Back
Home » ಸುದ್ದಿ
ಕಾರ್ಮಿಕರ ಕಷ್ಟ ಆಲಿಸಿದ್ದರ ವಿಡಿಯೋ ಬಿಡುಗಡೆ ಮಾಡಿದ ರಾಹುಲ್ ಗಾಂಧಿ
Oneindia | 23rd May, 2020 08:16 PM

ನವದೆಹಲಿ, ಮೇ 22: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ರಸ್ತೆ ಬದಿ ನಡೆದು ಹೋಗುತ್ತಿದ್ದ ವಲಸೆ ಕಾರ್ಮಿಕರನ್ನು ಕೆಲಹೊತ್ತು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಿದ್ದರು. ಇದಕ್ಕೆ ಸಂಬಂಧಪಟ್ಟಿದ್ದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇಂದು ಕಾಂಗ್ರೆಸ್ ಐಟಿ ಸೆಲ್, ರಾಹುಲ್ ಗಾಂಧಿ ಕಾರ್ಮಿಕರನ್ನು ಮಾತನಾಡಿಸಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಕಳೆದ ಸೋಮವಾರ ಸುಖದೇವ್ ಪ್ಲೈ ಓವರ್ ಬಳಿ ಕಾರ್ಮಿಕರನ್ನು ರಾಹುಲ್ ಗಾಂಧಿ ಮಾತನಾಡಿಸಿದ್ದರು.

ರೈಲು ಪ್ರಯಾಣ ದರದಲ್ಲಿ ಬದಲಾವಣೆ ಮಾಡುವುದಿಲ್ಲ

ಲಾಕ್‌ಡೌನ್ ನಿಂದ ತಾವು ಅನುಭವಿಸುತ್ತಿರುವ ಕಷ್ಟಗಳನ್ನು ರಾಹುಲ್ ಗಾಂಧಿ ಬಳಿ ವಲಸೆ ಕಾರ್ಮಿಕರು ಹೇಳಿಕೊಂಡಿದ್ದಾರೆ. ವಿಡಿಯೋ 17 ನಿಮಿಷದ ಅವಧಿ ಹೊಂದಿದೆ. ಈ ಕಾರ್ಮಿಕರು ಹರ್ಯಾಣದಿಂದ ಉತ್ತರ ಪ್ರದೇಶದ ಕಡೆಗೆ ನಡೆದುಕೊಂಡೇ ಹೊರಟಿದ್ದರು.

ಈ ವಿಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಇದೊಂದು ಉದ್ದೇಶಪೂರ್ವಕವಾಗಿ ಮಾಡಿದ ವಿಡಿಯೋ. ವಿಡಿಯೋದಲ್ಲಿ ಕೆಲ ಮಹಿಳೆಯರನ್ನು ರಾಹುಲ್ ಗಾಂಧಿ ಕಾರ್‌ನಲ್ಲಿ ಕರೆದುಕೊಂಡು ಬಂದಿದ್ದರು ಎಂದು ಕೂಡ ಆರೋಪಿಸಲಾಗಿದೆ.

   
 
ಹೆಲ್ತ್