Back
Home » ಇತ್ತೀಚಿನ
ಬಿಎಸ್‌ಎನ್‌ಎಲ್ 1498ರೂ.ಪ್ಲ್ಯಾನ್: ಅಧಿಕ ಡೇಟಾ ಮತ್ತು ಬಿಗ್ ವ್ಯಾಲಿಡಿಟಿ!
Gizbot | 28th May, 2020 09:00 AM
 • ಬಿಎಸ್‌ಎಲ್‌ಎನ್

  ಹೌದು, ಬಿಎಸ್‌ಎಲ್‌ಎನ್ ಟೆಲಿಕಾಂ ಇದೀಗ ಹೊಸದಾಗಿ 1,498ರೂ.ಬೆಲೆಯ ಡೇಟಾ SVT ಪ್ಲ್ಯಾನ್‌ ಅನ್ನು ಲಾಂಚ್ ಮಾಡಿದೆ. ಈ ಯೋಜನೆಯಲ್ಲಿ ವೇಗದ ಡೇಟಾ ಸೌಲಭ್ಯವು ಗ್ರಾಹಕರಿಗೆ ಲಭ್ಯವಾಗಲಿದ್ದು, ಒಟ್ಟು 91GB ಡೇಟಾ ಪ್ರಯೋಜನವು ದೊರೆಯುತ್ತದೆ. ಹಾಗೆಯೇ ವಾರ್ಷಿಕ ಅವಧಿಯ ವ್ಯಾಲಿಡಿಟಿಯನ್ನು ಈ ಪ್ಲ್ಯಾನ್ ಒಳಗೊಂಡಿರುವುದು ವಿಶೇಷ. ಈ ಯೋಜನೆಯ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.


 • ಬಿಎಸ್‌ಎನ್‌ಎಲ್‌ನ 1,498ರೂ. ಪ್ಲ್ಯಾನ್

  ಬಿಎಸ್‌ಎನ್‌ಎಲ್‌ನ 1,498ರೂ. ಪ್ಲ್ಯಾನ್ ಡೇಟಾ SVT ಯೋಜನೆಯಾಗಿದೆ. ಈ ಪ್ಲ್ಯಾನ್‌ ಒಟ್ಟು 365 ದಿನಗಳ ಅವಧಿಯ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಒಟ್ಟು 91GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಡೇಟಾ ಬಳಕೆಗೆ ಯಾವುದೇ ದಿನದ cap ಮಿತಿ ಇರುವುದಿಲ್ಲ. ಹಾಗೆಯೇ ಈ ಪ್ಲ್ಯಾನಿನಲ್ಲಿ ಯಾವುದೇ ಕರೆ, ಎಸ್‌ಎಮ್‌ಎಸ್‌ ಸೌಲಭ್ಯ ಇರುವುದಿಲ್ಲ. ವೇಗದ ಇಂಟರ್ನೆಟ್ ಬಯಸುವವರಿಗೆ ಸೂಕ್ತ ಎನ್ನಲಾಗಿದೆ. ಹಾಗೆಯೇ ಬಿಎಸ್‌ಎನ್‌ಎಲ್‌ ಇತರೆ ಎಸ್‌ವಿಟಿ ಪ್ಲ್ಯಾನ್ ಹಾಗೂ ದೀರ್ಘಾವಧಿಯ ಯೋಜನೆಗಳನ್ನು ತಿಳಿಯಲು ಮುಂದೆ ಓದಿರಿ.


 • ಇತರೆ ಡೇಟಾ SVT ಪ್ಲ್ಯಾನ್

  ಬಿಎಸ್‌ಎನ್‌ಎಲ್ ಹಲವು ಪ್ರೈಸ್‌ರೇಂಜ್‌ನಲ್ಲಿ ಎಸ್‌ವಿಟಿ ಯೋಜನೆಗಳನ್ನು ಹೊಂದಿದೆ. ಬಿಎಸ್‌ಎನ್‌ಎಲ್ 96ರೂ. ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಒಟ್ಟು 11GB ಡೇಟಾ ಒದಗಿಸುತ್ತದೆ. ಹಾಗೆಯೇ ಬಿಎಸ್‌ಎನ್‌ಎಲ್‌ 48 ರೂ.ಎಸ್‌ವಿಟಿ ಪ್ಲ್ಯಾನ್ ಒಟ್ಟು 5GB ಡೇಟಾ ಹೊಂದಿದ್ದು, 30 ದಿನಗಳ ವ್ಯಾಲಿಡಿಟಿ ಇರಲಿದೆ. ಇನ್ನು ಬಿಎಸ್‌ಎನ್‌ಎಲ್‌ 98ರೂ. ಪ್ಲ್ಯಾನ್ ಒಟ್ಟು 20 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಪಡೆದಿದೆ.


 • ಬಿಎಸ್‌ಎನ್‌ಎಲ್‌ 2,399ರೂ. ಪ್ಲ್ಯಾನ್

  ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್‌ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್‌ ಟ್ಯೂನ್‌ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ.


 • ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

  ಹಾಗೆಯೇ ಬಿಎಸ್‌ಎನ್‌ಎಲ್‌ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ.


 • ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

  ಬಿಎಸ್‌ಎನ್‌ಎಲ್‌ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಫೈಟ್‌ ನೀಡುವಂತಹ ಕೆಲವು ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಲಾಕ್‌ಡೌನ್ ಅವಧಿಯಲ್ಲಿಯೂ ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಪ್ರಯೋಜನ ಯೋಜನೆಗಳನ್ನು ಘೋಷಿಸಿತ್ತು. ಹಾಗೆಯೇ ಇತ್ತೀಚಿಗೆ 2,399ರೂ. ಪ್ಲ್ಯಾನ್‌ನಲ್ಲಿ 600 ದಿನಗಳ ವ್ಯಾಲಿಡಿಟಿ ನೀಡಿ ಖಾಸಗಿ ಕಂಪನಿಗಳಿಗೆ ಶಾಕ್ ನೀಡಿದೆ. ಅದೇ ಹಾದಿಯಲ್ಲಿ ಇದೀಗ ಮತ್ತೊಂದು ಪ್ಲ್ಯಾನ್‌ ಘೋಷಿಸಿದೆ.

   
 
ಹೆಲ್ತ್