Back
Home » ಇತ್ತೀಚಿನ
ಪೊಕೊ M2 ಪ್ರೊ ಮತ್ತು ರಿಯಲ್‌ಮಿ 6: ಭಿನ್ನತೆ ಏನು?..ಯಾವುದು ಬೆಸ್ಟ್?
Gizbot | 15th Jul, 2020 09:00 AM
 • ಪೊಕೊ M2 ಪ್ರೊ

  ಪೊಕೊ M2 ಪ್ರೊ ಮತ್ತು ರಿಯಲ್‌ಮಿ 6 ಎರಡು ಫೋನ್‌ಗಳು 15 ಸಾವಿರ ಪ್ರೈಸ್‌ಟ್ಯಾಗ್‌ ಒಳಗೆ ಲಭ್ಯ ಇವೆ. ಈ ಎರಡು ಫೋನ್‌ಗಳು ಕ್ವಾಡ್‌ ಕ್ಯಾಮೆರಾ ಹೊಂದಿದ್ದು, ಸೆಲ್ಫಿ ಕ್ಯಾಮೆರಾವು ಸಹ 16ಎಂಪಿ ಸೆನ್ಸಾರ್‌ ಹೊಂದಿವೆ. ಹಾಗೆಯೇ ಡಿಸ್‌ಪ್ಲೇಯಲ್ಲಿಯೂ ಬಹುತೇಕ ಹೋಲಿಕೆ ಇದ್ದು, ಬ್ಯಾಟರಿ ಆಯ್ಕೆಯು ಹೋಲುವಂತಿವೆ. ಆದರೂ ಇವುಗಳ ನಡುವೆ ಭಿನ್ನತೆಗಳು ಇವೆ. ಹೀಗಾಗಿ ಯಾವುದು ಉತ್ತಮ ಎನ್ನುವ ಗೊಂದಲ ಮೂಡುತ್ತದೆ. ಈ ಎರಡು ಫೋನ್‌ಗಳ ನಡುವಿನ ಭಿನ್ನತೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.


 • ಡಿಸ್‌ಪ್ಲೇ ರಚನೆ

  ಪೊಕೊ M2 ಪ್ರೊ ಸ್ಮಾರ್ಟ್‌ಪೋನ್‌ 1,080x2,400 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಆಗಿದ್ದು, ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಅದೇ ರೀತಿ ರಿಯಲ್‌ಮಿ 6 ಫೋನ್ 1080*2400 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಫೂರ್ಣ ಹೆಚ್‌ಡಿ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ.


 • ಪ್ರೊಸೆಸರ್‌ ಭಿನ್ನತೆ

  ಪೊಕೊ M2 ಪ್ರೊ ಸ್ಮಾರ್ಟ್‌ಪೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 720 G SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ ಎಂಐಯುಐ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅದೇ ರೀತಿ ರಿಯಲ್‌ಮಿ 6 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ G90T ಪ್ರೊಸೆಸರ್ ಹೊಂದಿದೆ. ಜೊತೆಗೆ ಆಂಡ್ರಾಯ್ಡ್ 10 ಆಧಾರಿತ ಓಎಸ್‌ ಇದರಲ್ಲಿದೆ.


 • ಕ್ಯಾಮೆರಾ ವಿನ್ಯಾಸ

  ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. 48ಎಂಪಿ+ 8ಎಂಪಿ + 5 ಎಂಪಿ + 2ಎಂಪಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇನ್ನು ರಿಯಲ್‌ಮಿ 6 ಸ್ಮಾರ್ಟ್‌ಫೋನ್ ಸಹ ಕ್ವಾಡ್‌ ಕ್ಯಾಮೆರಾ ರಚನೆ ಪಡೆದಿದೆ. 64ಎಂಪಿ+ 8ಎಂಪಿ + 2ಎಂಪಿ + 2ಎಂಪಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ.


 • ಬ್ಯಾಟರಿ ಲೈಫ್

  ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ 5,020mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 33w ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಅದೇ ರೀತಿ ರಿಯಲ್‌ಮಿ 6 ಸ್ಮಾರ್ಟ್‌ಫೋನ್ 4,300 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದರೊಂದಿಗೆ 30W ಸಾಮರ್ಥ್ಯದ ಫ್ಲ್ಯಾಶ್‌ ಚಾರ್ಜರ್ ಹೊಂದಿದೆ.


 • ಬೆಲೆ ಎಷ್ಟು?

  ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ 4GB RAM+ 64GB ಸ್ಟೋರೇಜ್ ವೇರಿಯಂಟ್‌ ಬೆಲೆ 13,999 ರೂ, ಮತ್ತು 6GB RAM+ 64GB ಸ್ಟೋರೇಜ್ ಆಯ್ಕೆಯ ಸ್ಮಾರ್ಟ್‌ಫೋನ್‌ 14,999ರೂ ಹಾಗೂ 6GB RAM + 128GB ಶೇಖರಣಾ ಮಾದರಿಯು 16,999 ರೂ. ಬೆಲೆಯನ್ನ ಹೊಂದಿದೆ. ರಿಯಲ್‌ಮಿ 6 ಫೋನಿನ ಮೂರು ವೇರಿಯಂಟ್‌ ಬೆಲೆಗಳು ಕ್ರಮವಾಗಿ 14,999ರೂ / 16,999ರೂ / 17,999ರೂ. ಆಗಿದೆ.
ಪೊಕೊ ಹೊಸದಾಗಿ ಬಿಡುಗಡೆ ಮಾಡಿರುವ ಪೊಕೊ M2 ಪ್ರೊ ಫೋನ್ ಹಲವು ಫೀಚರ್ಸ್‌ಗಳಿಂದಾಗಿ ಗ್ರಾಹಕರ ಗಮನಸೆಳೆದಿದೆ. ಹಾಗೆಯೇ ಈ ಫೋನ್ ಬಜೆಟ್‌ ಬೆಲೆ ಹೊಂದಿರುವುದು ಆಕರ್ಷಣೆಗೆ ಮತ್ತೊಂದು ಅಂಶವಾಗಿದೆ. ಹಾಗೆಯೇ ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ 6 ಸ್ಮಾರ್ಟ್‌ಫೋನ್ ಸಹ ಇದೇ ಕೇಟಗೆರಿಯಲ್ಲಿ ಗ್ರಾಹಕರನ್ನು ಅಟ್ರ್ಯಾಕ್ಟ್‌ ಮಾಡಿದೆ. ಬಹುತೇಕ ಸಾಮತ್ಯೆಗಳು ಇದ್ದರು ಯಾವುದು ಬೆಸ್ಟ್ ಅನ್ನುವ ಪ್ರಶ್ನೆ ಮೂಡುತ್ತದೆ.

 
ಹೆಲ್ತ್