Back
Home » Car News
ವೈರಸ್ ಭೀತಿ: ಕಾರುಗಳಿಗೆ ಉಚಿತ ಸ್ಯಾನಿಟೈಜ್ ಸರ್ವೀಸ್ ಘೋಷಿಸಿದ ಕಿಯಾ ಮೋಟಾರ್ಸ್
DriveSpark | 23rd May, 2020 02:03 PM
 • ಕಾರುಗಳಿಗೆ ಉಚಿತ ಸ್ಯಾನಿಟೈಜ್ ಸರ್ವೀಸ್ ಘೋಷಿಸಿದ ಕಿಯಾ ಮೋಟಾರ್ಸ್

  ವೈರಸ್ ಭೀತಿ ಹಿನ್ನಲೆಯಲ್ಲಿ ವಾಹನಗಳ ಮೂಲಕ ಸೋಂಕು ಹರಡುವುದನ್ನು ತಪ್ಪಿಸಲು ಮುಂದಾಗಿರುವ ಕಿಯಾ ಮೋಟಾರ್ಸ್ ಕಂಪನಿಯು ಸೀಮಿತ ಅವಧಿಗಾಗಿ ಉಚಿತ ಸ್ಯಾನಿಟೈಜ್ ಸರ್ವೀಸ್ ಘೋಷಣೆ ಮಾಡಿದ್ದು, ಸೆಲ್ಟೊಸ್ ಮತ್ತು ಕಾರ್ನಿವಾಲ್ ಕಾರು ಮಾಲೀಕರಿಗೆ ಇದು ಸಾಕಷ್ಟುಸಹಕಾರಿಯಾಗಲಿದೆ. ವೈರಸ್ ಪ್ರಮಾಣವು ದೇಶದಲ್ಲಿ ದಿನದಿಂದಕ್ಕೆ ಹೆಚ್ಚುತ್ತಲೇ ಇದ್ದು, ಪ್ರಯಾಣ ಅನಿವಾರ್ಯವಾದಲ್ಲಿ ವಾಹನಗಳಿಗೆ ಸ್ಯಾನಿಟೈಜ್ ಮಾಡಿಸುವುದು ಉತ್ತಮ ಮುಂಜಾಗ್ರತ ಕ್ರಮವಾಗಿದೆ.


 • ಕಾರುಗಳಿಗೆ ಉಚಿತ ಸ್ಯಾನಿಟೈಜ್ ಸರ್ವೀಸ್ ಘೋಷಿಸಿದ ಕಿಯಾ ಮೋಟಾರ್ಸ್

  ಈ ಹಿನ್ನಲೆಯಲ್ಲಿ ಗ್ರಾಹಕರಿಗೆ ಸಹಕಾರಿಯಾಗಲಿ ಎನ್ನುವ ಉದ್ದೇಶದಿಂದ ಉಚಿತವಾಗಿ ವೆಹಿಕಲ್ ಸ್ಯಾನಿಟೈಜ್ ಸೇವೆಯನ್ನು ಘೋಷಿಸಿರುವ ಕಿಯಾ ಮೋಟಾರ್ಸ್ ಕಂಪನಿಯು ಕಿಯಾ ಕೇರ್ ಅಭಿಯಾನದಡಿ ಹೊಸ ಸೇವೆಯನ್ನು ಆರಂಭಿಸಿದ್ದು, ಇದರ ಜೊತೆಗೆ ಲಾಕ್‌ಡೌನ್ ಸಂಕಷ್ಟದಲ್ಲಿರುವ ಗ್ರಾಹಕರಿಗಾಗಿ ಎರಡು ತಿಂಗಳು ಹೆಚ್ಚುವರಿ ವಾರಂಟಿಯನ್ನು ಸಹ ನೀಡಿದೆ.


 • ಕಾರುಗಳಿಗೆ ಉಚಿತ ಸ್ಯಾನಿಟೈಜ್ ಸರ್ವೀಸ್ ಘೋಷಿಸಿದ ಕಿಯಾ ಮೋಟಾರ್ಸ್

  ಇನ್ನು ಕಾರು ಉತ್ಪಾದನೆ ಮತ್ತು ಮಾರಾಟಕ್ಕೆ ಮರುಚಾಲನೆ ನೀಡಿರುವ ಕಿಯಾ ಮೋಟಾರ್ಸ್ ಕಂಪನಿಯು ದೇಶಾದ್ಯಂತ 120 ಮಾರಾಟ ಮಳಿಗೆಗಳನ್ನು ಪುನಾರಂಭಗೊಳಿಸಿದ್ದು, ಸೋಂಕು ಹರಡದಂತೆ ಹಲವಾರು ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿದೆ.

  MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ


 • ಕಾರುಗಳಿಗೆ ಉಚಿತ ಸ್ಯಾನಿಟೈಜ್ ಸರ್ವೀಸ್ ಘೋಷಿಸಿದ ಕಿಯಾ ಮೋಟಾರ್ಸ್

  ಸದ್ಯ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ಪಡೆದುಕೊಂಡಿರುವ ಆಟೋ ಕಂಪನಿಗಳು ಉದ್ಯೋಗದ ಸ್ಥಳಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿದ್ದು, ವೈರಸ್ ತಡೆಗಾಗಿ ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಕೈಗೊಂಡು ಗ್ರಾಹಕರ ಮನೆ ಬಾಗಿಲಿಗೆ ವಾಹನ ಉತ್ಪನ್ನಗಳನ್ನು ವಿತರಣೆ ಮಾಡುತ್ತಿವೆ.


 • ಕಾರುಗಳಿಗೆ ಉಚಿತ ಸ್ಯಾನಿಟೈಜ್ ಸರ್ವೀಸ್ ಘೋಷಿಸಿದ ಕಿಯಾ ಮೋಟಾರ್ಸ್

  ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಜೀವನಶೈಲಿಯಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಆಟೋ ಉದ್ಯಮದಲ್ಲೂ ಕೂಡಾ ಹಲವಾರು ಬದಲಾವಣೆಯೊಂದಿಗೆ ಉದ್ಯಮ ವ್ಯವಹಾರಗಳನ್ನು ಮುನ್ನಡೆಸುವುದು ಅನಿವಾರ್ಯವಾಗಿ ಪರಿಣಮಿಸಿದೆ.

  MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..


 • ಕಾರುಗಳಿಗೆ ಉಚಿತ ಸ್ಯಾನಿಟೈಜ್ ಸರ್ವೀಸ್ ಘೋಷಿಸಿದ ಕಿಯಾ ಮೋಟಾರ್ಸ್

  ಉತ್ಪಾದನಾ ಘಟಕಗಳಲ್ಲಿ ಮತ್ತು ಅಧಿಕೃತ ವಾಹನಗಳ ಮಾರಾಟ ಮಳಿಗೆಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದ್ದು, ನಿಯಮಿತವಾಗಿ ಟೆಸ್ಟಿಂಗ್ ವಾಹನಗಳ ಸ್ವಚ್ಚತೆ, ಸಿಬ್ಬಂದಿಯ ಆರೋಗ್ಯ ತಪಾಸಣೆ, ಸಿಬ್ಬಂದಿ ನಡುವೆ ಸಾಮಾಜಿಕ ಅಂತರ, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್ ಶೀಲ್ಡ್ ಬಳಕೆಯನ್ನು ಕಡ್ಡಾಯಗೊಳಿಸಿವೆ.


 • ಕಾರುಗಳಿಗೆ ಉಚಿತ ಸ್ಯಾನಿಟೈಜ್ ಸರ್ವೀಸ್ ಘೋಷಿಸಿದ ಕಿಯಾ ಮೋಟಾರ್ಸ್

  ವಾಹನ ಮಾರಾಟ ಪ್ರಕ್ರಿಯೆಯನ್ನು ಈ ಹಿಂದೆ ನೇರವಾಗಿ ಶೋರೂಂಗಳಲ್ಲೇ ಪತ್ರವ್ಯವಹಾರ ಕೈಗೊಳ್ಳುತ್ತಿದ್ದ ಆಟೋ ಕಂಪನಿಗಳು ಇದೀಗ ಹೊಸ ಮಾರ್ಗ ಕಂಡುಕೊಂಡಿದ್ದು, ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಮುಗಿಸಿ ಗ್ರಾಹಕರ ಮನೆ ಬಾಗಿಲಿಗೆಯೇ ವಾಹನಗಳನ್ನು ವಿತರಣೆ ಮಾಡುತ್ತಿವೆ.

  MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ


 • ಕಾರುಗಳಿಗೆ ಉಚಿತ ಸ್ಯಾನಿಟೈಜ್ ಸರ್ವೀಸ್ ಘೋಷಿಸಿದ ಕಿಯಾ ಮೋಟಾರ್ಸ್

  ಈ ವೇಳೆಯೂ ಗ್ರಾಹಕರಿಗೆ ಗರಿಷ್ಠ ಸುರಕ್ಷತೆಯೊಂದಿಗೆ ವಾಹನಗಳನ್ನು ವಿತರಣೆ ಮಾಡಲಿರುವ ಆಟೋ ಕಂಪನಿಗಳು ವಿತರಣೆಗೂ ಮುನ್ನ ನಂಜು ನಿರೋಧಕ ರಸಾಯನಿಕಗಳಿಂದ ಸ್ವಚ್ಛಗೊಳಿಸಿದ ನಂತರವೇ ವಿತರಣೆ ಮಾಡುವುದನ್ನು ಕಡ್ಡಾಯಗೊಳಿಸಿವೆ.
ಕಿಯಾ ಮೋಟಾರ್ಸ್ ಕಂಪನಿಯು ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಈಗಾಗಲೇ ಕಾರು ಮಾರಾಟ ಮತ್ತು ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ತನ್ನ ನೆಚ್ಚಿನ ಗ್ರಾಹಕರಿಗಾಗಿ ಕೆಲವು ಉಚಿತ ಸೇವೆಗಳನ್ನು ಘೋಷಣೆಮಾಡಿದೆ.

   
 
ಹೆಲ್ತ್