Back
Home » ಇತ್ತೀಚಿನ
ವೊಡಾಫೋನಿಂದ ಹೊಸ ಪ್ಲ್ಯಾನ್; ಗ್ರಾಹಕರಿಗೆ ಸಿಗುತ್ತೆ ಒಟ್ಟು 50GB ಡೇಟಾ!
Gizbot | 1st Jun, 2020 04:00 PM
 • ವೊಡಾಫೋನ್ ಸಂಸ್ಥೆ

  ಹೌದು, ವೊಡಾಫೋನ್ ಸಂಸ್ಥೆಯು 251ರೂ.ಗಳು ಪ್ರೀಪೇಯ್ಡ್‌ ಡೇಟಾ ಪ್ಲ್ಯಾನ್‌ ಅನ್ನು ಪರಿಚಯಿದೆ. ಈ ಡೇಟಾ ವೋಚರ್‌ನಲ್ಲಿ ಒಟ್ಟು 50GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ದೊರೆಯುತ್ತದೆ. ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಹಾಗೂ ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ವೊಡಾಫೋನಿನ ಈ ಡೇಟಾ ವೋಚರ್ ಹೆಚ್ಚು ಸೂಕ್ತ ಅನಿಸಲಿದೆ. ಈ ಹೊಸ ಡೇಟಾ ವೋಚರ್‌ನ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.


 • ವೊಡಾಫೋನ್ 251ರೂ. ಡೇಟಾ ಪ್ಲ್ಯಾನ್

  ವೋಡಾಫೋನಿನ 251ರೂ. ಡೇಟಾ ವೋಚರ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 50GB ಡೇಟಾ ಸೌಲಭ್ಯ ದೊರೆಯುತ್ತದೆ. ಇದೊಂದು ಡೇಟಾ ವೋಚರ್ ಆಗಿರುವುದರಿಂದ ಉಚಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ನಂತಹ ಯಾವುದೇ ಹೆಚ್ಚುವರಿ ಪ್ರಯೋಜನಗಳು ಲಭ್ಯವಾಗುವುದಿಲ್ಲ.


 • ಡೇಟಾ ವೋಚರ್ ಲಭ್ಯತೆ

  ವೊಡಾಫೋನಿನ ಇ ಹೊಸ ಡೇಟಾ ವೋಚರ್ ಬಿಹಾರ, ಚೆನ್ನೈ, ಗುಜರಾತ್, ಹರಿಯಾಣ, ಕೇರಳ, ತಮಿಳುನಾಡು (ಚೆನ್ನೈ ಹೊರತುಪಡಿಸಿ) ಮತ್ತು ಪೂರ್ವ ಉತ್ತರ ಪ್ರದೇಶ ಟೆಲಿಕಾಂ ವಲಯಗಳಲ್ಲಿ ಲಭ್ಯವಾಗುತ್ತದೆ. ಹಾಗೆಯೇ ಆಂಧ್ರಪ್ರದೇಶ, ಅಸ್ಸಾಂ, ದೆಹಲಿ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ, ಮಧ್ಯಪ್ರದೇಶ, ಮುಂಬೈ, ಈಶಾನ್ಯ, ಒಡಿಶಾ, ಪಂಜಾಬ್, ರಾಜಸ್ಥಾನ, ಪಶ್ಚಿಮ ಯುಪಿ ಮತ್ತು ಪಶ್ಚಿಮ ಬಂಗಾಳ ಪ್ರದೇಶಗಳಲ್ಲಿ ಈ ಪ್ಲ್ಯಾನ್ ಲಭ್ಯತೆ ಇರುವುದಿಲ್ಲ. ವೊಡಾಫೋನಿನ ಇತರೆ ಡೇಟಾ ವೋಚರ್‌ಗಳು ಬಗ್ಗೆ ಮುಂದಿನ ಸ್ಲೈಡರ್‌ಗಳಲ್ಲಿ ಓದಿರಿ.


 • ವೊಡಾಫೋನ್ 98ರೂ. ಪ್ಲ್ಯಾನ್

  ಹೆಚ್ಚಿನ ಡೇಟಾ ಅನುಕೂಲಕ್ಕಾಗಿ ವೊಡಾಫೋನ್ ಆಡ್‌ ಆನ್‌ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವೊಡಾಫೋನ್ 98ರೂ. ಬೆಲೆಯ ಪ್ಯಾಕ್‌ ಈಗ ಪರಿಷ್ಕರಣೆ ಆಗಿದ್ದು, ಹೆಚ್ಚಿನ ಡೇಟಾ ಅನುಕೂಲಕ್ಕಾಗಿ ವೊಡಾಫೋನ್ ಆಡ್‌ ಆನ್‌ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವೊಡಾಫೋನ್ 98ರೂ. ಬೆಲೆಯ ಪ್ಯಾಕ್‌ ಇತ್ತೀಚಿಗಷ್ಟೆ ಪರಿಷ್ಕರಣೆ ಆಗಿದ್ದು, ಒಟ್ಟು 12GB ಡೇಟಾ ಪ್ರಯೋಜನ ಒಳಗೊಂಡಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್‌, ಉಚಿತ ವಾಯಿಸ್‌ ಕರೆ ಸೌಲಭ್ಯಗಳು ದೊರೆಯುವುದಿಲ್ಲ. ಡೇಟಾ ಮಾತ್ರ ಲಭ್ಯವಾಗುತ್ತದೆ.
  ಒಟ್ಟು 12GB ಡೇಟಾ ಪ್ರಯೋಜನ ಒಳಗೊಂಡಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್‌, ಉಚಿತ ವಾಯಿಸ್‌ ಕರೆ ಸೌಲಭ್ಯಗಳು ದೊರೆಯುವುದಿಲ್ಲ. ಡೇಟಾ ಮಾತ್ರ ಲಭ್ಯವಾಗುತ್ತದೆ.


 • ವೊಡಾಫೋನ್ 16ರೂ ಮತ್ತು 48ರೂ ಡೇಟಾ ಪ್ಯಾಕ್‌

  ವೊಡಾಫೋನ್‌ ಆರಂಭಿಕ 16ರೂ, ಡೇಟಾ ಆಡ್‌ ಆನ್ ಪ್ಯಾಕ್‌ ಒಂದು ದಿನದ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, 1GB ಡೇಟಾ ಪ್ರಯೋಜನ ಒದಗಿಸುತ್ತದೆ. ಹಾಗೂ 48ರೂ. ಡೇಟಾ ಆಡ್‌ ಆನ್ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಒಟ್ಟು 3GB ಡೇಟಾ ಪ್ರಯೋಜನ ನೀಡುತ್ತದೆ.
ದೇಶದ ಟೆಲಿಕಾಂ ಕೇತ್ರದಲ್ಲಿ ಖಾಸಗಿ ಸಂಸ್ಥೆಗಳ ನಡುವೆ ಪೈಪೋಟಿ ಇದ್ದು, ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಸದ್ಯ ಬಹುತೇಕ ಗ್ರಾಹಕರು ಅಧಿಕ ಡೇಟಾ ಸೌಲಭ್ಯದ ಪ್ಲ್ಯಾನ್‌ಗಳನ್ನು ಬಯಸುತ್ತಾರೆ. ಈ ನಿಟ್ಟಿನಲ್ಲಿ ಏರ್‌ಟೆಲ್‌, ಜಿಯೋ ಸಂಸ್ಥೆಗಳು ಈಗಾಗಲೆ ಹೆಚ್ಚುವರಿ ಡೇಟಾ ಸೌಲಭ್ಯದ ಯೋಜನೆಗಳನ್ನು ಘೋಷಿಸಿವೆ. ಅದೇ ಹಾದಿಯಲ್ಲಿ ಇದೀಗ ವೊಡಾಫೋನ್ ಸಹ ಭರ್ಜರಿ ಡೇಟಾ ಯೋಜನೆ ಪರಿಚಯಿಸಿದೆ.

   
 
ಹೆಲ್ತ್