Back
Home » ಸುದ್ದಿ
ರೈಲು ಪ್ರಯಾಣ ದರದಲ್ಲಿ ಬದಲಾವಣೆ ಮಾಡುವುದಿಲ್ಲ
Oneindia | 23rd May, 2020 06:52 PM
 • 40 ಲಕ್ಷ ವಲಸೆ ಕಾರ್ಮಿಕರು

  ಮೇ 1 ರಿಂದ ಇಲ್ಲಿಯವರೆಗೆ 40 ಲಕ್ಷ ವಲಸೆ ಕಾರ್ಮಿಕರು ಅವರವರ ಊರುಗಳಿಗೆ ತೆರಳಲು ರೈಲ್ವೆ ಸಚಿವಾಲಯ ಅವಕಾಶ ಮಾಡಿ ಕೊಟ್ಟಿತ್ತು. 22 ದಿನದ ಅವಧಿಯಲ್ಲಿ ಸುಮಾರು ೪೦ ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಉಚಿತವಾಗಿ ತಲುಪಿಸಲಾಗಿದೆ ಎಂದು ವಿನೋದ ಕುಮಾರ್ ತಿಳಿಸಿದ್ದಾರೆ.


 • 80% ರೈಲುಗಳು ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ಪ್ರಯಾಣಿಸಿವೆ

  ವಲಸೆ ಕಾರ್ಮಿಕರನ್ನು ಕಳಿಸಲು ಓಡಿಸಿದ 80% ರೈಲುಗಳು ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ಪ್ರಯಾಣಿಸಿವೆ. ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಗರಿಷ್ಠ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ವಿನೋದ ಕುಮಾರ್ ಯಾದವ್ ತಿಳಿಸಿದರು.


 • 17 ರೈಲ್ವೆ ಆಸ್ಪತ್ರೆ ಕೋವಿಡ್ ಕೇರ್ ಆಸ್ಪತ್ರೆ

  ರೈಲ್ವೆ ಇಲಾಖೆ 17 ರೈಲ್ವೆ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಆಸ್ಪತ್ರೆಗಳನ್ನಾಗಿ ಘೋಷಿಸಿವೆ. ಈ ಆಸ್ಪತ್ರೆಗಳು 10,500 ಹಾಸಿಗೆ ಸೌಲಭ್ಯವನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ. ಮುಂದಿನ 10 ದಿನಗಳವರೆಗೆ 2600 ರೈಲುಗಳು ಓಡಲಿವೆ. ಇವುಗಳಲ್ಲಿ 36 ಲಕ್ಷ ಪ್ರಯಾಣಿಕರು ಪ್ರಯಾಣಿಸಲಿದ್ದಾರೆ ಎಂದು ವಿನೋದ ಕುಮಾರ್ ತಿಳಿಸಿದ್ದಾರೆ.


 • ಕಡಿಮೆ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ

  ಜೂನ್‌ 1 ರಿಂದ ಎಸಿ ರೈಲುಗಳನ್ನು ಹೊರತುಪಡಿಸಿ ಸಾಮಾನ್ಯ ರೈಲು ಸೇವೆ ಆರಂಭವಾಗಲಿದೆ. ಎಲ್ಲ ರೈಲುಗಳನ್ನು ಓಡಿಸಲುವುದಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಅತ್ಯಂತ ಕಡಿಮೆ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ವಿನೋಧ ಕುಮಾರ್ ತಿಳಿಸಿದರು.
ನವದೆಹಲಿ, ಮೇ 23: ನಾಲ್ಕನೇ ಹಂತದ ಲಾಕ್‌ಡೌನ್ ಅಂತ್ಯ ಸಮೀಪಿಸುತ್ತಿರುವಂತೆಯೇ ದೇಶದಲ್ಲಿ ಪ್ರಯಾಣಿಕರ ರೈಲು ಸೇವೆ ಆರಂಭವಾಗುವ ಸೂಚನೆಗಳು ಸಿಕ್ಕಿವೆ. ರೈಲ್ವೆ ಪ್ರಯಾಣದ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಅಥವಾ ಹೆಚ್ಚಳ ಇಲ್ಲ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

HD Deve Gowda From a villager to PM of India : ಹಳ್ಳಿಯಿಂದ ದಿಲ್ಲಿವರೆಗೆ ಸಾಗಿ ಬಂದ ದೇವೇಗೌಡರ ರಾಜಕೀಯ

ಇಂದು ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು, ರೈಲು ಪ್ರಯಾಣ ಶುಲ್ಕವು ಲಾಕ್‌ಡೌನ್‌ ಮುಂಚಿನಂತೆಯೇ ಇರುತ್ತದೆ ಎಂದು ತಿಳಿಸಿದ್ದಾರೆ.

ಮಾರ್ಗಸೂಚಿ ಉಲ್ಲಂಘನೆ; ಗೃಹ ಇಲಾಖೆಯಿಂದ ರಾಜ್ಯಗಳಿಗೆ ಪತ್ರ

ಕೊರೊನಾ ಪೀಡಗು ನಿಯಂತ್ರಣಕ್ಕೆ ಬರುವವರೆಗೆ ಅಥವಾ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಳ್ಳುವವರೆಗೆ ಕಾಯ್ದಿರಿಸದ ರೈಲು ಪ್ರಯಾಣಕ್ಕೆ ಸದ್ಯ ಅವಕಾಶ ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

   
 
ಹೆಲ್ತ್