Back
Home » ಇತ್ತೀಚಿನ
ದಾಖಲೆ ಬರೆದ ಸ್ಪೇಸ್‌ ಎಕ್ಸ್‌; ಗಗನಯಾತ್ರಿಗಳನ್ನು ಹೊತ್ತ ರಾಕೆಟ್ ಯಶಸ್ವಿ ಉಡಾವಣೆ!
Gizbot | 31st May, 2020 12:33 PM

ಅಮೆರಿಕಾದ ಖಾಸಗಿ ರಾಕೆಟ್ ಸಂಸ್ಥೆಯಾದ ಸ್ಪೇಸ್‌ ಎಕ್ಸ್‌ ಈಗ ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಹೊಸ ಇತಿಹಾಸ ಬರೆದಿದೆ. ನಾಸಾದ ಇಬ್ಬರು ಗಗನಯಾತ್ರಿಗಳನ್ನ ಹೊತ್ತು ಸ್ಪೇಸ್‌ ಎಕ್ಸ್‌ ಸಂಸ್ಥೆಯ ಫಾಲ್ಕನ್-9 ರಾಕೆಟ್‌ ಶನಿವಾರ ಭಾರತೀಯ ಕಾಲಮಾನ ತಡರಾತ್ರಿ 12.30 ರಿಂದ 1ಗಂಟೆಯಯಲ್ಲಿ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಆಗಿದೆ.

ಸ್ಪೇಸ್‌ ಎಕ್ಸ್‌ ಸಂಸ್ಥೆಯು ನಾಸಾದ ಇಬ್ಬರು ಗಗನಯಾತ್ರಿಗಳಾದ ಡೌಗ್ಲಾಸ್ ಹರ್ಲಿ ಮತ್ತು ರಾಬರ್ಟ್ ಬೆಹ್ನ್ಕೆನ್ ಅವರನ್ನು ಹೊತ್ತ ಫಾಲ್ಕನ್ 9 ರಾಕೆಟ್, ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಆಗಿದೆ. ಈ ಮೂಲಕ ಇದೇ ಮೊದಲ ಬಾರಿ ಖಾಸಗಿ ಸಂಸ್ಥೆಯೊಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಹೊತ್ತ ರಾಕೆಟ್‌ನ್ನು ಉಡಾವಣೆ ಮಾಡಿದ ಹೆಗ್ಗಳಿಕೆಗೆ ಸ್ಪೇಸ್‌ ಎಕ್ಸ್‌ ಪಾತ್ರವಾಗಿದೆ.

ಈ ರಾಕೆಟ್ ಬುಧುವಾರವೇ ಉಡಾವಣೆಯಾಗಬೇಕಿತ್ತು, ಆದರೆ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಮುಂದೂಡಲಾಗಿತ್ತು. 9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ಪೇಸ್‌ ಎಕ್ಸ್‌ ಸಂಸ್ಥೆಯಿಂದ ಮಾನವ ಸಹಿತ ಉಡಾವಣೆಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ಬರೆದಿದ್ದು, ಇದರಿಂದ ನಮ್ಮೆಲ್ಲರ ಕನಸು ನನಸಾಗಿದೆ ಎಂದು ಸ್ಪೇಸ್‌ ಎಕ್ಸ್‌ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.

2011ರ ನಂತರ ಅಮೆರಿಕದಿಂದ ಯಾವುದೇ ಬಾಹ್ಯಾಕಾಶ ಯಾತ್ರೆ ಕೈಗೊಂಡಿರಲಿಲ್ಲ. 9 ವರ್ಷಗಳ ಬಳಿಕ ಇದು ಮೊದಲ ಯಾತ್ರೆ ಆಗಿರುವ ಕಾರಣ ಇಡೀ ವಿಶ್ವದ ಗಮನ ಸೆಳೆದಿದೆ. ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪದ್ದಾರೆ. ಈ ಐತಿಹಾಸಿಕ ಕ್ಷಣಗಳಿಗೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಸಾಕ್ಷಿಯಾದರು.

   
 
ಹೆಲ್ತ್