Back
Home » ಇತ್ತೀಚಿನ
ಭಾರತೀಯ ಸೇನೆಯಲ್ಲಿ ಫೇಸ್‌ಬುಕ್‌ ಸೇರಿದಂತೆ 89 ಆಪ್‌ಗಳ ಬಳಕೆಗೆ ನಿಷೇಧ!
Gizbot | 9th Jul, 2020 11:39 AM
  • ಭಾರತೀಯ ಸೇನೆ

    ಹೌದು, ಭಾರತೀಯ ಸೇನೆ 89ಕ್ಕೂ ಅಧಿಕ ಆಪ್‌ಗಳನ್ನ ಡಿಲೀಟ್‌ ಮಾಡುವಂತೆ ತನ್ನ ಸೈನಿಕರಿಗೆ ಸೂಚಿಸಿದೆ ಎಂದು ವರದಿ ಆಗಿದೆ. ಅಲ್ಲದೆ ಡೇಟಿಂಗ್ ಅಪ್ಲಿಕೇಶನ್‌ಗಳಂತಹ ಆಪ್‌ಗಳ ಬಳಕೆ ಸೈಬರ್ ಕ್ರೈಂಗೆ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ಸದ್ಯ ಈಗಾಗಲೇ ಜಗತ್ತಿನ ನಾನಾ ಕಡೆ ಈ ಮಾದರಿಯ ಆಪ್‌ಗಳಿಂದ ಸೈಬರ್‌ ಸ್ನೂಪಿಂಗ್ ನಡೆಯುತ್ತಿರೋದು ನಿಮಗೆಲ್ಲಾ ತಿಳಿದೆ ಇದೆ. ಇದೇ ಕಾರಣಕ್ಕೆ ಭಾರತ ಸರ್ಕಾರ 59 ಚೀನಿ ಆಪ್ಗಳನ್ನ ಬ್ಯಾನ್‌ ಮಾಡಿದ್ದರೆ ಇತ್ತ ಸೇನೆ ಚೀನಿ ಆಪ್‌ಗಳ ಜೊತೆಗೆ 89ಕ್ಕೂ ಅಧಿಕ ಆಪ್‌ಗಳನ್ನ ಬಲಸದಂತೆ ಸೂಚನೆ ನೀಡಿದೆ. ಅಷ್ಟಕ್ಕೂ ಈ ಆಪ್‌ಗಲು ಯಾವುವು, ಇದರಿಂದ ಆಗುವ ತೊಂದರೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.


  • ಭಾರತೀಯ ಸೇನೆ

    ಸದ್ಯ ಲಬ್ಯವಿರುವ ಮಾಹಿತಿಯ ಪ್ರಕಾರ ಭಾರತೀಯ ಸೇನೆ 89ಕ್ಕೂ ಅಧಿಕ ಆಪ್‌ಗಳ ಬಳಕೆಯನ್ನ ಸೈನಿಕರು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗ್ತಿದೆ. ಅದರಲ್ಲೂ ಮಾಹಿತಿ ಸೋರಿಕೆಯನ್ನು ತಡೆಯುವ ಉದ್ದೇಶದದಿಂದ ನಿಷೇಧ ಮಾಡಲು ಮುಂದಾಗಿದ್ದೇವೆ ಎಂದು ಸೇನೆಯ ಮೂಲಗಲು ತಿಳಿಸಿವೆ ಎಂದು ANI ವರದಿ ಮಾಡಿದೆ. ಅಲ್ಲದೆ ಈ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಲು ಸೇನೆಯು ಜುಲೈ 15 ರ ಗಡುವನ್ನು ನಿಗದಿಪಡಿಸಿದೆ, ಇಲ್ಲದಿದ್ದರೆ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗ್ತಿದೆ ಎಂದು ವರದಿ ಆಗಿದೆ. ಹಾಗೇ ನೋಡಿದ್ರೆ ಕೆಲವು ವರ್ಷಗಳ ಹಿಂದೆಯಷ್ಟೆ ಸೇನೆ ತನ್ನ ಸಿಬ್ಬಂದಿಗೆ ಫೇಸ್‌ಬುಕ್ ಬಳಸಲು ಅನುಮತಿ ನೀಡಿತ್ತು. ಆದರೆ ಸೇನೆಯ ಸಮವಸ್ತ್ರದಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡದಿರುವುದು ಅಥವಾ ಅವರ ಘಟಕಗಳ ಸ್ಥಳವನ್ನು ಬಹಿರಂಗಪಡಿಸುವುದನ್ನು ನಿರ್ಬಂದಿಸಲಾಗಿತ್ತು. ಆದರೆ ಇದೀಗ ಫೇಸ್‌ಬುಕ್‌ ಬಳಕೆಯನ್ನು ಸಹ ನಿಲ್ಲಿಸಲು ಸೇನೆ ಮುಂದಾಗಿದೆ.


  • ಫೇಸ್‌ಬುಕ್

    ಇನ್ನು ಸೇನೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್, ಟಿಂಡರ್ ಮತ್ತು PUBG ಗೇಮ್‌ನಂತಹ ಅಪ್ಲಿಕೇಶನ್‌ಗಳು ಭಾರತದಲ್ಲಿ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಾಗಿವೆ. ಇವುಗಳಲ್ಲಿ ಚೈನೀಸ್ ಅಪ್ಲಿಕೇಶನ್‌ಗಳು ಕೂಡ ಸೇರಿಕೊಂಡಿವೆ. ಇದಲ್ಲದೆ ಎಲ್ಲಾ ಟೆನ್ಸೆಂಟ್ ಗೇಮಿಂಗ್ ಅಪ್ಲಿಕೇಶನ್‌ಗಳು ಮತ್ತು ಖಾಸಗಿ ಬ್ಲಾಗ್‌ಗಳು ಇರುವಂತಹ ಕೆಲವು ವಿಶಾಲ ವರ್ಗಗಳನ್ನು ಸಹ ಡಿಲೀಟ್‌ ಮಾಡಲು ಸೂಚಿಸಲಾಗಿದೆ. ಇನ್ನು ಸೇನೆ ಸೂಚಿಸಿರುವ ಕೆಲವ ಆಪ್‌ಗಳಲ್ಲಿ ಭಾರತ ಸರ್ಕಾರ ಟಿಕ್‌ಟಾಕ್, ಶೇರ್‌ಇಟ್ ಮತ್ತು ಯುಸಿ ಬ್ರೌಸರ್‌ನಂತಹ ಆಪ್‌ಗಳನ್ನ ಈಗಾಗಲೇ ನಿಷೇಧಿಸಲಾಗಿದೆ.


  • ಭಾರತ ಸರ್ಕಾರ

    ಭಾರತ ಸರ್ಕಾರ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಗೆ ಸಂಬಂಧಿಸಿದಂತೆ ಹಾಗೂ ಮಾಹಿತಿ ಮತ್ತು ಭದ್ರತೆಯ ದೃಷ್ಟಿಯಿಂದ 59 ಆಪ್‌ಗಳನ್ನ ಬ್ಯಾನ್‌ ಮಾಡಿತ್ತು. ಆದರೆ ಇದೀಗ ಭಾರತೀಯ ಸೇನೆ ಸರ್ಕಾರದ ಪಟ್ಟಿಗಿಂತ ಭಿನ್ನವಾಗಿ, 89 ಕ್ಕೂ ಅಧಿಕ ಆಪ್‌ಗಳನ್ನ ನಿಷೇದಿಸಲು ಮುಂದಾಗಿದ್ದು, ಈ ನಿಷೇಧವು ಸೇನಾ ಸಿಬ್ಬಂದಿಗೆ ಮಾತ್ರ ಅನ್ವಯಿಸುತ್ತದೆ. ಸೇನೆ ಈ ರೀತಿ ಅಪ್ಲಿಕೇಶನ್‌ಗಳನ್ನ ನಿಷೇಧ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಫೇಸ್‌ಬುಕ್ ಮತ್ತು ವಾಟ್ಸಾಪ್ ಬಳಸುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಸ್ಮಾರ್ಟ್‌ಫೋನ್‌ಗಳನ್ನ ಬೇಸ್ ಮತ್ತು ಡಾಕ್ ಯಾರ್ಡ್‌ಗಳಲ್ಲಿ ಮತ್ತು ಬೋರ್ಡ್ ಯುದ್ಧನೌಕೆಗಳಲ್ಲಿ ಸಾಗಿಸಬಾರದು ಅನ್ನುವ ಆದೇಶವು ಸಹ ಇದೆ ಎಂದು ಹೇಳಲಾಗ್ತಿದೆ.


  • ಸದ್ಯ ಇದೀಗ ಭಾರತೀಯ ಸೇನೆಯು ನಿಷೇಧಿಸಿರುವ 89 ಅಪ್ಲಿಕೇಶನ್‌ಗಳ ಪೂರ್ಣ ಪಟ್ಟಿ ಇಲ್ಲಿದೆ ನೋಡಿ.

    Messaging Platforms

    WeChat
    QQ
    Kik
    ooVoo
    Nimbuzz
    Helo
    Qzone
    Share Chat
    Viber
    Line
    IMO
    Snow
    To Tok
    Hike

    Video Hosting
    TikTok
    Likee
    Samosa
    Kwali

    Content Sharing
    Shareit
    Xender
    Zapya

    Web Browsers
    UC Browser
    UC Browser Mini

    Video and Live Streaming
    LiveMe
    BigoLive
    Zoom
    Fast Films
    Vmate
    Uplive
    Vigo Video

    Utility Apps
    Cam Scanner
    Beauty Plus
    Truecaller
    Gaming Apps

    PUBG
    NONO Live
    Clash of Kings
    All Tencent gaming apps
    Mobile Legends

    E-Commerce
    Club Factory
    AliExpress
    Chinabrands
    Gearbest
    Banggood
    MiniInTheBox
    Tiny Deal
    Dhhgate
    LightinTheBox
    DX
    Eric Dress
    Zaful
    Tbdress
    Modility
    Rosegal
    Shein
    Romwe

    Dating Apps
    Tinder
    TrulyMadly
    Happn
    Aisle
    Coffee Meets Bagel
    Woo
    OkCupid
    Hinge
    Badoo
    Azar
    Bumble
    Tantan
    Elite Sinles
    Tagged
    Couch Surfing

    Antivirus
    360 Security

    Networking
    Facebook
    Baidu
    Instagram
    Ello
    Snapchat

    News Apps
    Daily Hunt
    News Dog

    Online Book Reading Apps
    Pratilipi

    Health Apps
    Heal of Y

    Lifestyle Apps
    POPXO

    Knowledge Apps
    Vokal

    Music Apps
    Hungama
    Songs.pk

    Blogging/ Micro Blogging
    Yelp
    Tumblr
    Reddit
    FriendsFeed
    Private Blogs




ಭದ್ರತೆ ಮತ್ತು ಮಾಹಿತಿ ಸುರಕ್ಷತೆಯ ಹಿತದೃಷ್ಟಿಯಿಂದ ಈಗಾಗಲೇ ಭಾರತ ಸರ್ಕಾರ ಟಿಕ್‌ಟಾಕ್‌ ಸೇರಿದಂತೆ ಚೀನಾ ಮೂಲದ 59 ಜನಪ್ರಿಯ ಆಪ್‌ಗಳನ್ನ ಬ್ಯಾನ್‌ ಮಾಡಿತ್ತು. ಇದಾದ ಕೆಲವೇ ದಿನಗಳಲ್ಲಿ ಇದೀಗ ಭಾರತೀಯ ಸೇನೆ ತನ್ನ ಸೈನಿಕರಿಗೆ ಫೇಸ್‌ಬುಕ್, ಟ್ರೂಕಾಲರ್ ಮತ್ತು ಇನ್‌ಸ್ಟಾಗ್ರಾಮ್‌ ಸೇರಿದಂತೆ ಪಬ್‌ಜಿ ಮೊಬೈಲ್‌ ಗೇಮ್‌ ಆಪ್‌ಗಳನ್ನ ಬಳಸದಂತೆ ಸೂಚನೆ ನೀಡಿದೆ. ಇದಲ್ಲದೆ ಟಿಂಡರ್‌ನಂತಹ ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಡೈಲಿ ಹಂಟ್‌ನಂತಹ ಸುದ್ದಿ ಅಪ್ಲಿಕೇಶನ್‌ಗಳು ಮತ್ತು ಎಲ್ಲಾ 'ಖಾಸಗಿ ಬ್ಲಾಗ್‌ಗಳು' ಸೇರಿದಂತೆ 89ಕ್ಕೂ ಅಧಿಕ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡವುದಕ್ಕೆ ಭಾರತೀಯ ಸೇನೆ ಸೂಚನೆ ನೀಡಿದೆ.

 
ಹೆಲ್ತ್