Back
Home » ಇತ್ತೀಚಿನ
ರೆಡ್ಮಿ K30i 5G ಸ್ಮಾರ್ಟ್‌ಫೋನ್‌ ಬಿಡುಗಡೆ! ಆಕರ್ಷಕ ಫೀಚರ್ಸ್‌!
Gizbot | 25th May, 2020 11:36 AM
 • ರೆಡ್ಮಿ K30i 5G ಸ್ಮಾರ್ಟ್‌ಫೋನ್

  ಹೌದು, ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ತನ್ನ ಹೊಸ ರೆಡ್ಮಿ K30i 5G ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 765G SoC ಪ್ರೊಸೆಸರ್‌ ಹೊಂದಿದ್ದು, 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಸಹ ಹೊಂದಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.


 • ಡಿಸ್‌ಪ್ಲೇ

  ರೆಡ್ಮಿ K30i 5G ಸ್ಮಾರ್ಟ್‌ಫೋನ್‌ 1080 × 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 120Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದ್ದು, ಇದು 20:9 ರಚನೆಯ ಅನುಪಾತವನ್ನ ಹೊಂದಿದೆ. ಇದಲ್ಲದೆ ಈ ಡಿಸ್ಪ್ಲೇಯು ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಆಗಿದ್ದು, ಡ್ಯುಯೆಲ್‌ ಪಂಚ್‌ ಹೋಲ್‌ ವಿನ್ಯಾಸವನ್ನ ಒಳಗೊಂಡಿದೆ.


 • ಪ್ರೊಸೆಸರ್‌

  ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 765G SoC ಪ್ರೊಸೆಸರ್‌ ವೇಗವನ್ನ ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್‌ 6GB RAM + 128GB ಆಂತರಿಕ ಸಂಗ್ರಹ ಸಾಮರ್ಥ್ಯದ ಆಯ್ಕೆಯನ್ನ ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಣೆ ಮಾಡುವ ಅವಕಾಶದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


 • ಕ್ಯಾಮೆರಾ ವಿನ್ಯಾಸ

  ರೆಡ್ಮಿ k30i 5G ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಸೂಪರ್‌ ಮ್ಯಾಕ್ರೋ ಸೆನ್ಸಾರ್‌, ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಇದರಲ್ಲಿ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.


 • ಬ್ಯಾಟರಿ ಮತ್ತು ಇತರೆ

  ಇನ್ನು ಈ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 30W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಅನ್ನು ಬೆಂಬಲಿಸಲಿದೆ. ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್‌ ಸೆನ್ಸಾರ್‌, ಯುಎಸ್‌ಬಿ ಟೈಪ್‌-ಸಿ ಪೋರ್ಟ್‌, 1217 ಅಲ್ಟ್ರಾ-ಲೀನಿಯರ್ ಸ್ಪೀಕರ್, ಸ್ಮಾರ್ಟ್ ಪಿಎ ಧ್ವನಿವರ್ಧಕ ಮತ್ತು ಹೈ-ರೆಸ್ ಆಡಿಯೊ ಬೆಂಬಲವನ್ನು ಸಹ ನೀಡಲಿದೆ. ಜೊತೆಗೆ 3.5mm ಆಡಿಯೊ ಜ್ಯಾಕ್ ಅನ್ನು ಸಹ ಬೆಂಬಲಿಸಲಿದೆ.


 • ಬೆಲೆ ಮತ್ತು ಲಭ್ಯತೆ

  ರೆಡ್ಮಿ k30i 5G ಸ್ಮಾರ್ಟ್‌ಫೋನ್‌ ಬೆಲೆ RMB 1,999 ಆಗಿದ್ದು, ಭಾರತದಲ್ಲಿ ಸುಮಾರು 21,290 ರೂ.ಗಳಿಗೆ ಲಬ್ಯವಾಗಲಿದೆ ಎಂದು ಹೇಳಲಾಗ್ತಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಇನ್ನು ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಿಲ್ಲ ಅನ್ನೊದನ್ನು ಸಹ ಗಮನಿಸಬೇಕಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ನೀಲಿ, ಕೆಂಪು, ನೇರಳೆ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ.
ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಗಳಲ್ಲಿ ಒಂದಾದ ಚೀನಾ ಮೂಲದ ಶಿಯೋಮಿ ಕಂಪೆನಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ತನ್ನ ವೈವಿಧ್ಯಮಯವಾದ ಸ್ಮಾರ್ಟ್‌ಫೋನ್‌ಗಳಿಂದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನ ಸಾಧಿಸಿದೆ. ಇನ್ನು ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿರುವ ಶಿಯೋಮಿ ರೆಡ್‌ಮಿ ಬ್ರ್ಯಾಂಡ್‌ ನ ಹೆಸರಿನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ತನ್ನ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

   
 
ಹೆಲ್ತ್