Back
Home » ಇತ್ತೀಚಿನ
ಪೊಕೊ M2 ಪ್ರೊ ಮತ್ತು ಪೊಕೊ X2 ಸ್ಮಾರ್ಟ್‌ಫೋನ್‌ ನಡುವಿನ ವ್ಯತ್ಯಾಸ ಏನು?
Gizbot | 8th Jul, 2020 09:00 AM
 • ಪೊಕೊ

  ಹೌದು, ಪೊಕೊ ಕಂಪೆನಿ ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದ್ಕೂ ಮೊದಲು ಪೊಕೊ ಕಂಪೆನಿ ಭಾರತದಲ್ಲಿ ಪೊಕೊ x2 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಈ ಎರಡು ಸ್ಮಾರ್ಟ್‌ಫೋನ್‌ಗಳು ಕೂಡ ಸಾಕಷ್ಟು ಹೊಸ ಮಾದರಿಯ ಫಿಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ಗಳಾಗಿವೆ. ಪೊಕೊ ಎಕ್ಸ್ 2 ಕ್ವಾಡ್ ರಿಯರ್ ಕ್ಯಾಮೆರಾ ಸ್ಟೆಟಪ್, ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, ಇದು 8GB RAM ಮತ್ತು 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಹಾಗಾದ್ರೆ ಪೊಕೊ M2 ಪ್ರೊ ಮತ್ತು ಪೊಕೊ X2 ನಡುವಿನ ವ್ಯತ್ಯಾಸ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.


 • ಪೊಕೊ M2 ಪ್ರೊ ವರ್ಸಸ್ ಪೊಕೊ X2

  ಪೊಕೊ M2 ಪ್ರೊ ಮತ್ತು ಪೊಕೊ X2 ಸ್ಮಾರ್ಟ್‌ಫೋನ್‌ ಎರಡೂ ಕೂಡ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67-ಇಂಚಿನ ಫುಲ್‌ಹೆಚ್‌ಡಿ ಎಚ್ಡಿ + ಡಿಸ್‌ಪ್ಲೇಯನ್ನು ಹೊಂದಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇ ಗಾತ್ರ, ರೆಸಲ್ಯೂಶನ್, ರಚನೆಯ ಅನುಪಾತ ಮತ್ತು ರಿಫ್ರೆಶ್ ರೇಟ್‌ ಕೂಡ ಒಂದೇ ಆಗಿದೆ. ಅಲ್ಲದೆ ಈ ಎರಡೂ ಸ್ಮಾರ್ಟ್‌ಫೋನ್ ಗಳು ಆಕ್ಟಾ-ಕೋರ್ ಪ್ರೊಸೆಸರ್‌ ಅನ್ನು ಹೊಂದಿವೆ, ಆದರೆ ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 720G ಪ್ರೊಸೆಸರ್‌ ಹೊಂದಿದ್ದರೆ, ಪೊಕೊ X2 ಸ್ನಾಪ್‌ಡ್ರಾಗನ್ 730G ಪ್ರೊಸೆಸರ್‌ ಅನ್ನು ಹೊಂದಿದೆ.


 • ಕ್ಯಾಮೆರಾ ವಿಶೇಷತೆ

  ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾಗಳ ವಿಷಯದಲ್ಲಿ, ಎರಡೂ ಕೂಡ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ಗಳನ್ನು ಹೊಂದಿವೆ. ಆದರೆ ವಿಭಿನ್ನ ಸಂರಚನೆಗಳನ್ನ ಹೊಂದಿವೆ. ಪೊಕೊ M2 ಪ್ರೊ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಹೊಂದಿದೆ.ಅಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಆದರೆ ಪೊಕೊ X2 ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರೆ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಮೂರು ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಡ್ಯುಯಲ್ ಸೆಲ್ಫಿ ಕ್ಯಾಮೆರಾಗಳನ್ನ ನೀಡಲಾಗಿದೆ.


 • ಬ್ಯಾಟರಿ ವಿಶೇಷತೆ

  ಬ್ಯಾಟರಿಯ ವಿಷಯದಲ್ಲಿ, ಪೊಕೊ M2 ಪ್ರೊ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ಅಪ್‌ ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಪೊಕೊ X2 ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 27W ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.


 • ಬೆಲೆ

  ಇನ್ನು ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ ಮೂರು ರೂಪಾಂತರಗಳಲ್ಲಿ ಬರುತ್ತದೆ. ಬೇಸ್ ಮಾಡೆಲ್ 4GB RAM ಮತ್ತು 64GB ಇಂಟರ್‌ ಸ್ಟೋರೇಜ್ ಹೊಂದಿದ್ದು, ಇದರ ಬೆಲೆ ರೂ. 13,999. 6GB RAM ಮತ್ತು 64GB ಆಂತರಿಕ ಸಂಗ್ರಹ ಮಾದರಿಯ ಬೆಲೆ ರೂ. 14,999 ಮತ್ತು ಟಾಪ್-ಎಂಡ್ 6GB RAM + 128GB ಇಂಟರ್‌ ಸ್ಟೋರೇಜ್ ರೂಪಾಂತರಕ್ಕೆ ರೂ. 16,999 ರೂ ಬೆಲೆಯನ್ನ ನಿಗದಿಪಡಿಸಲಾಗಿದೆ. ಇದು ಗ್ರೀನ್ ಮತ್ತು ಗ್ರೀನರ್, ಮತ್ತು ಎರಡು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.


 • ಪೊಕೊ X2

  ಇನ್ನು ಪೊಕೊ X2 ಸ್ಮಾರ್ಟ್‌ಫೋನ್‌ ಬೆಲೆ ಏರಿಕೆಯನ್ನು ಪಡೆದುಕೊಂಡಿದ್ದು. ಪ್ರಸ್ತುತ ಇದರ ಬೆಲೆ 6GB RAM + 64GB ರೂಪಾಂತರಕ್ಕೆ 17,499 ರೂ. 6GB RAM + 128GB ರೂಪಾಂತರಕ್ಕೆ 18,499, ಮತ್ತು 8GB RAM+ 256GB ರೂಪಾಂತರಕ್ಕೆ 21,499 ರೂ. ಬೆಲೆಯನ್ನ ಹೊಂದಿದೆ. ಇದು ಅಟ್ಲಾಂಟಿಸ್ ಬ್ಲೂ, ಮ್ಯಾಟ್ರಿಕ್ಸ್ ಪರ್ಪಲ್ ಮತ್ತು ಫೀನಿಕ್ಸ್ ರೆಡ್ ಕಲರ್ ಆಯ್ಕೆಗಳಲ್ಲಿ ಬರುತ್ತದೆ.
ಜನಪ್ರಿಯ ಸ್ಮಾರ್ಟ್‌ಫೊನ್‌ ತಯಾರಕ ಶಿಯೋಮಿ ಸಬ್‌ಬ್ರಾಂಡ್‌ ಆಗಿದ್ದ ಪೊಕೊ ಇತ್ತೀಚಿನ ದಿನಗಳಲ್ಲಿ ಸ್ವತಂತ್ರ ಸಂಸ್ಥೆಯಾಗಿ ಗುರುತಿಸಿಕೊಮಡಿದೆ. ಅಲ್ಲದೆ ತನ್ನದೇ ಆದ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಇದೀಗ ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಆಕ್ಟಾ-ಕೋರ್ ಡಿಸ್ಪ್ಲೇ ಹೊಂದಿದೆ. ಜೊತೆಗೆ 6GB RAM + 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗ್ತಿದೆ.

 
ಹೆಲ್ತ್