Back
Home » ಸುದ್ದಿ
80 ಕಿಲೋ ಮೀಟರ್ ನಡೆದು ಮದುವೆ ಮಾಡಿಕೊಂಡ ಯುವತಿ!
Oneindia | 23rd May, 2020 05:44 PM
 • ಸತತವಾಗಿ ಮೂರು ಬಾರಿ ಮುಂದೂಡುತ್ತಾ ಬಂದಿತ್ತು

  ಏಪ್ರಿಲ್ 4 ಕ್ಕೆ ಈ ಜೋಡಿಗಳ ಮದುವೆ ನಿಶ್ಚಯವಾಗಿತ್ತು. ಆದರೆ, ಲಾಕ್‌ಡೌನ್ ಪರಿಣಾಮವಾಗಿ ಸತತವಾಗಿ ಮೂರು ಬಾರಿ ಮುಂದೂಡುತ್ತಾ ಬಂದಿತ್ತು. ಇದರಿಂದ ಮನನೊಂದಿದ್ದ ವಧು ವರರು ಹೇಗಾದರೂ ಮಾಡಿ ಮದುವೆ ಮಾಡಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರಿಂದ ಲಾಕ್‌ಡೌನ್ ನಡುವೆಯೇ ನಡೆದುಕೊಂಡೆ ವರನ ಊರು ತಲುಪಿ ಅಂತೂ ಮದುವೆಯಾಗಿದ್ದಾರೆ.


 • ಸಾಮಾಜಿಕ ಅಂತರ ಕಾಪಾಡಿಕೊಂಡು

  ಮದುವೆ ಸಮಯದಲ್ಲಿ ಕೆಲವೇ ಸಂಬಂಧಿಕರ ಸಮಕ್ಷಮದಲ್ಲಿ, ಸಾಮಾಜಿಕ ಅಂತರ ಕಾಪಾಡಿಕೊಂಡು ವಧು ವರರು ಲಾಕ್‌ಡೌನ್ ನಿಯಮಗಳನ್ನು ಪಾಲಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.


 • ಕೊರೊನಾ ಪೀಡಿತರ ಸಂಖ್ಯೆ 5,515 ಕ್ಕೆ ಏರಿಕೆ

  ಉತ್ತರ ಪ್ರದೇಶದಲ್ಲೂ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಮುಂದುವರೆಯುತ್ತಿದೆ. ಶನಿವಾರದವರೆಗೆ ಆ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5,515 ಕ್ಕೆ ಏರಿಕೆಯಾಗಿದೆ. 138 ಜನ ಮೃತಪಟ್ಟಿದ್ದಾರೆ.


 • ಉತ್ತರ ಪ್ರದೇಶದಲ್ಲೂ ಪ್ಲಾಸ್ಮಾ ಚಿಕಿತ್ಸೆ

  ಉತ್ತರ ಪ್ರದೇಶದಲ್ಲೂ ಕೊರೊನಾ ಚಿಕಿತ್ಸೆಯಾಗಿ ಪ್ಲಾಸ್ಮಾ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಶನಿವಾರ ಚೇತರಿಸಿಕೊಂಡಿದ್ದ ೨೧ ವರ್ಷದ ಯುವಕ ಪ್ಲಾಸ್ಮಾ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡಿದ್ದಾರೆ.
ಕಾನ್ಪುರ್, ಮೇ 23: ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ದೇಶದಲ್ಲಿ ಅದೆಷ್ಟೋ ಮದುವೆ ಕಾರ್ಯಕ್ರಮಗಳು ರದ್ದಾಗಿವೆ. ಕೆಲವರು ಅನಿವಾರ್ಯವಾಗಿ ಪೊಲೀಸರ ಕಣ್ಣು ತಪ್ಪಿಸಿ ಮದುವೆಯಾಗುತ್ತಿದ್ದಾರೆ.

Yogi announces RS 1000 per day to all wages workers | UP | CM | 1000

ಲಾಕ್‌ಡೌನ್‌ನಿಂದ ಪದೇ ಪದೇ ಮದುವೆ ರದ್ದಾಗುತ್ತಿದ್ದನ್ನು ನೋಡಿ, ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳು 80 ಕಿಲೋ ಮೀಟರ್ ನಡೆದುಕೊಂಡೇ ವರನ ಮನೆಗೆ ಹೋಗಿ ಮದುವೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹಾಡಹಗಲೇ ಸಮಾಜವಾದಿ ಪಕ್ಷದ ಕಾರ್ಯಕರ್ತರ ಕೊಲೆ

ಕಾನ್ಪುರ್ ಜಿಲ್ಲೆಯ ಲಕ್ಷ್ಮಣಪುರ ಎಂಬ ಗ್ರಾಮದ ವಧು 20 ವರ್ಷದ ಗೊಲ್ಡಿ ತನ್ನ ಗ್ರಾಮದಿಂದ, ವರ ವೀರೇಂದ್ರ ಕುಮಾರ್ ನ ಗ್ರಾಮವಾದ 80 ಕಿಲೋ ಮೀಟರ್ ದೂರದಲ್ಲಿರುವ ಕನೌಜ್ ಜಿಲ್ಲೆಯ ಬೈಸಾಪುರ್ ಕ್ಕೆ ನಡೆದುಕೊಂಡೇ ಹೋಗಿದ್ದಾಳೆ.

   
 
ಹೆಲ್ತ್