Back
Home » ಸುದ್ದಿ
ಕೊರೊನಾ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 216 ಪ್ರಕರಣ
Oneindia | 23rd May, 2020 06:05 PM

ಬೆಂಗಳೂರು, ಮೇ 23: ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಒಂದೇ ದಿನ 216 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಸಂಜೆ 5 ಗಂಟೆಯಿಂದ ಇವತ್ತು ಸಂಜೆ 5 ಗಂಟೆಗೆ ದೊಡ್ಡ ಮಟ್ಟದ ಕೇಸ್‌ಗಳು ಕಂಡು ಬಂದಿದೆ.

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

ಇಂದು ಯಾದಗಿರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. 72 ಮಂದಿಗೆ ಸೋಂಕು ಹರಡಿದೆ. ಇವರೆಲ್ಲ ಗುಜರಾತ್ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರಾಗಿದ್ದಾರೆ

24 ಗಂಟೆಯಲ್ಲಿ 6654 ಕೊರೊನಾ ಕೇಸ್ ಪತ್ತೆ, 137 ಸಾವು

ರಾಯಚೂರಿಯಲ್ಲಿ 40 ಮಂದಿಗೆ, ಮಂಡ್ಯದಲ್ಲಿ 28 ಜನರಿಗೆ, ಚಿಕ್ಕಬಳ್ಳಾಪುರದಲ್ಲಿ 26 ಜನರಿಗೆ, ಗದಗದಲ್ಲಿ 15 ಮಂದಿಗೆ ಕೊರೊನಾ ವೈರಸ್‌ ಇಂದು ಪತ್ತೆಯಾಗಿದೆ. ಈ ಎಲ್ಲ ಕೇಸ್‌ಗಳಲ್ಲಿ ಬಹುತೇಕ ಪ್ರಕರಣಗಳು ಗುಜರಾತ್ ಹಾಗೂ ಮಹಾರಾಷ್ಟ್ರದಿಂದ ಬಂದಿರುವ ಕೇಸ್‌ಗಳಾಗಿವೆ.

ಬೆಂಗಳೂರು ನಗರ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಜಿಲ್ಲೆಯಾಗಿದ್ದು, ಮಂಡ್ಯ ಅದಕ್ಕೆ ಪೈಪೋಟಿ ನೀಡುತ್ತಿದೆ. ಬೆಂಗಳೂರಿನಲ್ಲಿ 265 ಸೋಂಕಿತರು ಹಾಗೂ ಮಂಡ್ಯದಲ್ಲಿ 237 ಸೋಂಕಿತರು ಇದ್ದಾರೆ.

ಇಂದು ಕೊರೊನಾ ದಾಖಲೆಯ ಮಟ್ಟಕ್ಕೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆ ಕಂಡಿದೆ. 608 ಜನರು ಗುಣಮುಖರಾಗಿದ್ದಾರೆ. 42 ಮಂದಿ ಮೃತರಾಗಿದ್ದಾರೆ.

   
 
ಹೆಲ್ತ್