Back
Home » ಇತ್ತೀಚಿನ
ಮಿತ್ರಾನ್‌ ಆಪ್‌ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು!
Gizbot | 31st May, 2020 12:00 PM
  • ಮಿತ್ರಾನ್

    ಇನ್ನು ನಾವು ನೀವೆಲ್ಲಾ ಅಂದುಕೊಂಡಂತೆ ಮಿತ್ರಾನ್ ಆಪ್‌ ಭಾರತೀಯರ ಆಪ್‌ ಎಂದು ಹೇಳಲಾಗ್ತಿದೆ. ಆದರೆ ಮೆಲ್ನೋಟಕ್ಕೆ ತಿಳಿದು ಬಂದಿರುವ ವಿಚಾರವೆಂದರೆ ಮಿತ್ರಾನ್‌ ಆಪ್‌ ಪಾಕಿಸ್ತಾನದ ಸಾಫ್ಟ್‌ವೇರ್ ಡೆವಲಪರ್ ಕ್ಯೂಬಾಕ್ಸಸ್‌ನಿಂದ ಖರೀದಿಸಿದ ಮೂಲ ಕೋಡ್ ಅನ್ನು ಆಧರಿಸಿದೆ ಎನ್ನಲಾಗ್ತಿದೆ. ಅಲ್ಲದೆ ಈ ಆಪ್‌ ಅನ್ನು ಐಐಟಿ-ರೂರ್ಕಿಯ ಮಾಜಿ ವಿದ್ಯಾರ್ಥಿಗಳ ಗುಂಪಿನಿಂದ ಮಿತ್ರಾನ್ ಅನ್ನು ರಚಿಸಲಾಗಿದೆ.


  • ಮಿತ್ರಾನ್

    ಇನ್ನು ಪಾಕಿಸ್ತಾನದ ಸಾಫ್ಟ್‌ವೇರ್ ಸಂಸ್ಥೆ ಕ್ಯೂಬಾಕ್ಸಸ್‌ನ ಸ್ಥಾಪಕ ಮತ್ತು ಸಿಇಒ ಇರ್ಫಾನ್ ಶೇಖ್ ಹೇಳಿರುವಂತೆ ಮಿತ್ರಾನ್‌ನ ಕ್ರಿಯೆಟರ್‌ ಅವರಿಂದ ಮೂಲ ಕೋಡ್ ಅನ್ನು $ 34 (6 2,600 ಅಂದಾಜು) ಗೆ ಖರೀದಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಮಿತ್ರಾನ್‌ ಇಂಟರ್ಫೇಸ್ ಮತ್ತು ಕ್ಯೂಬಾಕ್ಸಸ್ ಟಿಕ್ಟಿಕ್ ಇಂಟರ್ಫೇಸ್ ಒಂದೇ ಆಗಿರುವುದರಿಂದ ಮಿತ್ರಾನ್‌ ಅನ್ನು 'ಭಾರತೀಯ ನಿರ್ಮಿತ' ಆಪ್ ಎಂದು ಕರೆಯುವುದನ್ನು ಶೇಖ್ ವಿರೋದಿಸಿದ್ದಾರೆ.


  • ಮಿತ್ರಾನ್‌

    ಸದ್ಯ ಇದೀಗ ಮಿತ್ರಾನ್‌ ಆಪ್‌ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ. ಟಿಕ್‌ಟಾಕ್‌ ಆಪ್‌ ಬದಲಿಗೆ ಮಿತ್ರಾನ್‌ ಬಳಸಿ ಎಂದು ಸೊಶೀಯಲ್‌ ಮಿಡಿಯಾಗಳಲ್ಲಿ ಸುದ್ದಿ ಮಾಡಲಾಗ್ತಿದೆ. ಆದರೆ ಮಿತ್ರಾನ್‌ ಮೂಲತಃ ಭಾರತದಲ್ಲಿ ಎಂಬ ಸುದ್ದಿ ಕೂಡ ಸಂಚಲನ ಸೃಷ್ಟಿ ಮಾಡಿದೆ. ಸದ್ಯ ಮಾಹಿತಿ ಪ್ರಕಾರ ಮಿತ್ರಾನ್‌ ಯಾವುದೇ ಗೌಪ್ಯತೆ ನೀತಿಯನ್ನು ಪಟ್ಟಿ ಮಾಡಿಲ್ಲ ಅಥವಾ ಅದರ ಡೇಟಾವನ್ನು ಎಲ್ಲಿ ಹೋಸ್ಟ್ ಮಾಡುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ತಮ್ಮ ಸರ್ವರ್‌ನಲ್ಲಿ ಡೇಟಾವನ್ನು ಹೋಸ್ಟ್ ಮಾಡುವ ಆಯ್ಕೆಯನ್ನು ಅವರು ಹೊಂದಿದೆ.




ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಚೀನಾದ ಟಿಕ್‌ಟಾಕ್‌ ಆಪ್‌ಗೆ ಪರ್ಯಾಯವಾದ ಆಪ್‌ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಚೀನಾದ ಟಿಕ್‌ಟಾಕ್‌ ಆಪ್‌ ಬದಲಿಗೆ ಭಾರತೀಯ ಆಪ್‌ ಅನ್ನು ಬಳಸಿ ಎಂಬ ಸುದ್ದದಿ ಎಲ್ಲೆಡೆ ವರದಿ ಆಗ್ತಿದೆ. ಸದ್ಯ ಟಿಕ್‌ಟಾಕ್‌ಗೆ ಬದಲಿಯಾಗಿ ಮಿತ್ರಾನ್‌ ಆಪ್‌ ಅನ್ನು ಪರಿಚಯಿಸಲಾಗಿದ್ದು, ಕಳೆದ ಎರಡು ದಿನಗಳಿಂದ ಸುದ್ದಿಯಲ್ಲಿದೆ.

   
 
ಹೆಲ್ತ್