Back
Home » ಇತ್ತೀಚಿನ
ಆಪ್ ಚಾಲೆಂಜ್: ಸ್ವದೇಶಿ ಆಪ್ ಅಭಿವೃದ್ಧಿಪಡಿಸಿದ್ರೆ ಸರ್ಕಾರದಿಂದ ಭಾರಿ ಬಹುಮಾನ!
Gizbot | 6th Jul, 2020 04:03 PM
 • ತಂತ್ರಜ್ಞಾನ ಸಚಿವಾಲಯ

  ಹೌದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಇದೀಗ ಡಿಜಿಟಲ್ ಇಂಡಿಯಾ ಆತ್ಮ ನಿರ್ಭರ್ ಭಾರತ್ ಇನ್ನೋವೇಟ್ ಚಾಲೆಂಜ್ ಅನ್ನು ಪ್ರಾರಂಭಿಸಿದೆ. ಭಾರತದ ಟೆಕ್ಕಿಗಳಿಗೆ ಮತ್ತು ಸ್ಟಾರ್ಟ್ ಅಪ್ ವರ್ಗದಕ್ಕೆ ಈ ಯೋಜನೆಯು ವಿಶ್ವ ದರ್ಜೆಯ 'ಮೇಡ್ ಇನ್ ಇಂಡಿಯಾ' ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡುತ್ತದೆ.


 • ಆತ್ಮ ನಿರ್ಭರ್ ಭಾರತ್

  ಈ ಆತ್ಮ ನಿರ್ಭರ್ ಭಾರತ್ ಇನ್ನೋವೇಟ್ ಚಾಲೆಂಜ್‌ಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಜುಲೈ 18, 2020 ಆಗಿದೆ. 14 ನಿರ್ದಿಷ್ಟ ಆಪ್‌ ವಿಭಾಗಗಳ ವಿಂಗಡಣೆ ಮಾಡಲಾಗಿದ್ದು, ಅತ್ಯುತ್ತಮ ಅಪ್ಲಿಕೇಶನ್‌ಗಳಿಗೆ 2 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ಬಹುಮಾನವೂ ದೊರೆಯಲಿದೆ. ಇನ್ನು ಆತ್ಮ ನಿರ್ಭರ್ ಭಾರತ್ ಇನ್ನೋವೇಟ್ ಚಾಲೆಂಜ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ "novate.mygov.in"ನಲ್ಲಿ ಲಭ್ಯವಿದೆ. ಹಾಗಾದರೇ ಚಾಲೆಂಜ್‌ನಲ್ಲಿ ಅಭಿವೃದ್ಧಿಪಡಿಸಬೇಕಿರುವ ಆಪ್‌ಗಳು ಬಗ್ಗೆ ಮುಂದೆ ಓದಿರಿ.


 • ಇ-ಕಾಮರ್ಸ್‌ ಆಪ್‌

  ಗ್ರಾಹಕರಿಗೆ ಅನುಕೂಲಕರ ಆನ್‌ಲೈನ್ ಸೇವೆಗಳನ್ನು ಪೂರೈಸುವ ಇ-ಕಾಮರ್ಸ್‌ ಅಪ್ಲಿಕೇಶನ್‌ಗಳು.


 • ಟ್ರಾನ್ಸ್‌ಲೇಶನ್ ಆಪ್‌

  ರಿಯಲ್‌ ಟೈಮ್‌ ನಲ್ಲಿ ಮಾತುಗಳನ್ನು ಅನುವಾದಿಸುವ ಮತ್ತು ಬಹು ಭಾಷೆಗಳ ಕ್ಯಾಮೆರಾ ಅನುವಾದಕ್ಕಾಗಿ ಮೊಬೈಲ್ ಅಪ್ಲಿಕೇಶನ್.


 • ಲೀಡ್‌ ಜೆನರೇಶನ್ ಆಪ್

  ವ್ಯವಹಾರದಿಂದ ವ್ಯವಹಾರಕ್ಕೆ ಪ್ರಮುಖ ಉತ್ಪಾದನೆ ಮತ್ತು ಕೋಲ್ಡ್ ಇಮೇಲ್ ಮಾಡುವಿಕೆಯನ್ನು ನಿರ್ವಹಿಸುವ ಸ್ವಯಂಚಾಲಿತ ವೆಬ್-ಆಧಾರಿತ ಅಪ್ಲಿಕೇಶನ್ ಮತ್ತು ಮೊಬೈಲ್ ಸಾಧನದಿಂದಲೇ ಸಂಪೂರ್ಣವಾಗಿ ನಿರ್ವಹಿಸಬಹುದಾಗಿದೆ.


 • ಇಮೇಜ್‌ ಸ್ಕ್ಯಾನರ್ ಆಪ್

  ಫ್ಲೈ ಇಮೇಜ್ ತಿದ್ದುಪಡಿ, ಇಮೇಜ್ ಎಡಿಟಿಂಗ್, ಟೆಕ್ಸ್ಟ್ ರೆಕಗ್ನಿಷನ್ ಮುಂತಾದ ಫೀಚರ್ಸ್‌ ಮೊಬೈಲ್ ಡಿವೈಸ್‌ಗಳ ಇಮೇಜ್ ಸ್ಕ್ಯಾನರ್‌ಗಳಾಗಿ ಬಳಸುವ ಅಪ್ಲಿಕೇಶನ್.


 • ಫೈಲ್‌ ಟ್ರಾನ್ಸ್‌ಫರ್ ಆಪ್

  ಕ್ಲೌಡ್ ಸ್ಟೋರೇಜ್ ಏಕೀಕರಣ, ಎಫ್‌ಟಿಪಿ ಅಥವಾ ಲ್ಯಾನ್ ಮೂಲಕ ಕ್ರಾಸ್ ಪ್ಲಾಟ್‌ಫಾರ್ಮ್ ಫೈಲ್ ವರ್ಗಾವಣೆ ಮತ್ತು ಮೊಬೈಲ್ ಸಾಧನಗಳಲ್ಲಿ ರೂಟ್ ಬ್ರೌಸರ್ ಒದಗಿಸುವ ಅಪ್ಲಿಕೇಶನ್.


 • ಆಯಂಟಿ ವೈರಸ್‌ ಆಪ್

  ಮೊಬೈಲ್ ಡಿವೈಸ್‌ಗಳಿಗಾಗಿ ಸ್ವದೇಶಿ ಆಯಂಟಿ ವೈರಸ್‌ ಆಪ್.


 • ಜಂಕ್ ಫೈಲ್ ಕ್ಲಿನರ್ ಆಪ್

  ಜಂಕ್ ಫೈಲ್‌ಗಳನ್ನು ಕ್ಲಿನ್ ಮಾಡಿ, ಫೋನ್ ಕಾರ್ಯಕ್ಷಮತೆಯನ್ನು ವೃದ್ಧಿಸುವ ಆಪ್.


 • ಲೈವ್‌ ಸ್ಟ್ರೀಮಿಂಗ್ ಆಪ್

  ವೆಬಿನಾರ್, ಆನ್‌ಲೈನ್ ತರಗತಿಗಳು, ಸೇರಿದಂತೆ ಲೈವ್ ಸ್ಟ್ರೀಮಿಂಗ್ ಸೌಲಭ್ಯ ಒದಗಿಸುವ ಆಪ್‌.


 • ವಿಡಿಯೊ ಕಾಲಿಂಗ್ ಆಪ್

  ಮೊಬೈಲ್‌ ಡಿವೈಸ್‌ಗಳಿಗೆ ಸೂಕ್ತವಾಗುವ ಮೆಸೆಜ್‌ ಹಾಗೂ ವಿಡಿಯೊ ಕರೆ ಬೆಂಬಲಿಸುವ ಆಪ್.


 • ಮೈಕ್ರೋಬ್ಲಾಗಿಂಗ್ ಆಪ್

  ಟ್ವಿಟ್ಟರ್ ತರಹದ ಮೈಕ್ರೋಬ್ಲಾಗಿಂಗ್ ಸ್ವದೇಶಿ ಆಪ್.


 • ನ್ಯೂಸ್‌ ಆಪ್‌

  ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಮೊಬೈಲ್ ಆಧಾರಿತ ಸುದ್ದಿ ಅಪ್ಲಿಕೇಶನ್.
ಇಡೀ ವಿಶ್ವವೇ ಕೊರೊನಾ ವೈರಸ್‌ ನಿಯಂತ್ರಿಸ ಹೋರಾಟ ನಡೆಸುತ್ತಿದ್ದರೇ ಇತ್ತ ಚೀನಾ ಭಾರತದೊಂದಿಗೆ ಗಡಿ ಸಂಘರ್ಷದ ಕ್ಯಾತೆ ತೆಗೆಯುತ್ತಿದೆ. ದೇಶದಲ್ಲಿ ಜನರು ಚೀನಾ ಉತ್ಪನ್ನಗಳ ಬಳಕೆ ಕಡಿಮೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಚೀನಾದ 59 ಮೊಬೈಲ್ ಆಪ್ಸ್‌ಗಳನ್ನು ಬ್ಯಾನ್ ಮಾಡಿರುವುದು ದೇಶದಲ್ಲಿ ಬಾಯ್ಕಟ್ ಚೀನಾ ಅಭಿಯಾನದ ಕಾವು ಹೆಚ್ಚಿಸಿದೆ. ಇದರ ಬೆನ್ನಲೇ ಸ್ವದೇಶದಲ್ಲಿ ಜನರಿಗೆ ಅಗತ್ಯ ಇರುವ ಆಪ್‌ಗಳ ಅಭಿವೃದ್ಧಿ ಕಾರ್ಯವು ಚುರುಕು ಪಡೆದಿದೆ.

 
ಹೆಲ್ತ್