Back
Home » ಇತ್ತೀಚಿನ
ನೋಕಿಯಾ 65 ಇಂಚಿನ 4K LED ಸ್ಮಾರ್ಟ್‌ಟಿವಿ ಲಾಂಚ್!
Gizbot | 1st Aug, 2020 04:00 PM
 • ನೋಕಿಯಾ

  ಹೌದು, ಜನಪ್ರಿಯ ನೋಕಿಯಾ ಸಂಸ್ಥೆ ಇದೀಗ ಭಾರತೀಯ ಮಾರುಕಟ್ಟೆಗೆ ಹೊಸದಾಗಿ 65 ಇಂಚಿನ ಸ್ಮಾರ್ಟ್‌ಟಿವಿಯೊಂದನ್ನು ಬಿಡುಗಡೆ ಮಾಡಿದೆ. ಈಗಾಗಲೇ 43 ಮತ್ತು 55 ಇಂಚಿನ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್‌ಟಿವಿಯು 4K ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದ್ದು, ಇದರೊಂದಿಗೆ ಡಾಲ್ಬಿ ಆಡಿಯೊ ಬೆಂಬಲಿತ JBL ಸ್ಪೀಕರ್ಸ್‌ಗಳನ್ನು ಒಳಗೊಂಡಿದೆ. ಇನ್ನು ನೋಕಿಯಾದ ಈ ಸ್ಮಾರ್ಟ್‌ಟಿವಿಯ ಇನ್ನಿತರೆ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.


 • ಡಿಸ್‌ಪ್ಲೇ ರಚನೆ

  ನೋಕಿಯಾದ ಈ ಹೊಸ ಸ್ಮಾರ್ಟ್‌ಟಿವಿಯು 3,840 × 2,160 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 65 ಇಂಚಿನ ರಚನೆಯಲ್ಲಿದೆ. 178 ಡಿಗ್ರಿ ವ್ಯೂವ್ ಆಂಗಲ್ ರಚನೆ ಪಡೆದಿದ್ದು, 400 nits ಬ್ರೈಟ್ನೆಸ್‌ ಸಾಮರ್ಥ್ಯ ಹೊಂದಿದೆ. 1200:1 ಕಾಂಟ್ರಾಸ್ಟ್ ರೇಶಿಯೋ ಇದೆ.


 • ಪ್ರೊಸೆಸರ್ ಮತ್ತು ಓಎಸ್‌

  ನೋಕಿಯಾದ ಈ ಹೊಸ ಸ್ಮಾರ್ಟ್‌ಟಿವಿಯು ಕ್ವಾಡ್‌ ಕೋರ್ ಪ್ರೊಸೆಸರ್‌ ಜೊತೆಗೆ Mali 450MP4 GPU ಒಳಗೊಂಡಿದೆ.ಹಾಗೆಯೇ 2.25GB RAM ಮತ್ತು 16GB ಆಂತರಿಕ ಸ್ಟೋರೇಜ್ ಆಯ್ಕೆ ಹೊಂದಿದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲವನ್ನು ನೀಡಲಾಗಿದೆ.


 • ಸೌಂಡ್‌ ಮತ್ತು ವಿಶೇಷ ಫೀಚರ್ಸ್‌

  ಈ ಸ್ಮಾರ್ಟ್‌ಟಿವಿಯು 24W ಸಾಮರ್ಥ್ಯದ ಬಾಟಮ್‌ನಲ್ಲಿ ಫೈರಿಂಗ್ ಸ್ಪೀಕರ್ಸ್‌ಗಳಿವೆ. ಹಾಗೆಯೇ ಜೆಬಿಎಲ್‌ ಸ್ಪೀಕರ್ಸ್‌ಗಳನ್ನು ಒಳಗೊಂಡಿದ್ದು, ಡಾಲ್ಬಿ ಆಡಿಯೊ ಸಪೋರ್ಟ್‌ ಸಹ ಇದೆ. ಮತ್ತು ಡಿಟಿಎಸ್‌ TruSurround ತಂತ್ರಜ್ಞಾನದ ಸೌಂಡ್‌ ಕ್ವಾಲಿಟಿ ಸೌಲಭ್ಯಗಳನ್ನು ಪಡೆದುಕೊಂಡಿದೆ.


 • ವಾಯಿಸ್‌ ಕಂಟ್ರೋಲ್

  ನೋಕಿಯಾದ ಹೊಸ ಸ್ಮಾರ್ಟ್‌ಟಿವಿಯು ನೆಟ್‌ಫ್ಲಿಕ್ಸ್‌, ಯೂಟ್ಯೂಬ್ ಹಾಗೂ ಗೂಗಲ್ ಅಸಿಸ್ಟಂಟ್ ಸೌಲಭ್ಯಗಳನ್ನು ಹೊಂದಿದೆ. ಹಾಗೆಯೇ ಕ್ರೋಮ್‌ಕಾಸ್ಟ್‌ ಕನೆಕ್ಟ್ ಆಯ್ಕೆ ನೀಡಲಾಗದ್ದು, ಈ ಆಯ್ಕೆ ಮೂಲಕ ಸ್ಮಾರ್ಟ್‌ಫೋನ್‌ಗೆ ಸರಳವಾಗಿ ಕನೆಕ್ಟ್‌ ಮಾಡಬಹುದಾಗಿದೆ.


 • ಬೆಲೆ ಮತ್ತು ಲಭ್ಯತೆ

  ನೋಕಿಯಾದ ಹೊಸ 65 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆಯು 64,999ರೂ. ಆಗಿದೆ. ಇದೇ ಆಗಸ್ಟ್ 6ರಂದು ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ತಾಣದ ಮೂಲಕ ಮೊದಲ ಸೇಲ್ ಆರಂಭವಾಗಲಿದೆ. ಆರಂಭಿಕ ಕೊಡುಗೆಯಾಗಿ 2000ರೂ. ರಿಯಾಯಿತಿ ನೀಡಲಿದೆ.
ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಟಿವಿಗಳ ಬೇಡಿಕೆ ಹೆಚ್ಚುತ್ತಲೇ ಇದ್ದು, ಅದರ ಪರಿಣಾಮವಾಗಿ ಜನಪ್ರಿಯ ಫೋನ್ ಕಂಪನಿಗಳು ಸಹ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುವ ಟ್ರೆಂಡ್‌ ಆರಂಭವಾಗಿದೆ. ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸೋನಿ ಮತ್ತು ಸ್ಯಾಮ್‌ಸಂಗ್ ಈಗಾಗಲೇ ಮುಂಚೂಣಿಯಲ್ಲಿದ್ದು, ಆ ಲಿಸ್ಟ್‌ನಲ್ಲಿ ಇತ್ತೀಚಿಗೆ ಎವರ್‌ಗ್ರೀನ್ ಮೊಬೈಲ್ ಬ್ರ್ಯಾಂಡ್‌ ನೋಕಿಯಾ ಸಹ ಸೇರಿದೆ. ನೋಕಿಯಾ ಈಗ ಮತ್ತೆ ಹೊಸ ಸ್ಮಾರ್ಟ್‌ಟಿವಿ ಲಾಂಚ್ ಮಾಡಿದೆ.

 
ಹೆಲ್ತ್