Back
Home » Bike News
ಅನಾವರಣವಾಯ್ತು ಜೇಮ್ಸ್ ಬಾಂಡ್ ಹೊಸ ಬೈಕ್
DriveSpark | 23rd May, 2020 05:00 PM
 • ಅನಾವರಣವಾಯ್ತು ಜೇಮ್ಸ್ ಬಾಂಡ್ ಹೊಸ ಬೈಕ್

  ಈ ಬೈಕಿನ ಒರಟು ನೋಟ ಹಾಗೂ ವಿನ್ಯಾಸವು ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ವಿಶೇಷ ಬೈಕ್ ತಯಾರಿಸಲು ಜೇಮ್ಸ್ ಬಾಂಡ್ ಚಿತ್ರದ ನಿರ್ಮಾಣ ಸಂಸ್ಥೆಯಾದ ಇಯೊನ್ ಪ್ರೊಡಕ್ಷನ್ಸ್ 2019ರಲ್ಲಿ ಟ್ರಯಂಫ್ ಕಂಪನಿ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಬೈಕ್ ಅನ್ನು ಆಗ ಈ ಚಿತ್ರಕ್ಕಾಗಿ ಮಾತ್ರ ತಯಾರಿಸಲಾಗಿತ್ತು. ಈಗ ಈ ಬೈಕ್ ಅನ್ನು ಗ್ರಾಹಕರಿಗಾಗಿಯೂ ತಯಾರಿಸಲಾಗುತ್ತಿದೆ. ಟ್ರಯಂಫ್ ಸ್ಕ್ರ್ಯಾಂಬ್ಲರ್ 1200 ಬೈಕ್ ಅನ್ನು ಬಾಂಡ್ ಲಿಮಿಟೆಡ್ ಎಡಿಷನ್ ಆವೃತ್ತಿಯಾಗಿ ತಯಾರಿಸಲಾಗುತ್ತಿದೆ.


 • ಅನಾವರಣವಾಯ್ತು ಜೇಮ್ಸ್ ಬಾಂಡ್ ಹೊಸ ಬೈಕ್

  ಈ ಬೈಕಿನ ಕೇವಲ 250 ಯುನಿಟ್‌ಗಳನ್ನು ಮಾತ್ರ ತಯಾರಿಸಲಾಗುವುದು. ಪ್ರತಿ ಬೈಕ್ ವಿಭಿನ್ನವಾದ ಫೀಚರ್‌ಗಳನ್ನು ಹೊಂದಿರಲಿದೆ. ಎಲ್ಲಾ ಬೈಕ್‌ಗಳಲ್ಲಿ 007 ಸ್ಟಿಕ್ಕರ್ ಅನ್ನು ನೀಡಲಾಗುವುದು. 007 ಜೇಮ್ಸ್ ಬಾಂಡ್‌ ಅಧಿಕೃತ ನಂಬರ್ ಆಗಿದೆ. ಈ ಬೈಕ್‌ಗಳು ಟ್ರಯಂಫ್‌ ಕಂಪನಿಯ ಸಿಇಒ ಸಹಿಯನ್ನು ಹೊಂದಿರಲಿವೆ.

  MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್


 • ಅನಾವರಣವಾಯ್ತು ಜೇಮ್ಸ್ ಬಾಂಡ್ ಹೊಸ ಬೈಕ್

  ಟ್ರಯಂಫ್ ಸ್ಕ್ರ್ಯಾಂಬ್ಲರ್ 1200 ಬೈಕ್ ಅನ್ನು ಜೇಮ್ಸ್ ಬಾಂಡ್‌ರವರ 25ನೇ ಚಿತ್ರ ನೋ ಟೈಮ್ ಟು ಡೈನಲ್ಲಿ ಕಾಣಬಹುದು. ಜೇಮ್ಸ್ ಬಾಂಡ್ ಪಾತ್ರದಲ್ಲಿ ಡೇನಿಯಲ್ ಕ್ರೇಗ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಟ್ರಯಂಫ್ ಸ್ಕ್ರ್ಯಾಂಬ್ಲರ್ 1200 ಎಕ್ಸ್‌ಇ ಆವೃತ್ತಿಯ ಬೈಕ್ ಅನ್ನು ಬಳಸಲಾಗಿದೆ.


 • ಅನಾವರಣವಾಯ್ತು ಜೇಮ್ಸ್ ಬಾಂಡ್ ಹೊಸ ಬೈಕ್

  ಈ ಬೈಕ್ ವಿಭಿನ್ನ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಬೈಕ್‌ನ ಎಕ್ಸಾಸ್ಟ್, ನಂಬರ್ ಪ್ಲೇಟ್ ಹಾಗೂ ಕೆಳಗಿರುವ ಪ್ಯಾನೆಲ್‌ಗಳು 007 ನಂಬರ್ ಅನ್ನು ಹೊಂದಿರಲಿವೆ. ಈ ಬೈಕಿನಲ್ಲಿ ಲೆದರ್ ಕವರ್ ಸೀಟ್ ಅಳವಡಿಸಲಾಗಿದೆ. ಈ ಬೈಕಿನಲ್ಲಿರುವ ವಿಶಿಷ್ಟವಾದ ಇನ್ಸ್‌ಟ್ರೂಮೆಂಟ್ ಕನ್ಸೋಲ್ 007 ಬಾಂಡ್‌ ಲೋಗೊದಂತೆ ಕಾಣುತ್ತದೆ.

  MOST READ: ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!


 • ಅನಾವರಣವಾಯ್ತು ಜೇಮ್ಸ್ ಬಾಂಡ್ ಹೊಸ ಬೈಕ್

  ಬೈಕಿನ ಎಂಜಿನ್ ಹಾಗೂ ಸೈಲೆನ್ಸರ್‌‌ಗಳು ಗೋಲ್ಡ್ ಫಿನಿಶಿಂಗ್ ಹೊಂದಿವೆ. ಸೈಲೆನ್ಸರ್ ತುದಿಯಲ್ಲಿ ಕಾರ್ಬನ್ ಫೈಬರ್ ಕ್ಯಾಪ್ ಅಳವಡಿಸಲಾಗಿದೆ. ಸ್ಕ್ರ್ಯಾಂಬ್ಲರ್ 1200 ಬಾಂಡ್ ಆವೃತ್ತಿಯ ಬೈಕಿನಲ್ಲಿ 1200 ಸಿಸಿ ಲಿಕ್ವಿಡ್-ಕೂಲ್ಡ್, ಟ್ವಿನ್-ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಹಾಗೂ 110 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.


 • ಅನಾವರಣವಾಯ್ತು ಜೇಮ್ಸ್ ಬಾಂಡ್ ಹೊಸ ಬೈಕ್

  ಈ ಬೈಕಿನಲ್ಲಿ ಕಲರ್ ಟಿಎಫ್‌ಟಿ ಇನ್ಸ್‌ಟ್ರೂಮೆಂಟ್ ಕನ್ಸೋಲ್ ಹಾಗೂ ಹ್ಯಾಂಡಲ್ ಬಾರ್‌ನಲ್ಲಿ ಗೋಪ್ರೊ ಕ್ಯಾಮೆರಾ ನೀಡಲಾಗಿದೆ. ಬೈಕ್ ಅನ್ನು ವಿಭಿನ್ನವಾಗಿ ಚಲಾಯಿಸಲು 6 ವಿವಿಧ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಬಾಂಡ್ ಎಡಿಷನ್ ಟ್ರಯಂಫ್ ಸ್ಕ್ರ್ಯಾಂಬ್ಲರ್ 1200 ಬೈಕಿನ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ.
ಜೇಮ್ಸ್ ಬಾಂಡ್ ಚಿತ್ರಗಳು ಬೇಹುಗಾರಿಕೆ ಹಾಗೂ ಆಕ್ಷನ್ ದೃಶ್ಯಗಳಿಗೆ ಹೆಸರುವಾಸಿಯಾಗಿವೆ. ಈ ಚಿತ್ರಗಳಲ್ಲಿ ಜೇಮ್ಸ್ ಬಾಂಡ್ ಚಾಲನೆ ಮಾಡುವ ಬೈಕ್ ಹಾಗೂ ಕಾರುಗಳನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಟ್ರಯಂಫ್ ಸ್ಕ್ರ್ಯಾಂಬ್ಲರ್ 1200 ಬೈಕ್ ಅನ್ನು ಜೇಮ್ಸ್ ಬಾಂಡ್ ಸರಣಿಯ ನೋ ಟೈಮ್ ಟು ಡೈ ಚಿತ್ರಕ್ಕಾಗಿ ವಿಶೇಷವಾಗಿ ಮಾಡಿಫೈಗೊಳಿಸಲಾಗಿದೆ.

   
 
ಹೆಲ್ತ್