ ತುಂಬಿದ ಬಳಿಕ ಕೊನೆಯಲ್ಲಿ ವರ್ಲ್ಡ್‌ ವೇರಿಫಿಕೇಶನ್ ಕಾಣುವ ನಂಬರ್‌ಗಳನ್ನು ಕೆಳಗೆ ನೀಡಿರುವ ಬಾಕ್ಸ್‌ನಲ್ಲಿ ಸರಿಯಾಗಿ ನಮೂದಿಸಿ. ಕೊನೆಯಲ್ಲಿ ಬಲ ಭಾಗದಲ್ಲಿ ಸಬ್‌ಮೀಟ್ ಬಟನ್ ಒತ್ತುವುದು.
ಚೀನಾದಲ್ಲಿ ಜನಿಸಿ ಇಡೀ ವಿಶ್ವಕ್ಕೆ ಕಂಟಕ ತಂದಿರುವ ಕೊರೊನಾ ವೈರಸ್‌ ಭಾರತದಲ್ಲಿ ಹಾವಳಿ ಎಬ್ಬಿಸಿದೆ. ಕೊರೊನಾ ವ್ಯಾಪಕವಾಗಿ ಹರಡದಂತೆ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ್ದು, ಸದ್ಯ ನಾಲ್ಕನೇ ಹಂತದ ಲಾಕ್‌ಡೌನ್‌ ಜಾರಿಯಲ್ಲಿದೆ. ಲಾಕ್‌ಡೌನ್‌ ಪರಿಣಾಮದಿಂದಾಗಿ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಂಕಷ್ಟಕ್ಕೆ ಎದುರಿಸಿದ್ದು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೂ ಲಾಕ್‌ಡೌನ್ ಬಿಸಿ ತಟ್ಟಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದು, ಅರ್ಜಿ ಸಲ್ಲಿಸಿ ಹಣ ಪಡೆಯಬಹುದಾಗಿದೆ.

   
 
ಹೆಲ್ತ್