Back
Home » ಇತ್ತೀಚಿನ
ಟ್ರೂ ಕಾಲರ್‌ ಮೂಲಕ 4.75 ಕೋಟಿ ಭಾರತೀಯರ ಡೇಟಾ ಮಾಹಿತಿ ಸೋರಿಕೆ!
Gizbot | 27th May, 2020 02:00 PM
 • ಟ್ರೂ ಕಾಲರ್

  ಹೌದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟ್ರೂ ಕಾಲರ್‌ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದರೆ, ಅದರ ಬಳಕೆಯನ್ನ ನಿವು ಮಾಡುತ್ತಲೇ ಇದ್ದರೆ ಈ ಲೇಖನವನ್ನ ನಿವು ಓದಲೇ ಬೇಕು. ಅಲ್ಲದೆ ಈ ವರದಿಯನ್ನ ನೀವು ತಿಳಿದುಕೊಳ್ಳಲೇಬೇಕು. ಟ್ರೂ ಕಾಲರ್‌ ಆಪ್‌ ಅನ್ನು ಬಳಸುವಾಗ ಸಾಮಾನ್ಯವಾಗಿ ಜಿಮೇಲ್‌ ಮೂಲಕ ಸೈನ್‌ ಇನ್‌ ಆಗಿರುತ್ತೀರಿ. ಅಷ್ಟೆ ಅಲ್ಲ ಅನೌನ್‌ ಕರೆ ಬಂದಾಗಲೆಲ್ಲಾ ಬಳಕೆದಾರರ ಹೆಸರನ್ನ ಪತ್ತೆ ಹಚ್ಚುವುದಕ್ಕಾಗಿ ಟ್ರೂ ಕಾಲ್‌ ಆಪ್‌ ಅನ್ನು ಬಳಸುವುದಕ್ಕೆ ಮುಮದಾಗುತ್ತಾರೆ. ಆದರೆ ಈ ಆಪ್‌ ಎಷ್ಟು ಸುರಕ್ಷಿತ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.


 • ಟ್ರೂಕಾಲರ್

  ಸದ್ಯ ಆನ್‌ಲೈನ್‌ ಗುಪ್ತಚರ ಸಂಸ್ಥೆ ಸೈಬಲ್‌ ವರದಿ ಮಾಡಿರುವ ಪ್ರಕಾರ 4.75 ಕೋಟಿ ಭಾರತೀಯ ಬಳಕೆದಾರರ ಟ್ರೂಕಾಲರ್ ಡೇಟಾವನ್ನು ಡಾರ್ಕ್ ವೆಬ್‌ನಲ್ಲಿ ಸುಮಾರು, 000 75,000 ಗೆ ಮಾರಾಟ ಮಾಡಲಾಗಿದೆ ಎನ್ನಲಾಗ್ತಿದೆ. ಈ ಮೂಲಕ ಕೋಟ್ಯಾಂತರ ಭಾರತೀಯರ ಡೇಟಾ ಬೇರೆ ಇನ್ಯಾರೋ ಮುರನೇ ವ್ಯಕ್ತಿಯ ಕೈಗೆ ಸುಲಭವಾಗಿ ದೊರೆತಿದೆ ಎನ್ನಲಾಗ್ತಿದೆ. ಈ ಮೂಲಕ ಸೈಬರ್‌ ಕ್ರೈಂ ನಂತಹ ಘಟನೆಗಳಿಗೆ ಹಾಗೂ ಹ್ಯಾಕರ್ಸ್‌ಗಳಿಗೆ ಅನುಕೂಲವಾಗ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


 • ಟ್ರೂಕಾಲರ್

  ಆದರೆ ಡೇಟಾಬೇಸ್‌ನಲ್ಲಿ ಯಾವುದೇ ಉಲ್ಲಂಘನೆಯಿಲ್ಲ ಎಂದು ಟ್ರೂಕಾಲರ್ ವರದಿಯನ್ನು ನಿರಾಕರಿಸಿದೆ. ಹಾಗೇ ನೋಡಿದರೆ ಟ್ರೂಕಾಲರ್ ಡೇಟಾವು 2019 ರಿಂದ ಬಂದಿದೆ ಮತ್ತು ಡಾರ್ಕ್ ವೆಬ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ರಾಜ್ಯಗಳು, ನಗರಗಳು ಮತ್ತು ವಾಹಕಗಳ ಆಧಾರದ ಮೇಲೆ ವರ್ಗೀಕರಿಸಲಾಗಿದೆ ಎಂದು ಸೈಬಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಅಲ್ಲದೆ ಲಭ್ಯವಿರುವ ಬಳಕೆದಾರ ಮಾಹಿತಿಯು ಫೋನ್ ಸಂಖ್ಯೆ, ವಾಹಕ, ಹೆಸರು, ಲಿಂಗ, ಇಮೇಲ್ ವಿಳಾಸ, ಫೇಸ್‌ಬುಕ್ ಐಡಿ ಮತ್ತು ಹೆಚ್ಚಿನದನ್ನು ಒಳಗೊಂಡಿದೆ. ಎಂದು ಹೇಳಿದೆ. ಜೊತೆಗೆ ಸೋರಿಕೆಯಾದ ಮಾಹಿತಿಯಿಂದ ಹಗರಣಗಳು, ಸ್ಪ್ಯಾಮ್‌ಗಳು ಮತ್ತು ಗುರುತಿನ ಕಳ್ಳತನಗಳಿಗೆ ಕಾರಣವಾಗಬಹುದು ಎಂದು ಭದ್ರತಾ ಸಂಸ್ಥೆ ಸೂಚಿಸಿದೆ.


 • ಟ್ರೂ ಕಾಲರ್

  ಇದರ ನಡುವೆ ಟ್ರೂ ಕಾಲರ್‌ ಸಂಸ್ಥೆ ಸೈಬಲ್‌ ವರದಿಯನ್ನ ನಿರಾಕರಿಸಿದೆ. ಅಲ್ಲದೆ ಬಳಕೆದಾರರು ನಮ್ಮ ಆಪ್‌ ಅನ್ನು ಬಲಸುತ್ತಿರುವುದಕ್ಕೆ ಧನ್ಯವಾದಗಳು ಎಂದು ಹೇಳಿಕೊಂಡಿದೆ. ನಮ್ಮ ಡೇಟಾಬೇಸ್‌ನ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ ಮತ್ತು ನಮ್ಮ ಎಲ್ಲಾ ಬಳಕೆದಾರರ ಮಾಹಿತಿಯು ಸುರಕ್ಷಿತವಾಗಿದೆ. ನಮ್ಮ ಬಳಕೆದಾರರ ಗೌಪ್ಯತೆ ಮತ್ತು ನಮ್ಮ ಸೇವೆಗಳ ಸಮಗ್ರತೆಯನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಅನುಮಾನಾಸ್ಪದ ಚಟುವಟಿಕೆಗಳಿಗಾಗಿ ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಮೇ 2019 ರಲ್ಲಿ ಇದೇ ರೀತಿಯ ಡೇಟಾದ ಮಾರಾಟದ ಬಗ್ಗೆ ನಮಗೆ ತಿಳಿಸಲಾಗಿದೆ ಎಂದು ವರದಿ ಮಾಡಿದೆ.


 • ಡೇಟಾಬೇಸ್

  ಕೆಲವರು ಬಹು ಫೋನ್ ಸಂಖ್ಯೆಯ ಡೇಟಾಬೇಸ್‌ಗಳನ್ನು ಕಂಪೈಲ್ ಮಾಡುವುದು ಮತ್ತು ಅದರ ಮೇಲೆ ಟ್ರೂಕಾಲರ್ ಸ್ಟಾಂಪ್ ಹಾಕುವುದು ಸುಲಭವಾಗಿದೆ. ಅದನ್ನು ಮಾಡುವುದರಿಂದ, ಇದು ಡೇಟಾಗೆ ಕೆಲವು ವಿಶ್ವಾಸಾರ್ಹತೆಯನ್ನು ನೀಡುತ್ತದೆ ಮತ್ತು ಅವುಗಳನ್ನು ಮಾರಾಟ ಮಾಡಲು ಸುಲಭಗೊಳಿಸುತ್ತದೆ. ಅಂತಹ ಕೃತ್ಯಕ್ಕೆ ಬಲಿಯಾಗದಂತೆ ನಾವು ಸಾರ್ವಜನಿಕರನ್ನು ಮತ್ತು ಬಳಕೆದಾರರನ್ನು ಕೋರುತ್ತೇವೆ ಟ್ರೂಕಾಲರ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೂ ಡೇಟಾ ಸುರಕ್ಷತೆಯ ದೃಷ್ಟಿಯಿಂದ ಬಳಕೆದಾರರು ಸುರಕ್ಷತೆಯ ಮಾರ್ಗಗಳನ್ನ ಅನುಸರಿಸುವುದು ಉತ್ತಮ ಹೆಜ್ಜೆ ಆಗಿದೆ ಎಂದು ಹೇಳಲಾಗ್ತಿದೆ.
ಇದು ಟೆಕ್ನಾಲಜಿ ಜಮಾನ. ತಾಂತ್ರಿಕವಾಗಿ ಇಡೀ ಜಗತ್ತು ಇಂದು ಸಾಕಷ್ಟು ಮುಂದುವರೆದಿದೆ. ಟೆಕ್ನಾಲಜಿ ಎಷ್ಟೂ ಮುಂದುವರೆದಿದೆಯೊ ಅಷ್ಟೇ ಉಪಯೋಗವು ಇದೆ. ಅಷ್ಟೇ ಪ್ರಮಾಣದಲ್ಲಿ ಇದರ ದುರುಪಯೊಗ ಕೂಡ ನಡೆಯುತ್ತಲೇ ಇದೆ. ನಿಮಗೆಲ್ಲಾ ತಿಳಿದಿರುವಂತೆ ಟೆಕ್ನಾಲಜಿ ಆಪ್ಡೆಟ್‌ ಆಗುತ್ತಿರುವುದರ ಪರಿಣಾಮ ಇಂದು ಪ್ರತಿಯೊಂದು ಕಾರ್ಯಕ್ಕೂ ಆಪ್‌ ಆಧಾರಿತ ಸೇವೆಗಳು ಬಂದಿವೆ. ಹೊಸ ಮಾದರಿಯ ಆಪ್‌ಗಳು ಇಂದು ಪ್ಲೇ ಸ್ಟೋರ್‌ನಲ್ಲಿ ಲಬ್ಯವಾಗುತ್ತಿವೆ. ಇಂತಹ ಆಪ್‌ಗಳಲ್ಲಿ ಆಗಾಗ ಡೇಟಾ ಸುರಕ್ಷತೆಯ ಬಗ್ಗೆ ವರದಿ ಆಗುತ್ತಲೇ ಇರುತ್ತದೆ. ಸದ್ಯ ಇದೀಗ ಟ್ರೂ ಕಾಲರ್‌ ಆಪ್‌ ನಲ್ಲಿ ಕೊಟ್ಯಾಂತರ ಭಾರತೀಯ ಬಳಕೆದಾರರ ಮಾಹಿತಿ ಸೋರಿಕೆ ಆಗಿದೆ ಎಂದು ವರದಿ ಆಗ್ತಿದೆ.

   
 
ಹೆಲ್ತ್