Back
Home » ಇತ್ತೀಚಿನ
ಭಾರಿ ಕುತೂಹಲ ಮೂಡಿಸಿದ್ದ ಗೂಗಲ್ ಪಿಕ್ಸಲ್ 4a ಫೋನ್ ಬಿಡುಗಡೆ!
Gizbot | 3rd Aug, 2020 09:42 PM
 • ಗೂಗಲ್ ಪಿಕ್ಸಲ್ 4a

  ಹೌದು, ಗೂಗಲ್ ಸಂಸ್ಥೆಯು ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಕ್ವಾಲ್ಕಾಮ್‌ ಸ್ನ್ಯಾಪ್‌ಡ್ರಾಗನ್‌ 730G ಪ್ರೊಸೆಸರ್‌ ಬಲವನ್ನು ಪಡೆದಿದೆ. ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಈ ಫೋನ್‌ ಡಿಸ್‌ಪ್ಲೇಯು ಸಂಪೂರ್ಣ ಹೆಚ್‌ಡಿ ಹಾಗೂ OLED ಮಾದರಿಯನ್ನು ಹೊಂದಿದೆ. ಇನ್ನುಳಿದಂತೆ ಗೂಗಲ್ ಪಿಕ್ಸಲ್ 4a ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.


 • ಡಿಸ್‌ಪ್ಲೇ ಡಿಸೈನ್

  ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. OLED ಮಾದರಿಯ ಡಿಸ್‌ಪ್ಲೇ ವಿನ್ಯಾಸ ಇದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 443ppi ಆಗಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾವು 19.5:9 ಆಗಿದೆ.


 • ಪ್ರೊಸೆಸರ್ ಯಾವುದು

  ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರ್ ಬಲವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. 6GB RAM ಮತ್ತು 128GB ಆಂತರಿಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶ ನೀಡಿಲ್ಲ.


 • ಕ್ಯಾಮೆರಾ ಸೆನ್ಸಾರ್

  ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 12ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಇನ್ನೊಂದು ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಲ್ಫಿಗಾಗಿ ಸಹ 8ಎಂಪಿ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ ಫೋಟೊ ಎಡಿಟಿಂಗ್ ಆಯ್ಕೆಗಳು ಇವೆ.


 • ಬ್ಯಾಟರಿ ಬಾಳಿಕೆ

  ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ 3,140mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಇದರೊಂದಿಗೆ 18W ವೇಗದ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಉಳಿದಂತೆ ವೈಫೈ, ಬ್ಲೂಟೂತ್, ಹಾಟ್‌ಸ್ಪಾಟ್‌, ಜಿಪಿಎಸ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.


 • ಬೆಲೆ ಎಷ್ಟು ಹಾಗೂ ಲಭ್ಯತೆ

  ಸದ್ಯ ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ ಯುಎಸ್, ಯುಕೆ, ಐರ್ಲೆಂಡ್, ಆಸ್ಟ್ರೇಲಿಯಾ, ಜಪಾನ್ ಮತ್ತು ಕೆನಡಾದಲ್ಲಿ ಲಭ್ಯವಿದೆ. ಗೂಗಲ್ ಸ್ಟೋರ್ ಮತ್ತು ಗೂಗಲ್ ಫೈ ಗಳಲ್ಲಿ ಪ್ರೀ-ಆರ್ಡರ್ ಮಾಡಬಹುದಾಗಿದ್ದು, ಆಗಸ್ಟ್ 20 ರಿಂದ ಶೀಪಿಂಗ್‌ ಪ್ರಾರಂಭವಾಗಲಿದೆ. ಇನ್ನು ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ ಬೆಲೆಯು $349ಆಗಿದೆ. ಇನ್ನು ಭಾರತದಲ್ಲಿ 26,300ರೂ ಎಂದು ಅಂದಾಜಿಸಲಾಗಿದೆ.
ಗೂಗಲ್ ಕಂಪನಿಯ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ ಇಂದು (ಅ.3) ಯುಎಸ್‌ನಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಗೂಗಲ್ ಪಿಕ್ಸಲ್ 3 ಸರಣಿಯ ಮುಂದುವರಿದ ಮಾಡೆಲ್‌ ಆಗಿದ್ದು, ಹೈ ಎಂಡ್ ಫೀಚರ್ಸ್‌ಗಳನ್ನು ಒಳಗೊಂಡಿದೆ. 6GB RAM ಮತ್ತು 128GB ಆಂತರೀಕ ಸ್ಟೋರೇಜ್ ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ.

 
ಹೆಲ್ತ್