Back
Home » ಇತ್ತೀಚಿನ
ಲ್ಯಾಪ್‌ಟಾಪ್‌ನ ಬ್ಯಾಟರಿ ಅವಧಿ ಹೆಚ್ಚಿಸಲು ಗೂಗಲ್‌ ಕ್ರೋಮ್‌ನಿಂದ ಹೊಸ ಫೀಚರ್ಸ್‌!
Gizbot | 7th Jul, 2020 12:32 PM
 • ಗೂಗಲ್‌ ಕ್ರೋಮ್‌

  ಹೌದು, ಗೂಗಲ್‌ ಕ್ರೋಮ್‌ ವೆಬ್‌ ಬ್ರೌಸರ್‌ಗಳಲ್ಲಿ ಒಂದಾಗಿದೆ. ಆದರೆ ಇದನ್ನ ಬಳಸುವಾಗ ಲ್ಯಾಪ್‌ಟಾಪ್‌ನಲ್ಲಿನ ಬ್ಯಾಟರಿ ಪವರ್‌ ಖಾಲಿ ಮಾಡುತ್ತದೆ. ಅಲ್ಲದೆ ಅತಿ ಹೆಚ್ಚು ರಿಸೋರ್ಸ್‌ ಕನ್ಸೂಮ್‌ ಮಾಡುವ ಗೂಗಲ್ ಕ್ರೋಮ್‌ನಲ್ಲಿ ಕೆಲವು ಬದಲಾವಣೆಗಳನ್ನು ತರಲು ಮುಂದಾಗಿದೆ. ಇದನ್ನು ಮಾಡುವ ಮೂಲಕ ಲ್ಯಾಪ್‌ಟಾಪ್‌ನ ಬ್ಯಾಟರಿ ಪವರ್‌ ಖಾಲಿ ಮಾಡುವ ಸಮಸ್ಯೆಯನ್ನು ಪರಿಹರಿಸಲು ಗೂಗಲ್ ಪ್ರಯತ್ನಿಸುತ್ತಿದೆ ಎನ್ನಲಾಗ್ತಿದೆ. ಅಷ್ಟಕ್ಖೂ ಗೂಗಲ್‌ ಕ್ರೋಮ್‌ನಲ್ಲಿ ಗೂಗಲ್‌ ಯಾವ ಮಾದರಿಯ ಬದಲಾವಣೆ ಮಾಡಲು ಮುಂದಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.


 • ಗೂಗಲ್

  ಬ್ರೌಸಿಂಗ್‌ ಸಮಯದಲ್ಲಿ ಅತಿ ಹೆಚ್ಚು ಬ್ಯಾಟರಿ ಪವರ್‌ ಖಾಲಿ ಮಾಡುವ ಹಾಗೂ ಅತಿ ಹೆಚ್ಚು ರಿಸೋರ್ಸ್‌ ಕನ್ಸೂಮ್‌ ಮಾಡುವ ಗೂಗಲ್ ಕ್ರೋಮ್‌ನಲ್ಲಿ ಗೂಗಲ್‌ ಹಲವು ಬದಲಾವನೆಗಳಿಗೆ ಮುಂದಾಗಿದೆ. ತಾಂತ್ರಿಕ ದಾಖಲೆಗಳ ಅಭಿವೃದ್ಧಿಯಲ್ಲಿ ಗೂಗಲ್‌ ಕ್ರೋಮ್‌ ನಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸುತ್ತಿದೆ. ಇದು ಕ್ರೋಮ್ 86 ರಿಂದ ಈ ಫೀಚರ್ಸ್‌ ಜಾರಿಗೆ ಬರಲಿದೆ. ಅಲ್ಲದೆ ಬ್ರೌಸರ್‌ನಲ್ಲಿ ಹೊಸ ಫ್ಲ್ಯಾಗ್‌ ಅನ್ನು ಗೂಗಲ್‌ನಲ್ಲಿ ಹೊಂದಿಸಲಾಗಿದೆ ಎನ್ನಲಾಗ್ತಿದೆ. ಇದು ಹಿನ್ನೆಲೆ ಪುಟಗಳಲ್ಲಿ ಜಾವಾಸ್ಕ್ರಿಪ್ಟ್ ಟೈಮರ್ ಎಚ್ಚರಗಳನ್ನು ಮಿತಿಗೊಳಿಸುತ್ತದೆ ಎಂದು ಹೇಳಲಾಗ್ತಿದೆ. ಇದು ಆಪಲ್‌ ಸಫಾರಿ ಬ್ರೌಸರ್‌ ಮಾದರಿಯಂತೆ ಕಂಪನಿಯು ಈ ಮೌಲ್ಯವನ್ನು ನಿಮಿಷಕ್ಕೆ 1 ಕ್ಕೆ ಹೊಂದಿಸಲಿದೆ ಎಂದು ವರದಿಯಾಗಿದೆ.


 • ಗೂಗಲ್ ಕ್ರೋಮ್ ವರ್ಸಸ್ ಸಫಾರಿ ಪರೀಕ್ಷೆ

  ಇನ್ನು ಲ್ಯಾಪ್‌ಟಾಪ್‌ ನಂತಹ ಪೋರ್ಟಬಲ್ ಯಂತ್ರದ ಬ್ಯಾಟರಿಯಲ್ಲಿಯೂ ಸಹ ಸಾಕಷ್ಟು ದೊಡ್ಡ ಬದಲಾವಣೆಗಳನ್ನು ಹೊಂದಿದೆ. 9to5 google ವಿವರಿಸಿದ ಪರೀಕ್ಷೆಯ ಮಾದರಿಯಂತೆ, ಲ್ಯಾಪ್‌ಟಾಪ್‌ನಲ್ಲಿ ಕ್ರೋಮ್ ಬಳಸಿ 6.4 ಗಂಟೆಗಳು ಮತ್ತು ಸಫಾರಿ ಬಳಸಿದರೆ 9.3 ಗಂಟೆಗಳ ಕಾಲ ವ್ಯತ್ಯಾಸ ದೊರೆಯಲಿದೆ. ಆದಾಗ್ಯೂ, ಅದೇ ಬದಲಾವಣೆಯ ನಂತರ, ಬ್ಯಾಟರಿಯ ಅವಧಿಯು Chrome ನಲ್ಲಿ 8.2 ಗಂಟೆಗಳವರೆಗೆ ಏರಿದರೆ, ಇದು ಸುಮಾರು 2 ಗಂಟೆಗಳ ಹೆಚ್ಚುವರಿ ಬ್ಯಾಟರಿ ಬಾಳಿಕೆ ಬರಲು ಸಾದ್ಯವಾಗಲಿದೆ ಎಂದು ಹೇಳಲಾಗ್ತಿದೆ.


 • ಗೂಗಲ್ ಕ್ರೋಮ್

  ಇದಲ್ಲದೆ ಗೂಗಲ್ ಕ್ರೋಮ್ ವರ್ಸಸ್ ಸಫಾರಿ ಪರೀಕ್ಷೆಯಲ್ಲಿ ಬ್ರೌಸರ್‌ನ ಮುಂಭಾಗದಲ್ಲಿ ಒಂದೇ ಖಾಲಿ ಟ್ಯಾಬ್ ಅನ್ನು ತೆರೆಯಲಾಗಿತ್ತು. ಇದಾದ ನಂತರ ಬ್ಯಾಕ್‌ಗ್ರೌಂಡ್‌ ಟ್ಯಾಬ್‌ಗಳನ್ನ ತೆರಯಲಾಗಿತ್ತು. ಇದರಲ್ಲಿ ಫುಲ್‌ಸ್ಕ್ರೀನ್‌ ಯೂಟ್ಯೂಬ್ ವೀಡಿಯೊ ಪ್ಲೇ ಆಗುತ್ತಿದೆ. ಇದರಿಂದ ಬ್ಯಾಟರಿಯ ಜೀವಿತಾವಧಿಯಲ್ಲಿ ಗಮನಾರ್ಹ ಹೆಚ್ಚಳವನ್ನು ಇನ್ನೂ ಗಮನಿಸಲಾಗಿದೆ. ಪರೀಕ್ಷೆಯ ನಂತರ ಜೀವನದ ಬಳಕೆಯ ಪ್ರತಿನಿಧಿಯಾಗಿರದ ಕಾರಣ ನಾವು ಈ ಪರೀಕ್ಷೆಯಲ್ಲಿನ ಸಂಖ್ಯೆಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸದಿರುವುದು ಬಹಳ ಮುಖ್ಯವಾಗಿದೆ. ಇದರಿಂದ ಗೂಗಲ್‌ ಕ್ರೋಮ್‌ ನಲ್ಲಿ ಬ್ಯಾಟರಿ ಬಾಳಿಕೆಯನ್ನು ಸುದಾರಿಸಲಾಗುತ್ತಿದೆ ಎನ್ನಲಾಗ್ತಿದೆ.
ಇತ್ತೀಚಿನ ದಿನಗಳಲ್ಲಿ ನೀವು ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನಿಮಗೆ ನೆಪಾಗೊದೇ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌. ಅಷ್ಟರ ಮಟ್ಟಿಗೆ ಗೂಗಲ್‌ ಇಂದು ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಸದ್ಯ ನಿವು ನಾವೆಲ್ಲಾ ಯಾವುದೇ ವೆಬ್‌ಸೈಟ್‌ ಅನ್ನು ತೆರೆಯ ಬೇಕಿದ್ದರೂ ಸಾಕಷ್ಟು ವೆಬ್‌ಬ್ರೌಸರ್‌ಗಳು ಲಭ್ಯವಿವೆ. ಇವುಗಳಲ್ಲಿ ಗೂಗಲ್‌ಕ್ರೋಮ್‌ ಕೂಡ ಒಂದಾಗಿದೆ. ಇನ್ನು ಗೂಗಲ್ ಕ್ರೋಮ್ ವೇಗದ ಬ್ರೌಸರ್‌ಗಳಲ್ಲಿ ಒಂದಾಗಿದೆ. ಆದರೆ ಕ್ರೋಮ್ ಹೆಚ್ಚು ರಿಸೋರ್ಸ್‌-ಕನ್ಸೂಮ್‌ ಮಾಡುವ ಬ್ರೌಸರ್‌ಗಳಲ್ಲಿ ಒಂದಾಗಿದೆ. ಇದರಿಂದ ಲ್ಯಾಪ್‌ಟಾಪ್‌ನ ಬ್ಯಾಟರಿ ಪವರ್‌ ಖಾಲಿ ಮಾಡುತ್ತದೆ. ಇದಕ್ಕೆ ಇದೀಗ ಪರಿಹಾರ ಒದಗಿಸಲು ಗೂಗಲ್‌ಕ್ರೋಮ್‌ ಇದೀಗ ಮುಂದಾಗಿದೆ.

 
ಹೆಲ್ತ್