Back
Home » ಸುದ್ದಿ
ಕಲಬುರಗಿ; ಜೆಸ್ಕಾಂ ಬಿಲ್ ನೋಡಿ ಶಾಕ್ ಆದ ಮೆಕಾನಿಕ್ ಶಾಪ್ ಮಾಲೀಕ
Oneindia | 23rd May, 2020 06:08 PM

ಕಲಬುರಗಿ, ಮೇ 23: ಮೊದಲೇ ಲಾಕ್ ಡೌನ್ ನಿಂದಾಗಿ ಕಂಗಾಲಾಗಿರುವ ಜನಕ್ಕೆ ಜೆಸ್ಕಾಂ ಕೂಡ ಶಾಕ್ ಕೊಡುತ್ತಿದೆ. ಕಲಬುರಗಿಯಲ್ಲಿ ದ್ವಿಚಕ್ರ ವಾಹನ ಮೆಕ್ಯಾನಿಕ್ ಶಾಪ್ ಮಾಲೀಕರೊಬ್ಬರಿಗೆ ಬಂದಿರುವ ಬಿಲ್ ನೋಡಿ, ಅವರು ಶಾಕ್ ಆಗಿದ್ದಾರೆ.

ಕಲಬುರಗಿ ನಗರದ ಲಾಳಗೇರಿ ಕ್ರಾಸ್ ಬಳಿಯ ಸ್ಫೂರ್ತಿ ಬಜಾಜ್ ಬೈಕ್ ಸರ್ವಿಸಿಂಗ್ ಶಾಪ್ ಮಾಲೀಕರಾದ ಸುರೇಶ್ ಕುಮಾರ್ ಗೆ ಜೆಸ್ಕಾಂ ಬರೋಬ್ಬರಿ 98,809 ರೂ ಬಿಲ್ ಕೊಟ್ಟಿದೆ.

ಎರಡು ತಿಂಗಳಿಗೆ ಬಂದಿರುವ 98,809 ರೂ ಕರೆಂಟ್ ಬಿಲ್ ಕಂಡು ಮಾಲೀಕ ಸುರೇಶ್ ಕುಮಾರ್ ಹೌಹಾರಿದ್ದಾರೆ. ಸಾಮಾನ್ಯವಾಗಿ ಪ್ರತಿ ತಿಂಗಳು ಇವರಿಗೆ 100-120 ರೂ. ಕರೆಂಟ್ ಬಿಲ್ ಬರುತ್ತಿತ್ತು. ಕೊರೊನಾ ಲಾಕ್ ಡೌನ್ ನಿಂದಾಗಿ ಎರಡು ತಿಂಗಳಿಂದ ವಿದ್ಯುತ್ ಬಿಲ್ ಕೊಟ್ಟಿರಲಿಲ್ಲ.

ದುಪ್ಪಟ್ಟು ವಿದ್ಯುತ್ ಬಿಲ್; ದೂರು ಕೊಡಲು ಬೆಸ್ಕಾಂ ಸಹಾಯವಾಣಿ ಆರಂಭ

ಆದರೀಗ ಒಂದು ಲಕ್ಷದಷ್ಟು ವಿದ್ಯುತ್ ಬಿಲ್ ಅನ್ನು ಜೆಸ್ಕಾಂ ಸಿಬ್ಬಂದಿ ನೀಡಿದ್ದು, ಜೆಸ್ಕಾಂ ಬೇಜವಾಬ್ದಾರಿತನಕ್ಕೆ ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಗತ್ಯವಾಗಿ ಕೆಲಸ ಕಾರ್ಯ ಬಿಟ್ಟು ನಿತ್ಯ ಜೆಸ್ಕಾಂ ಕಚೇರಿಗೆ ಅಲೆಯುವಂತಾಗಿದೆ. ಆದರೂ ಜೆಸ್ಕಾಂ ಸಿಬ್ಬಂದಿ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಜೆಸ್ಕಾಂ ಮಾಡಿರುವ ಯಡವಟ್ಟನ್ನು ಅವರೇ ಸರಿಪಡಿಸಬೇಕೆಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

   
 
ಹೆಲ್ತ್