Back
Home » ಇತ್ತೀಚಿನ
Amazon Prime Day 2020: ನೂತನ ಫೋನ್‌ಗಳ ಅನಾವರಣ ಮತ್ತು ಬಿಗ್ ಡಿಸ್ಕೌಂಟ್!
Gizbot | 4th Aug, 2020 01:00 PM
 • ಪ್ರೈಮ್‌ ಡೇ

  ಹೌದು, ಅಮೆಜಾನ್ ಪ್ರೈಮ್‌ ಡೇ ಸೇಲ್‌ ಮೇಳವು ಇದೇ ಆಗಸ್ಟ್ 6 ರಿಂದ ಶುರುವಾಗಲಿದೆ. ಸ್ಯಾಮ್‌ಸಂಗ್, ರೆಡ್ಮಿ, ಹಾನರ್ ಸಂಸ್ಥೆಗಳ ಹೊಸ ಸ್ಮಾರ್ಟ್‌ಫೋನ್‌ಗಳು ಮೊದಲ ಸೇಲ್‌ ನಡೆಯಲಿವೆ. ಹಾಗೆಯೇ ಸೋನಿ ಸ್ಮಾರ್ಟ್‌ಟಿವಿ, ಹೆಡ್‌ಫೋನ್‌, ಸೇರಿದಂತೆ ಇನ್ನಷ್ಟು ಸ್ಮಾರ್ಟ್‌ ಡಿವೈಸ್‌ ಗಳು ಅಮೆಜಾನ್ ಪ್ರೈಮ್‌ ಡೇ ಸೇಲ್‌ನಲ್ಲಿ ಅನಾವರಣಗೊಳ್ಳಲಿವೆ. ಹಾಗಾದರೇ ಅಮೆಜಾನ್ ಪ್ರೈಮ್‌ ಡೇ ಸೇಲ್‌ ಅನಾವರಣ ಆಗುವ ಡಿವೈಸ್‌ಗಳ ಬಗ್ಗೆ ಮಾಹಿತಿ ಮುಂದೆ ಓದಿರಿ.


 • ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

  ಸ್ಯಾಮ್‌ಸಂಗ್ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಗ್ಯಾಲಕ್ಸಿ M31s ಅಮೆಜಾನ್ ಸೇಲ್ ಡೇ ನಲ್ಲಿ ಸೇಲ್ ಆರಂಭಿಸಲಿದೆ. ಈ ಫೋನ್ ಆರಂಭಿಕ 6GB RAM ಮತ್ತು 128 GB ವೇರಿಯಂಟ್ ಬೆಲೆಯು 19,499 ರೂ. ಆಗಿದೆ. ಹಾಗೆಯೇ 6,000mAh ಬ್ಯಾಟರಿ ಸಾಮರ್ಥ್ಯದ ಪವರ್ ಹೊಂದಿದೆ. ಜೊತೆಗೆ 25W ವೇಗದ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.


 • ಹಾನರ್ 9 ಎ

  ಜುಲೈ ಅಂತ್ಯದ ವೇಳೆ ಬಿಡುಗಡೆ ಆಗಿರುವ ಹಾನರ್ 9 ಎ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ ಅಮೆಜಾನ್ ಮಾರಾಟದ ದಿನಗಳಲ್ಲಿ 8,999 ರೂಗಳಿಗೆ ಲಭ್ಯವಿರುತ್ತದೆ. ಹಾಗೆಯೇ 5,000mAh ಬ್ಯಾಟರಿಯನ್ನು ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ರೀಡರ್ ಹೊಂದಿದೆ. ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 13 ಎಂಪಿ ಪ್ರೈಮರಿ ಸೆನ್ಸಾರ್ ನಲ್ಲಿದೆ.


 • ಸೋನಿ ಸ್ಮಾರ್ಟ್ LED ಟಿವಿಗಳು

  ಸೋನಿ ಅತ್ಯುತ್ತಮ ಪ್ರೀಮಿಯಂ ಟಿವಿ ಬ್ರಾಂಡ್‌ಗಳಲ್ಲಿ ಒಂದಾಗಿದೆ. X74H ಸರಣಿಯ ಅಡಿಯಲ್ಲಿ, ಸೋನಿ ಎರಡು ಪರದೆಯ ಗಾತ್ರಗಳನ್ನು ನೀಡುತ್ತದೆ - 43 ಇಂಚುಗಳು ಮತ್ತು 65 ಇಂಚುಗಳು. ಹೊಸ ಎಕ್ಸ್ 1 4 ಕೆ ಪ್ರೊಸೆಸರ್ 4 ಕೆ ನಡುಕದಲ್ಲಿ ಚಿತ್ರ ಸ್ಪಷ್ಟತೆ ಮತ್ತು ಬಣ್ಣಗಳನ್ನು ಹೆಚ್ಚಿಸುತ್ತದೆ. ಸ್ಮಾರ್ಟ್ ಟಿವಿ ಆಂಡ್ರಾಯ್ಡ್ 9 ಅನ್ನು ಬೆಂಬಲಿಸುತ್ತದೆ ಮತ್ತು ಅದರ ಬಾಸ್-ರಿಫ್ಲೆಕ್ಸ್ ಸ್ಪೀಕರ್‌ಗಳೊಂದಿಗೆ ಸುಧಾರಿತ ಧ್ವನಿಯನ್ನು ನೀಡುತ್ತದೆ. ಹೊಸ ಬ್ರಾವಿಯಾ ಟಿವಿಗಳ ಬೆಲೆ 49,999 ರೂಗಳಿಂದ ಪ್ರಾರಂಭವಾಗುತ್ತದೆ.


 • ಇತರೆ ಡಿವೈಸ್‌ಗಳು

  ಇನ್ನು ಉಳಿದಂತೆ ಅಮೆಜಾನ್‌ ಪ್ರೈಮ್ ಡೇ ಸೇಲ್‌ನಲ್ಲಿ ಫಿಲಿಪ್ಸ್‌ ಇಯರ್‌ಬಡ್ಸ್‌, ಸೋನಿ ಹೆಡ್‌ಫೋನ್‌ ಹಾಗೂ ಸೋನಿ ಕ್ಯಾಮೆರಾ, ಹುವಾಮಿ ಅಮೆಜಿಫಿಟ್‌ ಪವರ್‌ಬಡ್ಸ್‌ ಡಿವೈಸ್‌ಗಳು ಅನಾವರಣಗೊಳ್ಳಲಿವೆ.
ಇ-ಕಾಮರ್ಸ್‌ ದೈತ್ಯ ಆಯೋಜಿಸಿರುವ ಅಮೆಜಾನ್ ಪ್ರೈಮ್ ಡೇ ಸೇಲ್ ಆರಂಭದ ದಿನ ಹತ್ತಿರವಾಗಿದ್ದು, ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿದೆ. ಭರ್ಜರಿ ಆಫರ್‌ಗಳ ಈ ಸೇಲ್‌ ಮೇಳವು ಇದೇ ಆಗಸ್ಟ್‌ 6 ಮತ್ತು 7ರಂದು ನಡೆಯಲಿದೆ. ಒಟ್ಟು 48ಗಂಟೆಗಳ ಅವಧಿಯ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಡಿಸ್ಕೌಂಟ್ ಲಭ್ಯ ಇದ್ದು, ಹಾಗೂ ಹಲವು ನೂತನ ಡಿವೈಸ್‌ಗಳ ಲಾಂಚ್‌ಗೂ ವೇದಿಕೆ ಆಗಿದೆ.

 
ಹೆಲ್ತ್