Back
Home » Bike News
ಕರೋನಾ ವೈರಸ್ ಭೀತಿ: ಬಾಡಿಗೆ ವಾಹನಗಳಿಗೆ ಹೆಚ್ಚಾದ ಬೇಡಿಕೆ
DriveSpark | 23rd May, 2020 03:28 PM
 • ಕರೋನಾ ವೈರಸ್ ಭೀತಿ: ಬಾಡಿಗೆ ವಾಹನಗಳಿಗೆ ಹೆಚ್ಚಾದ ಬೇಡಿಕೆ

  ಲಾಕ್‌ಡೌನ್‌ ನಂತರ ದೇಶದಲ್ಲಿ ಬಾಡಿಗೆ ಬೈಕ್‌‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕರೋನಾ ವೈರಸ್ ಸೋಂಕಿನ ಅಪಾಯವನ್ನು ತಪ್ಪಿಸಲು ಜನರು ಈಗ ದೀರ್ಘಕಾಲದವರೆಗೆ ಬೈಕ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ಕಂಪನಿಗಳು ಸಹ ದೀರ್ಘಾವಧಿಯ ಯೋಜನೆಗಳನ್ನು ನೀಡುತ್ತಿವೆ.


 • ಕರೋನಾ ವೈರಸ್ ಭೀತಿ: ಬಾಡಿಗೆ ವಾಹನಗಳಿಗೆ ಹೆಚ್ಚಾದ ಬೇಡಿಕೆ

  ಬೌನ್ಸ್‌ ಕಂಪನಿಯು ಬೆಂಗಳೂರು ಹಾಗೂ ಹೈದರಾಬಾದ್‌ ನಗರಗಳಲ್ಲಿ ಸೇವೆಗಳನ್ನು ನೀಡುತ್ತದೆ. ಬೌನ್ಸ್‌ ಕಂಪನಿಯು ಬೈಕ್‌ಗಳನ್ನು 7, 14, 30 ಹಾಗೂ 60 ದಿನಗಳ ಅವಧಿಗೆ ಬಾಡಿಗೆಗೆ ನೀಡಲಿದೆ. ಇದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ.

  MOST READ: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ


 • ಕರೋನಾ ವೈರಸ್ ಭೀತಿ: ಬಾಡಿಗೆ ವಾಹನಗಳಿಗೆ ಹೆಚ್ಚಾದ ಬೇಡಿಕೆ

  ವೊಗೊ ಕಂಪನಿಯು ಸಹ ಬೈಕ್‌ಗಳನ್ನು ದೀರ್ಘಕಾಲದವರೆಗೆ ಬಾಡಿಗೆಗೆ ನೀಡಲು ಮುಂದಾಗಿದೆ. ಕಂಪನಿಯು ವಾಹನಗಳನ್ನು ಗ್ರಾಹಕರಿಗೆ ನೀಡುವ ಮೊದಲು ಅದನ್ನು ಸಂಪೂರ್ಣವಾಗಿ ಸ್ವಚ್ವಗೊಳಿಸಲಿದೆ. ಈ ಬೈಕ್‌ಗಳನ್ನು ಹೋಂ ಡೆಲಿವರಿ ಮಾಡುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುವುದು.


 • ಕರೋನಾ ವೈರಸ್ ಭೀತಿ: ಬಾಡಿಗೆ ವಾಹನಗಳಿಗೆ ಹೆಚ್ಚಾದ ಬೇಡಿಕೆ

  ಬೈಕ್‌ಗಳನ್ನು ಸ್ವಚ್ವಗೊಳಿಸಲು ಗ್ರಾಹಕರಿಗೆ ಹ್ಯಾಂಡ್ ಸ್ಯಾನಿಟೈಜರ್‌, ಹ್ಯಾಂಡ್ ಗ್ಲೌಸ್‌ಗಳನ್ನು ನೀಡುವುದಾಗಿ ವೊಗೊ ಕಂಪನಿ ಹೇಳಿದೆ. ಕಂಪನಿಯ ದೀರ್ಘ ಬಾಡಿಗೆ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಈಗಾಗಲೇ ಬಾಡಿಗೆಗೆ ವಾಹನಗಳನ್ನು ಪಡೆದಿರುವ ಗ್ರಾಹಕರು ಈ ಸೇವೆಗಳನ್ನು ನವೀಕರಿಸಿ ಕೊಳ್ಳುತ್ತಿದ್ದಾರೆ.

  MOST READ: ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!


 • ಕರೋನಾ ವೈರಸ್ ಭೀತಿ: ಬಾಡಿಗೆ ವಾಹನಗಳಿಗೆ ಹೆಚ್ಚಾದ ಬೇಡಿಕೆ

  ಮಾರ್ಚ್ 25ರಂದು ಲಾಕ್‌ಡೌನ್ ಜಾರಿಯಾದ ನಂತರ ದೇಶಾದ್ಯಂತ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ದೇಶದಲ್ಲಿ ಬಾಡಿಗೆ ವಾಹನಗಳ ಸೇವೆ ಹಾಗೂ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಹೆಚ್ಚಾಗಲಿದೆ ಎಂದು ಉದ್ಯಮ ತಜ್ಞರು ಮೊದಲೇ ಊಹಿಸಿದ್ದರು.


 • ಕರೋನಾ ವೈರಸ್ ಭೀತಿ: ಬಾಡಿಗೆ ವಾಹನಗಳಿಗೆ ಹೆಚ್ಚಾದ ಬೇಡಿಕೆ

  ಮೇ 31ರವರೆಗೆ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಇದಾದ ನಂತರ ವಾಹನಗಳ ಮಾರಾಟ ಹಾಗೂ ಬಾಡಿಗೆ ವಾಹನಗಳ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಲಾಕ್‌ಡೌನ್ ಸಡಿಲಿಕೆಯ ನಂತರ ಎಲ್ಲಾ ದ್ವಿಚಕ್ರ ವಾಹನ ಕಂಪನಿಗಳ ಶೋರೂಂಗಳನ್ನು ತೆರೆಯಲಾಗಿದೆ.
ಭಾರತದಲ್ಲಿ ಲಾಕ್‌ಡೌನ್ ಸಡಿಲಗೊಂಡಿದ್ದು, ಸಾರ್ವಜನಿಕ ಸಾರಿಗೆಯನ್ನು ಹಂತ ಹಂತವಾಗಿ ಆರಂಭಿಸಲಾಗುತ್ತಿದೆ. ಕರೋನಾ ವೈರಸ್ ಹರಡಬಹುದೆಂಬ ಭೀತಿಯ ಕಾರಣಕ್ಕೆ ಜನರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಕಾರುಗಳಲ್ಲಿ ಮಾತ್ರವಲ್ಲದೇ ದ್ವಿಚಕ್ರ ವಾಹನಗಳಲ್ಲಿಯೂ ಸಹ ಪ್ರಯಾಣಿಸುತ್ತಿದ್ದಾರೆ.

   
 
ಹೆಲ್ತ್