Back
Home » Car News
ಹೊಸ ಟೊಯೊಟಾ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರ ಬಹಿರಂಗ
DriveSpark | 23rd May, 2020 01:15 PM
 • ಹೊಸ ಟೊಯೊಟಾ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರ ಬಹಿರಂಗ

  ಹೊಸ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರದಿಂದ ವಿನ್ಯಾಸದ ಮಾಹಿತಿಯು ಬಹಿರಂಗವಾಗಿದೆ. ಈ ಪೇಟೆಂಟ್ ಚಿತ್ರದಲ್ಲಿ ಈ ಹೊಸ ಯಾರೀಸ್ ಫೇಸ್‍‍ಲಿಫ್ಟ್ ಪೇರ್ ಹೆಡ್‌ಲೈಟ್‌ಗಳು ಹೊಂದಿದ್ದು, ಇದು ಇತ್ತೀಚಿತ ಕೊರೊಲ್ಲಾ ಮಾದರಿಯಂತಿದೆ. ಮುಂಭಾಗ ಬಂಪರ್ ಅನ್ನು ಸಹ ವಿನ್ಯಾಸ ಗೊಳಿಸಲಾಗುತ್ತಿದೆ. ಇನ್ನು ಫಾಂಗ್ ಲ್ಯಾಂಪ್ ಗಳನ್ನು ಹೊಂದಿರುವ ಸೈಡ್ ಸ್ಕೂಪ್ಗಳನ್ನು ಪಡೆಯುತ್ತದೆ. ಇದಲ್ಲದೆ ಸ್ಟೈಲಿಂಗ್ ಪ್ಯಾಕೇಜ್ ಕೂಡ ವಿಭಿನ್ನವಾಗಿದೆ.


 • ಹೊಸ ಟೊಯೊಟಾ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರ ಬಹಿರಂಗ

  ಈ ಹೊಸ ಕಾರಿನ ಹಿಂಭಾಗವನ್ನು ನವೀಕರಿಸಲಾಗಿದೆ. ಹಿಂಭಾಗದಲ್ಲಿ ಹ್ಯಾಚ್-ಗೇಟ್, ರೇರ್ ವಿಂಡ್ ಷೀಲ್ಡ್ ಮತ್ತು ಟೈಲ್ ಲ್ಯಾಂಪ್ ಕ್ಲಸ್ಟರ್ ಪ್ರಸ್ತುತ ಮಾದರಿಯಂತಿದೆ. ಹಿಂಭಾಗದ ಬಂಪರ್ ಅನ್ನು ಸ್ವಲ್ಪಮಟ್ಟಿಗೆ ನವೀಕರಿಸಲಾಗಿದೆ. ಆದರೆ ಅಧಿಕೃತ ಚಿತ್ರಗಳು ನೋಡಿದ ಬಳಿಕವಷ್ಟೇ ಸರಿಯಾಗಿ ತಿಳಿಯುತ್ತದೆ.

  MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌


 • ಹೊಸ ಟೊಯೊಟಾ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರ ಬಹಿರಂಗ

  ಈ ಕಾರಿನ ಪ್ರೊಫೈಲ್‌ನಲ್ಲಿ ಸಿ-ಪಿಲ್ಲರ್ ಮೇಲೆ ಫ್ಲೋಟಿಂಗ್ ರೂಫ್ ಅನ್ನು ಹೊಂದಿದೆ, ಈ ಕಾರಿನ ಅಲಾಯ್ ವ್ಹೀಲ್ ವಿನ್ಯಾಸವು ಪೇಟೆಂಟ್ ಚಿತ್ರಗಳಲ್ಲಿ ಸರಳವಾಗಿ ಕಾಣುತ್ತದೆ. ಆದರೆ ಇದು ಉತ್ಪಾದನಾ ಮಾದರಿಯಲ್ಲಿ ಬದಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.


 • ಹೊಸ ಟೊಯೊಟಾ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರ ಬಹಿರಂಗ

  ಈ ಹೊಸ ಕಾರಿನ ಇಂಟಿರಿಯರ್ ಚಿತ್ರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಇದು ಒಂದು ಪ್ರಮುಖ ಮಿಡ್-ಲೈಫ್ ಅಪ್‌ಡೇಟ್ ಆಗಿರುವುದರಿಂದ, ಇತರ ಟೊಯೊಟಾ ಮತ್ತು ಲೆಕ್ಸಸ್ ಮಾದರಿಗಳ ಕೆಲವು ಫೀಚರ್ಸ್ ಗಳನ್ನು ಹಂಚಿಕೊಳ್ಳಬಹುದು.

  MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6


 • ಹೊಸ ಟೊಯೊಟಾ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರ ಬಹಿರಂಗ

  ಈ ಹೊಸ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರದ ಹೊರತುಪಡಿಸಿ ಇತರ ಯಾವುದೇ ಮಾಹಿತಿಗಳು ಬಹಿರಂಗಗೊಂಡಿಲ್ಲ. ಶೀಘ್ರದಲ್ಲೇ ಈ ಹೊಸ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಇತರ ಮಾಹಿತಿಗಳು ಬಹಿರಂಗವಾಗಬಹುದು.


 • ಹೊಸ ಟೊಯೊಟಾ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರ ಬಹಿರಂಗ

  ಟೊಯೊಟಾ ಕಂಪನಿಯು ತನ್ನ ಕಾಂಪ್ಯಾಕ್ಟ್ ಎಸ್‍ಯುವಿಯಾದ ಯಾರೀಸ್ ಕ್ರಾಸ್ ಅನ್ನು ಇತ್ತೀಚೆಗೆ ಯುರೋಪಿನ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಯಾರೀಸ್ ಕ್ರಾಸ್ ಯೂರೋಪಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾರೀಸ್ ಹ್ಯಾಚ್‍ಬ್ಯಾಕ್ ಅನ್ನು ಆಧರಿಸಿದೆ. ಹೊಸ ಕಾಂಪ್ಯಾಕ್ಟ್ ಎಸ್‍ಯುವಿ ಕಂಪನಿಯ ಟಿಎನ್‌ಜಿಎ-ಬಿ ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿದೆ.

  MOST READ: ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ


 • ಹೊಸ ಟೊಯೊಟಾ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರ ಬಹಿರಂಗ

  ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ.


 • ಹೊಸ ಟೊಯೊಟಾ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರ ಬಹಿರಂಗ

  ಹೊಸ ಯಾರೀಸ್ ಫೇಸ್‌ಲಿಫ್ಟ್ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಅನಾವರಣಗೊಳಿಸಬಹುದು. ಈ ಹೊಸ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಭಾರತದಲ್ಲಿ ಈ ಕಾರು ಬಿಡುಗಡೆಯಾದರೆ ಹೊಸ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮತ್ತು ಮಾರುತಿ ಸಿಯಾಜ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ ಯಾರೀಸ್ ಫೇಸ್‍‍ಲಿಫ್ಟ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇದೀಗ ಬಿಡುಗಡೆಯಾಗಲಿರುವ ಟೊಯೊಟಾ ಯಾರೀಸ್ ಫೇಸ್‍‍ಲಿಫ್ಟ್ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗವಾಗಿವೆ.

   
 
ಹೆಲ್ತ್